ಶ್ರೀನಿವಸಪುರ:ಕ್ಷಣಮಾತ್ರದಲ್ಲಿ ಕೈಚಳಕ ತೋರಿ ಹಣ ಕದಿಯುವ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಕೋಲಾರ ಜಿಲ್ಲೆಗೆ ಒಕ್ಕರಿಸಿಕೊಂಡಿದೆ,ಈಗ್ಗೆ ಎರಡು ವರ್ಷಗಳ ಹಿಂದೆ ಬೆಂಗಳೂರು ನಗರ ಪೋಲಿಸರಿಗೆ ತಲೆ ನೋವಾಗಿ ಕಾಡಿದ್ದ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಅನ್ನು ಹೆಡೆ ಮುರಿ ಕಟ್ಟುವಲ್ಲಿ ಬೆಂಗಳೂರು ಪೋಲಿಸರು ಯಶಸ್ವಿಯಾಗಿದ್ದರು. ಈಗ ಓಜಿಕುಪ್ಪಂ ಕಳ್ಳರ ಗ್ಯಾಂಗ್ ಕೋಲಾರಕ್ಕೆ ಬಂದಿದೆ ಇದನ್ನು ಕೋಲಾರ ಜಿಲ್ಲೆ ಪೋಲಿಸರೆ ಒಪ್ಪಿಕೊಳ್ಳುತ್ತಾರೆ. ಓಜಿಕುಪ್ಪಂ ಕದೀಮರ ಗ್ಯಾಂಗ್ ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ ಹಣ ಕಾರಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನ ಎಗರಿಸಿರುವ ಘಟನೆಗಳು ಅವಿಭಜಿತ ಕೋಲಾರದ ಶ್ರೀನಿವಾಸಪುರ ಚಿಂತಾಮಣಿ ವೇಮಗಲ್ ಗಳಲ್ಲಿ ಸರಣಿಯಾಗಿ ನಡೆಯುತ್ತಿದೆ.
ಶನಿವಾರ ಶ್ರೀನಿವಾಸಪುರದಲ್ಲಿ ಮಾವುಬೆಳೆಗಾರನ ಸ್ಕೂಟರ್ ನಲ್ಲಿದ್ದ ಒಂದೂವರೆ ಲಕ್ಷ ಹಣ ಎಗರಿಸಿದ್ದು ಇದು ಮಾಸುವ ಮುನ್ನವೆ ಸೋಮವಾರ ಚಿಂತಾಮಣಿ ನಗರದಲ್ಲಿ ಈರುಳ್ಳಿ ವ್ಯಾಪಾರಿ ಕಾರನಲ್ಲಿ ದುಡ್ಡಿಟ್ಟು ದೇವಸ್ಥಾನಕ್ಕೆ ಹೋಗಿಬರುಷ್ಟರಲ್ಲಿ ಕಾರಿನ ಗಾಜು ಒಡೆದು ಹಣ ಎಗರಿಸಿದ್ದಾರೆ.ಮಂಗಳವಾರ ವೇಮಗಲ್ ನಲ್ಲಿ ಬ್ಯಾಂಕ್ ಬಳಿ ಸ್ಕೂಟರನಲ್ಲಿಟ್ಟಿದ್ದ ಹಣ ಕದ್ದಿದ್ದಾರೆ.
ಏನು ಯಾರಿದು ಓಜಿಕುಪ್ಪಂ ಗ್ಯಾಂಗ್?
