ಶ್ರೀನಿವಾಸಪುರ:ಜನರ ನಡುವೆ ಸೌಹಾರ್ದತೆಯ ಮಾನವೀಯ ಸಂಭಂದಗಳು ಇರಬೇಕು ಇದರಿಂದ ಸಮಾಜದಲ್ಲಿ ಆರೋಗ್ಯಪೂರ್ಣ ವಾತವರಣ ಇರುತ್ತದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿರೆಡ್ಡಿ ಹೇಳಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲದ ನಿವಾಸಿ ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡು ಬಳಲುತ್ತಿರುವ ಅತಾವುಲ್ಲಾ ಸೇರಿದಂತೆ ಇತರರಿಗೆ ವೀಲ್ ಚೇರ್ ಹಾಗು ಇತರೆ ಸಲಕರಣೆಗಳನ್ನು ವಿತರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಈಗಾಗಲೇ 88 ಮಂದಿ ವಿಶೇಷ ಚೇತನರಿಗೆ ವೀಲ್ ಚೇರ್, ವಾಟರ್ ಬೆಡ್ ಯೂ ಶೇಪ್ ವಾಕರ್ ಕಮೋಡ್ ಚೇರ್ ಆಕ್ಸಿಲರಿ ಕ್ರಚ್ಚಸ್ ಇನ್ನಿತರ ಸಲಕರಣೆಗಳನ್ನು ಧರ್ಮಸ್ಥಳ ಸಂಸ್ಥೆ ಉಚಿತವಾಗಿ ನೀಡಿದ್ದು ವಿಶೇಷಚೇತನರು ಇದ್ದಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು…ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆಯ ಕೋಲಾರ ಜಿಲ್ಲಾ ನಿರ್ದೇಶಕ ಪದ್ಮಯ್ಯ ಗೌಡ,ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮೇಲ್ವಿಚಾರಕರಾದ ಯಶೋಧಾ…
Author: Srinivas_Murthy
ಶ್ರೀನಿವಾಸಪುರ:ಒಂಟಿ ಮನೆ ಗುರಿಯಾಗಿಸಿಕೊಂಡು ದರೋಡೆ ಮಾಡಿರುವ ಘಟನೆ ಬೆಂಗಳೂರು-ಕಡಾಪ ಹೈವೆ ರಸ್ತೆಯಲ್ಲಿ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ನಡೆದಿರುತ್ತದೆ.ಬುಧವಾರ ರಾತ್ರಿ ಸುಮಾರು ಎಂಟುಗಂಟೆ ಸಮಯದಲ್ಲಿ ತಾಡಿಗೋಳ್ ಕ್ರಾಸ್ ಸಮೀಪದಲ್ಲಿರುವ ಭಗವಾನ್ ಶಾಲೆ ಬಳಿಯ ಒಂಟಿಮನೆಯಲ್ಲಿ ಮನೆಯ ಯಜಮಾನ ರೇಷನ್ ತರಲು ಅಂಗಡಿಗೆ ಹೋಗಿದ್ದ ವೇಳೆ ನಾಲ್ಕು ಜನರಿದ್ದ ಅಪರಿಚಿತರ ಗುಂಪು ಮನೆಯ ಬಳಿ ಕುರಿಶೆಡ್ ಜಾಗದಲ್ಲಿ ಅವಿತಿರುತ್ತಾರೆ ಈ ಸಮಯದಲ್ಲಿ ನಾಯಿ ಬೊಗಳಿದ್ದು ಅನುಮಾನಗೊಂಡ ಮನೆಯ ಯಜಮಾನಿ ಶೆಡ್ ಬಳಿ ನೋಡಿದಾಗ ಅಲ್ಲಿದ್ದ ದಾಂಡಿಗರ ಗುಂಪು ಆಕೆಯನ್ನು