ಶ್ರೀನಿವಾಸಪುರ: ಮೇ 10 ಬುಧವಾರ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ನಡೆಸಲು ಸಿಬ್ಬಂದಿ ವರ್ಗ ಮತಗಟ್ಟೆಗಳತ್ತ ತೆರಳಿದ್ದಾರೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 289 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಯಲ್ಲಿ ಒರ್ವ ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿ ಇರುತ್ತಾರೆ ಪ್ರತಿ ಮತಗಟ್ಟೆಗೂ ಒರ್ವ ಪೋಲಿಸ್ ಸಿಬ್ಬಂದಿ ಇರುತ್ತಾರೆ. 289 ಮತಗಟ್ಟೆಗಳ ಪೈಕಿ ಸುಮಾರು 78 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು ಇದರಲ್ಲಿ ಸುಮಾರು 9 ಮತಗಟ್ಟೆಗಳನ್ನು ಅದರ ಹಿಂದಿನ ಚುನಾವಣೆ ಸಂದರ್ಭಗಳಲ್ಲಿ ನಡೆದಿರುವಂತ ಘಟಾನಾವಳಿಗಳ ಆಧಾರದಲ್ಲಿ ವಿಶೇಷ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.ಇಂತಹ ಮತಗಟ್ಟೆಯಲ್ಲಿ ಕೇಂದ್ರ ಬದ್ರತಾ ದಳದ ಸಿಬ್ಬಂದಿಗಳನ್ನು ವಿಶೇಷವಾಗಿ ನೇಮಿಸಲಾಗಿರುತ್ತದೆ.
ಜನ ಮನ್ನಣೆಗಾಗಿ ವಿಶೇಷ ಮತಗಟ್ಟೆಗಳು
ಮತದಾರರನ್ನು ಆರ್ಷಿಸಲು ಚುನಾವಣೆ ಆಯೋಗ ನೀಡಿರುವ ಸೂಚನೆಯಂತೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ ಇದರಲ್ಲಿ ಸಖಿ ಮತಗಟ್ಟೆ ಮಹಿಳಾ ಮತದಾರರನ್ನು ಆಕರ್ಷಿಸಲು ರೂಪಿಸಲಾಗಿದೆ ಪಟ್ಟಣದ ಸರೋಜಿನಿ ರಸ್ತೆ ಹಾಗು ಮೊಹಲ್ಲಾ ಆಸ್ಪತ್ರೆ ಮತಗಟ್ಟೆ ಸೇರಿದಂತೆ ತಾಲೂಕಿನಾದ್ಯಂತ ಐದು ಮತಗಟ್ಟೆಗಳನ್ನು ಸಖಿ ಮತಗಟ್ಟೆ ಎಂದು ಪರಿಗಣಿಸಲಾಗಿದೆ.
ಮಾವಿನ ಮಡಿಲು ಶ್ರೀನಿವಾಸಪುರದ ಮಾವು ಪ್ರಪಂಚಕ್ಕೆ ಫೇಮಸ್ಸು ಈ ಹಿನ್ನಲೆಯಲ್ಲಿ ಮಾವು ಬೆಳೆಗಾರರನ್ನು ಸೆಳೆಯಲು ಆಲವಟ್ಟ ಗ್ರಾಮದ ಮತಗಟ್ಟೆಯನ್ನು ಮಾವಿನಮತಗಟ್ಟೆಯಂದು ಗುರುತಿಸಲಾಗಿದೆ.
ವಿಕಲ ಚೇತನರಿಗು ಮತದಾನಕ್ಕೆ ಅನವು ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಣದ ಜಾಕೀರ್ ಹುಸ್ಸೆನ್ ಮೊಹಲ್ಲಾದಲ್ಲಿ ಅವರಿಗಾಗಿ ಮತಗಟ್ಟೆ ಸ್ಥಾಪಿಸಲಾಗಿದೆ.ಸಾಂಸ್ಕೃತಿಕ ಮತಗಟ್ಟೆಯನ್ನು ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿದೆ ಎಂದು ಉಪ ಚುನಾವಣಾಧಿಕಾರಿ ಶೀರಿನ್ ತಾಜ್ ತಿಳಿಸಿದರು.
Breaking News
- ಚಿಂತಾಮಣಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾಮಾತೆಗೆ ವಿಶೇಷ ಪೂಜೆ
- ಕೋಲಾರದಲ್ಲಿ ವಿಜಯದಶಮಿಯಂದು RSS ಬೃಹತ್ ಶಕ್ತಿ ಪ್ರದರ್ಶನ
- ಫೋಟೋಗೆ ಅಡ್ಡ ಬಂದಿದ್ದಕ್ಕೆ ಉತ್ತರ ಭಾರತೀಯನ ದೌರ್ಜನ್ಯ ರಕ್ತ ಬರುವಂತೆ ಹಲ್ಲೆ
- ವಿಶ್ವದ ಗಗನಚುಂಬಿ ಕಟ್ಟಡದ ಎತ್ತರ 1 ಕೀ.ಮಿ!
- ಚಾಮುಂಡೇಶ್ವರಿ ಆಶಿರ್ವಾದ ನನ್ನ ಮೇಲೆ ಇದೆ ಸಿದ್ದರಾಮಯ್ಯ
- ಮದನಪಲ್ಲಿ ಜಿಲ್ಲೆ ರಚನೆ ಸದ್ಯಕ್ಕಿಲ್ಲ ಚಂದ್ರಬಾಬು
- ಶ್ರೀನಿವಾಸಪುರ ನೌಕರರ ಸಂಘದ ಮತದಾರ ಪಟ್ಟಿಯಲ್ಲಿ ಅಕ್ರಮ ಅರೋಪ!
- lover Boy ಕಳ್ಳಾಟಕ್ಕೆ ಬೆಸೆತ್ತು ಕಳ್ಳಿ ಹಾಲು ಕುಡಿದ ಯುವತಿ ಆತ್ಮಹತ್ಯೆಗೆ ಯತ್ನ!
- ಶ್ರೀನಿವಾಸಪುರ ಅಪರಿಚಿತ ವಾಹನ ಬಡಿದು ಬೈಕನಲ್ಲಿದ್ದ ತಾಯಿ-ಮಗ ಸಾವು
- ಹರಿಯಾಣದಲ್ಲಿ 200 Days ಮುಖ್ಯಮಂತ್ರಿಯಿಂದ ಬಿಜೆಪಿಗೆ ಹ್ಯಾಟ್ರಿಕ್ ಗೆಲವು!
Sunday, October 13