Author: Srinivas_Murthy

ಯಲ್ದರೂ ಹೋಳೂರು ಕಸಬಾ ಹೋಬಳಿಗಳಲ್ಲಿಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ಬಹಿರಂಗ ಸಭೆಅಬ್ಯರ್ಥಿ ಮಲ್ಲೇಶ್ ಬಾಬು ದಾಖಲೆ ಅಂತರದಲ್ಲಿ ಗೆಲವು ಶ್ರೀನಿವಾಸಪುರ:ಸ್ವಾತಂತ್ರ್ಯ ಪೂರ್ವದಲ್ಲಿನ ಕಾಂಗ್ರೆಸ್ ಈಗ ಬದುಕಿಲ್ಲ ಈಗಿನ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ಹೇಸರು ಹೇಳುವ ಅರ್ಹತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು ಅವರು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಮುದುವಾಡಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಹೇಳಿದರು, ದೇಶದಲ್ಲಿ ಎದ್ದಿರುವ ಮೋದಿ ಅಲೆ ನೋಡಿ ಕಾಂಗ್ರೆಸ್ ಗೆ ನಡುಕ ಉಂಟಾಗಿದೆ ಕಳೆದ ಭಾರಿ ಕಾಂಗ್ರೆಸ್ ಗೆ ಮತ ಹಾಕಿದವರೆಲ್ಲಾ ಈ ಭಾರಿ ಬಿಜೆಪಿಗೆ ಮತ ಹಾಕಲು ಮುಂದಾಗಿದ್ದಾರೆ. ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದವರು ಇಂದು ಮೋದಿ ಪ್ರಧಾನಿ ಆಗಲಿ ಎಂದು ವೈಯುಕ್ತಿಕವಾಗಿ ಭರವಸೆ ನೀಡುತ್ತಿದ್ದು ರಾಜ್ಯದಲ್ಲಿನ ಎಲ್ಲಾ 28 ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.ರಾಹುಲ್ ಹೆಸರು ಹೇಳಿದರೆ ಮತ ಬರಲ್ಲಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬರುವ ಮತಗಳೂ ಕಾಂಗ್ರೆಸ್…

Read More

ವಿಧಾನಸಭೆ ವಿರೋಧ ಪಕ್ಷದ ನಾಯಕನಮುಂದೆ ಗುಂಪುಗಾರಿಕೆ ಬಹಿರಂಗಬಂಗಾರಪೇಟೆ ಮಾಜಿ ಶಾಸಕರಿಂದವಿರೋಧ ಪಕ್ಷದ ನಾಯಕ ಅಶೋಕ್ ಮಾತಿಗೆ ವಿರೋಧ ನ್ಯೂಜ್ ಡೆಸ್ಕ್:ಕೋಲಾರ ಕಾಂಗ್ರೆಸ್ ಬಣ ಕಿತ್ತಾಟ ಜಗ್ಗಜಾಹಿರ ಈಗ ಕೋಲಾರ ಬಿಜೆಪಿಯಲ್ಲೂ ಗುಂಪುಗಾರಿಕೆ ಮುಖಂಡರ ನಡುವಿನ ಮನಸ್ತಾಪ ದಿನೆ ದಿನೆ ಬಹಿರಂಗವಾಗುತ್ತಿದೆ, ಗುರುವಾರ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಸ್ವಕ್ಷೇತ್ರವಾದ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಅಂಚಾಳ ಗ್ರಾಮದಲ್ಲಿ ಚುನಾವಣಾ ಸಂಬಂಧ ನಡೆದ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶದಲ್ಲಿ ಕೋಲಾರ ಬಿಜೆಪಿ ಗುಂಪುಗಾರಿಕೆ ಬಣ ರಾಜಕೀಯ ಕಾರ್ಯಕರ್ತರ ಮುಂದೆ ಬಹಿರಂಗವಾಗಿದೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹಾಲಿ ಸಂಸದ ಮುನಿಸ್ವಾಮಿ ಅವರನ್ನು ಹೋಗಳುತ್ತ ನೀವು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಬರುವಂತೆ ಹೇಳುತ್ತಿದ್ದಂತೆ ಸಮಾವೇಶದ ವೇದಿಕೆಯಲ್ಲಿದ್ದ ಬಂಗಾರಪೇಟೆ ಮಾಜಿ ಶಾಸಕ ವೆಂಕಟಮುನಿಯಪ್ಪ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಅವರುಗಳು ಆಶೋಕ್ ಅವರ ಭಾಷಣವನ್ನು ತೀವ್ರವಾಗಿ ವಿರೋಧಿಸಿದ್ದಾರೆ ಕೂಡಲೆ ಅವರ ಅಭಿಮಾನಿಗಳು ಎರು ಧ್ವನಿಯಲ್ಲಿ ಕೂಗಾಡಿದ್ದಾರೆ. ನಾವ್ಯಾರು…