ಹೆದರಿಸಿದ್ದಾರೆ ಆಕೆ ಭಯದಿಂದ ಮನೆಯತ್ತಿರ ಓಡಿಬಂದಿದ್ದಾರು ದಾಂಡಿಗರ ಗುಂಪು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿದ್ದಾರೆ ತಮ್ಮಲ್ಲಿದ್ದ ಪಿಸ್ತೂಲ್ ಲಾಂಗುಗಳು ತೋರಿಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಬೆದರಿಸಿದ ಖದೀಮರು ಮನೆ ಯಜಮಾನಿ ಹಾಕಿಕೊಂಡಿದ್ದ ಮಾಂಗಲ್ಯ,3 ಜೊತೆ ಓಲೆ,6 ಉಂಗುರ,1 ನಕ್ಲೆಸ್, 55 ಸಾವಿರ ಹಣವನ್ನು ತಗೆದುಕೊಂಡು ಹೋಗಿದ್ದಾರೆ.ಮನೆಯಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ಕೊಟ್ಟು ಪರಶೀಲನೆ ನಡೆಸಿ ಪ್ರಕರಣ…
ನ್ಯೂಜ್ ಡೆಸ್ಕ್:ಮುಂಗಾರು ಅಧಿವೇಶನದಲ್ಲಿ ಬುಧವಾರ ಸದನದಲ್ಲಿ ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ವಿಧಾನಸಭೆ ನಡೆಯುವ ಒಳಗಡೆಯೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ವಿಧಾನಸಭೆಯಿಂದ ತಾಳ ಬಡಿಯುತ್ತಾ ಭಜನೆ ಮಾಡುತ್ತಲೇ ವಿಧಾನ ಪರಿಷತ್ಗೆ ತೆರಳಿದ ಬಿಜೆಪಿ ವಿಧಾನ ಪರಿಷತ್ ಸದಸ್ಯರು, ವಿಧಾನಸೌಧದ ಕಾರಿಡಾರ್ಗಳಲ್ಲಿ ವಾದ್ಯಗಳನ್ನು ಬಾರಿಸುತ್ತ ಶ್ರೀರಾಮನ ಭಜನೆ,ವಿಠ್ಠಲ ಭಜನೆ ಭಾವಗೀತೆಗಳ ಗಾಯನ ಮಾಡುತ್ತ ವಿಪಕ್ಷ ನಾಯಕ ಆರ್.ಆಶೋಕ್ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮೂಕನಾದೆ ನಾನು ಮುಡ ಹಗರಣಕ್ಕೆ ಎಂದು ಹಾಡಿಗೆ ತಾಳ ಬಾರಿಸಿದರು, ಹನುಮಾನ್ ಚಾಲೀಸ್ ಪಠಣ ಮಾಡುವ ಮೂಲಕ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಭಾಗೀರಥಿ ಮುರಳ್ಯ ಸದನದಲ್ಲಿ ಗಮನ ಸೆಳೆದರು ಇದಕ್ಕೆ ಇತರ ಸದಸ್ಯರು ಸಾಥ್ ನೀಡಿದರು.ಇನ್ನು ಭಜನೆ ಮೂಲಕವೇ ಕಾಂಗ್ರೆಸ್ ಸರ್ಕಾರಕ್ಕೆ ಲೆವಡಿ ಮಾಡಿದ ಬಿಜೆಪಿ, ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ. ಸಮಾಜವಾದ ಅಂತಾರೆ…
