Author: Srinivas_Murthy

ನ್ಯೂಜ್ ಡೆಸ್ಕ್:ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದ್ದು ಚಿರತೆ leopard ದಾಳಿಯಿಂದ ರೈತ ರಾಮು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಡ್ಯಜಿಲ್ಲೆಯ ಮದ್ದೂರು ತಾಲೂಕು ಕೆಸ್ತೂರು ಗ್ರಾಮದಲ್ಲಿ ನಡೆದಿದೆ.ಇತ್ತಿಚಿಗೆ ಕಾಡು ಪ್ರಾಣಿಗಳ ಉಳಪಟದಿಂದ ರೈತರು ಹೈರಾಣವಾಗಿದ್ದು ಮಂಡ್ಯ ಜಿಲ್ಲೆಯ ಬಹುತೇಕ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಆಹಾರ ಹುಡುಕುತ್ತಾ ಅರಣ್ಯ ಪ್ರದೇಶಗಳಿಂದ ಹಳ್ಳಿಗಳತ್ತ ಹೆಜ್ಜೆ ಹಾಕುತ್ತಿರುವ ಚಿರತೆಗಳು, ಜಾನುವಾರು, ಕುರಿ, ಮೇಕೆ, ಬೀದಿ ನಾಯಿಗಳ ಮೇಲೆ ದಾಳಿ ನಡೆಸುತ್ತಿವೆ.ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗೂ ರೈತರು ತಮ್ಮ ಜಮೀನುಗಳಿಗೆ ತೆರಳಲು ಆತಂಕಪಡುವಂತಾಗಿದೆ.ರೈತ ರಾಮು ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿದೆ ಇದರಿಂದ ರೈತನ ಬೆನ್ನು, ಕುತ್ತಿಗೆ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ರೈತ ರಾಮು ಪ್ರಾಣಪಾಯದಿಂದ ಪಾರಾಗಿದ್ದಾನೆ. AlsoRead:https://www.vcsnewz.com/leopard-spotted-in-mysore-infosyready-to-catch-forest-departments-campus/Infosys ಕ್ಯಾಂಪಸ್‌ ಗೆ ಬಂದ ಚಿರತೆ! ಹಿಡಿಯಲು ಸಜ್ಜಾದ ಅರಣ್ಯ ಪಡೆ

Read More

ಸಿನಿ ಡೆಸ್ಕ್:ಛತ್ರಪತಿ ಶಿವಾಜಿ ಮಹಾರಾಜ್ ಮಗ ಛತ್ರಪತಿ ಶಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದ್ದು “ಛಾವ” Chhaava ಸಿನಿಮಾದ (ಛಾವ ಅಂದರೆ ಮರಾಠಾಯಲ್ಲಿ ಸಿಂಹದ ಮರಿ ಅಂತ) ಕ್ರೇಜ್ ಹಾಗು ಕಲೆಕ್ಷನ್ ಎರಡು ಜೋರಾಗಿದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಬಾಚುತ್ತಿದೆ.ಸಿನಿಮಾ ನೋಡಿದ ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ.ಚಿತ್ರದ ಕಥೆ ಛತ್ರಪತಿ ಶಿವಾಜಿ ಮಹಾರಾಜರ ಮರಣದ ನಂತರ ಮರಾಠ ಸಾಮ್ರಾಜ್ಯದ ಎರಡನೇ ಛತ್ರಪತಿಯಾದ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ.ದಕ್ಷಿಣದ ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ Vicky Kaushal ಪ್ರಧಾನ ಪಾತ್ರದಲ್ಲಿ ನಟಿಸಿದ್ದು ಲಕ್ಷ್ಮಣ್ ಉಟೇಕರ್ ಅವರು ‘ಛಾವ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ವಿಕ್ಕಿ ಕೌಶಲ್ ಅವರು ಶಂಭಾಜಿ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿ ಜೀವಿಸಿದ್ದು ಇದರಿಂದಾಗಿಯೇ ‘ಛಾವ’ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತಿದೆ…

