ಶ್ರೀನಿವಾಸಪುರ:ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೊಲೇರೋ ಅತಿ ವೇಗವಾಗಿ ಚಾಲನೆಯಿಂದ ವಾಹನ ರೈಲ್ವೆ ಬ್ರಿಡ್ಜ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಮುಗುಚಿ ಬಿದ್ದು ವಾಹನದಲ್ಲಿದ್ದ ಮೂವರು ಕಾರ್ಮಿಕರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.ಶ್ರೀನಿವಾಸಪುರ ತಾಲೂಕಿನ ದೊಡಮಲದೊಡ್ಡಿ ರೈಲ್ವೆ ಬ್ರಿಡ್ಜ್ ಬಳಿ ಘಟನೆ ಜರುಗಿದ್ದು, ಆಂದ್ರದ ಚೆಂಬಕೂರು ಗ್ರಾಮದ ಕೂಲಿ ಕಾರ್ಮಿಕರಾದ ವೆಂಕಟಮ್ಮ (55), ಮುನಿಯಪ್ಪ (56) ಶ್ರೀನಿವಾಸ@ಸೀನು (27) ಎಂಬುವರು ಮೃತಪಟ್ಟಿದ್ದಾರೆ.ಚೆಂಬಕೂರಿನಿಂದ ಹುಣಸೆ ಮರದಲ್ಲಿ ಕಾಯಿ ಉದುರಿಸುವ ಕೆಲಸಕ್ಕೆ 12 ಮಂದಿ ಕೂಲಿ ಕಾರ್ಮಿಕರನ್ನು ಶ್ರೀನಿವಾಸಪುರ-ಚಿಂತಾಮಣಿ ನಡುವಿನ ಆನೂರು ಗ್ರಾಮಕ್ಕೆ ಕರೆತಂದಿದ್ದರು, ಕೆಲಸ ಮುಗಿಸಿದ ಕೂಲಿ ಕಾರ್ಮಿಕರನ್ನು ಅವರ ಊರಾದ ಆಂಧ್ರದ ಚಂಬಕೂರಿಗೆ ಮತ್ತೆ ಬೊಲೆರೋ ವಾಹನದಲ್ಲಿ ಸಂಜೆ ವಾಪಸ್ ಕರೆದುಕೊಂಡು ಹೋಗುತ್ತಿರುವಾಗ ದೊಡಮದೊಡ್ಡಿ ಸಮೀಪದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ವಾಹನ ಅತಿ ವೇಗವಾಗಿ ಚಲಾಯಿಸುತ್ತಿದ್ದದ್ದರಿಂದ ಬ್ರೇಕ್ ಫೈಲೂರ್ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದು ಬೊಲೆರೋ ರಸ್ತೆ ಮೇಲೆ ಮುಗಿಚಿ ಬಿದಿದ್ದೆ. ಬಿದ್ದ…
Author: Srinivas_Murthy
ಶ್ರೀನಿವಾಸಪುರ:ಹೆತ್ತ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಿದ ಮಗುವಿನ ತಂದೆ ತಾಯಿ ಬ್ರೋಕರ್ ಸೇರಿದಂತೆ ಶ್ರೀನಿವಾಸಪುರ ಪೋಲಿಸರು ಐದು ಮಂದಿಯ ವಿರುದ್ದ ಕೇಸು ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯ ನೀತು ಹಾಗೂ ರಾಘವೇಂದ್ರ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು ಇದರ ಜೊತೆಗೆ ಕಳೆದ ಆರೇಳು ದಿನಗಳ ಹಿಂದೆ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಮತ್ತೊಂದು ಗಂಡು ಮಗುವಿಗೆ ನೀತು ಜನ್ಮ ನೀಡಿದ್ದಾಳೆ.ಬಡತನದ ಹಿನ್ನಲೆಯಲ್ಲಿ ನೀತು ಹಾಗೂ ರಾಘವೇಂದ್ರ ದಂಪತಿ ಹುಟ್ಟಿದ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಲು ನಿರ್ಧರಿಸಿ ನಾರಾಯಣಸ್ವಾಮಿ ಎಂಬ ವ್ಯಕ್ತಿಯ ಮೂಲಕ ಮಗು ಮಾರಾಟ ಮಾಡಿದ್ದಾರೆ.