ಶ್ರೀನಿವಾಸಪುರ:ಅರಣ್ಯ ಪ್ರದೇಶ ನಿರ್ವಹಣೆ ಗುತ್ತಿಗೆ ಪಡೆದಿದ್ದ ವ್ಯಕ್ತಿಯೋರ್ವ ಅನಧಿಕೃತವಾಗಿ ಮರಕಡಿದು ಸಾಗಿಸುತ್ತಿರುವುದನ್ನು ಸ್ಥಳೀಯರು ತಡೆದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಮರಗಳ್ಳತನ ಮಾಡಿದವರು ರಾಜರೋಷವಾಗಿ ಹತ್ತಾರು ಲೋಡ್ ಮರಗಳನ್ನು ರಾಯಲ್ಪಾಡು ಹೋಬಳಿಯ ಗುಂಟಿಪಲ್ಲಿ ಅರಣ್ಯಪ್ರದೇಶದಿಂದ ಸಾಗಿಸಿರುವುದಾಗಿ ಹೇಳಲಾಗಿದೆ.
ಸಣ್ಣ ಪುಟ್ಟ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವ ಟೆಂಡರ್ ಪಡೆದ ವ್ಯಕ್ತಿ ಅರಣ್ಯ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಬೃಹದಾಕಾರವಾಗಿ ಬೆಳೆದು ನಿಂತಿದ್ದ ನೀಲಗಿರಿ ಹಾಗು ಇನ್ನಿತರೆ ಮರಗಳನ್ನು ಆಧುನಿಕ ಯಂತ್ರಗಳನ್ನು ಬಳಸಿ ಕಡಿದು ಅವುಗಳನ್ನು ಜೆ.ಸಿ.ಬಿ ಮೂಲಕ ಲಾರಿಗಳಿಗೆ ತುಂಬಿಸಿ ಸಾಗಾಣೆ ಮಾಡುತ್ತಿರುವ ಕುರಿತಾಗಿ ಗುಂಟಪಲ್ಲಿ ಅರಣ್ಯ ಭಾಗದ ಸ್ಥಳೀಯರ ಆರೋಪ,ಸುಮಾರು ಒಂದೂವರೆ ತಿಂಗಳಿಂದ ಬುಡ ತೆಗೆಯುವ ನೆಪದಲ್ಲಿ 40-50 ವರ್ಷಗಳ ನೂರಾರು ನೀಲಗಿರಿ ಇನ್ನಿತರೆ ಮರಗಳನ್ನು ರಾಜಾರೋಷವಾಗಿ ಮಾರಾಟ ಮಾಡಿಕೊಳ್ಳಲಾಗುತ್ತಿದ್ದು, ಪ್ರತಿನಿತ್ಯ ಲಾರಿಗಳ ಮೂಲಕ ಬಾರಿ ಗಾತ್ರದ ದಿಮ್ಮೆಗಳನ್ನು ಶ್ರೀನಿವಾಸಪುರ-ಕೋಲಾರ ಮಾರ್ಗವಾಗಿ ಮಾಲೂರು ಗಡಿ ತಲುಪಿಸಲಾಗುತ್ತಿದೆ,ಇದಕ್ಕೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳ ಬೆಂಬಲ ಇದೆ ಎನ್ನುವ ಮಾತು ಕೇಳಿಬರುತ್ತಿದೆ.
ಅರಣ್ಯ ಇಲಾಖೆಯದು ದ್ವಂದ ನೀತಿ
ಅಕ್ರಮವಾಗಿ ಮರ ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಜಾಣ ಕುರಡು ಪ್ರದರ್ಶಿಸುತ್ತಿರುವ ಸ್ಥಳಿಯ ಅರಣ್ಯ ಇಲಾಖೆ ಅಧಿಕಾರಿಗಳು ರೈತರು ಜೀವನೋಪಾಯಕ್ಕೆ ಬೆಳೆದಿದ್ದ ತರಕಾರಿ ಬೆಳೆಗಳನ್ನು ಮಾನವೀಯತೆ ಮರೆತು ಜೆ.ಸಿ.ಬಿಗಳನ್ನು ನುಗ್ಗಿಸಿ ನಾಶಮಾಡಿದರು ಇವತ್ತು ದಿವ್ಯ ಮೌನಕ್ಕೆ ಜಾರಿ ದ್ವಂದ ನೀತಿ ಪ್ರದರ್ಶಿಸುತ್ತ ಕೃಷಿಕರ ಬದುಕನ್ನೆ ಕಿತ್ತುಕೊಂಡರು ಎಂದು ರೈತರು ಹೇಳುತ್ತಾರೆ.
ಅಕ್ರಮ ಮರ ಕಡಿತಕ್ಕೆ ಜಿಲ್ಲಾ ಅರಣ್ಯಾಧಿಕಾರಿ ಕ್ರಮ ಜರುಗಿಸುತ್ತಾರ!
ಅಕ್ರಮ ಮರ ಕಡಿತ ಮಾಡಿರುವ ಬಗ್ಗೆ ಹಾಗು ಈ ಬಗ್ಗೆ ಜಾಣಕುರಡು ಎಂಬಂತೆ ನಿರ್ಲಕ್ಷ ವಹಿಸಿರುವ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ಕುರಿತಾಗಿ ಜಿಲ್ಲಾ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರಬಹುದು ಅವರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರ ಎಂದು ಪ್ರಜಾವೇದಿಕೆ ಸಂಚಾಲಕ ರಮೇಶ್ ಬಾಬು ಅಗ್ರಹಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