Read More

ಬೆಂಗಳೂರು : ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಯೊಬ್ಬ ತಾನು ವಾಸವಿದ್ದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹನುಮಂತ ನಗರದಲ್ಲಿ ನಡೆದಿರುತ್ತದೆ.ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಇಂಜಿನಿಯರಿಂಗ್ ಮೊದಲ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ ಆದಿತ್ಯಾಸಿಂಗ್ (19) ಎಂದು ತಿಳಿದುಬಂದಿದೆ. ಆದಿತ್ಯ ಸಿಂಗ್ ಮೂಲತಃ ಉತ್ತರಪ್ರದೇಶ ರಾಜ್ಯದವನಾಗಿದ್ದು, ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದ ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.ಘಟನಾ ಸ್ಥಳಕ್ಕೆ ಹನುಮಂತನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿದ್ಯಾರ್ಥಿಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮೃತದೇಹದ ಪೋಸ್ಟ್ ಮಾರ್ಟಂ ಬಳಿಕ ಪೋಷಕರಿಗೆ ಶವ ಹಸ್ತಾಂತರಿಸಿರುತ್ತಾರೆ.ಜನವರಿಯಲ್ಲೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ!ಕಳೆದ ಜನವರಿ 18ರಂದು ಬಿಎಂಎಸ್ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ರೆಡ್ಡಿ ಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ನಾಲ್ಕನೇ ವರ್ಷದ ಏರೋಸ್ಪೇಸ್ ವಿದ್ಯಾರ್ಥಿಯಾಗಿದ್ದ ಅಕ್ಷಯ್ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದು ಬಂದಿರಲಿಲ್ಲ. ಕಾಲೇಜು ಆಡಳಿತ ಮಂಡಳಿಯ ಟಾರ್ಚರ್‌ನಿಂದ ನೊಂದು ಆತ್ಮಹತ್ಯೆ…

Read More

ನ್ಯೂಜ್ ಡೆಸ್ಕ್:ಕಾಲು ದಾರಿಯಲ್ಲಿ ತಿರುಮಲTirumala Venkateswara Temple ಕ್ಕೆ ಸಾಗುವ ರಸ್ತೆಯ ಬದಿ ಏಳು ಅಕ್ಕಂದಿರ ಶ್ರೀ ಸಪ್ತ ಸಪ್ತಮಾತೃಕೆಯರ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ನರಸಿಂಹಿ, ಚಾಮುಂಡ ದೇವತೆಗಳ ಸಣ್ಣ ದೇವಾಲಯವಿದೆ. ದೇವಾಲಯದ ಪ್ರವೇಶದ್ವಾರವು ತುಂಬಾ ಕಿರಿದಾಗಿದೆ ಇದು ಸ್ಥಳೀಯರಿಗೆ ತಿಳಿದಿರಬಹುದಾದರು ಹೊರಗಿನಿಂದ ತಿರುಮಲಕ್ಕೆ ಬರುವಂತ ಬಹುತೇಕ ಭಕ್ತರಿಗೆ ತಿಳಿದಿಲ್ಲ ಎನ್ನಬಹುದು. ದಾರಿ ಬದಿಯಲ್ಲಿರುವ ಪುಟ್ಟ ದೇವಾಲಯದಲ್ಲಿ ಏಳು ದೇವತೆಗಳು (ಸಪ್ತಮಾತೃಕೆಯರ) ಉದ್ಭವಾಗಿರುವುದು ಎಂದು ಪ್ರತಿತಿ.ಅಕ್ಕನವರ ದೇವಾಲಯದ ನಿರ್ಮಾಣದ ಹಿಂದೆ ಸಾಕಷ್ಟು ಐತಿಹಾಸಿಕ ಮಹತ್ವ ಇದೆ 1940 ರ ದಶಕದಲ್ಲಿ ಮೊದಲಬಾರಿಗೆ ರಸ್ತೆ ನಿರ್ಮಾಣಯದ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ಬಂಡೆಗಳ ನಡುವೆ ಅಕ್ಕನವರ ಶಿಲೆಗಳು ಇತ್ತು ಇದರ ಮಾಹಿತಿ ಇಲ್ಲದೆ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಂಡೆಗಳು ಅಡ್ಡಿಯಾಗಿವೆ ಎಂದು ಬಂಡೆಗಳನ್ನು ಸರಿಸಿ ಅಲ್ಲಿದ್ದ ಶಿಲೆಗಳನ್ನು ಸ್ಥಳಾಂತರಕ್ಕೆ ಮುಂದಾದಾಗ ಸಾರಾಗವಾಗಿ ಸಾಗುತ್ತಿದ್ದ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಜೊತೆಗೆ ಅಪಘಾತಗಳು ಸಂಭವಿಸಿದೆ ಈ ಹಿನ್ನಲೆಯಲ್ಲಿ ಸ್ಥಳೀಯರಿಗೆ ಅಕ್ಕನವರ ಶಿಲೆಗಳ…