ಇದು ಶ್ರೀನಿವಾಸಪುರ ಪೊಲೀಸರಿಗೆ ಮಾಹಿತಿ ತಲುಪಿದೆ ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲಿಸರಿಗೆ ಮಧ್ಯವರ್ತಿ ಹಾಗೂ ಮಗುವನ್ನು ಖರೀದಿ ಮಾಡುತ್ತಿದ್ದವರು ಸೇರಿ ಒಟ್ಟು 5 ಮಂದಿ ಸಿಕ್ಕಿಬಿದಿದ್ದಾರೆ.ಮಗು ಮಾರಾಟ ಬಯಲಿಗೆ ಬಂದಿದ್ದು ಹೇಗೆ?ಶುಕ್ರವಾರ ಮಧ್ಯರಾತ್ರಿ 12.30ರ ಸಮಯದಲ್ಲಿ ಪೊಲೀಸರು ಕೊಳ್ಳೂರು ರಸ್ತೆ ಕಡೆಯಿಂದ ಗಸ್ತು ಮುಗಿಸಿ ವೆಂಕಟೇಶ್ವರ ಬಡಾವಣೆಯ ಕಡೆ ಬರುತ್ತಿರುವಾಗ…
ನ್ಯೂಜ್ ಡೆಸ್ಕ್:ಬೈಟೂ ಕಾಫಿ ನೀಡದ ಹೋಟೆಲ್ ಮೇಲೆ JCB ಮೂಲಕ ದಾಳಿ ಮಾಡಿಸಿದೆ ಮುನ್ಸಿಪಲ್ ಉದ್ಯೋಗಿಯನ್ನು ಅಲ್ಲಿನ ಜಿಲ್ಲಾಧಿಕಾರಿ ವಜಾ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪ್ರೊದ್ದಟೂರ್ ನಗರದಲ್ಲಿ ನಡೆದಿರುತ್ತದೆ.ಮುನ್ಸಿಪಲ್ ನಲ್ಲಿ ಹೊರಗುತ್ತಿಗೆ ಉದ್ಯೋಗಿಯೊಬ್ಬ ಸ್ಥಳೀಯ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಹೋಗಿ ಬೈಟೂ ಕಾಫಿ ಕೇಳಿದ್ದಾನೆ ಅದಕ್ಕೆ ಹೋಟೆಲ್ ಮಾಲಿಕ ಬೈಟೂ ಪದ್ಧತಿ ಇಲ್ಲಾ ಎಂದಿರುತ್ತಾನೆ.ಅದಕ್ಕೆ ಕೊಪಗೊಂಡ ಮುನ್ಸಿಪಲ್ ಉದ್ಯೋಗಿ ಕಚೇರಿಗೆ ವಾಪಸ್ಸು ಹೋಗಿ ಇಲಾಖೆ ಜೆಸಿಬಿ ಕಳಿಸಿ, ಬೈಟೂ ಕಾಫಿ ಇಲ್ಲಾ ಎಂದ ಹೋಟೆಲ್ ಮುಂಭಾಗದ ಅತಿಕ್ರಮಣ ತೆರವು ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾನೆ. ಅದರಂತೆ ಜೆಸಿಬಿ ತೆಗೆದುಕೊಂಡು ಹೋದ ಮುನ್ಸಿಪಲ್ ಸಿಬ್ಬಂದಿ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಮುಂದಾದಾಗ ಹೋಟೆಲ್ ಮಾಲಿಕ ರಸ್ತೆ ಮೇಲೆ ಮಲಗಿ ಬೇಡಿಕೊಂಡಿದ್ದಾನೆ ಇದನ್ನು ಸ್ಥಳೀಯ ಜನತೆ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ ಜೊತೆಗೆ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ವಿಷಯ ಮುನ್ಸಿಪಲ್ ಆಯುಕ್ತರ ವರಿಗೂ ತಲುಪಿದೆ ನಂತರ ಜಿಲ್ಲಾಧಿಕಾರಿ ಗಮನಕ್ಕೆ ಹೋಗಿದೆ. ಇದು ದಬ್ಬಾಳಿಕೆ…
ಎಲ್ಲಾ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗುವುದಿಲ್ಲ ಹಲವಾರು ಕಾರಣಗಳಿಂದ, ಪ್ರೇಮ ಪ್ರೀತಿ ಮಧ್ಯದಲ್ಲಿ ನಿಂತುಹೊಗುತ್ತದೆ ಆದರೂ first love best love ಎಂದು ನೋವಿನಲ್ಲೂ ಭಗ್ನ ಪ್ರೇಮಿಗಳಾಗಿ ಬದುಕು ಸಾಗಿಸಲು ಮುಂದೆ ಸಾಗುತ್ತಾರೆ.