ತಮಿಳುನಾಡು-ಆಂಧ್ರ ಗಡಿಯಲ್ಲಿನ ವಿಕೋಟೆ ಬಳಿ ಇರುವ ಓಜಿಕುಪ್ಪಂ ಊರಿನ ಗ್ಯಾಂಗ್ ಇವರು ತಂಡವಾಗಿ ಕಳ್ಳತನಕ್ಕೆ ಇಳಿಯುತ್ತಾರೆ ಎಂದು ಪೋಲಿಸ್ ಇಲಾಖೆ ಅಂದಾಜಿಸಿದೆ.ಓಜಿಕುಪ್ಪಂ ಕದೀಮರ ಗ್ಯಾಂಗ್ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸುವುದರಲ್ಲಿ ಪರಿಣಿತರು ಖತರ್ನಾಕ್ ಐಡಿಯಾಗಳನ್ನು ಮಾಡಿ ಹಣ ಎಗರಿಸೋದರಲ್ಲಿ ನಿಸ್ಸೀಮರು.ಜನರಿಗೆ ಯಾವುದೇ ಗಾಯ ಮಾಡದೇ ಯಾಮಾರಿಸುವಂತ ಚಾಲಾಕಿ ಕಳ್ಳರು,ಕಳ್ಳತನ ಎಸಗಿದ ಒಂದು ದಿನದ ನಂತರ ಇವರು ಸೆರೆ ಸಿಕ್ಕರೂ ಅವರ ಬಳಿ ನಯಾ ಪೈಸೆ ಹಣ ರೀಕವರಿಯಾಗುದಿಲ್ಲವಂತೆ ಹೀಗಾಗಿ ಓಜಿಕುಪ್ಪಂ ಗ್ಯಾಂಗ್ ಹೆಸರು ಕೇಳಿದ್ರೆ ಪೊಲೀಸರೇ ದಂಗಾಗುತ್ತಾರೆ ಎಂಬ ಮಾತಿದೆ.ಇಂತಹ ಗ್ಯಾಂಗ್ ಕೋಲಾರ ಜಿಲ್ಲೆಗೆ ಕಾಲಿಟ್ಟಿದೆ. ಬ್ಯಾಂಕ್ ಗಳು ಇರುವ ಪ್ರದೇಶವೆ ಇವರ ಅಡ್ಡ ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವಂತ ಜನರೇ ಇವರ ಮುಖ್ಯ ಟಾರ್ಗೆಟ್. ಹೆಚ್ಚು ಹಣಕಾಸಿನ ವ್ಯವಹಾರ ನಡೆಯೋ ಬ್ಯಾಂಕುಗಳ ಬಳಿ ಹೆಚ್ಚು ಗಮನವನ್ನು ಕೇಂದ್ರಿಕರಿಸಿರುತ್ತಾರೆ.ಜನರ ಗಮನ ಬೇರೆಡೆ ಸೆಳೆದು ಸಂಚು ರೂಪಿಸಿ ಹಣ ದೋಚುವ ಖತರ್ನಾಕ್ ಗ್ಯಾಂಗ್ ಇದು. ಮೈಮೇಲೆ ಉಗಿಯುವುದು, ಕೆಸರು ಎರಚುವುದು ಸೇರಿದಂತೆ ಹಲವಾರು ರೀತಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಹಣ ದೋಚುವ ಇವರು ತಮ್ಮ ಕೃತ್ಯದ ವೇಳೆ ಯಾರಿಗೂ ಹಿಂಸೆ ಪ್ರಾಣ ಹಾನಿ ಮಾಡುವುದಿಲ್ಲ ಎನ್ನುತ್ತದೆ ಪೋಲಿಸ್ ಇಲಾಖೆ.ಇನ್ನು ಇವರು ವಾರಕ್ಕೆರಡು ಅಥಾವ ಮೂರು ದಿನ ಮಾತ್ರ ಕಾರ್ಯಚರಣೆ ಮಾಡಿ ಗಡಿ ದಾಟುತ್ತಾರೆ ಅಂದರೆ ಊರು ಬಿಡುತ್ತಾರಂತೆ ಇವರ ಕುರಿತಾಗಿ ಬೆಂಗಳೂರಿನ ಪೋಲಿಸರು ಸಾಕಷ್ಟು ಅಧ್ಯಯನ ನಡೆಸಿ ಇವರಿಗೆ ಸರಿಯಾದ ಪಾಠ ಕಲಿಸಿದ್ದರು ಎನ್ನಲಾಗುತ್ತಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23