Read More

ಮುಳಬಾಗಿಲು:ಪ್ರಖ್ಯಾತ ಪುಣ್ಯಕ್ಷೇತ್ರವಾದ ಮುಳಬಾಗಿಲು ತಾಲೂಕು ಕುರುಡುಮಲೆಯ Kurudumale 13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶಮೂರ್ತಿಗೆ ಭಾನುವಾರದ ಸಂಕಷ್ಟ ಚತುರ್ಥಿ ವಿಶೇಷ ಪೂಜೆ ಹೋಮ ಹವನ ಏರ್ಪಡಿಸಲಾಗಿತ್ತು.ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿಗಳು ಸ್ಥಾಪಿಸಿದ ಗಣೇಶಮೂರ್ತಿ ಇದಾಗಿದ್ದು ಇಲ್ಲಿ ಕೌಂಡಿಲ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದ ಪರಮ ಪವಿತ್ರ ಕ್ಷೇತ್ರ ಎಂಬ ಪ್ರತೀತಿ.ಗಣೇಶಮೂರ್ತಿಗೆ ಮೊದಲು ದೇವಾಯಲ ಇರಲಿಲ್ಲ ನಂತರದಲ್ಲಿಚೋಳರ ಕಾಲದಲ್ಲಿ ದೇವಾಲಯ ನಿರ್ಮಿಸಿದ್ದು ವಿಜಯನಗರ ಅರಸರ ಕಾಲದಲ್ಲಿ ಪೂರ್ಣಗೊಳಿಸಿದ್ದು ಎನ್ನಲಾದ ದೇವಾಲಯದಲ್ಲಿ ಸಾಲಿಗ್ರಾಮ ಕಲ್ಲಿನ ಗಣೇಶಮೂರ್ತಿ ಮುಂದೆ ಪ್ರಾರ್ಥೀಸಿದರೆ ಭಕ್ತರ ಕೋರಿಕೆಗಳ ಇಷ್ಟಾರ್ಥ ಸಿಧ್ಧಿಸುತ್ತದೆ ಎನ್ನುವುದು ನಂಬಿಕೆ.ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ feb16 ಭಾನುವಾರ ಆಚರಿಸಲಾದ ಸಂಕಷ್ಟ ಹರ ಚತುರ್ಥಿ ಆಚರಣೆಯನ್ನು ಅತ್ಯಂತ ಪವಿತ್ರವಾಗಿ ನಡೆಯಿತು ದೊಡ್ಡ ಸಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ಸಂಕಷ್ಟ ಹರ ಚತುರ್ಥಿ ಅಂಗವಾಗಿ ದೇವಾಲಯದ ಪ್ರಮುಖ ಅರ್ಚಕರಾದ ವಿನಾಯಕ ಅವರ ತಂಡ ಮೂಲ ಗಣೇಶಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಮತ್ತು ಸಂಜೆ ಗಣಪತಿ ಹೋಮ ಹವನ…