ಇದೊಂದು ಅಂದ ಕಾಲತ್ತಿಲೈ ನಲವತ್ತು ವರ್ಷಗಳ ಹಿಂದಿನ love store. ಕುಟುಂಬದ ಹಿರಿಯರನ್ನು ಎದರು ಹಾಕಿಕೊಂಡು ಪ್ರೀತಿ ಗೆಲ್ಲಲು ಸಾಧ್ಯವಿಲ್ಲದ ಕಾಲದಲ್ಲಿ ಕದ್ದು ಮುಚ್ಚಿ ಪ್ರೀತಿ ಮಾಡುವಂತಹ ಕಾಲವದು ಇಂತಹ ಪ್ರೇಮ ಕಹಾನಿಗೆ ಈಗ 40 ವರ್ಷಗಳ ನಂತರ ಜೀವ ಬಂದಿದೆ. ನ್ಯೂಜ್ ಡೆಸ್ಕ್:ಕೇರಳದ ವಿಂಟೇಜ್ ಪ್ರೇಮಕಥೆ ಬಗ್ಗೆ ಕೇಳಿದವರಿಗೆ ಹೌದ ಇದೂ ಸಾಧ್ಯನಾ ಎಂದು ಆಶ್ಚರ್ಯ ಪಡಬಹುದಾದ ಕಥೆಯಿದು. ಎಲ್ಲಾ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗದು ಜಾತಿ ಧರ್ಮ ಇನ್ನೊಂದು ಮತ್ತೊಂದು ಎಂದೆಲ್ಲ ಅಡ್ಡಿ ಆತಂಕಗಳು ಎದುರಾಗುತ್ತವೆ ಈವುಗಳನೆಲ್ಲಾ ಮೆಟ್ಟಿ ನಿಲ್ಲುವ ಇಂದಿನ ಪ್ರೇಮಿಗಳಷ್ಟು ಧೈರ್ಯವಂತರಲ್ಲ ಅಂದಿನ ಪ್ರೇಮಿಗಳು ಯೌವನದಲ್ಲಿ ಬೇರ್ಪಟ್ಟ ಪ್ರೇಮಿಗಳು ತಮ್ಮ ಮಕ್ಕಳ ಸಹಾಯ ಸಹಕಾರದಿಂದ 65 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ವಿಂಟೇಜ್ ಪ್ರೇಮಕಥೆಯ ಹಿರೋ ಕೇರಳದ…
ನ್ಯೂಜ್ ಡೆಸ್ಕ್:ಚಿಕ್ಕಬಳ್ಳಾಪುರ-ಪುಟ್ಟಪರ್ತಿ(ಶ್ರೀ ಸತ್ಯ ಸಾಯಿ ನಿಲಯಂ) ನಡುವಿನ 103 ಕೀ.ಮಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ₹713.33 ಕೋಟಿ ಮಂಜೂರು ಮಾಡುವ ಮೂಲಕ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.ನೈಋತ್ಯ ರೈಲ್ವೆಯಲ್ಲಿ ಇದೊಂದು ಮಹತ್ತರ ಸಂಪರ್ಕದ ಬೆಳವಣಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗುತ್ತದೆ ಎನ್ನಲಾಗಿದೆ.ಬೆಂಗಳೂರು-ಚಿಕ್ಕಬಳ್ಳಾಪುರ-ಚಿಂತಾಮಣಿ-ಶ್ರೀನಿವಾಸಪುರ-ಕೋಲಾರ-ಬಂಗಾರಪೇಟೆ ನಡುವಿನ ರೈಲು ಮಾರ್ಗ ಜಾರಿಯಲ್ಲಿದ್ದುಬಂಗಾರಪೇಟೆ ರೈಲ್ವೆ ಜಂಕ್ಷನ್ ನಿಂದ ಚಿಕ್ಕಬಳ್ಳಾಪುರಕ್ಕೆ ರೈಲುಗಳು ಒಡಾಡಿದ್ದೆ ಆದರೆ ತಮಿಳುನಾಡು-ಕರ್ನಾಟಕ-ಆಂಧ್ರಪ್ರದೇಶದ ನಡುವಿನ ರೈಲು ಮಾರ್ಗ ಮಹತ್ತರ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಸಾರಿಗೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಇದರಿಂದ ಬೆಂಗಳೂರು-ಆಂಧ್ರ ಸಂಪರ್ಕದ ರಸ್ತೆಗಳ ಮೇಲೆ ಒತ್ತಡ ಕಡಿಮೆ ಆಗಲಿದೆ ಎಂದು ಸಾರಿಗೆ ತಜ್ಞರು ಹೇಳುತ್ತಾರೆ. ನೂತನ ರೈಲು ಮಾರ್ಗ ಹೀಗಿರುತ್ತದೆ.ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ ನೂತನ ರೈಲು ಮಾರ್ಗ ಈ ಊರುಗಳನ್ನು ಸಂಪರ್ಕಿಸಲಿದ್ದು ಚಿಕ್ಕಬಳ್ಳಾಪುರ-ದಿಬ್ಬೂರು -ವರ್ಲಕೊಂಡ-ಬಾಗೇಪಲ್ಲಿ-ಚಿಲುಮತ್ತೂರು -ಗೋರಂಟ್ಲ-ಪೆದ್ದಪಲ್ಲಿ-ಕೊತ್ತಪಲ್ಲಿ-ಪುಟ್ಟಪರ್ತಿ ಪ್ರಶಾಂತಿ ನಿಲಯಂ ತಲುಪಲಿದ್ದು ಅಲ್ಲಿಂದ ಈಗಾಗಲೆ ಧರ್ಮಾವರಂಗೆ ರೈಲು ಮಾರ್ಗ ಚಾಲ್ತಿಯಲ್ಲಿದೆ.ಇದರಿಂದ ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ ದೇಶಾದ್ಯಂತದ ಭಕ್ತರು…
ನ್ಯೂಜ್ ಡೆಸ್ಕ್:ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ತೆಲಗು ಸ್ಟಾರ್ ವಿಕ್ಟರ್ ವೆಂಕಟೇಶ್ ಅವರ ಹೈದರಾಬಾದ್ ಮನೆಯಲ್ಲಿ ತೆಲಗು ಹಿರಿಯ ನಟರು ಪ್ರಭಾವಿ ನಿರ್ದೇಶಕರು ಹಾಗು ಪ್ರಸಿದ್ದ ನಿರ್ಮಾಪಕರನ್ನು ಭೇಟಿಯಾಗಿ ಮಾತು ಮಂಥನ ನಡೆಸಿದ್ದಾರೆ.ಭೇಟಿ ಸಮಯದಲ್ಲಿ ಆರ್‌ಎಸ್‌ಎಸ್ ನಡೆಸುತ್ತಿರುವ ಸೇವಾ ಕಾರ್ಯಕ್ರಮಗಳ ಬಗ್ಗೆ ತೆಲಗು ಸಿನಿಮಾ ಮಂದಿಯೊಂದಿಗೆ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) 100 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಸಂಸ್ಥೆಯ ಸರ್ ಸಂಘಚಾಲಕ್ ಮೋಹನ್ ಭಾಗವತ್ ಅವರು ದೇಶಾದ್ಯಂತ ವಿವಿಧ ನಗರಗಳಲ್ಲಿ ಹಲವಾರು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.ಇದರ ಭಾಗವಾಗಿ, ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.ಅವರು ಮೂರು ದಿನಗಳ ಹಿಂದೆ ನೊವಾಟೆಲ್‌ನ ಎಚ್‌ಐಸಿಸಿಯಲ್ಲಿ ಚಲನಚಿತ್ರ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗಿದ್ದರು ಅದಕ್ಕೂ ಒಂದು ದಿನ ಮೊದಲು,ತೆಲಗು ಸಿನಿಮಾ ರಂಗದ ಹಿರಿಯ ನಟ ವಿಕ್ಟರಿ ವೆಂಕಟೇಶ್ ಅವರ ಮನೆಯಲ್ಲಿ ತೆಲಗು ಚಲನಚಿತ್ರರಂಗದ ಪ್ರಮುಖರನ್ನು ಭೇಟಿಯಾದರು.ಈ ಸಂದರ್ಭದಲ್ಲಿ ನಾಯಕ ನಟರಾದ ಅಕ್ಕಿನೇನಿ ನಾಗಾರ್ಜುನ,ವಿಕ್ಟರಿ ವೆಂಕಟೇಶ್, ನಾನಿ,…
ಶ್ರೀನಿವಾಸಪುರ: ಅಪಘಾತ ತಪ್ಪಿಸಲು ಹೋದ ಪೊಲೀಸ್ ವಾಹನ ರಸ್ತೆ ವಿಭಜದ ಮೇಲೆ ಹತ್ತಿ ವಿದ್ಯತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾರಿ ಗಾತ್ರದ ಬೀದಿ ದೀಪದ ವಿದ್ಯತ್ ಕಂಬ ಉರುಳಿ ಬಿದ್ದ ಘಟನೆ ಇಂದು ಮಧ್ಯಾನ್ಹ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿಗಳ ಬಳಿ ನಡೆದಿರುತ್ತದೆ.