Read More

ಶ್ರೀನಿವಾಸಪುರ:ಯುಗಾದಿ ಹೊಸ ಸಂವತ್ಸರದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಕರಗ ಮಹೋತ್ಸವ ಹಾಗು ಊರ ದೇವರುಗಳ ಪಲ್ಲಕ್ಕಿ ಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಯಿತು.ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಗಂಗಮ್ಮ ಮತ್ತು ಪೀಲೆಕಮ್ಮ,ಶ್ರೀ ಲಕ್ಷ್ಮೀವೆಂಕಟೇಶ್ವರ,ಶ್ರೀ ಉಗ್ರ ನೃಸಿಂಹ,ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಗಟ್ಟಹಳ್ಳಿ ಶ್ರೀ ನಡೀರಮ್ಮ, ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ,ಶ್ರೀ ನಲ್ಲಗಂಗಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನ ಪಲ್ಲಕ್ಕಿ ರಥಗಳು ಒಂದಕ್ಕೊಂದು ಅಲಂಕೃತವಾಗಿ ಸಾಲಾಗಿ ನಡೆದ ಶೋಭಾಯಾತ್ರೆ ಯುಗಾದಿ ಹಬ್ಬದ ದಿನ ಸಂಜೆ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಸಲಾಯಿತು. ವಿಶೇಷ ಆಕರ್ಷಣೆಯಾದ ಕರಗಹೊಳೂರಿನಲ್ಲಿ ಕರಗ ಹೊರುವ ವೆಂಕಟೇಶ್ ರವರು ಶ್ರೀನಿವಾಸಪುರ ಪಟ್ಟಣದಲ್ಲೂ ಕರಗ ಹೊತ್ತು ಆಕರ್ಷಣೆಯಾಗಿ ಮಹೋತ್ಸವ ನಡೆಸಿಕೊಟ್ಟರು ಪಟ್ಟಣದ ಕಟ್ಟೆಕೆಳಗಿನ ಪಾಳ್ಯ, ಎಂ.ಜಿ.ರಸ್ತೆ ಇನ್ನಿತರೆ ಸ್ಥಳಗಳಲ್ಲಿ ಬಣ್ಣ ಬಣ್ಣದ ಲೈಟ್ ಗಳಿಂದ ಕೂಡಿದಂತ ವೇದಿಕೆಯಲ್ಲಿ ಕರಗ ನೃತ್ಯ ಆಯೋಜಿಸಲಾಗಿತ್ತು,ವಿಶೇಷವಾಗಿ ಮನೆಗಳ ಬಳಿ ಕರಗಕ್ಕೆ ಪಾದ ಪೂಜೆ ಮಾಡಿ ಜನ…

