Author: Srinivas_Murthy

ಶ್ರೀನಿವಾಸಪುರ: ಕೋಲಾರ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡ 2024 ರ ವಿಧನಾಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ಸೋತಿರುವ ಮುಖಂಡ CMR ಶ್ರೀನಾಥ್ ಇಂದು ಶ್ರೀನಿವಾಸಪುರ ತಾಲೂಕಿನ ರೋಣೂರು ಗ್ರಾಮದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದು ಈ ಭೇಟಿ ಶ್ರೀನಿವಾಸಪುರ ರಾಜಕೀಯ ವಲಯದಲ್ಲಿ ತೀವ್ರ ಕೂತುಹಲಕ್ಕೆ ಕಾರಣವಾಗಿದೆ.ದೇವಸ್ಥಾನ ಭೇಟಿ ನೀಡುವ ನೆಪದಲ್ಲಿ CMR ಶ್ರೀನಾಥ್ ತಾಲೂಕಿನ ಕೆಲ ಭಾಗದಲ್ಲಿ ರೌಂಡ್ಸ್ ಮಾಡಿದ್ದಾರೆ ಇದು ಶ್ರೀನಿವಾಸಪುರ ತಾಲೂಕಿನ ಪ್ರತಿಷ್ಟೆ ರಾಜಕೀಯ ವಲಯದಲ್ಲಿ ಚರ್ಚೆಗೆ ದಾರಿಮಾಡಿಕೊಟ್ಟಿದೆ.CMR ಶ್ರೀನಾಥ್ ಗೆ ಶ್ರೀನಿವಾಸಪುರ ಹೊಸದಲ್ಲ ತಮ್ಮ ಟಮ್ಯಾಟೊ ವ್ಯಾಪಾರ ವ್ಯವಹಾರ ಸಂಭಂದ ನಿರಂತರವಾಗಿ ಇಲ್ಲಿನ ಟಮ್ಯಾಟೊ ಬೇಳೆಗಾರರು ಇತರೆ ತರಕಾರಿ ಬೇಳೆಗಾರರು ಹಾಗು ರೈತರೊಂದಿಗೆ ಸಂಪರ್ಕ ಹೊಂದಿದ್ದಾರೆ ಆದರೆ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ ನಂತರದಲ್ಲಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ರೋಣೂರು ದೇವಾಲಯದ ನಂತರ ದಿಂಬಾಲ ಗ್ರಾಮದ ಪ್ರಸನ್ನ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದ್ದಾಗ ಅಲ್ಲಿನ ಸ್ಥಳೀಯ…

Read More

ಶ್ರೀನಿವಾಸಪುರ:ತಾಲೂಕಿನಲ್ಲಿರುವ ವೈಷ್ಣವ ದೇವಾಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು ಮುಂಜಾನೆಯಿಂದಲೇ ಭಕ್ತರ ದಂಡು ಶ್ರೀನಿವಾಸ ಹಾಗು ವೆಂಕಟೇಶ್ವರ ದೇವಾಲಯಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಉತ್ತರ ಬಾಗಿಲು ದರ್ಶನ ಪಡೆದು ಪುನಿತರಾದರು.ತಾಲೂಕಿನ ಪ್ರಖ್ಯಾತ ಪ್ರಮುಖ ವೈಷ್ಣವ ಪುಣ್ಯಕ್ಷೇತ್ರಗಳಾದ ರೋಣೂರಿನ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಹಾಗು ರಾಯಲ್ಪಾಡು ಹೋಬಳಿ ಗನಿಬಂಡೆ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ನಸುಕಿನಲ್ಲಿ ಸುಪ್ರಭಾತ ಸೇವೆ, ಪಟ್ಟು ಪೀತಾಂಬರ ವಸ್ತ್ರಾಲಂಕಾರ, ತೋಮಾಲೆ ಸೇವೆ, ಪುಷ್ಪಾಲಂಕಾರ,ಅಷ್ಟಾಕ್ಷರಿ ಹೋಮ ಸೇರಿದಂತೆ ಪೂಜಾ ಕಾರ್ಯಗಳು ನೆರವೇರಿತು ದೊಡ್ದ ಸಂಖ್ಯೆಯಲ್ಲಿ ಭಕ್ತರ ದಂಡು ಗೋವಿಂದ ಗೋವಿಂದ ಎಂದು ನಾಮ ಸ್ಮರಣೆ ಮಾಡುತ್ತ ಹರಿದು ಬಂದಿದ್ದು ವಿಶೇಷ,ಯಲ್ದೂರಿನ ಶ್ರೀ ಕೋದಂಡರಾಮಸ್ವಾಮಿ ದೇವಾಸ್ಥಾನದಲ್ಲಿ ಆಯೋಜಿಸಿದ್ದ ವೈಯುಕುಂಠ ಏಕಾದಶಿ ಪೂಜೆಯಲ್ಲಿ ಭಕ್ತರು ಗೋವಿಂದಾ ನಾಮ ಸ್ಮರಣೆಯೊಂದಿಗೆ ಅಗಮಿಸಿ ದರ್ಶನ ಪಡೆದುಕೊಂಡರು. ಇನ್ನು ತಾಲೂಕಿನ ಅರಕೇರಿ ಶ್ರೀ ಕೋದಂದರಾಮ ದೇವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ಬೆಣ್ಣೆ ಅಲಂಕಾರ ಮಾಡಲಾಗಿ ರಾಮತಾರಕ…