ಶ್ರೀನಿವಾಸಪುರ:ಆಂಧ್ರಪ್ರದೇಶದ ಅಸೆಂಬ್ಲಿ ಸಮಾವೇಶ ನಡೆಯುತ್ತಿದೆ ಈ ಸಂದರ್ಭದಲ್ಲಿ ಶ್ರೀನಿವಾಸಪುರದ ಶಾಸಕ ವೆಂಕಟಶಿವಾರೆಡ್ಡಿ ಅವರು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗು ಐಟಿ ಮತ್ತು ಮಾನವ ಸಂಪನ್ಮೂಲ ಸಚಿವ ಲೋಕೆಶ್ ಅವರನ್ನು ವಿಜಯವಾಡದ ವೆಲಗಪುಡಿಯಲ್ಲಿರುವ ವಿಧಾನಸಭಾ ಸಚಿವಾಲಯದಲ್ಲಿ ಭೇಟಿಯಾಗಿ ನೂತನ ಸರ್ಕಾರಕ್ಕೆ ಹಳದಿ ಬಣ್ಣದ ಹೂಗುಚ್ಚ ನೀಡಿ ಶುಭಕೋರಿದ್ದಾರೆ.ನಂತರ ಇಬ್ಬರು ಚರ್ಚೆ ನಡೆಸಿದ್ದು ಕರ್ನಾಟಕ-ಆಂಧ್ರ ಗಡಿಯಂಚಿನ ಭಾಗದ ರಸ್ತೆಗಳ ಅಭಿವೃದ್ಧಿ ನೀರಾವರಿ ಹಾಗು ರೈಲ್ವೆಮಾರ್ಗಗಳ ಕುರಿತಂತೆ ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ. ಆಂಧ್ರ ಅಸೆಂಬ್ಲಿ ಸಮಾವೇಶದ ನಡೆಯುತ್ತಿದ್ದು ಆಂಧ್ರ ಬಡ್ಜೆಟ್ ಮಂಡನೆಯಾಗುವ ಸಂದರ್ಭದಲ್ಲಿ ಇಬ್ಬರ ಭೇಟಿ ಮಹತ್ವ ಪಡೆದುಕೊಂಡಿದೆ.ಇತ್ತಿಚಿಗೆ ನಡೆದಂತ ಆಂಧ್ರಪ್ರದೇಶದ ಚುನಾವಣೆ ವಿಚಾರವಾಗಿ ತಮ್ಮ ಆಪ್ತರ ಬಳಿ ಈ ಬಾರಿ ಆಂಧ್ರದಲ್ಲಿ ಮೈತ್ರಿ ಕೂಟ ಅಧಿಕಾರಕ್ಕೆ ಬರಲಿದೆ ಚಂದ್ರಬಾಬುನಾಯ್ಡು ನಾಲ್ಕನೆ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಭವಿಷ್ಯ ನುಡಿದಿದ್ದರು.
ಕೋಲಾರ:ಕಾಲೇಜು ಹುಡುಗರು ಪರಸ್ಪರ ಬೈದಾಡುಕೊಳ್ಳುವುದು ಹೊಡೆದಾಡುವುದು ಸಾಮನ್ಯ ಇದನ್ನು ಎಲ್ಲರೂ ಕೇಳಿರುತ್ತಾರೆ ನೋಡಿರುತ್ತಾರೆ ಆದರೆ ಇಬ್ಬರು ಕಾಲೇಜು ಉಪನ್ಯಾಸಕರು ಕಾಲೇಜು ಆವರಣದಲ್ಲೇ ಕೈಕೈ ಮಿಲಾಯಿಸಿಕೊಂಡು ಬಡಿದಾಡಿಕೊಂಡಿರುವ ದಾರುಣ ಘಟನೆ ಕೋಲಾರ ನಗರದ ಸರ್ಕಾರಿ ಜೂನಿಯರ್ ಕಾಲೇಜು ನಡೆದಿದೆ.ಇಬ್ಬರು ಉಪನ್ಯಾಸಕರು ಒಂದು ಕಾಲದಲ್ಲಿ ಆಪ್ತ ಸ್ನೇಹಿತರು ಕನ್ನಡ ಸೇವೆಗೆ ಟೊಂಕಕಟ್ಟಿ ನಿಂತು ಸೇವೆ ಮಾಡಿದವರು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಬ್ಬರು ಅಧ್ಯಕ್ಷರಾಗಿದ್ದವರು, ಈಗ ಅದೆ ವಿಚಾರದಲ್ಲಿ ವೈಯುಕ್ತಿಕ ದ್ವೇಷ ಬೆಳೆಸಿಕೊಂಡು ಇಬ್ಬರು ಶತೃಗಳಾಗಿದ್ದಾರೆ ಅವರೆ ನಾಗಾನಂದ ಕೆಂಪರಾಜ್ ಮತ್ತು ಜೆ.ಜಿ.ನಾಗರಾಜ್, ಇವರು ಹಳೇಯ ದ್ವೇಶಕ್ಕೆ ಜೀವ ಕೊಟ್ಟು ಮಂಗಳವಾರ ಎಲ್ಲರೂ ನೋಡನೊಡುತ್ತಿದ್ದಂತೆ ಹೋಡೆದಾಡಿಕೊಂಡು ಸಣ್ಣಪುಟ್ಟ ಗಾಯಮಾಡಿಕೊಂಡಿರುವ ಉಪನ್ಯಾಸಕರು ಕೋಲಾರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಜೆ.ಜೆ.ನಾಗರಾಜ್ ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಮತ್ತೊಬ್ಬರು ನಾಗನಂದ ಕೆಂಪರಾಜ್ ಅದೇ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕ ಇಬ್ಬರು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾಗಿದ್ದವರು.ಮಂಗಳವಾರ ಎಂದಿನಂತೆ ಕಾಲೇಜಿಗೆ ಹಾಜರಾದ…
ಶ್ರೀನಿವಸಪುರ:ಕ್ಷಣಮಾತ್ರದಲ್ಲಿ ಕೈಚಳಕ ತೋರಿ ಹಣ ಕದಿಯುವ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಕೋಲಾರ ಜಿಲ್ಲೆಗೆ ಒಕ್ಕರಿಸಿಕೊಂಡಿದೆ,ಈಗ್ಗೆ ಎರಡು ವರ್ಷಗಳ ಹಿಂದೆ ಬೆಂಗಳೂರು ನಗರ ಪೋಲಿಸರಿಗೆ ತಲೆ ನೋವಾಗಿ ಕಾಡಿದ್ದ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಅನ್ನು ಹೆಡೆ ಮುರಿ ಕಟ್ಟುವಲ್ಲಿ ಬೆಂಗಳೂರು ಪೋಲಿಸರು ಯಶಸ್ವಿಯಾಗಿದ್ದರು. ಈಗ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಕೋಲಾರಕ್ಕೆ ಬಂದಿದೆ ಇದನ್ನು ಕೋಲಾರ ಜಿಲ್ಲೆ ಪೋಲಿಸರೆ ಒಪ್ಪಿಕೊಳ್ಳುತ್ತಾರೆ. ಓಜಿಕುಪ್ಪಂ ಕದೀಮರ ಗ್ಯಾಂಗ್ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ ಹಣ ಕಾರಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನ ಎಗರಿಸಿರುವ ಘಟನೆಗಳು ಅವಿಭಜಿತ ಕೋಲಾರದ ಶ್ರೀನಿವಾಸಪುರ ಚಿಂತಾಮಣಿ ವೇಮಗಲ್ ಗಳಲ್ಲಿ ಸರಣಿಯಾಗಿ ನಡೆಯುತ್ತಿದೆ.ಶನಿವಾರ ಶ್ರೀನಿವಾಸಪುರದಲ್ಲಿ ಮಾವುಬೆಳೆಗಾರನ ಸ್ಕೂಟರ್ ನಲ್ಲಿದ್ದ ಒಂದೂವರೆ ಲಕ್ಷ ಹಣ ಎಗರಿಸಿದ್ದು ಇದು ಮಾಸುವ ಮುನ್ನವೆ ಸೋಮವಾರ ಚಿಂತಾಮಣಿ ನಗರದಲ್ಲಿ ಈರುಳ್ಳಿ ವ್ಯಾಪಾರಿ ಕಾರನಲ್ಲಿ ದುಡ್ಡಿಟ್ಟು ದೇವಸ್ಥಾನಕ್ಕೆ ಹೋಗಿಬರುಷ್ಟರಲ್ಲಿ ಕಾರಿನ ಗಾಜು ಒಡೆದು ಹಣ ಎಗರಿಸಿದ್ದಾರೆ.ಮಂಗಳವಾರ ವೇಮಗಲ್ ನಲ್ಲಿ ಬ್ಯಾಂಕ್ ಬಳಿ ಸ್ಕೂಟರನಲ್ಲಿಟ್ಟಿದ್ದ ಹಣ ಕದ್ದಿದ್ದಾರೆ.ಏನು ಯಾರಿದು ಓಜಿಕುಪ್ಪಂ ಗ್ಯಾಂಗ್?ತಮಿಳುನಾಡು-ಆಂಧ್ರ ಗಡಿಯಲ್ಲಿನ ವಿಕೋಟೆ ಬಳಿ…
