ನ್ಯೂಜ್ ಡೆಸ್ಕ್:ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟನೆಯಂತೆ ಸಾರ್ವಜಜಿಕರು ತಮ್ಮ ಬೆಳ್ಳಿ ಆಭರಣಗಳು ಅಥವಾ ನಾಣ್ಯಗಳನ್ನು ಒತ್ತೆ ಇಟ್ಟು ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ಈ ಸೌಲಭ್ಯವು ಚಿನ್ನದ ಮೇಲೆ ಮಾತ್ರ ಲಭ್ಯವಿದ್ದು ಇದನ್ನು ಈಗ ಏಪ್ರಿಲ್ 1, 2026 ರಿಂದ ಬೆಳ್ಳಿಗೆ ವಿಸ್ತರಿಸಲಾಗುವುದು ಎಂದು RBI ಹೇಳಿದೆ. RBI ಹೊರಡಿಸಿದ ಹೊಸ ಸುತ್ತೋಲೆಯ ಪ್ರಕಾರ, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ನಿಯಂತ್ರಿತ NBFCಗಳು ಬೆಳ್ಳಿಯ ಮೇಲೆ ಸಾಲವನ್ನು ನೀಡಬಹುದು. ಇದು ಚಿನ್ನದ ಸಾಲ ಯೋಜನೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಮಾರ್ಗಸೂಚಿಗಳ ಪ್ರಕಾರ, ಸಾಲಗಾರರು ತಮ್ಮ ಬೆಳ್ಳಿ ಆಭರಣಗಳು ಅಥವಾ ನಾಣ್ಯಗಳನ್ನು ಒತ್ತೆ ಇಡುವ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಆದರೆ ಬೆಳ್ಳಿ ಬಾರ್‌ಗಳು ಅಥವಾ ಬೆಳ್ಳಿ ಗಟ್ಟಿಗಳು ಸಾಲಕ್ಕೆ ಅರ್ಹವಾಗಿರುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ. ಅದೇ ರೀತಿ, ETFಗಳು ಅಥವಾ ಮ್ಯೂಚುವಲ್ ಫಂಡ್‌ಗಳಂತಹ ಬೆಳ್ಳಿ ಆಧಾರಿತ ಹೂಡಿಕೆಗಳು ಸಹ ಈ ಯೋಜನೆಯ ಭಾಗವಾಗಿರುವುದಿಲ್ಲ. ಹೊಸ ನಿಯಮಗಳ…
Author: Srinivas_Murthy
ಕರ್ನಾಟಕದ ಗಡಿಗೆ ಹೊಂದಿಕೊಂಡ ರಾಜ್ಯಗಳ ಜೊತೆ ಗಡಿ, ನೀರು, ಭಾಷೆ, ರಸ್ತೆ ಪ್ರದೇಶ ಇತ್ಯಾದಿ ಕಾರಣಗಳಿಗಾಗಿ ಗಡಿಗಳಲ್ಲಿ ನಾನಾ ರೀತಿಯಲ್ಲಿ ಸಮಸ್ಯೆ ಇದೆ ಆದರೆ ವಿಭಜಿತ ಕೋಲಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಮದನಪಲ್ಲಿ ನಗರ ಬಗ್ಗೆ ಗಡಿಯೊಳಗಿನ ಜನರ ನಡುವೆ ವ್ಯವಹಾರಿಕವಾಗಿ ಸಾಮಾಜಿಕವಾಗಿ ಬಂದುತ್ವ ಹಾಗು ಭಾಷ ಸೌಹಾರ್ದತೆಯಿಂದ ಕೂಡಿದೆ ಎನ್ನಬಹುದು ವಿಭಜಿತ ಕೋಲಾರ ಜಿಲ್ಲೆಯ ಜನರಿಗೆ ಗಡಿಯಾಚಗಿನ ಜನರೊಂದಿಗೆ ವಿಶೇಷ ಆಪ್ಯಾಯತೆ ಅಲ್ಲಿಂದ ಇಲ್ಲಿ ಬಂದು ಬದುಕುಕೊಂಡಿರುವರುವಂತವರು ಅಲ್ಲಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕೂತುಹಲ!