ನ್ಯೂಜ್ ಡೆಸ್ಕ್:ತಿರುಮಲದ ಮೊದಲ ಘಾಟ್ ರಸ್ತೆಯಲ್ಲಿ ಅಂಜನೇಯನ ವಿಗ್ರಹ ಕಳ್ಳತನ ಇತ್ತೀಚೆಗೆ ಸಂಚಲನ ಮೂಡಿಸಿತು. ಅಲಿಪಿರಿ ನಡಿಗೆ ಮಾರ್ಗದ ಏಳನೇ ಮೈಲಿಯಲ್ಲಿರುವ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಇದ್ದ ಅಂಜನೇಯನ ವಿಗ್ರಹ ಕಳವು ಮಾಡಲಾಗಿದೆ. 15 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಜಸ್ವಂತನನ್ನು ಬಂಧಿಸಿದ್ದಾರೆ.
ವಿಶಾಖಪಟ್ಟಣದ ಜಸ್ವಂತ್ ಕುಮಾರ್ ಎಂಬ ವ್ಯಕ್ತಿ ಹನುಮಂತನ ವಿಗ್ರಹವನ್ನು ಕದಿದ್ದು, ಗೋವಿಂದಮಾಲೆ ಧರಿಸಿ ಜಸ್ವಂತ್ ಕುಮಾರ್ ಘಾಟ್ ರಸ್ತೆಯಿಂದ ದೇವಾಲಯವನ್ನು ತಲುಪಿದ್ದಾನೆ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ವಿಗ್ರಹವನ್ನು ಕದ್ದ ಜಸ್ವಂತ್ ಕುಮಾರ್ ಅದನ್ನು ಬಟ್ಟೆಯಲ್ಲಿ ಸುತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ಸಿಗುತ್ತಲೆ ವಿಗ್ರಹವನ್ನು ಕದ್ದ ಆರೋಪಿಯನ್ನು ಹುಡುಕಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ, ವರದಿಗಳ ಪ್ರಕಾರ, ತಿರುಮಲದ ಅಲಿಪಿರಿ ಪಾದಯಾತ್ರೆ ಮಾರ್ಗದ ಸಮೀಪದ ಅಂಜನೇಯ ಸ್ವಾಮಿ ವಿಗ್ರಹವನ್ನು ಕಳವು ಮಾಡಲಾಗಿತ್ತು. ತಿರುಪತಿ ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ 15 ಗಂಟೆಗಳೊಳಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಒಂಗೋಲು ರೈಲು ನಿಲ್ದಾಣದಲ್ಲಿ ಬಂಧಿಸಿ, ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ ಟಿಟಿಡಿ ಜಾಗೃತ ಸಿಬ್ಬಂದಿ ಮತ್ತು ಪೊಲೀಸರು ಸಮನ್ವಯದಿಂದ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.
ವಿಗ್ರಹವನ್ನು ಅದರ ಮೂಲ ಸ್ಥಳಕ್ಕೆ ಮರು ಪ್ರತಿಷ್ಠಾಪಿಸಲಾಗಿದೆ. ಈ ಕಳ್ಳತನದಿಂದ ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಎಚ್ಚರಗೊಂಡಿದ್ದು ವಿಗ್ರಹದ ಸುತ್ತಲೂ ಕಬ್ಬಿಣದ ಗ್ರಿಲ್ ಅಳವಡಿಸಲು ಮುಂದಾಗಿದ್ದು ಅಲಿಪಿರಿ ನಡಿಗೆ ಮಾರ್ಗದಲ್ಲಿ ಇರುವ 30 ಕ್ಕೂ ಹೆಚ್ಚು ದೇವರ ವಿಗ್ರಹಗಳ ಸುತ್ತಲೂ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದಿಯಂತೆ. ಇದರ ಜೊತೆಗೆ ಅಲಿಪಿರಿ ನಡಿಗೆ ಮಾರ್ಗದಲ್ಲಿ ಸುಮಾರು 190 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಟಿಟಿಡಿ ಅಧಿಕಾರಿಗಳು.
Trending
- ತಿರುಮಲ ನಡಿಗೆ ಮಾರ್ಗದಲ್ಲಿ ಅಂಜನೇಯ ವಿಗ್ರಹ ಕದ್ದು ಸಿಕ್ಕಿಬಿದ್ದ ಖದೀಮ!
- ಪ್ರೇರಣಾತ್ಮಕ ಕಥೆ:ದಿನಗೂಲಿ ನೌಕರಿ ಮಾಡುತ್ತ PHD ಪದವಿ ಪಡೆದ ಮಹಿಳೆ!
- viral video ಬೆಟ್ಟದ ತುದಿಯಲ್ಲಿ ಬೈಕ್ ಸಾಹಸ ಕೂದಲೆಳೆ ಅಂತರದಲ್ಲಿ ಯುವಕ ಬಚಾವ್!
- ಚಿಂತಾಮಣಿಯಲ್ಲಿ ಪಾಂಡುರಂಗ ವಿಠಲ ಮಂದಿರ ಲೋಕಾರ್ಪಣೆ
- ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ!
- ಶ್ರೀನಿವಾಸಪುರ:ಅಭಿವೃದ್ಧಿ ವಂಚಿತ ಇತಿಹಾಸ ಪ್ರಸಿದ್ಧ ಯಲ್ದೂರು!
- ಖಾಸಗಿ ಫೈನಾನ್ಸ್ ಕಿರುಕುಳ,ತಾಯಿ ಮಗ ಮಗಳು ಆತ್ಮಹತ್ಯೆ!
- ಕೋಲಾರ ಜಿಲ್ಲೆಗೆ ಆಗಸ್ಟ್ 1ರಿಂದ ಹೊಸ ಜಿಲ್ಲಾಧಿಕಾರಿ ರವಿಕುಮಾರ್. M.R
Friday, July 31



