ನ್ಯೂಜ್ ಡೆಸ್ಕ್:ವಿಶ್ವವಿಖ್ಯಾತ ನಟ ದಿವಂಗತ ನಂದಮೂರಿ ಎನ್.ಟಿ.ರಾಮರಾವ್ NTR ಕುಟುಂಬದ ಮತ್ತೊಂದು ಕುಡಿ ಚಿತ್ರ ರಂಗಕ್ಕೆ ಅದ್ಧೂರಿಯಾಗಿಯೇ ಎಂಟ್ರಿ ಕೊಡುತ್ತಿದ್ದು ಟಾಲಿವುಡ್ ವಿಶೇಷವಾಗಿ ಎದರು ನೋಡುತ್ತಿದೆ ನಂದಮೂರಿ ಫ್ಯಾಮಿಲಿಯ ನಟಸಿಂಹ ನಂದಮೂರಿ ಬಾಲಕೃಷ್ಣ ಅವರ ಪುತ್ರ ನಂದಮೂರಿ ಮೊಕ್ಷಜ್ಞ ಟಾಲಿವುಡ್ಗೆ ಕಾಲಿಡುತ್ತಿದ್ದಾರೆ.
ಅದ್ದೂರಿ ಎಂಟ್ರಿ
ಪ್ರಖ್ಯಾತ ನಿರ್ಮಾಪಕ ಸುಧಾಕರ್ ಚೆರುಕುರಿ ಅವರ SLV ಸಿನಿಮಾಸ್ ಮತ್ತು ಲೆಜೆಂಡ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ‘ಸಿಂಬಾ’ ಸಿನಿಮಾ ಮೂಲಕ ಮೋಕ್ಷಜ್ಞ ಟಾಲಿವುಡ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ,”ಹನುಮಾನ್” ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ ನಂದಮೂರಿ ಮೋಕ್ಷಜ್ಞ ಅವರ ಚೊಚ್ಚಲ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತಿದ್ದು.ನಿರ್ದೇಶಕ ಪ್ರಶಾಂತ್ ವರ್ಮಾ ಹೇಳಿರುವಂತೆ ನಂದಮೂರಿ ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಹು ದೊಡ್ಡ ಜವಾಬ್ದಾರಿ ನನ್ನ ಮೇಲಿದೆ.ನಂದಮೂರಿ ಬಾಲಕೃಷ್ಣ ಅವರು ನನ್ನ ಮತ್ತು ನನ್ನ ಕಥೆಯ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಚಿರಋಣಿ.ಸ್ಕ್ರಿಪ್ಟ್ ನಮ್ಮ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ, ಚಿನ್ನದ ಗಣಿಯ ಕುರಿತ ಸಿನಿಮಾ ಇದು” ಎಂದಿದ್ದಾರೆ.
ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ತನ್ನದೆ ಛಾಪು ಮೂಡಿಸಿತ್ತ ಸಮಾನ ಯಶಸ್ಸು ಪಡೆದು ಸಾಗುತ್ತಿರುವ ನಂದಮೂರಿ ಬಾಲಕೃಷ್ಣ ಅವರು ತಮ್ಮ ಮಗನ ಸಿನಿಮಾ ಪ್ರತಿಷ್ಠೆಯಾಗಿದೆ.
ಜೂ.ಎನ್.ಟಿ.ಆರ್ ಶುಭ ಹಾರೈಕೆ
ಮೋಕ್ಷಜ್ಞ ಸಿನಿಮಾ ಎಂಟ್ರಿಗೆ ಸಹೋದರ ಜೂ.ಎನ್.ಟಿ.ಆರ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನಿಮಗೆ ಶುಭವಾಗಲಿ.ಹೊಸ ಜೀವನ ಪ್ರಾರಂಭವಾಗುತ್ತಿದೆ,ತಾತ ತಾರಕ ರಾಮಾರಾವ್ ಆಶೀರ್ವಾದ ನಿಮ್ಮ ಮೇಲಿರಲಿ. ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.