ಹೀಗಾಗಿ ಮದನಪಲ್ಲಿ ಕುರಿತಾಗಿ ಅಲ್ಲಿನ ರಾಜಕೀಯ ಬೆಳವಣಿಗೆ ಕುರಿತು ವಿಶೇಷ ಗಮನಿಸುತ್ತಾರೆ ಅದಕ್ಕೆಂದೆ ಮೊನ್ನೆಯೊಬ್ಬರು www.vcsnewz.com ಬಳಿ ಮದನಪಲ್ಲಿ ಜಿಲ್ಲೆಯಾಗುವ ಕುರಿತು ವಿದ್ಯಮಾನ್ಯಗಳ ಕುರಿತಾಗಿ ಪ್ರಸ್ತಾಪಿಸಿ ಏನಾಯಿತು ಎಂದಿದ್ದರು,ಅದಕ್ಕಾಗಿ ಲೇಖನ ನ್ಯೂಜ್ ಡೆಸ್ಕ್:ಆಂಧ್ರದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚಂದ್ರಬಾಬುನಾಯ್ಡು ಮದನಪಲ್ಲಿಯನ್ನು ಜಿಲ್ಲೆ ಮಾಡುವ ಭರವಸೆ ನೀಡಿದ್ದರೂ,ಈಗ ಆಂಧ್ರದಲ್ಲಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿದೆ ಅಲ್ಲಿನ ಹಿಂದಿನ ವೈಸಿಪಿ ಸರ್ಕಾರ ಅವೈಜ್ಞಾನಿಕವಾಗಿ ಜಿಲ್ಲಾ ಕೇಂದ್ರಗಳನ್ನು…
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ ವಿತರಣೆ ಶ್ರೀನಿವಾಸಪುರ:ಕಳೆದ ವಾರ ಸುರಿದಂತ ಧಾರಕಾರ ಮಳೆಯಿಂದ ಶ್ರೀನಿವಾಸಪುರ ಪಟ್ಟಣದ ಸಂತೆ ಮೈದಾನದಲ್ಲಿನ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದಂತಹ ಆಹಾರ ಪದಾರ್ಥಗಳು ಬಟ್ಟೆ ವಿದ್ಯಾರ್ಥಿಗಳ ಪುಸ್ತಕಗಳು ಸಹ ಸಂಪೂರ್ಣವಾಗಿ ನೀರು ಪಾಲಾಗಿತ್ತು.ಈ ಬಗ್ಗೆ ಸ್ಥಳೀಯರ ಸಮಸ್ಯೆಗಳನ್ನು ಕೇಳುವವರೆ ಇಲ್ಲದಂತಾಗಿದ್ದು ಈ ಸಂದರ್ಭದಲ್ಲಿ ಮಾಹಿತಿ ತಿಳಿದುಕೊಂಡ ಕೋಲಾರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ ಪಟ್ಟಣದ ಸಂತೆ ಮೈದಾನಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದ ಅವರು ಆರಂಭಿಕವಾಗಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳು ಬ್ಯಾಗಗಳು ಲೇಖನಿ ಸಾಮಗ್ರಿಗಳನ್ನು ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಗಾಯತ್ರಿ ಮುತ್ತಪ್ಪ ಮಾತನಾಡಿ ಕಳೆದ ವಾರ ಸುರಿದ ಧಾರಕಾರ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು ಇಲ್ಲಿನ ಜನರ ಬದಕನ್ನು ಅಸ್ತವ್ಯಸ್ತ ಗೋಳಿಸಿದೆ ಶಾಲಾ ಮಕ್ಕಳ ಪುಸ್ತಕಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದು ಬೇಡ ಎಂದು…
ಶ್ರೀನಿವಾಸಪುರ:ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಭಕ್ತಿಭಾವದಿಂದ ನಡೆದಿದ್ದು, ಸಾವಿರಾರು ಭಕ್ತರು ಸಂಭ್ರಮದಿಂದ ಭಾಗವಹಿಸಿದರು.ಕಾರ್ತಿಕ ಮಾಸದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮ ಭಕ್ತಿಭಾವ,ಸಂಭ್ರಮ ಹಾಗೂ ವೈಭವದ ವಾತಾವರಣದಲ್ಲಿ ನೆರವೇರಿತು.