Read More

ಮಳೆಯಿಲ್ಲದೆ ಬಿಸಿಲ ತಾಪಕ್ಕೆ ಮಾವುಬೆಳೆಸುಟ್ಟು ಸೊರಗಿ ನೆಲಕ್ಕೆ ಉರುಳುತ್ತಿದೆಔಷಧಿ ಸಿಂಪಡಿಸಿದರೂ ಬೆಳೆ ಉಳಿಯುತ್ತಿಲ್ಲಬೆಳೆಗಾರನಿಗೆ ಉಳಿದ ಔಷಧಿ ಸಾಲ. ಶ್ರೀನಿವಾಸಪುರ:ಶ್ರೀನಿವಾಸಪುರದ ವಿಶ್ವ ಪ್ರಸಿದ್ಧ ಮಾವಿನಬೆಳೆ ಮಳೆಯಿಲ್ಲದೆ ದಿನೆ ದಿನೆ ಎರುತ್ತಿರುವ ಬಿಸಿಲಿನ ತಾಪಕ್ಕೆ ಜೀವನಾಡಿ ಬೆಳೆ ಉದರಿ ಹೋಗುತ್ತಿದೆ,ಉತ್ಪಾದನೆಯಲ್ಲಿ ಶೇ.70ರಷ್ಟು ಕುಸಿತವಾಗುವ ಪರಿಸ್ಥಿತಿ ಏರ್ಪಟ್ಟಿದೆ ಬಹುತೇಕ ರೈತರು ಮಾವು ಬೆಳೆಯ ಮೇಲೆ ಅವಲಂಬಿತರಾಗಿ ಬದಕು ಸಾಗಿಸುತ್ತಾರೆ,ಈ ಬಾರಿ ಬಿಸಿಲಿನ ತಾಪಕ್ಕೆ ಹೂ, ಪಿಂದೆಗಳು ಉದುರುತ್ತಿರುವುದನ್ನು ನೋಡಿದರೆ 10 ಟನ್‌ ಬರುತ್ತಿದ್ದ ಮಾವು 1-2 ಟನ್‌ ಸಿಗುವುದು ಅನುಮಾನವಾಗಿದ್ದು ಮಾವು ಬೆಳೆಗಾರರನ್ನು ಆತಂಕಕ್ಕೆ ಈಡು ಮಾಡಿದೆ.ಈ ಬಾರಿಯ ಮಾವು ಹಂಗಾಮಿನಲ್ಲಿ ಫಸಲು ನೀರಿಕ್ಷೆ ಮೂಡಿಸಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಗಿಡಗಳು ಅಕಾಲಿಕವಾಗಿ ಚಿಗುರೊಡೆದು ಹೂವು,ಕಾಯಿಗಳನ್ನು ಉದುರಿಸಿದೆ.ಒಂದು ವರ್ಷದಿಂದ ಸಮರ್ಪಕ ಮಳೆ ಬಾರದೆ,ಭೂಮಿಯಲ್ಲಿ ಉಷ್ಣಾಂಶ ಹೆಚ್ಚಿದ್ದು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೂ ಹಂತದಲ್ಲೆ ಮಾವಿನ ಫಸಲು ಉದರಿ ಡಿಸೆಂಬರ್‌ ತಿಂಗಳಿನಲ್ಲಿ ಬರಬೇಕಿದ್ದ ಹೂ ಫೆಬ್ರವರಿ ತಿಂಗಳಿನಲ್ಲಿ ಬಂದಿತು ಫಸಲು ತಡವಾಗುವುದರ ಜೊತೆಗೆ ರಣ…

Read More

ನ್ಯೂಜ್ ಡೆಸ್ಕ್:ಆಂಧ್ರ ಸಿನಿಮಾಗಳಲ್ಲಿ ಕಂಟಿನ್ಯೂ ಹಿಟ್ ಸಿನಿಮಾಗಳನ್ನೆ ನೀಡುತ್ತ ತೆಲಗು ಸಿನಿಮಾ ಪರಿಶ್ರಮದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಹಿರಿಯ ನಟ ನಂದಮೂರಿಬಾಲಕೃಷ್ಣ ತೆಲಗು ರಾಜಕೀಯ ವಲಯದಲ್ಲೂ ರಾಯಸೀಮಾ ಪ್ರಾಂತ್ಯವಾದ ಹಿಂದೂಪುರದಲ್ಲಿ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ ತಾವು ಪ್ರತಿನಿಧಿಸುವ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರು ತನ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗೆ ತನ್ನ ಸ್ವಂತ ಹಣದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಿ ಮಾದರಿ ಆಸ್ಪತ್ರೆಯನ್ನಾಗಿಸಿದ್ದಾರೆ,ಹಣ್ಣು ತರಕಾರಿ ಮಾರುಕಟ್ಟೆಯನ್ನು ವಿನೂತಾತ್ಮಕವಾಗಿ ನಿರ್ಮಿಸಿ ಜನರಿಂದ ಶಭ್ಬಾಸ್ ಗಿರಿ ಪಡೆದಿದ್ದಾರೆ,ಕೊಟ್ಯಾಂತರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಿದ್ದಾರೆ ಹೀಗೆ ತನ್ನದೆ ಜೇಬಿನಿಂದ ಹಣ ಖರ್ಚು ಮಾಡಿ ಮೂಲಸೌಕರ್ಯಗಳ ಅಭಿವೃದ್ಧಿ ಮಾಡುವ ಮೂಲಕ ಕ್ಷೇತ್ರದಲ್ಲಿ ಸೈ ಅನಿಸಿಕೊಂಡಿದ್ದಾರೆ. ಈಗ ಮತ್ತೆ ಚುನಾವಣೆ ಬಂದಿದ್ದು ಹ್ಯಾಟ್ರಿಕ್ ಗೆಲವು ಸಾಧಿಸುವ ನಿಟ್ಟಿನಲ್ಲಿ ಕ್ಷೇತ್ರಾದ್ಯಂತ ಒಡಾಡುತ್ತಿದ್ದಾರೆ.ಆಂಧ್ರಪ್ರದೇಶದ ಅವಿಭಜಿತ ಅನಂತಪುರ ಜಿಲ್ಲೆಯಾಗಿದ್ದು ಈಗ ಶ್ರೀ ಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಯಾಗಿರುವ ಕನ್ನಡ ಭಾಷಿಕರೆ ಹೆಚ್ಚಾಗಿರುವ ಹಿಂದೂಪುರ ವಿಧಾನಸಭೆ ಕ್ಷೇತ್ರ ಆರಂಬದಿಂದಲೂ ತೆಲುಗು ದೇಶಂ ಪಕ್ಷದ ಭದ್ರಕೋಟೆ,1983…