ನ್ಯೂಜ್ ಡೆಸ್ಕ್: ಪಂಚೆ ಉಟ್ಟು ಬಂದಿದ್ದ ರೈತನನ್ನು ಮಾಲ್ ಸಿಬ್ಬಂದಿ ಒಳಗೆ ಬಿಡದೆ ಅಪಮಾನಿಸಿದ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ನಡೆದಿದೆ.ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಮಾಲ್ ವ್ಯವಸ್ಥೆಯನ್ನು ಪರಿಚಯಿಸಿ ಮಾಲನಲ್ಲಿ ಸಿನೆಮಾ ತೋರಿಸಲು ಕರೆದುಕೊಂಡು ಹೋಗಿದ್ದು ಮಾಲ್ ಪ್ರವೇಶ ದ್ವಾರದಲ್ಲಿ ನಾಗರಾಜ್ ತಂದೆ ರೈತ ಫಕೀರಪ್ಪ ಪಂಚೆ ಉಟ್ಟಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಒಳಗೆ ಬಿಡದೆ ತಡೆದಿದ್ದಾರೆ ನಾಗರಾಜ್ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಎಂಬ ಗ್ರಾಮದ ನೇಗಿಲಯೋಗಿ.ಮಾಲ್ ಮುಂದೆ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿದ್ದಾರೆ. ನಾಗರಾಜ್ ಒಳಗೆ ಬಿಡಿ ಅಂತ ಎಷ್ಟು ಪರಿಪರಿಯಾಗಿ ಬೇಡಿಕೊಂಡರು ಪಂಚೆ ನೇಪ ಹೇಳಿ ಬಿಡುವುದಿಲ್ಲ, ಮಾಲ್‌ನಲ್ಲಿ ಪಂಚೆ ಉಟ್ಟು ಬಂದವರನ್ನು ಬಿಡುವುದಿಲ್ಲ. ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಉದ್ದಟತನ ತೋರಿಸಿದ ಹಿನ್ನಲೆಯಲ್ಲಿ ನಾಗರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು.ಪಂಚೆ ಉಟ್ಟ ವ್ಯಕ್ತಿಯನ್ನು ಮಾಲ್ ನಲ್ಲಿ ಬಿಟ್ಟಿಲ್ಲ ಎಂಬ ಸುದ್ದಿ ಸಾಮಜಿಕ ಜಾಲತಾಣಗಳಲ್ಲಿ…
ಶ್ರೀನಿವಾಸಪುರ:ರೈತನೊಬ್ಬ ಮಾವಿನಕಾಯಿ ಹಣ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಸ್ಕೂಟರನ ಡಿಕ್ಕಿಯಲ್ಲಿಟ್ಟು ಊರಿಗೆ ಹೊರಟವ ದಾರಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ಬಳಿ ನಿಲ್ಲಿಸಿ ಮನೆಗೆ ಬೇಕಾದ ವಸ್ತುಗಳನ್ನು ಖರಿದಿಸಿ ವಾಪಸ್ಸು ಊರಿಗೆ ಹೋಗಿ ನೋಡಿದರೆ ಸ್ಕೂಟರನ ಡಿಕ್ಕಿಯಲ್ಲಿಟ್ಟ ಹಣ ನಾಪತ್ತೆ ಗಮನಕ್ಕೆ ಬಂದಿದೆ.