- ಮಳಿಗೆ ಹಂಚಿಕೆಯಲ್ಲಿ ಅಕ್ರಮ
- ಇತರೆ ಸಮುದಾಯದವರಿಗೆ ಕೊಟ್ಟು
- ಪರಿಶಿಷ್ಟ ವ್ಯಾಪಾರಸ್ಥನಿಗೆ ನೀಡದೆ
- ಸೊಸೈಟಿ ಮಂಡಳಿ ಅನ್ಯಾಯ
ಶ್ರೀನಿವಾಸಪುರ:ತಾಲೂಕಿನ ಗೌನಿಪಲ್ಲಿ ದೊಡ್ಡಪ್ರಮಾಣದ ಪ್ರಾಥಮಿಕ ಪತ್ತಿನ ಸಹಕಾರ ಸಂಘದ(ಗೌವನಪಲ್ಲಿ ಸೊಸೈಟಿ) ವತಿಯಿಂದ ಗೌವನಪಲ್ಲಿಯಲ್ಲಿ ಮಳಿಗೆಗಳನ್ನು ನಿರ್ಮಾಣಮಾಡಲಾಗಿದೆ ಉಳಿದ ಜಾಗದಲ್ಲಿ ತಗಡಿನ ಒಪ್ಪಾರ ಹಾಕಿ ಬಿದಿ ಬದಿ ವ್ಯಾಪರಸ್ಥರಿಗೆ ನೀಡಲು ಉದ್ದೇಶಿಸಿರುವ ಸೋಸೈಟಿ ಆಡಳಿತ ಮಂಡಳಿ ಒಪ್ಪಾರದ ಜಾಗವನ್ನು ಪಾರದರ್ಶಕತೆ ಇಲ್ಲದೆ ಒಳಗೊಳಗೆ ವ್ಯವಹಾರ ನಡೆಸಿ ತಮಗೆ ಬೇಕಿರುವರಿಗೆ ಒಪ್ಪಾರದ ಮಳಿಗೆಗಳ ಹಂಚಿಕೆ ಮಾಡಲಾಗುತ್ತಿದ್ದು ಅಲ್ಲೆ ಹೂವಿನ ವ್ಯಾಪರ ಮಾಡುತ್ತಿರುವ ಪರಿಶಿಷ್ಟ ಜಾತಿಯ ವೆಂಕಟೇಶ್ ಅವರು ಅನ್ಯಾಯವಾಗಿದೆ ಎಂದು ಸೋಸೈಟಿ ಆಡಳಿತ ಮಂಡಳಿ ವಿರುದ್ದ ಆರೋಪ ಮಾಡಿದ್ದಾರೆ.
ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾನು ಮೂಲತಃ ಗೌನಿಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ಕಳೆದ 25 ವರ್ಷಗಳಿಂದ ಸೋಸೈಟಿ ಕಟ್ಟಡಕ್ಕೆ ಹೊಂದಿಕೊಂಡು ತೆಂಗಿನ ಗರಿಗಳ ಒಪ್ಪಾರ ಹಾಕಿಕೊಂಡು ಹೂವಿನ ಅಂಗಡಿ ನಡೆಸುತ್ತ ಜೀವನ ಮಾಡುತ್ತಿರುವೆ 4 ತಿಂಗಳ ಹಿಂದೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಹೂವಿನ ಅಂಗಡಿ ಸುಟ್ಟು ಹೋಯಿತು ಅಂಗಡಿ ತೆರೆಯಲು ಹಣ ಇಲ್ಲದೆ ಡೈಲಿ ಫೈನಾನ್ಸ್ ನಲ್ಲಿ ಸಾಲ ಮಾಡಿ ಪ್ಲಾಸ್ಟಿಕ್ ಟಾರ್ಫಾಲ್ ಹಾಕಿಕೊಂಡು ಅಂಗಡಿ ನಡೆಸುತ್ತಿದ್ದೆ, ಗೌನಿಪಲ್ಲಿ ಸೋಸೈಟಿಯವರು ತಾತ್ಕಾಲಿಕವಾಗಿ ಮಾಡಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಿ ನಿಮಗೆ ಕಬ್ಬಿಣದ ತಗಡಿನ ಶೀಟ್ಗಳಿಂದ 4X4 ಅಳತೆಯ ಅಂಗಡಿ ಮಳಿಗೆ ಮಾಡಿಕೊಡುವ ಆಶ್ವಾಸನೆ ನೀಡಿದ್ದರು.
ಅದೇ ಪ್ರಕಾರ 9 ತಗಡಿನ ಶೀಟ್ಗಳು ಮಳಿಗೆಗಳನ್ನು ನಿರ್ಮಿಸಿದ್ದು ಪ್ರತಿ ಮಳಿಗೆಗೆ ತಿಂಗಳಿಗೆ 40 ಸಾವಿರ ಮುಂಗಡ ನಾಲ್ಕು ಸಾವಿರ ಬಾಡಿದೆ ಹೇಳಿದ್ದರು ಆದರೆ ಹಂಚಿಕೆ ಮಾಡುವಾಗ ಮೀಸಲಾತಿಯಂತೆ ಹಂಚಿಕೆ ಮಾಡದೇ ಪರಿಶಿಷ್ಟ ಸಮುದಾಯದ ನನಗೆ ನೀಡದೇ ಇತರೆ ಸಮುದಾಯದವರಿಗೆ ನೀಡಿದ್ದಾರೆ ಈ ಬಗ್ಗೆ ಸೋಸೈಟಿ ಆಡಳಿತ ಮಂಡಳಿ ನಿರ್ದೇಶಕರುಗಳಾದ ಸತ್ಯನಾರಾಯಣ ಮತ್ತು ಕೋಡಿಪಲ್ಲಿ ಸುಬ್ಬರೆಡ್ಡಿ ಅವರನ್ನು ಕೇಳಿದರೆ ನಿನಗೆ ನೀಡುವುದಿಲ್ಲ ಎಂದು ಕಡಾಕಂಡಿತವಾಗಿ ಹೇಳಿರುತ್ತಾರೆ ಎಂದು ಅಲವತ್ತು ಕೊಂಡರು.
ಸುದ್ಧಿಗೋಷ್ಠಿಯಲ್ಲಿ ಆಧಿ ಜಾಂಭವ ಸೇವಾ ಸಮಿತಿ ಅಧ್ಯಕ್ಷ ಸಿ.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ವೆಂಕಟರಮಣ,ಸದಸ್ಯರಾದ ಕೆ.ವೆಂಕಟರಮಣ, ನರಸಿಂಹಪ್ಪ, ಡಿ.ಎನ್.ನಾರಾಯಣಸ್ವಾಮಿ, ಮುಖಂಡರಾದ ಬಾಲಜಿ, ಕೆ.ಶ್ರೀನಿವಾಸ್ ಇದ್ದರು