Read More

ಫಿಲ್ಮ್ ಡೆಸ್ಕ್:ಮೇಗಾಸ್ಟಾರ್ ಚಿರಂಜಿವಿ ಮಗ ಗ್ಲೋಬಲ್ ಸ್ಟಾರ್ ರಾಮಚರಣ್ ಹೀರೋ ಆಗಿ ನಟಿಸಿರುವ “ಗೇಮ್ ಚೇಂಜರ್” ಸಿನಿಮಾ ಇಂದು ಬಿಡುಗಡೆಯಾಗಿದ್ದು ಅದರಲ್ಲಿ ಕಥಾನಾಯಕ ಐಎಎಸ್ ಅಧಿಕಾರಿಯಾಗಿದ್ದು ಈ ಪಾತ್ರಕ್ಕೆ ಸ್ಪೂರ್ತಿ ಭಾರತದ ಖ್ಯಾತ ಐಎ ಎಸ್ ಅಧಿಕಾರಿ ಎನ್ನುವ ಮಾತು ಕೇಳಿಬರುತ್ತಿದೆ.ಕಾರ್ತಿಕ್ ಸುಬ್ಬರಾಜ್ ಕಥೆ ಬರೆದು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸಿರುವ ಚಿತ್ರವನ್ನು ದಿಲ್ ರಾಜು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.90 ರ ದಶಕದಲ್ಲಿ, ಭಾರತದ ಚುನಾವಣಾ ಆಯುಕ್ತರಾಗಿ ಭಾರತೀಯ ಆಡಳಿತ ವ್ಯವಸ್ಥೆಗೆ ಹೊಸ ಭಾಷ್ಯ ಬರೆದ ತಮಿಳುನಾಡು ಕೇಡರ್‌ನ ಟಿ.ಎನ್. ಶೇಷನ್ ಅವರ ಸ್ಫೂರ್ತಿ ಪಡೆದಿದೆ ಎಂದು ಚಲನಚಿತ್ರ ಮೂಲಗಳು ತಿಳಿಸಿವೆ.ಟಿ.ಎನ್. ಶೇಷನ್ ಖಡಕ್ಐ .ಎ.ಎಸ್ ಅಧಿಕಾರಿಯಾಗಿ ತಮ್ಮ ಸಂವಿಧಾನ ಬದ್ದ ಹಕ್ಕು ಬಳಸಿಕೊಂಡು ರಾಜಕೀಯ ವ್ಯಸ್ಥೆಯನ್ನು ಸರಿ ದಾರಿಗೆ ದಾರಿಗೆ ತರುವ ಪ್ರಯತ್ನದಲ್ಲಿ ಭಾರತದ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಅಧಿಕಾರಿಯಾಗಿ ಖ್ಯಾತರಾಗಿದ್ದರು.