ವಿಶೇಷವಾಗಿ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಗೋವಿಂದ ನಾಮಃ ಸ್ಮರಣೆಯೊಂದಿಗೆ ಮಹಿಳೆಯರು ಪುರುಷರು ದೀಪಗಳನ್ನು ಬೆಳಗಿದ್ದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬೆಳಕಿನಿಂದ ಕಂಗೊಳಿಸಿತು.ರಸ್ತೆ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸಿತು ಪಟಾಕಿ ಬಾಣ ಬೀರಸುಗಳು ಪ್ರದರ್ಶನ ದೀಪಾವಳಿ ಸಂಭ್ರಮ ಆಕಾಶದಲ್ಲಿ ಬೆಳಕಿನಾಟದಂತೆ ಮೆರುಗು ತಂದಿತು. ಒಂದು ತಾಸು ನಡೆದ ಪಟಾಕಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ನೋಡುಗರನ್ನು ಮೈ ನವಿರೇಳಿಸುವಂತೆ ಇತ್ತು. ದೇವರ ಪಲ್ಲಕ್ಕಿ ಭವ್ಯವಾಗಿತ್ತುದೀಪೋತ್ಸವಕ್ಕೂ ಮುನ್ನಾ ದೇವರ ಪಲ್ಲಕ್ಕಿ ಉತ್ಸವ ಭವ್ಯವಾಗಿ ಜರುಗಿತು.ದಾರಿ ಉದ್ದಕ್ಕೂ ಭಕ್ತರು ದೇವರಿಗೆ ಹಣ್ಣು ಕಾಯಿ ನೀಡಿ ಪೂಜೆ ಮಾಡಿಸಿದರು.ಭಕ್ತಿ ಮತ್ತು ಉತ್ಸಾಹದಿಂದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅಭಿವೃದ್ಧಿಗೆ ಒಂದು ಕೋಟಿ ಅನುಧಾನಕ್ಕೆ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಕಾರ್ತಿಕ ಮಾಸದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೂ ಮುನ್ನಾ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ದೇವರ ದರ್ಶನ ಪಡೆದು ನಂತರ ಮಾತನಾಡಿ ಲಕ್ಷದೀಪೋತ್ಸವ ಕಾರ್ಯಕ್ರಮದ ಉತ್ತಮವಾದ ಸೇವೆ ಆಯೋಜಕರಿಗೆ ಒಳ್ಲೆಯದಾಗಲಿ ಎಂದ ಅವರು ಆಯೋಜಕರ ಆಹ್ವಾನದ ಮೇರೆಗೆ ದೇವರ ದರ್ಶನಕ್ಕೆ ಆಗಮಿಸಿದ್ದು,ಇದೊಂದು ಪುರಾತನ ಆಲಯವಾಗಿದೆ ಇದರ ಅಭಿವೃದ್ಧಿಗೆ ಸರ್ಕಾರದಲ್ಲಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸುಮಾರು ಒಂದು ಕೋಟಿ ವೆಚ್ಚದಲ್ಲಿ ಅಭೀವೃದ್ಧಿ ಮಾಡುವ ಯೋಚನೆ ಇದ್ದು ಊರಿನ ಪ್ರಮುಖರು ಹಿರಿಯರು ಸಹಕಾರ ಪಡೆದು ದೇವಾಲಯದ ಗೋಪುರ ಇನ್ನಿತರೆ ಕಾರ್ಯಗಳಿಗೆ ಹಣ ವಿನಿಯೋಗಿಸುವುದಾಗಿ ಹೇಳಿದರು.ವಾಣಿಜ್ಯ ಕಟ್ಟಡಗಳು ಬೇಡ ಈ ಸಂದರ್ಭದಲ್ಲಿ ಪ್ರಮುಖ ವಾಣಿಜ್ಯೋದ್ಯಮಿ ವೈ.ಆರ್.ಎಸ್ ಪ್ರಕಾಶ್ ಮಾತನಾಡಿ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಆವರಣದ ಸುತ್ತ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು. ಈ…
