ಶ್ರೀನಿವಾಸಪುರ:ಹೆತ್ತ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಿದ ಮಗುವಿನ ತಂದೆ ತಾಯಿ ಬ್ರೋಕರ್ ಸೇರಿದಂತೆ ಶ್ರೀನಿವಾಸಪುರ ಪೋಲಿಸರು ಐದು ಮಂದಿಯ ವಿರುದ್ದ ಕೇಸು ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯ ನೀತು ಹಾಗೂ ರಾಘವೇಂದ್ರ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು ಇದರ ಜೊತೆಗೆ ಕಳೆದ ಆರೇಳು ದಿನಗಳ ಹಿಂದೆ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಮತ್ತೊಂದು ಗಂಡು ಮಗುವಿಗೆ ನೀತು ಜನ್ಮ ನೀಡಿದ್ದಾಳೆ.ಬಡತನದ ಹಿನ್ನಲೆಯಲ್ಲಿ ನೀತು ಹಾಗೂ ರಾಘವೇಂದ್ರ ದಂಪತಿ ಹುಟ್ಟಿದ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಲು ನಿರ್ಧರಿಸಿ ನಾರಾಯಣಸ್ವಾಮಿ ಎಂಬ ವ್ಯಕ್ತಿಯ ಮೂಲಕ ಮಗು ಮಾರಾಟ ಮಾಡಿದ್ದಾರೆ.ಇದು ಶ್ರೀನಿವಾಸಪುರ ಪೊಲೀಸರಿಗೆ ಮಾಹಿತಿ ತಲುಪಿದೆ ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲಿಸರಿಗೆ ಮಧ್ಯವರ್ತಿ ಹಾಗೂ ಮಗುವನ್ನು ಖರೀದಿ ಮಾಡುತ್ತಿದ್ದವರು ಸೇರಿ ಒಟ್ಟು 5 ಮಂದಿ ಸಿಕ್ಕಿಬಿದಿದ್ದಾರೆ.
ಮಗು ಮಾರಾಟ ಬಯಲಿಗೆ ಬಂದಿದ್ದು ಹೇಗೆ?
ಶುಕ್ರವಾರ ಮಧ್ಯರಾತ್ರಿ 12.30ರ ಸಮಯದಲ್ಲಿ ಪೊಲೀಸರು ಕೊಳ್ಳೂರು ರಸ್ತೆ ಕಡೆಯಿಂದ ಗಸ್ತು ಮುಗಿಸಿ ವೆಂಕಟೇಶ್ವರ ಬಡಾವಣೆಯ ಕಡೆ ಬರುತ್ತಿರುವಾಗ ಅನುಮಾನಸ್ಪದವಾಗಿ ಇದ್ದವರನ್ನು ವಿಚಾರಿಸಿದಾಗ ಮಗು ಮಾರಾಟ ಮಾಡುವ ಕೃತ್ಯ ಬೆಳಕಿಗೆ ಬಂದಿದೆ.ಈ ಬಗ್ಗೆ ವಿಚಾರಣೆ ನಡೆಸಿದಾಗ ಮಗುವನ್ನು ಮಾರಾಟ ಮಾಡುವ ವ್ಯವಹಾರದ ಗುಟ್ಟು ಬಯಲಾಗಿದೆ. ಪೋಷಕರ ಬಳಿ ಬ್ರೋಕರ್ ನಾರಾಯಣಸ್ವಾಮಿ 2 ಲಕ್ಷ ರೂ.ಗೆ ಮಗುವನ್ನು ಖರೀದಿಸಿ ಚಿಂತಾಮಣಿ ತಾಲೂಕಿನ ಕೃಷ್ಣ ಹಾಗೂ ಮಂಜುಳಾ ಎಂಬ ದಂಪತಿಗೆ 5 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡುವ ವ್ಯವಹಾರ ಕುದರಿದ್ದು ಇದನ್ನು ಪೋಲಿಸರು ಬಯಲಿಗೆ ಎಳೆದಿದ್ದಾರೆ.
ಶ್ರೀನಿವಾಸಪುರದ ಮಗು ಪೋಷಕರಾದ ನೀತು, ರಾಘವೇಂದ್ರ, ಮಧ್ಯವರ್ತಿ,ನಾರಾಯಣಸ್ವಾಮಿ ಹಾಗೂ ಖರೀದಿದಾರ ಚಿಂತಾಮಣಿಯ ಕೃಷ್ಣ, ಮಂಜುಳಾ ದಂಪತಿ ವಿರುದ್ಧ ಶ್ರೀನಿವಾಸಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಅಕ್ರಮವಾಗಿ ಮಗು ಮಾರಾಟ ಜಾಲವನ್ನು ಶ್ರೀನಿವಾಸಪುರ ಪೊಲೀಸರು ಪತ್ತೆ ಮಾಡಿ, ಮಾರಾಟ, ಖರೀದಿದಾರರನ್ನು ಹಾಗೂ ಬ್ರೋಕರ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ. ಈ ಬಗ್ಗೆ ಇನ್ನೂ ಯಾರದರೂ ಭಾಗಿಯಾಗಿದ್ದಾರ ಎಂಬ ಬಗ್ಗೆ ಉನ್ನತ ತನಿಖೆ ಕೈಗೊಳ್ಳಲಾಗಿದೆ ಎಂದು ಕೋಲಾರ ಪೋಲಿಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ತಿಳಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



