ನ್ಯೂಜ್ ಡೆಸ್ಕ್:ದಾರಿ ತಪ್ಪಿದ ಒಂಟಿ ಆನೆಯೊಂದು ಜನ ವಸತಿ ಪ್ರದೇಶಕ್ಕೆ ಬಂದು ಮತ್ತೆ ಕಾಡಿಗೆ ಹೋಗಲು ದಾರಿಕಾಣದೆ ಜನರನ್ನು ನೋಡಿ ಗಾಭರಿಯಿಂದ ರಾದಾಂತ ಸೃಷ್ಟಿಸಿದ ಘಟನೆ ಆಂಧ್ರದ ಚಿತ್ತೂರು ಜಿಲ್ಲೆ ಪಲಮನೇರು ನಗರದ ಹೊರಭಾಗದ ಪ್ರಶಾಂತ ನಗರದಲ್ಲಿ ನಡೆದಿದ್ದು ಅನೆ ದಾಳಿಯಲ್ಲಿ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದಾರಲ್ಲದೆ ಹಸುವಿನ ಕರುವು ಮೇಲು ಆನೆ ದಾಳಿ ಮಾಡಿದ ಹಿನ್ನಲೆಯಲ್ಲಿ ಕರು ಸ್ಥಳದಲ್ಲೆ ಸಾವನಪ್ಪಿದೆ.
ಬೆಳಿಗ್ಗೆ 6 ಗಂಟೆಗೆ ಸಮಯದಲ್ಲಿ ನಗರದ ಹೋರವಲಯದ ಹೆದ್ದಾರಿ ಬಳಿ ಮಲವಿಸರ್ಜನೆ ಮಾಡುತ್ತಿದ್ದ ಒಂಟಿ ಆನೆಯನ್ನು ನೋಡಿದ ಕೆಲವರು ಮೊಬೈಲ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಇದರಿಂದ ಗುಂಪು ಗುಂಪಾಗಿ ಜನರು ಹೆಚ್ಚಾಗಿ ಬಂದ ಹಿನ್ನಲೆಯಲ್ಲಿ ಗಾಭಾರಿಯಾದ ಆನೆ ಸುಮಾರು 5 ಗಂಟೆಗಳ ಕಾಲ ದಿಕ್ಕೆಟ್ಟು ಎಲ್ಲೆಂದರಲ್ಲಿ ಒಡಾಡುತ್ತ ಅರಣ್ಯ ಅಧಿಕಾರಿಗಳನ್ನು ಕಾಡಿಸಿದೆ ಇನ್ನೊಂದಡೆ ಸ್ಥಳಿಯ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ ಇದರಿಂದಾಗಿ ಸತ್ಯನಾರಾಯಣ ದೇವಸ್ಥಾನದ ಬಳಿಯ ಚಿನ್ನೂರು ಸೇತುವೆಯಿಂದ ಗಂಗಾವರಂ ಕಡೆಗೆ ವಾಹನವನ್ನು ಕಾಡಿಗೆ ತಿರುಗಿಸಲು ಪ್ರಯತ್ನಿಸುತ್ತಿದ್ದ ಅರಣ್ಯ ವಿಭಾಗಾಧಿಕಾರಿ ಸುಕುಮಾರ್ ಮೇಲೆ ಆನೆ ದಾಳಿ ಮಾಡಿದ್ದು ಇದರಿಂದ ಅವರ ಕಾಲಿಗೆ ಗಂಭೀರ ಗಾಯವಾಗಿದೆ ಸುಮಾರು 5 ಗಂಟೆಗಳ ಕಾಲ ಕಾಡಿಸಿದ ಆನೆಯನ್ನು ಅರಣ್ಯ ಅಧಿಕಾರಿಗಳು ಪಟಾಕಿ ಸಿಡಿಸಿ, ಆನೆಯನ್ನು ಗಂಗಾವರಂನಿಂದ ಆಂಜನೇಯ ಸ್ವಾಮಿ ದೇವಾಲಯದ ಹಿಂದಿನ ಕಾಡಿಗೆ ಸುಮಾರು ಒಂದು ಮೈಲಿ ದೂರದಲ್ಲಿ ಸ್ಥಳಾಂತರಿಸಿದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



