ಶ್ರೀನಿವಾಸಪುರ:ಜೆಡಿಎಸ್ ಪಕ್ಷದ ನಾಯಕತ್ವ ನಂಬಿ ಬರುವಂತ ಅಲ್ಪಸಂಖ್ಯಾತರನ್ನು ಅವರ ಗೌರವಕ್ಕೆ ಧಕ್ಕೆ ಬಾರದಂತೆ ಪಕ್ಷದಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ತಾಲೂಕು ಜೆಡಿಎಸ್ ಪಕ್ಷ ಆಯೋಜಿಸಿದ್ದ ಕೆಲ ಅಲ್ಪಸಂಖ್ಯಾತ ಕಾಂಗ್ರೆಸ್ ಪಕ್ಷದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು.ಅಲ್ಪಸಂಖ್ಯಾತರ ರಕ್ಷಣೆ ವಿಚಾರದಲ್ಲಿ ಜೆಡಿಎಸ್ ಬದ್ದವಾಗಿದೆ ಸ್ಥಳೀಯವಾಗಿ ಅಲ್ಪಸಂಖ್ಯಾತರ ರಕ್ಷ್ಣಣೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾದ್ಯ ಎಂದರು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರವಾಗಿ ಯಾವುದೆ ರೀತಿಯ ತಾರತಮ್ಯ ಮಾಡಿಲ್ಲ ಎಲ್ಲಾ ಸಮುದಾಯಗಳವರನ್ನು ಧರ್ಮಗಳವರನ್ನು ಸಮಾನ ಗೌರವದಿಂದ ಕಾಣುವುದೊಂದಿಗೆ ಸರ್ಕಾರದ ಕಾರ್ಯಕ್ರಮಗಳು ಅವರಿಗೆ ತಲಪುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಾಗಿ ಹೇಳಿದರು.ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಈ ವಾರ್ಡನಲ್ಲಿ ಬೊರ್ ವೆಲ್ ಕೊರೆಸುವುದಾಗಿ ಭರವಸೆ ನೀಡಿದರು.
ಕೋಲಾರದ ಅಂಜುಮನ್ ಸಂಸ್ಥೆ ಮುಖಂಡ ಜಮೀರ್ ಅಹ್ಮದ್ ಮಾತನಾಡಿ ರಾಜ್ಯದಲ್ಲಿ ವಿವಾದತ್ಮಕ ವಿಚಾರಗಳಲ್ಲಿ ಅಸಯಕರಾದ ಅಲ್ಪಸಂಖ್ಯಾತರ ಪರ ಧ್ವನಿಯಾಗಿ ನಿಂತವರು ಕುಮಾರಸ್ವಾಮಿಯವರು ಮಾತ್ರ ಅವರ ಕೈ ಬಲಪಡಿಸುವ ಉದ್ದೇಶದಿಂದ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಯಮಹ ಜಬಿ ಹಾಗು ಸಾದೀಕ್ ನೇತೃತ್ವದಲ್ಲಿ ಸುಮಾರು30 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮುಖಂಡರಾದ ನಜ್ಮ,ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಯಣಸ್ವಾಮಿ,ಪುರಸಭೆ ಹಿರಿಯ ಸದಸ್ಯ ಬಿ.ವಿ.ರೆಡ್ಡಿ,ಉಪಾದ್ಯಕ್ಷೆ ಅಯಿಶಾನಯಾಜ್,ಸದಸ್ಯರಾದ ಜಯಲಕ್ಷ್ಮಿ,ಮಾಜಿ ಸದಸ್ಯ ಬಸ್ ಏಜು,ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಕಾಡುದೇವಂಡಹಳ್ಳಿ ರಾಮಚಂದ್ರೇಗೌಡ,ಹಳೇಪೇಟೆ ಮಂಜುನಾಥರೆಡ್ಡಿ ಮುಖಂಡರಾದ ನಸೀರ್,ಗಾಯಿತ್ರಿಮುತ್ತಪ್ಪ, ದುರ್ಗಾಪ್ರಸಾದ್,ಕುಮ್ಮಗುಂಟೆಮಹೇಶ್ ಮುಂತಾದವರು ಇದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16