ಅದೃಶ್ಯಾವತ್ ಯಾವುದೆ ಸಾವು ನೋವು ಸಂಭವಿಸಿಲ್ಲ ದ್ವಿಚಕ್ರ ವಾಹನ ಸವಾರ ಮಹಿಳೆಗೆ ತಲೆಗೆ ಪೆಟ್ಟಾಗಿದ್ದು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಸ್ತೆಯಲ್ಲಿ ಅವರೆಕಾಯಿ ಮಂಡಿ ರಸ್ತೆ ಸಂಚಾರಕ್ಕೆ ಕಂಟಕಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿ ನಡೆಸುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದು ಅವರೆಕಾಯಿ ಮಂಡಿಗಳನ್ನು ಸ್ಥಳಾಂತರಿಸುವ ಬಗ್ಗೆ ಪರ-ವಿರೋದ ವ್ಯಕ್ತವಾದ ಹಿನ್ನಲೆಯಲ್ಲಿ ತಿಕ್ಕಾಟ ವಿವಾದಕ್ಕೆ ಕಾರಣವಾಗಿ ರಾಜಕೀಯ ತಿರವು ಪಡೆದುಕೊಂಡು ಅವರೆಕಾಯಿ ಮಂಡಿಗಳು ಎಂ.ಜಿ.ರಸ್ತೆಯಲ್ಲೆ ಮುಂದು ವರೆದಿತ್ತು ಇದು ಸ್ಥಳಿಯ ಜನರಿಗೆ ನುಂಗಲಾರದ ತುತ್ತಾಗಿ ಪರಣಮಿಸಿತ್ತು.ಅವರೆಕಾಯಿ ಮೂಟೆಗಳನ್ನು ಲೋಡ್ ಮಾಡಲು ನಿಲ್ಲಿಸುವ ಟೆಂಪೋ,ಆಟೋ ಟ್ರ್ಯಾಕ್ಟರ್ ಗಳಿಂದ ರಸ್ತೆ ನಿಯಮ ಉಲ್ಲಂಘನೆಯಾಗಿ ರಸ್ತೆ ಸಂಚಾರಕ್ಕೆ , ಸಮಸ್ಯೆ ಉಂಟಾಗಿ ಇಕ್ಕಟ್ಟಿನಲ್ಲೇ ವಾಹನ ಸಂಚಾರ…
ಶ್ರೀನಿವಾಸಪುರ:ಕೋಲಾರದ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಎರಡು ನಿಮಿಶ ಮೌನಾಚರಣೆ ಮಾಡಿದ ಶ್ರೀನಿವಾಸಪುರದ ಪತ್ರಕರ್ತರು ಶ್ರದ್ದಾಂಜಲಿ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿ ಅಗಲಿದ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಅವರನ್ನು ಸ್ಮರಿಸುವುದು ಸಂಘದ ಕರ್ತವ್ಯವಾಗಿದೆ. ಎಲ್ಲರೊಂದಿಗೆ ಬೆರೆತು ಸಾಮಾಜಿಕ ಬದ್ಧತೆಯನ್ನು ಮೆರೆದವರು.ಅವರು ಜಿಲ್ಲೆಯ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಅಪಾರ ಅನನ್ಯ ಎಂದರು. ಹಿರಿಯ ಪತ್ರಕರ್ತ ಚೌಡರೆಡ್ಡಿ ಮಾತನಾಡಿ ಎಂ.ಜಿ.ಪ್ರಭಾಕರ್ ಅವರು ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸಾಮಾಜಿಕ ಬದ್ಧತೆ ಕಾಳಜಿ ಉಳ್ಳ ಪತ್ರಕರ್ತರಾಗಿದ್ದರು ಎಂದು ಅವರ ಗುಣಗಾನ ಮಾಡಿದರು.ಹಿರಿಯ ಪತ್ರಕರ್ತರಾದ ಚೌಡಪ್ಪ ಹಾಗು ಕೆ.ವಿ.ನಾಗರಾಜ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಕಲ್ಲೂರುಮಂಜುನಾಥರೆಡ್ಡಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಚುಂಬಕವಾಣಿ ಲಕ್ಷ್ಮಣ್, ಖಜಾಂಜಿ ಲಕ್ಷ್ಮಣಬಾಬು,ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಉಪೇಂದ್ರ, ಪತ್ರಕರ್ತರಾದ ವೇಣೂಗೋಪಾಲ್, ಕಿಶೋರ್, ಸುರೇಶ್ ಮುಂತಾದವರು ಇದ್ದರು.ಮುಳಬಾಗಿಲು ಪತ್ರಕರ್ತರಿಂದ ಶ್ರದ್ಧಾಂಜಲಿ.ಅಗಲಿದ ಹಿರಿಯ ಪತ್ರಕರ್ತ ಪ್ರಭಾಕರ್ ಅವರಿಗೆ ಮುಳಬಾಗಿಲು ತಾಲೂಕು ಕಾರ್ಯನಿರತ…