Read More

ಶ್ರೀನಿವಾಸಪುರ:ಬೆಂಗಳೂರು-ಚನೈ ರಾಷ್ಟ್ರೀಯ ಹೆದ್ದಾರಿಯ ರಾಣಿಪೇಟೆ ಜಿಲ್ಲೆಯ ಸಿಪ್ಕಾಟ್ ಎಮರಾಲ್ಡ್ ಇನ್ ಹೋಟೆಲ್ ಬಳಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶ್ರೀನಿವಾಸಪುರದಿಂದ ಚೆನೈಗೆ ತರಕಾರಿ ಸಾಗಿಸುತ್ತಿದ್ದ ಕ್ಯಾಂಟರ್ ಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್ಸು ಮತ್ತು ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್ ನಲ್ಲಿದ್ದ ಶ್ರೀನಿವಾಸಪುರದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿದ್ದ 40 ಕಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಮೃತರನ್ನು ಶ್ರೀನಿವಾಸಪುರ ತಾಲೂಕಿನ ಯಲ್ದೂರಿನ ಶೀಗಪಲ್ಲಿ ಗ್ರಾಮದ ಕ್ಯಾಂಟರ್ ಚಾಲಕ ವಿ. ಮಂಜುನಾಥ್ (31) ಸಹಾಯಕ ಸಿ. ಶಂಕರ (32),ಎನ್.ಸೋಮಶೇಖರನ್(30),ವೆಂಕಟೇಶನಗರದ ವಿ.ಕೃಷ್ಣಪ್ಪ(65) ಎಂದು ಗುರುತಿಸಲಾಗಿದೆ,ತರಕಾರಿಗಳನ್ನು ಸಾಗಿಸಿಕೊಂಡು ಚನೈ ನಗರಕ್ಕೆ ಶೀಗಪಲ್ಲಿ ಗ್ರಾಮದಿಂದ ಪ್ರತಿನಿತ್ಯ ಕ್ಯಾಂಟರ್ ಗಳು ಹೋಗುವುದು ಸಾಮಾನ್ಯ ಅದರಂತೆ ಬುಧವಾರ ಮೃತರಾಗಿರುವರು ಎಂದಿನಂತೆ ಕ್ಯಾಂಟರ್ ನಲ್ಲಿ ತರಕಾರಿ ತುಂಬಿಕೊಂಡು ಚನೈಗೆ ಹೋರಟಿದ್ದಾರೆ ಅಪಘಾತ ಸ್ಥಳದಲ್ಲಿ ಟಿಪ್ಪರ್ ಲಾರಿಯನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಮೇಲ್ಮರುವತ್ತೂರಿನ ಆಧಿಪರಾಶಕ್ತಿ ದೇವಸ್ಥಾನದಿಂದ ದರ್ಶನ ಮುಗಿಸಿ ಮುಳಬಾಗಿಲು ಭಕ್ತಾಧಿಗಳನ್ನು ಕರೆದುಕೊಂಡು ಕರ್ನಾಟಕಕ್ಕೆ…

Read More

1988ರಲ್ಲಿ ಅನಿರೀಕ್ಷಿತವಾಗಿ ನಾನು ಪತ್ರಕರ್ತನಾಗಿ ಕೆಲಸ ಆರಂಭಿಸಿದೆ. ಪತ್ರಕರ್ತನಾಗಿ ಅಂಬೆಗಾಲು ಇಟ್ಟವನು ಮುಖ್ಯ ಉಪಸಂಪಾದಕನಾಗಿ ಹೊರಹೊಮ್ಮಿದೆ. ಕೋಲಾರ ಜಿಲ್ಲೆ ನನಗೆ ಹೊಸದೇನಲ್ಲ ಉಪನ್ಯಾಸಕನಾಗಿ ಸರ್ಕಾರಿ ಬದುಕನ್ನು ಇಲ್ಲೆ ಆರಂಭಿಸಿದೆ ಈಗ ಜಿಲ್ಲಾಧಿಕಾರಿ ಆಗಿ ಬಂದಿದ್ದೇನೆ. ವಿವಿಧ ಇಲಾಖೆಗಳಲ್ಲಿ 18 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಕೋಲಾರ ಜಿಲ್ಲೆ ಅನ್ನ ಹಾಕಿದೆ. 32 ವರ್ಷಗಳ ಬಳಿಕ ಈಗ ಮತ್ತೆ ಇಲ್ಲಿಗೆ ಬಂದಿದ್ದೇನೆ. ಮುಕ್ತ ಮನಸ್ಸಿನಿಂದ ಬಂದಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಎಂ.ಆರ್. ರವಿ ಹೇಳಿದರು. ಕೋಲಾರ:ವ್ಯವಸ್ಥೆಯಲ್ಲಿ ಸಮಸ್ಯೆ, ಸವಾಲುಗಳು, ಒತ್ತಡ ಇರುವುದು ಸಾಮಾನ್ಯ ಇವೆಲ್ಲವನ್ನು ನಿವಾರಿಸಿ ಕೋಲಾರ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು ಅವರು ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲೆಗೆ ಸಂಬಂಧಿಸಿದಂತೆ ಸಾಧಕ ಬಾಧಕಗಳ ಸ್ವಾಟ್ ಅನಾಲಿಸಿಸ್ ಮಾಡಿರುತ್ತೇನೆ ಶಕ್ತಿ, ದೌರ್ಬಲ್ಯ, ಅವಕಾಶಗಳು ಹಾಗೂ ಅಡೆತಡೆ, ಆತಂಕಗಳ ಪಟ್ಟಿ ಮಾಡಿಕೊಂಡಿದ್ದೇನೆ. ನನಗೆ ಯಾವುದೇ…