ಹಣ ಕಳೆದುಕೊಂಡ ವ್ಯಕ್ತಿ ಮಣಿಗಾನಹಳ್ಳಿ ಗ್ರಾಮದ ವೆಂಕಟೇಶಪ್ಪ,ಈತ ಮಾವಿನಕಾಯಿ ಹಾಕಿದ್ದ ಹಣ ಸುಮಾರು ಒಂದೂವರೆ ಲಕ್ಷ ಮಂಡಿ ಮಾಲಿಕ ನೀಡಿದ ಚೆಕ್ ಅನ್ನು ಕೆನರಾಬ್ಯಾಂಕಿನಲ್ಲಿ ಡ್ರಾ ಮಾಡಿಕೊಂಡು ಹೊರಗೆ ಬಂದು ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದಾನೆ ನಂತರ ವಾಹನ ಚಲಾಯಿಸಿಕೊಂಡು ಊರಿಗೆ ಹೋರಟವನು ಕೆಇಬಿ ಕಚೇರಿ ಮುಂಬಾಗದ ಎಲೆಕ್ಟ್ರಿಕ್ ಅಂಗಡಿ ಬಳಿ ವಾಹನ ನಿಲ್ಲಿಸಿ ಮನೆಗೆ ಬೇಕಾದಂತ ವಸ್ತುಗಳನ್ನು ಖರಿದಿಸಿರುತ್ತಾನೆ ವಸ್ತುಗಳ ಕವರ್ ಅನ್ನು ವಾಹನಕ್ಕೆ ತಗಲಾಕಿಕೊಂಡು ಊರಿಗೆ ಹೋಗಿ ಹಣ ತಗೆದುಕೊಳ್ಳಲು ಸ್ಕೂಟರ್ ಡಿಕ್ಕಿ ತೆರೆದಿದ್ದಾನೆ ಅಲ್ಲಿ ಹಣ ಇಲ್ಲದಿರುವುದನ್ನು ಕಂಡು ಗಾಬರಿಯಾಗಿದ್ದಾನೆ ನಂತರ ಪಟ್ಟಣಕ್ಕೆ ಬಂದು ಪೋಲಿಸರಿಗೆ ದೂರು ನೀಡಿದ್ದು ಅದರಂತೆ ಪೋಲಿಸರು ಬ್ಯಾಂಕ್ ಹಾಗು ಎಲೆಕ್ಟ್ರಿಕ್ ಅಂಗಡಿ ಬಳಿ ವಿಚಾರಿಸಲಾಗಿ…
ನ್ಯೂಜ್ ಡೆಸ್ಕ್:ಅರಣ್ಯಕ್ಕೆ ಹೊಂದಿಕೊಂಡ ಕಾಡು ಪ್ರದೇಶದ ಸಣ್ಣ ಕುಗ್ರಾಮದ ಅಂಗನವಾಡಿಯ ಶಿಕ್ಷಕಿಯೊಬ್ಬರು ಇಂದುಆಂಧ್ರಪ್ರದೇಶ ವಿಧಾನಸಭೆ ಸದಸ್ಯೆ ಅರ್ಥಾತ್ ಶಾಸಕಿ(MLA), ಅಂದು ಅಂಗನವಾಡಿ ಶಿಕ್ಷಕಿಯಾಗಿ ಎಲ್ಲಾ ಮಕ್ಕಳು ಸರಿಯಾಗಿ ಕುಳಿತಿದ್ದಾರ ಅಂಗನವಾಡಿ ಕೇಂದ್ರದಲ್ಲಿ ಎಲ್ಲಾ ವಸ್ತುಗಳು ಸರಿಯಾಗಿದೀಯಾ ಹಾಜರಾತಿ ರಿಜಿಸ್ಟರ್‌ನಲ್ಲಿ ಎಲ್ಲವು ದಾಖಲಾಗಿದೀಯಾ ಸರಿಯಾಗಿ ಬರೆಯಾಗಿದಿಯಾ ಅಥವಾ ಮರೆತುಬಿಟ್ಟಿದ್ದೀವಾ ಓಕೆ ಓಕೆ ಎಂದು ಸದಾ ಚಟುವಟುಕೆಯಿಂದ ಮಕ್ಕಳೊಂದಿಗೆ ಅಂಗನವಾಡಿಯಲ್ಲಿ ಒಡಾಡುತ್ತಿದ್ದ ಶಿಕ್ಷಕಿ ಇಂದು ಆಂಧ್ರದ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾದ ರಂಪಚೋಡವರಂ ಶಾಸಕರಾಗಿದ್ದಾರೆ.ಅಂಗನವಾಡಿ ಟೀಚರ್ ಎಂಎಲ್‌ಎ ಹೇಗಾದರು ಎನ್ನುವುದೆ ಬಹಳಷ್ಟು ಜನಕ್ಕೆ ಕುತೂಹಲ,ಬುಡಕಟ್ಟು ಜನಾಂಗದ ಮತಗಳು ಅಕೆಯನ್ನು ಇಂದು ಈ ಮಟ್ಟಕ್ಕೆ ತಂದಿದೆ ಅನ್ನುವುದು ವಿಶೇಷ.ಆಂಧ್ರದ ಕರಾವಳಿಯಲ್ಲಿನ ಅವಿಭಜಿತ ಪೂರ್ವಗೋದಾವರಿ ಜಿಲ್ಲೆಯ ಅತಿದೊಡ್ಡ ಎಸ್ಟಿ ವಿಧಾನಸಭಾ ಕ್ಷೇತ್ರವಾದ ರಂಪಚೋಡವರಂ ಕ್ಷೇತ್ರ ಸಂಪೂರ್ಣ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.