ಶ್ರೀನಿವಾಸಪುರ:ಲೋಕ ಕಲ್ಯಾಣಾರ್ಥವಾಗಿ ಕಾರ್ತಿಕ ಮಾಸದ ಅಂಗವಾಗಿ ಶ್ರೀನಿವಾಸಪುರ ಪಟ್ಟಣದ ಪುರಾತನವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಇದೆ ಮೊದಲ ಬಾರಿಗೆ ಲಕ್ಷದೀಪೋತ್ಸವ ನಡೆಯಲಿದೆ. ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಇರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ 25ರ ಶನಿವಾರ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನೀರಿಕ್ಷೆ ಇದೆ.ಶನಿವಾರ ಬೆಳಗ್ಗೆ ಮೂಲದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪೂಜೆ ನಡೆಯಲಿದ್ದು ರಾತ್ರಿ ಲಕ್ಷ ದೀಪೋತ್ಸವ ಹಾಗೂ ಬಾಣಬಿರುಸುಗಳ ಪ್ರದರ್ಶನ, ನಡುವೆ ದೇವರ ಭವ್ಯ ಮೆರವಣಿಗೆ ಪಟ್ಟಣದಲ್ಲಿ ನಡೆಯಲಿದೆ.ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ ಅದ್ದೂರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು ಡೊಳ್ಳು ಕುಣಿತ, ವೀರಗಾಸೆ, ಗಾರುಡಿ ಗೊಂಬೆಗಳು, ಪೂಜೆ ತಮಟೆ, ಅಣ್ಣಮ್ಮನ ತಮಟೆ ಮತ್ತಿತರ ಕಲಾವಿದರ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಲಿರುವುದಾಗಿ ಕಾರ್ಯಕ್ರಮದ ವ್ಯವಸ್ಥಾಪಕರು ತಿಳಿಸಿದ್ದಾರೆ ಭಕ್ತಾದಿಗಳು ಸಕಾಲದಲ್ಲಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ಸಮಸ್ತ ಭಕ್ತಾದಿಗಳು ಪಾಲ್ಗೊಂಡು ದೇವರ ಅನುಗ್ರಹಕ್ಕೆ…
ಶ್ರೀನಿವಾಸಪುರ:ಪಟ್ಟಣದ ನಾಗರೀಕರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು ಪುರಸಭೆ ಆಡಳಿತಕ್ಕೆ ಇದರ ಅರಿವೆ ಇಲ್ಲದಂತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಮರ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಯಾದವ್ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಜನ ಪ್ರತಿನಿತ್ಯ ಅನುಭವಿಸುವಂತ ಸಮಸ್ಯೆಗಳನ್ನು ಆಳುವವರು ಗಮನಿಸುತ್ತಿಲ್ಲ ಸಾರ್ವಜನಿಕರು ನರಕಯಾತನೆಯಲ್ಲಿ ಜೀವನ ಕಳೆಯುವಂತಾಗಿದೆ.ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸುತ್ತ ಸಾಗಿದೆ ಅದಕ್ಕೆ ತಕ್ಕನಂತೆ ನಾಗರೀಕರಿಗೆ ಅಗತ್ಯ ಮೂಭೂತ ಸೌಕರ್ಯಗಳನ್ನು ಒದಗಿಸುವ ಜವಬ್ದಾರಿ ಆಳುವವರಿಗೆ ಇರಬೇಕಾಗುತ್ತದೆ ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆ ಮಾಡಿಸಿರುವಂತ ಬೈರಪಲ್ಲಿ,ಕೊಳ್ಳೂರು.