ಮೊಳಕೆ ಒಡೆದು ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯಲ್ಲಿ ಸೋಲನೈನ್ ಮತ್ತು ಚಾಕೋನೈನ್ ಎಂಬ ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ. ಇವುಗಳ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬುದಾಗಿ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅರೋಗ್ಯ ಡೆಸ್ಕ್:ಅಲೂಗಡ್ಡೆ ಬಳಸದೆ ಖಾದ್ಯಗಳೆ ಇಲ್ಲದಂತಾಗಿದೆ ಸಾಂಬಾರಿನಿಂದ ಹಿಡಿದು ಫ್ರೆಂಚ್ ಫೈಸ್ ವರೆಗೆ ಅಲೂಗಡ್ಡೆಯನ್ನು ಬಳಸಲಾಗುತ್ತದೆ. ಮಾರುಕಟ್ಟೆಯಿಂದ ಅಲೂಗಡ್ಡೆಯನ್ನು ಖರೀದಿಸುವಾಗ ಅದರಲ್ಲಿ ಕೆಲವೊಂದು ಮೊಳಕೆ ಒಡೆದ ಆಲೂಗಡ್ಡೆಗಳೂ ಕೂಡ ಇರುತ್ತದೆ. ಆದರೆ ಈ ಮೊಳಕೆಗಳನ್ನು ಕತ್ತರಿಸಿ ಖಾದ್ಯಗಳಲ್ಲಿ ಬಳಸುವುದು ಸಾಮಾನ್ಯ. ಆದರೆ ಎಂದಿಗೂ ಈ ರೀತಿಯ ತಪ್ಪು ಮಾಡಬೇಡಿ ಮೊಳಕೆಯೊಡದ ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುತ್ತಾರೆ.ಇಂತಹ ಆಲೂಗಡ್ಡೆ ತಿನ್ನುವುದರಿಂದ ವಾಕರಿಕೆ,ತಲೆನೋವು ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿರುತ್ತಾರೆ.ಮೊಳಕೆಯೊಡೆದ ಅಲೂಗಡ್ದೆಯಲ್ಲಿ ಸೋಲನೈನ್ ಮತ್ತು ಚಾಕೋನಿನ್ ನಂತಹ ನೈಸರ್ಗಿಕ ವಿಷ ಉತ್ಪಾದನೆಯಾಗುತ್ತದೆ,ಇವುಗಳ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಆರೋಗ್ಯ ಸಮಸ್ಯೆ…
Author: Srinivas_Murthy
ರೈಲಿನಲ್ಲಿ ಪ್ರಯಾಣಿಸುತ್ತಲೇ ದೇಶದ ವಿವಿಧ ರಾಜ್ಯಗಳಲ್ಲಿ ಸರಣಿ ಕೊಲೆ ಮಾಡುತ್ತಿದ್ದ ಸೈಕೋ ಕಿಲ್ಲರ್ ನನ್ನು ಪೊಲೀಸರು ಬಂಧಿಸಿದ್ದಾರೆ.ಅವನು ರೈಲಿನ ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿರುವ ಅಂಗವಿಕಲರ ಕಂಪಾರ್ಟ್‌ಮೆಂಟ್‌ಗೆ ಹತ್ತಿ ಪ್ರಯಾಣಿಕರನ್ನು ಅತ್ಯಾಚಾರ ಮತ್ತು ಕೊಲೆ ಮಾಡುತ್ತಾನೆ. ಆದರೆ, ಅಕ್ಟೋಬರ್ 17ರಿಂದ ನವೆಂಬರ್ 24ರ ನಡುವಿನ 35 ದಿನಗಳೊಳಗೆ 5 ರಾಜ್ಯಗಳಲ್ಲಿ 5 ಕೊಲೆಗಳನ್ನು ಮಾಡಿರುವುದು ಗಮನಾರ್ಹ. ಆರೋಪಿಗಾಗಿ ಹುಡುಕಾಟ ನಡೆಸಿದ್ದ ಗುಜರಾತ್ ಪೊಲೀಸರಿಗೆ ಆರೋಪಿ ಸಿಕ್ಕಿದ್ದಾನೆ. ಅದೇ ಹಂತಕ ಸಿಕಂದರಾಬಾದ್ ಠಾಣೆ ವ್ಯಾಪ್ತಿಯಲ್ಲೂ ಮಹಿಳೆಯನ್ನು ಕೊಂದಿದ್ದಾನೆ. ನ್ಯೂಜ್ ಡೆಸ್ಕ್: ಐದು ರಾಜ್ಯಗಳು 35 ದಿನಗಳ ಅವಧಿಯಲ್ಲಿ ಐದು ಕೊಲೆಗಳನ್ನು ಮಾಡಿದ್ದಾನೆ.ಇವನು ಸಾಮಾನ್ಯನಲ್ಲ ಪೋಲಿಯೊ ಪೀಡಿತ ಅಂಗವೀಕಲ ಇವನು ಮಾಡಿರುವ ಕೊಲೆಗಳಿಗಿಂತ ಇವನ ವೈಯುಕ್ತಿಕ ಜೀವನವೆ ವಿಚಿತ್ರ.ಹಾಗಾದರೆ ಎಲ್ಲಿ ನಡೆದಿವೆ ಐದು ಕೊಲೆಗಳು ಎನ್ನುವುದಾದರೆ ಸಿಕಂದರಾಬಾದ್‌ನ ರೈಲಿನ ಅಂಗವಿಕಲರ ವಿಭಾಗದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗುತ್ತದೆ ಮಹಿಳೆಯನ್ನು ಕೊಂದವರು ಯಾರು ಎಂದು ಪೊಲೀಸರು ವಿಚಾರಣೆ ನಡೆಸಿದಾಗ ಆಘಾತಕಾರಿ ವಿಷಯಗಳು ಹೊರಬರುತ್ತವೆ ಕೊಲೆ ಆರೋಪಿ ಸೈಕೋ ಕಿಲ್ಲರ್ ಎಂದು…