Read More

ಶ್ರೀನಿವಾಸಪುರ: ಅರಣ್ಯ ಇಲಾಖೆ ಕಿರಕುಳಕ್ಕೆ ಬೆಸೆತ್ತು ತಾಲೂಕಿನ ದಳಸನೂರು ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ, ಇಂದು ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಕಳೆದ 30-40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ರೈತಾಪಿ ಜನರನ್ನು ಅರಣ್ಯ ಈಗ ಏಕಾಏಕಿ ಒಕ್ಕಲೆಬ್ಬಿಸಿದೆ ರೈತಾಪಿ ಜನರ ಅನುಭವದಲ್ಲಿದ್ದ ನೂರಾರು ಎಕರೆ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ದೌರ್ಜನ್ಯವಾಗಿ ಕಿತ್ತುಕೊಂಡಿದೆ, ಜಮೀನು ಕಳೆದುಕೊಂಡ ಕೃಷಿಕರು ಅಕ್ಷರಶಃ ಬಿದಿಪಾಲಾಗಿದ್ದಾರೆ,ನಮಗೆ ನ್ಯಾಯ ಒದಗಿಸುವ ದೃಷ್ಠಿಯಿಂದ ಸರ್ಕಾರ ಜಂಟಿ ಸರ್ವೆ ಮಾಡಿಸಿ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದರು ಇದುವರಿಗೂ ನಮ್ಮ ಮನವಿಗೆ ನ್ಯಾಯ ಸಿಕ್ಕಿಲ್ಲ ಇದರಿಂದ ನಾವು ನಮ್ಮ ರಕ್ಷಣೆಗೆ ಬಾರದ ಸರ್ಕಾರದ ಕ್ರಮ ಖಂಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯದ ವಿರುದ್ದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