ಕೋಲಾರ:ರಾಜ್ಯ ಸರ್ಕಾರ ಕರ್ನಾಟಕ ಆಡಳಿತ ಸೇವೆಯ (ಕೆಎಎಸ್-ಕಿರಿಯ ಶ್ರೇಣಿ) ಇಬ್ಬರು ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಡಿಪಿಎಆರ್) ಈ ಕುರಿತು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ನ ವಿಶೇಷ ಭೂಸ್ವಾಧೀನಾಧಿಕಾರಿ-09 ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಜಂಬಗಿ ರೇಣುಕಾಪ್ರಸಾದ್ ದಿಲೀಪ್ ಅವರನ್ನು ಕೋಲಾರ ಉಪ ವಿಭಾಗಾಧಿಕಾರಿಯನ್ನಾಗಿ(AC) ನೇಮಕ ಮಾಡಲಾಗಿದೆ. ಕೋಲಾರ ಎಸಿಯಾಗಿದ್ದ ಡಾ. ಮೈತ್ರಿ ಹೆಚ್.ಪಿ.ಎಸ್. ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ರೇಣುಕಾಪ್ರಸಾದ್ ಅವರನ್ನು ನಿಯೋಜಿಸಲಾಗಿದೆ.ಈ ಆದೇಶದ ಅನ್ವಯ, ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿಗಳಿಗೆ ತಕ್ಷಣವೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಥವಾ ತಮ್ಮ ಮಾತೃ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.
ಬೆಂಗಳೂರು:ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ಸೋತಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಹೊರಹಾಕಿದೆ. ಕೆಲ ದಿನಗಳ ಹಿಂದೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪ ಹೊತ್ತಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಮಾತನಾಡಿದ ಆಡಿಯೋ ವೈರಲ್ ಆಗಿತ್ತು ಇದನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.ರಾಜೀವ್ ಗೌಡ ವರ್ತನೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್ ಸಹ ಬೇಸರ ವ್ಯಕ್ತಪಡಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ನಮ್ಮ ಪಕ್ಷದವರೇ ಆದರೂ ಇಂತಹ ವರ್ತನೆಯನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ರಾಜೀವ್ ಗೌಡ ಅವರ ಆಡಿಯೋ ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ ಅಧಿಕಾರಿಗಳ ಗೌರವಕ್ಕೆ ಧಕ್ಕೆ ತರುವಂತಾಗಿದೆ. ಅಧಿಕಾರಿಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜೀವ್…


