ಪರ್ವತಗಳ ಸಾಲು ಬೆಟ್ಟಗಳ ನಡುವಿನ ಶಿಖಕರಗಳಲ್ಲಿ ಪ್ರಕೃತಿಯ ನಡುವೆ ತುಂತುರು ಮಳೆಯ ಸೌಂದರ್ಯವನ್ನು ಸವಿಯಲು ಎಂತಹ ಬೈಕರನನ್ನು ಪ್ರೇರಿಪಿಸುತ್ತದೆ. ಇಂತಹ ದುರ್ಗಮ ಪ್ರದೇಶಗಳಲ್ಲಿ ಸವಾರಿ ಮಾಡುವುದು ಬೈಕರಗಳಿಗೆ ಎಷ್ಟು ಆನಂದವೊ ಆಗುವ ಸಣ್ಣ ಅಜಾಗರೂಕತೆ ವಿಷಾಧಕ್ಕೂ ಕಾರಣವಾಗುತ್ತದೆ. ಪಶ್ಚಿಮ ಬಂಗಾಳದ ಎತ್ತರವಾದ ಪರ್ವತ ತಿರುವುಗಳಲ್ಲಿ ನಡೆದ ಹೃದಯ ಸ್ಥಂಬಿಸುವಂತ ಘಟನೆ ಸಾಮಾಜಿಕ ಜಾಲತಾಣವನ್ನೆ ನಡುಗಿಸಿದೆ. ಒರ್ವ ಬೈಕ್ ಸವಾರ ತನ್ನ ಪ್ರಾಣ ಕಳೆದುಕೊಳ್ಳುವ ಅಪಾಯದಿಂದ ಕೆಲವೇ ಸೆಕೆಂಡುಗಳಲ್ಲಿ ಪಾರಾದ ದೃಶ್ಯ ನೋಡಿದಾಗ ಯಮಧರ್ಮರಾಜನ ಕರೆ ಬಂದು ಹೋಯಿತ ಎಂದು ಆಶ್ಚರ್ಯವಾಗುತ್ತದೆ.
ನ್ಯೂಜ್ ಡೆಸ್ಕ್:ಪರ್ವತಗಳ ಮೇಲಿನ ರಸ್ತೆಗಳಲ್ಲಿ ತುಂತುರು ಮಳೆಯಲ್ಲಿ ಬೆಟ್ಟಗಳ ನಡುವೆ ಬೈಕ್ ಸವಾರಿ ಮಾಡುವುದು ಪ್ರತಿಯೊಬ್ಬ ಬೈಕ್ ಸವಾರನ ಆಸೆ ಕನಸು ಆಗಿರುತ್ತದೆ. ಆದರೆ ಅಲ್ಲಿ ಆಗುವ ಸ್ವಲ್ಪ ಪ್ರಮಾಣ ನಿರ್ಲಕ್ಷ್ಯ ಅತಿ ವೇಗ ಅಜಾಗರೂಕತೆ ಬೈಕರ್ ಬದುಕುನ್ನೆ ಕ್ಷಣಾರ್ಧದಲ್ಲಿ ದುರಂತವನ್ನಾಗಿ ಮಾಡುತ್ತದೆ. ಪಶ್ಚಿಮ ಬಂಗಾಳದ ಪರ್ವತ ಪ್ರದೇಶದಲ್ಲಿ ನಡೆದ ಭೀಕರ ಬೈಕ್ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ದೊಡ್ದ ಮಟ್ಟದಲ್ಲಿ ವೈರಲ್ ಆಗಿದ್ದು ವೀಡಿಯೊವನ್ನು ನೋಡಿದವರು ಬೆಚ್ಚಿ ಬಿದ್ದು ನಡುಗಿದ್ದಾರೆ. ಸಿಲಿಗುರಿ ಮತ್ತು ಡಾರ್ಜಿಲಿಂಗ್ ನಡುವಿನ ಹೆಸರಾಂತ ಹಾಗು ಅತ್ಯಂತ ಸುಂದರವಾದ ಗಿರಿಧಾಮ ಕುರ್ಸಿಯೊಂಗ್ ವ್ಯೂ ಪಾಯಿಂಟ್ ಬಳಿ ಈ ಘಟನೆ ನಡೆದಿದ್ದು, ರೈನ್ಕೋಟ್ ಧರಿಸಿದ ಯುವಕನೊಬ್ಬ ಮಳೆಯಲ್ಲಿ ಬೈಕ್ ಸವಾರಿ ಮಾಡುತ್ತಿದ್ದಾಗ,ಬೆಟ್ಟದ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಿಂದ ಜಾರಿದೆ ನಿಯಂತ್ರಣ ತಪ್ಪಿದ ಬೈಕ್ ಪಕ್ಕದ ರಕ್ಷಣ ಗೋಡೆ guard railsಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ, ಸವಾರ ಧರಸಿದ್ದ ಶೂ ಗಾಳಿಯಲ್ಲಿ ತೆಲೆ ಹೋಗಿ ನೂರಾರು ಅಡಿ ಆಳವಾದ ಕಂದಕಕ್ಕೆ ಬಿದ್ದು ಅದೃಷ್ಟವಶಾತ್ ಬೈಕ್ ಸವಾರ ಎದರುಗಡೆಯ ರಸ್ತೆ ಮೆಲೆ ಬಿದ್ದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಭಯ ಬಿಳಿಸಿದ ದೃಶ್ಯ