ಉನಿಕಿಲಿ,ನಲ್ಲಪಲ್ಲಿ ಇಂದಿರಾನಗರ ಪ್ರದೇಶಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಯಾವುದು ಚರಂಡಿ ಯಾವುದು ಎಂಬ ವ್ಯತ್ಯಾಸ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದೆ ಇಲ್ಲಿ ರಸ್ತೆಗಳ ಪರಿಸ್ಥಿತಿ ಅಯೋಮಯದಂತಿದೆ ಎನ್ನುತ್ತಾರೆ.ಪಟ್ಟಣದಲ್ಲಿ ದಿನೆ ದಿನೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಜೊತೆಗೆ ವಾಹನಗಳ ಸಂಚಾರದ ಸಂಖ್ಯೆಯೂ ಹೆಚ್ಚುತ್ತಿದೆ ಇದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ,ಈ ಕುರಿತು ಅಗತ್ಯ ಕ್ರಮ ತಗೆದುಕೊಳ್ಳಬೇಕಾದ ಜವಾಬ್ದಾರಿ ಪುರಸಭೆಗೆ…
ನ್ಯೂಜ್ ಡೆಸ್ಕ್:ರಿಲ್ಸ್ ಮಾಡಿ ಅದನ್ನು Instagram ನಲ್ಲಿ ಪೋಸ್ಟ್ ಮಾಡಲು ಹುಚ್ಚಿಗೆ ಬಿದ್ದ ಯುವಕನೊಬ್ಬ ಜಲಪಾತದಲ್ಲಿ ನೈಜತೆ ತೋರಿಸುವ ಆತುರುದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಬಿದ್ದು ಸಾವನಪ್ಪಿರುವ ಘಟನೆ ಆಂಧ್ರದ ಪಲಮನೇರು ಸಮೀಪ ಇರುವಂತ ಕಲ್ಯಾಣರೆವು ಜಲಪಾತದಲ್ಲಿ ನಡೆದಿದೆ.ಮೃತ ಯುವಕನನ್ನು ಪಲಮನೇರು ಚಿಕನ್ ಅಂಗಡಿಯ ನೌಕರ ಯೂನಸ್ (24) ಎಂದು ಗುರುತಿಸಲಾಗಿದೆ.ಕಳೆದ ಐದಾರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಕಲ್ಯಾಣರೆವು ಜಲಪಾತಕ್ಕೆ ಹೋಗಿದ್ದ ಅಲ್ಲಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ನೀರು ದುಮ್ಮಿಕ್ಕುವುದನ್ನು ನೈಜವಾಗಿ ತೋರಿಸಲು ರೀಲ್ಸ್ ಮಾಡಲು ಮಾಡಲು ಹೋಗಿ ಆಯಾ ತಪ್ಪಿ ಜಲಪಾತದಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ,ಅವನ ಕಿರುಚಾಟ ಕೇಳಿ ಅವನ ಸ್ನೇಹಿತರು ಅವನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ ಸ್ನೇಹಿತರ ಮುಂದೆಯೆ ಯುವಕ ನೀರಿನ ರಭಸದಲ್ಲಿ ಕೊಚ್ಚಿಹೋಗಿದ್ದಾನೆ ಇದನ್ನು ನೊಡುತ್ತಿದ್ದ ಸ್ನೇಹಿತರು ಹಿಂದೆ ಸರಿದಿದ್ದಾರೆ.ಇತ್ತಿಚಿಗೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಮುಳಬಾಗಿಲಿನ ನಂಗಲಿ ಸುತ್ತಮುತ್ತಲಿನಿಂದ ಹರಿಯುವ ಕೌಂಡಿನ್ಯ ನದಿ ನೀರಿನ ಹರಿವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಕಲ್ಯಾಣರೆವು ಜಲಪಾತದಲ್ಲಿ ಪ್ರಸ್ತುತ ನೀರಿನ…