Read More

ಶ್ರೀನಿವಾಸಪುರ:ಅಪರಿಚಿತ ವಾಹನ ಬಡಿದು ಜಿಂಕೆಯೊಂದು ಸಾವನಪ್ಪಿರುವ ಘಟನೆ ಶ್ರೀನಿವಾಸಪುರ-ಕೋಲಾರ ರಸ್ತೆಯ ದಳಸನೂರು ರಾಜ್ಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.ಇಂದು ಮಧ್ಯಾನಃ ರಸ್ತೆ ದಾಟಲು ಬಂದ ಜಿಂಕೆಗೆ ಅಪರಿಚಿತ ವಾಹನ ಬಡಿದು ತೀವ್ರ ರಕ್ತಸ್ರಾವವಾಗಿ ಜಿಂಕೆ ಸ್ಥಳದಲ್ಲೆ ಸಾವನಪ್ಪಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ. ಸಾವನಪ್ಪಿರುವ ಗಂಡು ಜಿಂಕೆಗೆ ಐದು ವರ್ಷ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದ್ದು,ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ReadAlso:!https://www.vcsnewz.com/a-car-caught-fire-after-getting-stuck-in-a-bean-field-on-mulbagal-road/ರಸ್ತೆಯಲ್ಲಿನ ಹುರಳಿ ಕಣದಲ್ಲಿ ಸಿಲುಕಿ ಹೊತ್ತಿ ಉರಿದ ಕಾರು

Read More

ನ್ಯೂಜ್ ಡೆಸ್ಕ್:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಾಷಿಂಗ್ಟನ್‌ನ ಬ್ಲೇರ್ ಹೌಸ್‌ನಲ್ಲಿ ಟೆಸ್ಲಾ ಮುಖ್ಯಸ್ಥ ಹಾಗೂ ವಿಶ್ವದ ಅತ್ಯಂತ ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ.ಎರಡು ದಿನಗಳ ಅಮೆರಿಕ ಭೇಟಿಯಲ್ಲಿರುವ ಪ್ರಧಾನಿಯವರು ಬುಧವಾರ ರಾತ್ರಿ ವಾಷಿಂಗ್ಟನ್ ಡಿ.ಸಿ. ತಲುಪಿದ ನಂತರ ಅವರು ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ಅವರು, ಪ್ರಧಾನಿಯನ್ನು ಭೇಟಿಯಾದ ವೇಳೆ ಅವರ ಮೂವರು ಮಕ್ಕಳಾದ ಎಕ್ಸ್, ಸ್ಟ್ರೈಡರ್ ಮತ್ತು ಅಜುರೆ ಜೊತೆಗಿದ್ದರು.ಈ ಸಂದರ್ಭದಲ್ಲಿ ಮೋದಿ ಅವರು ಎಲೋನ್ ಮಸ್ಕ್ ಮಕ್ಕಳಿಗೆ “ಪಂಚತಂತ್ರ” ಹಾಗು “ದಿ ಕ್ರಿಸೆಂಟ್ ಮೂನ್” ಪುಸ್ತಕಗಳನ್ನು ಬಹುಮಾನವಾಗಿ ನೀಡಿದ್ದಾರೆ.ಇದನ್ನು ಪ್ರಧಾನಿ ತಮ್ಮ ಎಕ್ಸ್X ಖಾತೆ ಹಂಚಿಕೊಂಡಿದ್ದಾರೆ. https://twitter.com/narendramodi/status/1890100201496748210 ಇದನ್ನು ಓದಿ:https://www.vcsnewz.com/the-ceo-of-the-most-expensive-company-does-not-wear-a-watch/ಅತ್ಯಂತ ದುಬಾರಿ ಕಂಪನಿಯ CEO ವಾಚ್ ಧರಿಸುವುದಿಲ್ಲವಂತೆ!

