ಕೋಲಾರ:ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯನ್ನಾಗಿ ರವಿ ಕುಮಾರ್ ಎಂ.ಆರ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಪ್ರಸ್ತುತ ಬೆಂಗಳೂರಿನ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ರವಿ ಕುಮಾರ್.ಎಂ.ಆರ್ ಅವರನ್ನು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೋಲಾರ ಜಿಲ್ಲಾಧಿಕಾರಿಯಾಗಿರುವ ಡಾ.ಎಂ.ಆರ್. ರವಿ ಅವರು ಜುಲೈ 31ರಂದು ವಯೋನಿವೃತ್ತಿ ಹೊಂದಲಿದ್ದು ಅವರ ನಿವೃತ್ತಿಯ ನಂತರ ನೂತನ ಜಿಲ್ಲಾಧಿಕಾರಿಯಾಗಿ ರವಿ ಕುಮಾರ್.ಎಂ.ಆರ್ ಅಧಿಕಾರ ಸ್ವೀಕರಿಸಲಿದ್ದಾರೆ.

ಮಾವು ಬೆಳೆಗಾರರ ಆಪತ್ಭಾಂಧವ ಡಾ.ಎಂ.ಆರ್. ರವಿ
ನಿವೃತ್ತಿ ಆಗುತ್ತಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೋಲಾರಕ್ಕೆ ಜಿಲ್ಲಾಧಿಕಾರಿಯಾಗಿ ಬಂದಾಗಿನಿಂದ ರೈತರ ಪರವಾಗಿ ಅಧಿಕಾರ ನಡೆಸಿದ್ದರು ಎಂದು ಬಹುತೇಕ ರೈತರು ನೆನೆಸಿಕೊಳ್ಳುತ್ತಾರೆ.ಜನಸ್ನೇಹಿ ಆಡಳಿತ ನಡೆಸಿದ್ದ ಡಾ.ಎಂ.ಆರ್.ರವಿ ವಿಶೇಷವಾಗಿ ಮಾವು ರೈತರು ನಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಅವರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಜಾರಿಯಾಗಲು ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಸರ್ಕಾರದ ಮಟ್ಟದಲ್ಲಿ ಮನವರಿಕೆ ಮಾಡುವ ಮೂಲಕ ಮಾವು ರೈತರನ್ನು ಆಪತ್ಭಾಂಧವರಂತೆ ಕಾಪಾಡಿದರು ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ದಿ ಹೇಳುತ್ತಾರೆ.
ನಿವೃತ್ತಿ ಆಗಲಿರುವ ಜಿಲ್ಲಾಧಿಕಾರಿ ಹೆಸರು ಡಾ.ಎಂ.ಆರ್.ರವಿ ನೂತನವಾಗಿ ಧಿಕಾರ ಸ್ವೀಕರಿಸಲಿರುವ ಜಿಲ್ಲಾಧಿಕಾರಿ ಹೆಸರು ರವಿ ಕುಮಾರ್ ಎಂ.ಆರ್