Read More

ಮೈತ್ರಿ ಅಭ್ಯರ್ಥಿ ಭರ್ಜರಿ ರೋಡ್ ಶೋಶೋ ನಂತರ ಕೊನೆಯಲ್ಲಿ ಆದದ್ದೆ ಬೇರೆಯಾರು ಜೊತೆಯಲ್ಲಿ ಉಳಿಲಿಲ್ಲ ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಗುರುವಾರ ನಾಮ ಪತ್ರ ಸಲ್ಲಿಸಿದ್ದಾರೆ ನಾಮ ಪತ್ರ ಸಲ್ಲಿದಾಗಲೆ ಮೈತ್ರಿ ಕೂಟದ ಸಮನ್ವಯತೆ ಹಳ್ಳ ಹಿಡಿಯಿತಾ,ಮೈತ್ರಿ ಪಕ್ಷಗಳ ಮುಖಂಡರು ತಮ್ಮ ದಾರಿ ನೊಡಿಕೊಂಡು ಹೊದ ಹಿನ್ನಲೆಯಲ್ಲಿ ಅಭ್ಯರ್ಥಿ ನಡುರಸ್ತೆಯಲ್ಲಿ ಒಬ್ಬಂಟಿಯಾದರ ಇಂತಹ ಹಲವಾರು ಮಾತುಗಳು ನಿನ್ನೆ ಕೋಲಾರದ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.ರಾಜ್ಯಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ಸೀಟು ಹಂಚಿಕೆಯಲ್ಲಿ ಮಂಡ್ಯ,ಹಾಸನ ಹಾಗು ಕೋಲಾರ ಕ್ಷೇತ್ರಗಳು ಜೆಡಿಎಸ್ ಪಾಲಾಗಿದೆ,ಕೋಲಾರ ಟಿಕೆಟ್ ಗಾಗಿ ಬಿಜೆಪಿ-ಜೆಡಿಎಸ್ ನಾಯಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದಾದರೂ ಕೊನೆಗೂ ಜೆಡಿಎಸ್ ವಶವಾಯಿತು,ಅಭ್ಯರ್ಥಿ ಘೋಷಣೆಯಾದ ನಂತರ ಅಭ್ಯರ್ಥಿ ಮಲ್ಲೇಶ್ ಬಾಬು ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದು ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಸೇರಿದಂತೆ ಜೆಡಿಎಸ್ ಇಬ್ಬರು ಶಾಸಕಾರದ ವೆಂಕಟಶಿವಾರೆಡ್ಡಿ,ಸಮೃದ್ಧಿಮಂಜುನಾಥ್ ಹಾಗು ಕೋಲಾರದ ಸಿ.ಎಂ.ಆರ್ ಶ್ರೀನಾಥ್ ಜೊತೆ…

Read More

ಕೋಲಾರ:ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ ನಾಮಪತ್ರ ಸಲ್ಲಿಸುವ ವೇಳೆಯೂ ಬಣ ರಾಜಕೀಯ ಮುಂದುವರೆದಿದ್ದು ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಎರಡು ಬಾರಿ ನಾಮ ಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ ಮೊದಲ ಸಲ ನಾಮ ಪತ್ರ ಸಲ್ಲಿಸಿಸುವ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್‌,ಡಾ.ಎಂ.ಸಿ.ಸುಧಾಕರ್‌, ವಿಧಾನಪರಿಷತ್ ಸದಸ್ಯ ನಸೀರ್‌ ಅಹ್ಮದ್‌,ಶಾಸಕ ನಾರಯಣಸ್ವಾಮಿ ಇದ್ದರು.ಎರಡನೆ ಬಾರಿಗೆ ನಾಮ ಪತ್ರ ಸಲ್ಲಿಸುವಾಗ ಸಚಿವ ಕೆ.ಎಚ್‌.ಮುನಿಯಪ್ಪ,ಶಾಸಕಿ ರೂಪಕಲಾ ಎಂ.ಶಶಿಧರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ,ಶಿಡ್ಲಘಟ್ಟ ರಾಜೀವ್ ಗೌಡ ಇದ್ದರು.ನಾಮ ಪತ್ರ ಸಲ್ಲಿಕೆ ನಂತರ ಒಂದಾದ ಬಣಕೋಲಾರ ಮೀಸಲು ಕ್ಷೇತ್ರದಲ್ಲಿ ಹೊಸ ಮುಖ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಎರಡು ಬಾರಿ ಪ್ರತ್ಯಕವಾಗಿ ಬಣಗಳ ಜೊತೆ ಹೋಗಿ ನಾಮ ಪತ್ರ ಸಲ್ಲಿಸಿದ ನಂತರ ಹೊರಗೆ ಬಂದಾಗ ಸಚಿವ ಬೈರತಿ ಸುರೇಷ್ ನೇತೃತ್ವದಲ್ಲಿ ಎರಡು ಬಣಗಳ ಶಾಸಕರು ಮಂತ್ರಿಗಳು ಮುಖಂಡರು ಜೊತೆಗೂಡಿ ಸಾರ್ವಜನಿಕರಿಗೆ ಫೋಟೋ ಪೊಸ್ ಕೊಟ್ಟು ದರ್ಶನ ನೀಡಿದಲ್ಲದೆ ಎಲ್ಲರೂ ವಿಜಯದ ಸಂಕೇತ ಎಂಬಂತೆ ಎರಡು ಬೆರಳು ತೋರಿಸಿದರು. ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್…