Read More

ಮುಳಬಾಗಿಲು:ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ವ್ಯಕ್ತಿಯೊಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ ಸೋಮವಾರ ಸಂಜೆ ಉತ್ತನೂರುರಾಮಣ್ಣ(72) ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದು ಅವರ ಮಹದಾಸೆಯಂತೆ ಕಣ್ಣುಗಳನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾನ ಮಾಡಿ ಮಾನವೀಯತೆ ಮೆರೆದು ಅಂದರೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.ವೃತ್ತಿಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಉದ್ಯೋಗಿಯಾಗಿದ್ದ ಉತ್ತನೂರು ವರದಪ್ಪನವ ಮಗ ರಾಮನ್ ಅವರು ಉತ್ತನೂರುರಾಮಣ್ಣ ಎಂದೆ ಖ್ಯಾತರಾಗಿದ್ದರು.ಮುಳಬಾಗಿಲು ತಾಲೂಕಿನ ಖ್ಯಾತ ರಾಜಕಾರಣಿ ಉತ್ತನೂರುಶ್ರೀನಿವಾಸ್ ಅವರ ಕಿರಿಯ ಸಹೋದರರಾಗಿ ಪ್ರತಿಷ್ಟಿತ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದ ಅವರು ಅವರು ಕೃಷಿಯಲ್ಲಿ ಆಸಕ್ತಿ ವಹಿಸಿ ಉತ್ತಮ ಸಾಧನೆ ಮಾಡಿದ್ದರು. ಮರಣದ ನಂತರ ಕಣ್ಣುಗಳು ಪ್ರಪಂಚವನ್ನು ನೋಡಬೇಕು ಎಂಬ ಮಹದಾಸೆ ಹೊಂದಿದ್ದು ಇದಕ್ಕಾಗಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಲು ಕೋಲಾರದ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ನೊಂದಣೆ ಮಾಡಿಸಿದ್ದರು ಅದರಂತೆ ಅವರ ಪತ್ನಿ ಹಾಗು ಮಕ್ಕಳಾದ ಅರುಣ್ ಕುಮಾರ್ ಮತ್ತು ಅರ್ಜುನ್ ಅವರು ಉತ್ತನೂರುರಾಮಣ್ಣನವರ ನೇತ್ರಗಳನ್ನು ಜಾಲಪ್ಪ ಆಸ್ಪತ್ರೆಗೆ ದಾನ ಮಾಡಿದರು.