ಸಾಮಾಜಿಕ ಜಾಲತಾಣಗಳಲ್ಲಿ ಬೆಚ್ಚಿ ಬಿಳುವ ರಿತಿಯಲ್ಲಿ ಭಯಾನಕ ವೀಡಿಯೊ ಕ್ಲಿಪ್ಗೆ ನೆಟಿಜನ್ಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. mostly ಬೈಕ್ ಸವಾರನಿಗೆ ಯಮರಾಜ ಅವರಿಂದ ಮಿಸ್ಡ್ ಕಾಲ್ ಬಂದಿರಬಹುದು, ಆದರೆ ಅದೃಷ್ಟವಶಾತ್ ಅದು ಸಂಪರ್ಕಕ್ಕೆ ಸಿಗಲಿಲ್ಲ” ಎಂದು ಒಬ್ಬ ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಅವನು ತನ್ನ ಪ್ರಾಣಕ್ಕಿಂತ ತನ್ನ ಬೈಕನ್ನು ಹೆಚ್ಚು ಪ್ರೀತಿಸುತ್ತಿರುವಂತೆ ತೋರುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ. ಹೆಚ್ಚಿನ ನೆಟಿಜನ್ಗಳು ಈ ಘಟನೆ ಸವಾರನ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ.
ಡೆಹ್ರಾಡೂನ್ ಪೊಲೀಸರ ಜಾಗೃತಿ ಅಭಿಯಾನ.
ಈ ವೈರಲ್ ವಿಡಿಯೋವನ್ನು ಉತ್ತರಾಖಂಡದ ಡೆಹ್ರಾಡೂನ್ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಪರ್ವತ ಪ್ರದೇಶಗಳಲ್ಲಿ ಮತ್ತು ಮಳೆಗಾಲದಲ್ಲಿ ವಾಹನ ಚಲಾಯಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ವಿವರಿಸಲು ಈ ಘಟನೆಯನ್ನು ಎಚ್ಚರಿಕೆಯಾಗಿ ಬಳಸಿಕೊಂಡಿದ್ದಾರೆ. “ಮಾನ್ಸೂನ್ ಸಮಯದಲ್ಲಿ ರಸ್ತೆಗಳು ಜಾರುತ್ತವೆ. ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಾಗ, ತಿರುವುಗಳಲ್ಲಿ ನಿಧಾನವಾಗಿ ಚಾಲನೆ ಮಾಡಿ ಮತ್ತು ಅತ್ಯಂತ ಎಚ್ಚರಿಕೆಯಿಂದ ಚಾಲನೆ ಮಾಡಿ. ನಿಮ್ಮ ಜೀವನವು ನಿಮ್ಮ ಕುಟುಂಬಕ್ಕೆ ತುಂಬಾ ಅಮೂಲ್ಯವಾಗಿದೆ” ಎಂದು ಪೊಲೀಸರು ಪೋಸ್ಟ್ ಮಾಡಿ ಜಾಗೃತಿ ಮೂಡಿಸಿದ್ದಾರೆ.
ಈ ವಿಡಿಯೋ ದೃಶ್ಯ
https://www.instagram.com/reel/Da9mn0uRFAh/?utm_source=ig_web_copy_link&igsh=MzRlODBiNWFlZA==