ಇದು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಪಕ್ಷವಾದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆ ಪಕ್ಷದಿಂದ ಯಾರೆ ನಿಂತರು ಗೆಲವು ಸಾಧಿಸುತ್ತಿದ್ದ ಕ್ಷೇತ್ರ, ಅಂತಹ ಕ್ಷೇತ್ರದಲ್ಲಿ…
ನ್ಯೂಜ್ ಡೆಸ್ಕ್:ಭಕ್ತಿಯ ಸಂಕೇತವಾದ ಅಯೋಧ್ಯೆ ಶ್ರೀರಾಮಚಂದ್ರ ಭಾರತೀಯರ ಅಚ್ಚುಮೆಚ್ಚಿನ ದೇವರು ಭಾವನಾತ್ಮಕವಾಗಿ ಶ್ರೀರಾಮನ್ನು ಪ್ರೀತಿಯೊಂದಿಗೆ ಪೂಜಿಸುತ್ತಾರೆ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶ್ರೀರಾಮನ ಆದರ್ಶ ನಮ್ಮ ಜೀವನದಲ್ಲೂ ಇರಲಿ ಎಂದು ಭಯಸುತ್ತಾರೆ ಇಂತಹ ಶ್ರೀರಾಮನಿಗೆ ಈಗಿನ ತೆಲಂಗಾಣ ರಾಜ್ಯದ ಭದ್ರಾಚಲಂ ಶ್ರೀಸೀತಾರಾಮರಿಗೆ ರಾಮದಾಸು ಎಂಬ ಭಕ್ತ ದೇವಸ್ಥಾನ ನಿರ್ಮಿಸಿದ್ದು ಇತಿಹಾಸ ರಾಮದಾಸನ ಸಿನಿಮಾ ನೋಡಿದ ಬಹುತೇಕರಿಗೆ ಆತನ ಭಕ್ತಿಯ ಕುರಿತಾಗಿ ಸಾಕಷ್ಟು ತಿಳಿದಿರುತ್ತದೆ ಅಷ್ಟೊಂದು ಆಪ್ಯಾಯತೆ ಪ್ರೀತಿಯಿಂದ ಭದ್ರಾಚಲಂ ನಲ್ಲಿ ತನ್ನ ಪ್ರೀತಿಯ ರಾಮಯ್ಯನಿಗೆ ಶ್ರೀಸೀತಾರಾಮನ ದೇವಾಲಯವನ್ನು ಭಕ್ತ ರಾಮದಾಸು ಪ್ರೀತಿಯಿಂದ ಕಟ್ಟಿಸಿರುವುದು ಇತಿಹಾಸ.ಇಷ್ಟೊಂದು ಭಕ್ತಿ ಪವಿತ್ರ್ಯತೆಯ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನ ಗೋದಾವರಿ ನದಿ ತೀರದ ಪಶ್ಚಿಮ ದಿಕ್ಕಿನತ್ತ ಮುಖ ಮಾಡಿರುವುದು ಈ ದೇವಸ್ಥಾನದ ವಿಶೇಷತೆಯಾಗಿದೆ ಇದು ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ವಿಶಿಷ್ಟ ದೇವಾಲಯವಾಗಿ “ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯ” ಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸ್ತುತ ಭಾರಯದಲ್ಲಿ ಅಯೋಧ್ಯೆಯ ನಂತರ ಅತಿದೊಡ್ಡ ಶ್ರೀರಾಮಕ್ಷೇತ್ರವಾಗಿದೆಈಗ ಇಂತಹುದೆ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನವನ್ನು…