Read More

ಶ್ರೀನಿವಾಸಪುರದ ಲಿಂಗಾಪುರ ನಾಗರಾಜ್ ಮುಖ್ಯಸ್ಥರಾದರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ)ಸಂಸ್ಥೆ ವತಿಯಿಂದ ಕಲಿಕಾ ಸಾಮಗ್ರಿಗಳ ವಿತರಣೆ ಶ್ರೀನಿವಾಸಪುರ : ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಗ್ರಾಮೀಣ ಶೈಕ್ಷಣಿಕ ವ್ಯವಸ್ಥೆಗೆ ಜೀವ ತುಂಬುವಂತ ಕೆಲಸವನ್ನು ಬೆಂಗಳೂರಿನ ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ) ಮಾಡಿದೆ. ಸಂಸ್ಥೆ ವತಿಯಿಂದ ಶ್ರೀನಿವಾಸಪುರ ತಾಲೂಕಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳು ಸೇರಿದಂತೆ ಸಲಕರಣೆಗಳನ್ನು ವಿತರಿಸಿದ್ದಾರೆ. ಇದ್ಯಾವುದು ಹೇಳಿಕೆಗೆ ಅಥಾವ ಫೋಟೋ ಸೆಷನ್ ಗಾಗಿ ಕಾಟಾಚಾರಕ್ಕೆ ವಿತರಿಸಿದ ವಸ್ತುಗಳಲ್ಲ ಭರ್ಜರಿ ನಲವತ್ತಾರು ಲಕ್ಷ ಮೌಲ್ಯದ ನಲಿಕಲಿ ಟೇಬಲ್‌ಗಳು, ಚೇರುಗಳು, ಶಾಲಾ ಬ್ಯಾಗ್‌ಗಳು, ವಿಧ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ.ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ (ರೊಕೊ) ಸಂಸ್ಥೆ ಮುಖ್ಯಸ್ಥ ನಾಗರಾಜ್ ಶ್ರೀನಿವಾಸಪುರ ತಾಲೂಕಿನ ಲಿಂಗಾಪುರ ಗ್ರಾಮದವರಾಗಿದ್ದು ಅವರು ತಾವು ಒದಿದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸ ಮಾಡಿದ್ದಾರೆ.ಅವರು ತಾಲೂಕಿನ ಚೆನ್ನಯ್ಯಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಯಲ್ಲಿ ಸಲಕರಣೆಗಳನ್ನು ವಿತರಿಸಿ…

Read More

ಶ್ರೀನಿವಾಸಪುರ:ರಾಜ್ಯದ ಹಿತ ದೃಷ್ಠಿಯಿಂದ ಜೆಡಿಎಸ್ ಪಕ್ಷ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ತಾಲೂಕು ಜೆಡಿಎಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ರಾಷ್ಟ್ರಕ್ಕೆ ಮೋದಿ ನಾಯಕತ್ವ ಹೇಗೊ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಅಗತ್ಯವಾಗಿದೆ.ರಾಜ್ಯದಲ್ಲಿ ಎನ್.ಡಿ.ಎ ಮೈತ್ರಿ ಬಲದಿಂದ ಎಲ್ಲಾ ಸ್ಥಾನಗಳಲ್ಲೂ ಎಂ.ಪಿ ಅಭ್ಯರ್ಥಿಗಳು ಜಯಸಾಧಿಸುತ್ತಾರೆ.ಶ್ರೀನಿವಾಸರ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಶ್ರೀನಿವಾಸಪುರದ ಉತ್ತಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಕಾರ್ಯಗತ ಗೊಳಿಸುವ ಸಲುವಾಗಿ ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಗೆಲ್ಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.ನಮ್ಮೂರ ಹೆಣ್ಮಗಳ ಮಗ ಮಲ್ಲೇಶ್ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಹೋಬಳಿಯ ಮುದಿಮಡಗು ಪಂಚಾಯಿತಿಯ ಹೆಣ್ಮಮಗಳು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮನವರ ಮಗನಾಗಿರುವ ಮಲ್ಲೇಶ್ ಬಾಬು ಅವರ ತಂದೆ ದಿವಂಗತ ಮುನಿಸ್ವಾಮಿ ಐ ಎ ಎಸ್ ಅಧಿಕಾರಿಯಾಗಿ ಸಾಮಜಿಕ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದ್ದರು ಇಂತಹ ವಿದ್ಯಾವಂತ ಕುಟುಂಬದಿಂದ ಬಂದಿರುವ…

Read More