Read More

ನ್ಯೂಜ್ ಡೆಸ್ಕ್:ಪ್ರಪಂಚದಾದ್ಯಂತ ಯುವ ಸಮುದಾಯ Feb14 ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದರೆ ಇಲ್ಲೊಬ್ಬ ವಿಕೃತ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆಕೆಯ ಮೇಲೆ ಆಸಿಡ್ ಸುರಿದು ಕ್ರೌರ್ಯ ಮೇರದಿದ್ದಾನೆ.ಘಟನೆ ನಡೆದಿರುವುದು ಆಂಧ್ರಪ್ರದೇಶದ ಮದನಪಲ್ಲೆ ಸಮೀಪದ ಗುರ್ರಮಕೊಂಡ ಮಂಡಲದ ಪ್ಯಾರಂಪಳ್ಳಿ, ಗ್ರಾಮದ ಜನಾರ್ದನ್ ಮತ್ತು ರೆಡ್ಡೆಮ್ಮ ದಂಪತಿ ಪುತ್ರಿ ಗೌತಮಿ, ಮದನಪಲ್ಲಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪದವಿ ಮುಗಿಸಿ, ಮದನಪಲ್ಲಿ ನಗರದ ಕದಿರಿ ರಸ್ತೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತುತ್ತಿದ್ದಾಳೆ.ಆಸಿಡ್ ದಾಳಿ ನಡೆಸಿದ ಆರೋಪಿಯನ್ನು ಮದನಪಲ್ಲಿಯ ಅಮ್ಮಚೆರುವು ಮಿಟ್ಟೆಯ ಗಣೇಶ್ ಎಂದು ಗುರತಿಸಲಾಗಿದೆ.ಇಂದು ಮುಂಜಾನೆ ಗೌತಮಿಯ ಪೋಷಕರು ಹಾಲು ಕರೆಯಲು ಹಸುಮೆನೆಗ್ ಹೋಗಿದ್ದಾರೆ ಈ ಸಂದರ್ಭದಲ್ಲಿ ಗೌತಮಿ ಮನೆಗೆ ಒಬ್ಬಳೆ ಇರುವುದನ್ನು ಬಳಸಿಕೊಂಡು ಮನೆಗೆ ಹೋಗಿ ಮಲಗಿದ್ದ ಗೌತಮಿಯ ತಲೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ನಂತರ ಆಕೆಯ ಮುಖದ ಮೇಲೆ ಆಸಿಡ್ ಸುರಿದಿದ್ದಾನೆ.ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ, ಆಕೆಯ ಕುಟುಂಬ ಸದಸ್ಯರು ತಕ್ಷಣ ಆಕೆಯನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು…

Read More

ನ್ಯೂಜ್ ಡೆಸ್ಕ್:ಬಸ್ ಕಂಡಕ್ಟರ್ ವಿರುದ್ಧ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಕಂಡಕ್ಟರ್ ಕೆಲಸ ಮಾಡುವ ಬಸ್ ಅನ್ನು ಅಪಹರಿಸಿಕೊಂಡು ಹೋಗಿ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೋಡೆದಿರುವ ಘಟನೆ ಚೆನ್ನೈ ನಗರದ ಹೋರವಲಯದಲ್ಲಿ ನಡೆದಿರುತ್ತದೆ.ಬಸ್ ತಗೆದುಕೊಂಡು ಹೋದ ವ್ಯಕ್ತಿಯನ್ನು ಚನೈನ ಗುಡುವಾಂಚೇರಿಯ ಬೆಸೆಂಟ್ ನಗರದ ನಿವಾಸಿ ಅಬ್ರಹಾಂ ಎಂದು ಗುರುತಿಸಲಾಗಿದ್ದು ಇತ ಕಾರಿನ ಇಂಟೀರಿಯರ್ ಡೆಕೊರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ.ಬಸ್ ತಗೆದುಕೊಂಡು ಹೋದ ಆರೋಪಿ ಅಬ್ರಹಾಂಗೂ ಬಸ್ ಕಂಡೆಕ್ಟರ್ ನಡುವೆ ಹಳೆ ವಿವಾದ ಇದ್ದು ಇದಕ್ಕಾಗಿ ಕೆಲವು ದಿನಗಳ ಹಿಂದೆ ತನ್ನೊಂದಿಗೆ ಕಂಡೆಕ್ಟರ್ ಅಸಭ್ಯವಾಗಿ ವರ್ತಿಸಿದ ಎನ್ನುವ ಆರೋಪಿ ಅಬ್ರಹಾಂ ಹೇಳಿದ್ದು ಇದಕ್ಕಾಗಿ ಕಂಡೆಕ್ಟರ್ ಕೆಲಸ ಮಾಡುವ (Chennai Metropolitan Transport Corporation -MTC) ಬಸ್ ಅನ್ನು ಕುಡಿದ ಮತ್ತಿನಲ್ಲಿ ತಿರುವನ್ಮಿಯೂರ್ ಬಸ್ ಟರ್ಮಿಲ್ ರಾತ್ರಿ 2 ಗಂಟೆ ಸಮಯದಲ್ಲಿ ಬ್ರಾಡ್ವೇ ಪ್ರದೇಶದ ಮೂಲಕ ಅಪಹರಿಸಿಕೊಂಡು ಹೋಗುವಾಗ ಅಕ್ಕರೈ ಪ್ರದೇಶದ ಬಳಿ ಲಾರಿಗೆ ಡಿಕ್ಕಿ ಹೊಡೆದಿದ್ದು ಇದರಿಂದಾಗಿ ಎರಡೂ ವಾಹನಗಳಿಗೆ ಹಾನಿ ಉಂಟಾಗಿದೆ.ಅಪಹರಣಕಾರ…