ನ್ಯೂಜ್ ಡೆಸ್ಕ್:ರಾಜ್ಯದಲ್ಲಿ ಮಳೆಯ ಆರ್ಭಟ ಇನ್ನೂ ಮುಂದುವರೆಯಲಿದೆ ಮುಂದಿನ 10 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.ನಾಳೆ ಭಾರಿ ಮಳೆ ಸಾಧ್ಯತೆಮುಂದಿನ 10 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ 7 ಜಿಲ್ಲೆಗಳಾದ ದಕ್ಷಿಣ ಒಳನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಮತ್ತು ಹಾಸನದಲ್ಲಿ ಆರೆಂಜ್ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.24 ಜಿಲ್ಲೆಗಳಲ್ಲಿ ಸಾಧಾರಾಣ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಇರಲಿದೆ ಎನ್ನುತ್ತಾರೆ.ರಾಜ್ಯದಲ್ಲಿ ಮಳೆ ಮತ್ತಷ್ಟು ದಿನ ಮಳೆ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದು, ಚಾಮರಾಜನಗರದಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಬೆಂಗಳೂರಲ್ಲಿ ಗಾಳಿ ಮಳೆ ಸಾಧ್ಯತೆರಾಜಧಾನಿ ಬೆಂಗಳೂರಲ್ಲಿ ನಾಳೆ ಗಾಳಿ ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಶೇಕಡಾ 86ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗ ಗಂಟೆಗೆ 11-20 ಕಿ.ಮೀ. ಇರಲಿದೆ. ನಗರದ ಗರಿಷ್ಠ ಉಷ್ಣಾಂಶ…
ಮದುವೆಯಾಗಲು ಹೆಣ್ಮಕ್ಕಳೆ ಸಿಗುತ್ತಿಲ್ಲ ವಧು ದಕ್ಷಿಣೆ ನೀಡುವಂತ ಪರಿಸ್ಥಿತಿ ಏರ್ಪಟ್ಟಿದೆ ಎಂದು ಯುವಕರು ಪರಿತಪಿಸುತ್ತಿದ್ದಾರೆ. ಇಂತಹ ಕಾಲದಲ್ಲಿ ವರದಕ್ಷಿಣೆ ಪಡೆದು ಭರ್ಜರಿಯಾಗಿ ಮದುವೆ ಮಾಡಿಕೊಂಡು ತಾಳಿ ಕಟ್ಟಿ ಹೊಸಿಲು ಮೆಟ್ಟಿಸಿ ಮನೆ ತುಂಬಿಸಿಕೊಂಡ ಹೆಣ್ಣಿಗೆ ಸೈಟು ಮತ್ತಷ್ಟು ಹಣ ತರಲು ಒತ್ತಾಯಿಸಿ ವರದಕ್ಷಿಣೆ ಕಿರುಕುಳ ನೀಡಿದಲ್ಲದೆ ಆಕೆ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಧಾರುಣ ಘಟನೆ ದೊಡ್ದಬಳ್ಳಾಪುರದಲ್ಲಿ ನಡೆದಿದೆ. ದೊಡ್ದಬಳ್ಳಾಪುರ:ಗಂಡನ ಮನೆಯವರ ಹಿಂಸೆ ಹಾಗು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಉಪನ್ಯಾಸಕಿಯೊಬ್ಬಳು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿ ಇರುವಂತ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವ ಉಪನ್ಯಾಸಕಿಯನ್ನು ದೊಡ್ಡಬಳ್ಳಾಪುರದ ಸೋತೇನಹಳ್ಳಿ ನಿವಾಸಿ ಪುಷ್ಪವತಿ (23) ಎಂದು ಗುರುತಿಸಲಾಗಿದ್ದು ಈಕೆಯ ಪೋಷಕರಿಗೆ 4 ಜನ ಹೆಣ್ಣು ಮಕ್ಕಳಿದ್ದು, ಮೃತಳು ಕೊನೆಯವರಾಗಿದ್ದು ಈಕೆಯನ್ನು ದೊಡ್ಡಬಳ್ಳಾಪುರ ತಪಸೀಹಳ್ಳಿ ಗ್ರಾಮದ ವೇಣು ಎಂಬಾತನಿಗೆ ಕಳೆದ 2024ರ ನವೆಂಬರ್‌ನಲ್ಲಿ ದೊಡ್ಡ ಮಟ್ಟದಲ್ಲಿ ವರದಕ್ಷಿಣೆ…