Read More

ನ್ಯೂಜ್ ಡೆಸ್ಕ್:ಅಯೋಧ್ಯೆ ರಾಮ ಮಂದಿರಕ್ಕೆ ರಹಸ್ಯ ಕ್ಯಾಮರಾದೊಂದಿಗೆ ಪ್ರವೇಶಿಸಿದ್ದ ವ್ಯಕ್ತಿಯನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ದೇವಾಲಯದ ಸಿಬ್ಬಂದಿ ಹಿಡಿದ ವ್ಯಕ್ತಿ ತನ್ನ ಕನ್ನಡಕದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ದೇಗುಲದ ಒಳಗಡೆ ಫೋಟೋ ತಗೆಯಲು ಮುಂದಾಗಿದ್ದಾನೆ. ದೇಗುಲದ ಪ್ರಮುಖ ಗೇಟ್​ಗೆ ಆಗಮಿಸುವ ಮುನ್ನ ನಡೆದ ಎಲ್ಲಾ ಭದ್ರತಾ ತಪಾಸಣೆಗಳಲ್ಲೂ ಕಣ್ತಪ್ಪಿಸಿ ಮುಂದೆ ಸಾಗಿದ್ದಾನೆ. ಪ್ರಮುಖ ಗೇಟ್​ ಮುಂದೆ ಬರುತ್ತಿದ್ದಂತೆ ಈತನ ಕನ್ನಡಕದಿಂದ ಫ್ಲಾಶ್​​ ಲೈಟ್​ ಆನ್​ ಆಗಿದ್ದು, ಸೆಕ್ಯೂರಿಟಿ ಗಾರ್ಡ್​​ಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.ವಡೋದರದಲ್ಲಿ ಉದ್ಯೋಮಿಯಾಗಿರುವ ಈತನ ಹೆಸರು ಜಾನಿ ಜೈಶಂಕರ್. ಪತ್ನಿಸಮೇತ ರಾಮಲಲ್ಲಾನ ದರ್ಶನಕ್ಕೆ ಆಗಮಿಸಿದ್ದು ಕನ್ನಡಕದ ಫ್ರೇಮ್​ಗೆ ಅಳವಡಿಸಿದ್ದ ರಹಸ್ಯ ಕ್ಯಾಮೆರಾದಿಂದ ದೇಗುಲದ ಫೋಟೋ ತೆಗೆಯಲು ಮುಂದಾಗಿದ್ದಾನೆ. ಕೈಯಲ್ಲಿದ್ದ ಬಟನ್​ ಪ್ರೆಸ್​ ಮಾಡುತ್ತಿದ್ದಂತೆ ಕನ್ನಡಕದ ಫ್ರೆಮ್​ ಹೊಳೆಯಲಾರಂಭಿಸಿದೆ. ಕನ್ನಡಕದಲ್ಲಿ ಲೈಟ್​ ಹೊಳೆಯುತ್ತಿದ್ದರಿಂದ ಅನುಮಾನಗೊಂಡ ಎಸ್​ಎಸ್​ಎಫ್​ ವಾಚರ್​ ಅನುರಾಜ್​ ಬಜ್​ಪೈ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ವ್ಯಕ್ತಿಯನ್ನು ವಶಕ್ಕೆ ಪಡೆದ ಬಳಿಕ ಭದ್ರತಾ ಏಜೆನ್ಸಿ ಮತ್ತು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಭದ್ರತೆಯ…

Read More

ಶ್ರೀನಿವಾಸಪುರ:ಮನೆಯ ಬೀಗ ಹೊಡೆದು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಹಾಡು ಹಗಲೆ ನಡೆದಿರುತ್ತದೆ,ಕುಟುಂಬದವರು ಕೃಷಿಕಾರ್ಮಿಕರಾಗಿದ್ದು ಕೂಲಿಗಾಗಿ ಹೋಗಿದ್ದ ವೇಳೆ ಕಳ್ಳತನ ನಡೆದು ಮನೆಯಲ್ಲಿದ್ದ ಸುಮಾರು 25 ಗ್ರಾಂ ಮಾಂಗಲ್ಯ ಸರ,ನಗದನ್ನು ಕಳ್ಳರು ಕದ್ದೊಯಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಾರೆ.ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮದ ಹಾಲಿನ ಸೊಸೈಟಿ ಪಕ್ಕದಲ್ಲಿರುವ ದ್ಯಾವಮ್ಮ ಎನ್ನುವರಿಗೆ ಸೇರಿದ ಮನೆಯಲ್ಲಿ ಹಗಲು ಸುಮಾರು ಮೂರುಗಂಟೆ ಸಮಯದಲ್ಲಿ ಮನೆಗೆ ಹಾಕಿದ್ದ ಬೀಗ ಹೊಡೆದು ಕಳ್ಳತನ ಮಾಡಿರುವುದಾಗಿ ಎಂದು ಮನೆಯವರು ಶ್ರೀನಿವಾಸಪುರ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಸ್ಥಳಕ್ಕೆ ಪೋಲಿಸ್ ಇನ್ಸಪೇಕ್ಟರ್ ಗೊರವನಕೊಳ್ಳ ಹಾಗೂ ಸಬ್ ಇನ್ಸಪೇಕ್ಟರ್ ಜಯರಾಮ್ ಸಿಬ್ಬಂದಿ ಭೇಟಿ ನೀಡಿ ಪರಶೀಲನೆ ನಡೆಸಿರುತ್ತಾರೆ.ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮನೆಯಲ್ಲಿ‌ ಹಾಡು ಹಗಲೆ ಕಳ್ಳರ ಕೈಚಳಕಕ್ಕೆ ಕಲ್ಲೂರು ಗ್ರಾಸಮಸ್ಥರು ಏಕಾಏಕಿ ಬೆಚ್ಚಿಬಿದ್ದಾರೆ

