ಶ್ರೀನಿವಾಸಪುರ:ಯುಗಾದಿ ಹೊಸ ಸಂವತ್ಸರದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಕರಗ ಮಹೋತ್ಸವ ಹಾಗು ಊರ ದೇವರುಗಳ ಪಲ್ಲಕ್ಕಿ ಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಯಿತು.
ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಗಂಗಮ್ಮ ಮತ್ತು ಪೀಲೆಕಮ್ಮ,ಶ್ರೀ ಲಕ್ಷ್ಮೀವೆಂಕಟೇಶ್ವರ,ಶ್ರೀ ಉಗ್ರ ನೃಸಿಂಹ,ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಗಟ್ಟಹಳ್ಳಿ ಶ್ರೀ ನಡೀರಮ್ಮ, ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ,ಶ್ರೀ ನಲ್ಲಗಂಗಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನ ಪಲ್ಲಕ್ಕಿ ರಥಗಳು ಒಂದಕ್ಕೊಂದು ಅಲಂಕೃತವಾಗಿ ಸಾಲಾಗಿ ನಡೆದ ಶೋಭಾಯಾತ್ರೆ ಯುಗಾದಿ ಹಬ್ಬದ ದಿನ ಸಂಜೆ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಸಲಾಯಿತು.
ವಿಶೇಷ ಆಕರ್ಷಣೆಯಾದ ಕರಗ
ಹೊಳೂರಿನಲ್ಲಿ ಕರಗ ಹೊರುವ ವೆಂಕಟೇಶ್ ರವರು ಶ್ರೀನಿವಾಸಪುರ ಪಟ್ಟಣದಲ್ಲೂ ಕರಗ ಹೊತ್ತು ಆಕರ್ಷಣೆಯಾಗಿ ಮಹೋತ್ಸವ ನಡೆಸಿಕೊಟ್ಟರು ಪಟ್ಟಣದ ಕಟ್ಟೆಕೆಳಗಿನ ಪಾಳ್ಯ, ಎಂ.ಜಿ.ರಸ್ತೆ ಇನ್ನಿತರೆ ಸ್ಥಳಗಳಲ್ಲಿ ಬಣ್ಣ ಬಣ್ಣದ ಲೈಟ್ ಗಳಿಂದ ಕೂಡಿದಂತ ವೇದಿಕೆಯಲ್ಲಿ ಕರಗ ನೃತ್ಯ ಆಯೋಜಿಸಲಾಗಿತ್ತು,ವಿಶೇಷವಾಗಿ ಮನೆಗಳ ಬಳಿ ಕರಗಕ್ಕೆ ಪಾದ ಪೂಜೆ ಮಾಡಿ ಜನ ಪುನಿತರಾದರು.