ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನರ ಶ್ರೇಯಸ್ಸು ಕೋರಿ ಸಕಾಲದಲ್ಲಿ ಮಳೆ-ಬೆಳೆಯಾಗಿ ಜನತೆ ಸುಭಿಕ್ಷತೆಯಿಂದ ಇರಬೇಕು ಎಂಬ ಸದುದ್ದೇಶದಿಂದ ಪಟ್ಟಣದ ಹೊರವಲಯದ ಕನಕ ಮಂದಿರದ ಪಕ್ಕದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಮಹೋತ್ಸವದ ಆಯೋಜಿಸಲಾಗಿದೆ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಂದು ಎರಡನೆಯ ದಿನ ಭಾನುವಾರ ಸಂಜೆ ಆಯೋಜಿಸಿರುವ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಅಂಗವಾಗಿ ಮುಂಜಾನೆಯಿಂದ ಪ್ರಾರಂಬವಾಗಿರುವ ದೇವಾತಾ ಆರಾಧನ ಕಾರ್ಯಕ್ರಮಗಳಲ್ಲಿ ಭಾಗವಿಸಿ ಮಾತನಾಡಿದರು.
ಬೆಳೆಗ್ಗೆ 6 ಗಂಟೆಯಿಂದ ಗಣಪತಿ ಪೂಜೆ ನವಗ್ರಹ ಆರಾಧನೆ ಮಧ್ಯಾನಃ ದಶ ಸಹಸ್ರ ಧನ್ವಂತ್ರಿ ಮಹಾಯಾಗ ಮತ್ತು ಶತ ಸಹಸ್ರ ಸುದರ್ಶನ ಮಹಾಯಾಗ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಅವರು ಸುಮಾರು 1 ಗಂಟೆಗೆ ನಡೆದ ಪೂರ್ಣಾವಧಿಯಲ್ಲಿ ಪಾಲ್ಗೋಂಡಿದ್ದರು.
ಸಂಜೆ ಸುಮಾರು 4.30 ಗಂಟೆಗೆ ಪ್ರಾರಂಭವಾಗುವ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಮಹೋತ್ಸವ 7.00 ಗಂಟೆಯವರಿಗೆ ನಡೆಯಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಭಗವಂತ ಶ್ರೀನಿವಾಸನ ಕೃಪೆಗೆ ಪಾತ್ರರಾಗಬೇಕು ಎಂದು ಗುಂಜೂರುಶ್ರೀನಿವಾಸರೆಡ್ಡಿ ಕೋರಿದ್ದಾರೆ.
ಸಂಜೆ ಜಬರ್ ದಸ್ತ್ ಕಾರ್ಯಕ್ರಮ
ಭಾನುವಾರ ಸಂಜೆ ಸುಮಾರು 8 ಗಂಟೆಗೆ ಈಟಿವಿ ತೆಲಗು ಕಲಾವಿದ ಜಬರ್ ದಸ್ತ್ ಭಾಸ್ಕರ್ ತಂಡದವರಿಂದ ರಸ-ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13