Read More

ಶ್ರೀನಿವಾಸಪುರ:ಒಂಟಿ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಹಾಡು ಹಗಲೇ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಇಂದು ಮಂಗಳವಾರ ತಾಲೂಕಿನ ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಗುರುವಲೋಳ್ಳಗಡ್ಡ ಗ್ರಾಮದಲ್ಲಿ ನಡೆದಿರುತ್ತದೆ. ಕಳ್ಳರು ಮನೆಯಲ್ಲಿರುವ ಬಂಗಾರ ದುಡ್ದು ಸೇರಿದಂತೆ ಜಮೀನು ದಾಖಲೆಗಳು ಮತ್ತು ಮೊಬೈಲ್ ಫೋನ್ ಹೊತ್ತೊಯಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಾರೆ.ಗೌನಿಪಲ್ಲಿ-ರಾಯಲ್ಪಾಡು ಮುಖ್ಯರಸ್ತೆಯಲ್ಲಿ ಗುರುವಲೋಳ್ಳಗಡ್ಡ ಗ್ರಾಮದ ರಸ್ತೆ ಅಂಚಿನ ಮನೆ ಆನಂದಪ್ಪ ಎಂಬುವರಿಗೆ ಸೇರಿದ್ದು ನಡು ಮಧ್ಯಾನಃ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳತನ ಮಾಡಿರುವ ಚಾಲಾಕಿಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ 2 ನಕ್ಲೆಸ್ 70 ಸಾವಿರಕ್ಕೂ ಹೆಚ್ಚು ಹಣವನ್ನು ಕಳ್ಳತನ ಮಾಡಿದ್ದಲ್ಲದೆ ಜಮೀನು ದಾಖಲೆ ಪತ್ರಗಳನ್ನು ಹಾಗು ಮನೆಯಲ್ಲಿದ್ದ ಮೊಬೈಲ್ ಪೋನ್ ಅನ್ನು ತಗೆದುಕೊಂಡು ಹೋಗಿರುವುದಾಗಿ ಮನೆಯ ಯಜಮಾನ ರಾಯಲ್ಪಾಡು ಪೋಲಿಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.ಶ್ವಾನ ದಳ ಬೆರಳಚ್ಚು ತಜ್ಞರ ಭೇಟಿದೂರುದಾಖಲಿಸಿಕೊಂಡ ಪೋಲಿಸರು ಕಳ್ಳರ ಜಾಡು ಕಂಡು ಹಿಡಿಯಲು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ…

Read More

ಶೈಲೇಂದ್ರ ವಿದ್ಯಾಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲ ಆವರಣದಲ್ಲಿ ಭವ್ಯವಾದ ವರ್ಣರಂಜಿತ ವೇದಿಕೆಯಲ್ಲಿ ನಡೆಯಿತು ಇದರಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್.ಹೊಸಮನಿ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕೋಲಾರದ ಖ್ಯಾತ ನೇತ್ರ ತಜ್ಞ ಹಾಗು ವಿವೇಕ ನೇತ್ರಾಲದ ಮುಖ್ಯಸ್ಥ ಡಾ.ಹೆಚ್.ಆರ್.ಮಂಜುನಾಥ್ ಪ್ರೆಸಿಡೆನ್ಸಿ ಕಾಲೇಜಿನ ಡೀನ್ ಡಾ.ಜಿ.ಎಂ.ಮಮತಾ ಸೇರಿದಂತೆ ಹಲವು ಸಾಧಕರು ಭಾಗವಹಿಸಿದ್ದರು. ಕೋಲಾರ:ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಮಾತ್ರ ಅವರ ಬದುಕು ಉಜ್ವಲವಾಗುತ್ತದೆ, ಧ್ಯಾನದಿಂದ ಏಕಾಗ್ರತೆ ವೃದ್ದಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಹೇಳಿದರು ಅವರು ಕೋಲಾರ ತಾಲ್ಲೂಕಿನ ಹೋಳೂರಿನಲ್ಲಿನ ಖ್ಯಾತ ವಿದ್ಯಾಸಂಸ್ಥೆ ಶ್ರೀಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಆಧುನಿಕ ಜೀವನ ಶೈಲಿಯಲ್ಲಿ ಮಾದಕ ವಸ್ತುಗಳಂತ ಸಮಾಜದ ಅಕ್ರಮ ಚಟುವಟಿಕೆಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ ಇದರ ಜೊತೆಗೆ ಮೊಬೈಲ್…

Read More