Read More

ನ್ಯೂಜ್ ಡೆಸ್ಕ್:ಕೈಗಾರಿಕಾ ಕ್ರಾಂತಿಗೆ ಮುಂದಾಗಿರುವ ಕರ್ನಾಟಕ ಸರ್ಕಾರ, ಕೈಗಾರಿಕ ಬಂಡವಾಳಗಾರನ್ನು ಆಕರ್ಷಿಸಲು ಫಾರ್ಮಾಸುಟಿಕಲ್ ಉದ್ಯಮ ಕ್ಷೇತ್ರಕ್ಕೆ ಒತ್ತು ನೀಡುವ ಉದ್ದೇಶದಿಂದ ಕೋಲಾರ ಜಿಲ್ಲೆಯ Srinivasapura ದಲ್ಲಿ ಅಡ್ವಾನ್ಸ್ಡ್ ಹೈಟೆಕ್ ಫಾರ್ಮಾಸುಟಿಕಲ್ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎಂದು ರಾಜ್ಯ ಕೈಗಾರಿಕ ಸಚಿವ ಎಂ.ಬಿ.ಪಾಟಿಲ್ ತಮ್ಮ ಸಾಮಜಿಕ ಜಾಲತಾಣ ಇನ್ಸಟಾಗ್ರಾಮ್ nimmambp ನಲ್ಲಿ ಹೇಳಿದ್ದಾರೆ.ಔಷಧ ಕ್ಷೇತ್ರದಲ್ಲಿ ಕರ್ನಾಟಕ ಶೇ.11 ರಷ್ಟು ಆದಾಯದೊಂದಿಗೆ ಹೊಸ ದಾಖಲೆ ಬರೆಯುತ್ತಿದ್ದು, ಬಯೋಟೆಕ್ ಕ್ಷೇತ್ರದಲ್ಲಿ ಶೇ.60 ರಷ್ಟು ಪಾಲು ಪಡೆದು ದೇಶದಾದ್ಯಂತ ಪ್ರಾಬಲ್ಯ ಮೆರೆಯುತ್ತಿದೆ ಈ ಪರಂಪರೆಗೆ ಮತ್ತೊಂದು ಕಿರೀಟವಾಗಿ, ಜಾಗತಿಕ ಹೂಡಿಕೆಗಳನ್ನು ಆಕರ್ಷಿಸಲು ಕೈಗಾರಿಕಾ ಇಲಾಖೆ ಬೃಹತ್ ವೇದಿಕೆಯನ್ನು ಸೃಷ್ಟಿಸಲು ಮುಂದಾಗಿದ್ದು ಹೈಟೆಕ್ ಫಾರ್ಮಾಸುಟಿಕಲ್ ಪಾರ್ಕ್ ನಿರ್ಮಾಣದಿಂದ ರಾಜ್ಯದ ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲಿದೆ ಎಂದಿರುತ್ತಾರೆ.ಕರ್ನಾಟಕವು ಇನ್ವೆಸ್ಟ್ ಕರ್ನಾಟಕ ಎಂದು ಗುರುತಿಸಲ್ಪಟ್ಟಿರುವ ತನ್ನ ಪ್ರಮುಖ GIM (ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್) 2025 ರಿಂದ ಔಷಧ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಅಗತ್ಯವಿರುವ…

Read More