ಕೋಲಾರ:ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಅಥಾವ ವಿಸ್ತರಣೆಯಾದರೆ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದು ಅದರಲ್ಲಿ ನನಗೆ ಮಂತ್ರಿ ಸ್ಥಾನ ನೀಡಬೇಕು. ಅದಕ್ಕೆ ನಾನು ಅರ್ಹನಿದ್ದೇನೆ ಎಂದು ಮಾಲೂರು ಶಾಸಕ ಕೆ ವೈ ನಂಜೇಗೌಡ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದೇನೆ. ತುಂಬಾ ಕಷ್ಟದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿದ್ದೇನೆ. ಕೋಲಾರ ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನ ಕೇಳಿದ್ದೇವೆ. ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಕೊಟ್ಟರು ನನಗೆ ಒಪ್ಪಿಗೆ ಇದೆ. ಮಂತ್ರಿ ಸ್ಥಾನ ನೀಡುವ ಕುರಿತ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಡುತ್ತೆವೆ ಎಂದು ಶಾಸಕ ಕೆ ವೈ ನಂಜೇಗೌಡ ತಿಳಿಸಿದರು.ಸಂಪುಟ ಪುನರ್ ರಚನೆ ಅಥಾವ ವಿಸ್ತರಣೆ ಇಲ್ಲಸದ್ಯ ರಾಜ್ಯದಲ್ಲಿ ಯಾವುದೇ ಸಚಿವ ಸಂಪುಟ ಪುನರ್ ರಚನೆ ಹಾಗೂ ವಿಸ್ತರಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.…
ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಬಲಾಢ್ಯರು ಸಾವಿರಾರು ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಅಂತಹವರ ಪರವಾಗಿ ಇಲ್ಲಿನ ತಹಶೀಲ್ದಾರ್ ನಿಂತಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವರು ಅರಣ್ಯಭೂಮಿ ಒತ್ತುವರಿ ಮಾಡಿಕೊಂಡಿದ್ದು ಅವುಗಳನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಡವ ಒಂದೆಕರೆ ಎರಡೆಕರೆ ಸಾಗುವಳಿ ಮಾಡಿಕೊಂಡಿದ್ದ ರೈತರ ಜಮೀನನ್ನು ತೆರವುಗೊಳಿಸುವಾಗ ಯಾವುದೇ ಅಡ್ಡಿ ಆತಂಕ ಇನ್ಯಾವುದೆ ತಾಂತ್ರಿಕ ದೋಷ ಇರಲಿಲ್ಲ ಈಗ ಬಲಾಢ್ಯ ರಾಜಕಾರಣಿಗಳು ಅತಿಕ್ರಮಿಸಿಕೊಂಡಿರುವ ಜಮೀನುಗಳನ್ನು ಸರ್ವೆ ಮಾಡಲು ಕಂದಾಯ ಇಲಾಖೆಯಲ್ಲಿ ಇಲ್ಲದ ತಾಂತ್ರಿಕ ದೋಷ ಅಡ್ಡಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಂಟಿ ಸರ್ವೆ ಮಾಡದಿದ್ದರೆ ಬೆತ್ತಲೆ ಪ್ರತಿಭಟನೆಮಾಜಿ ಸ್ಪೀಕರ್ ರಮೇಶ್…
ನ್ಯೂಜ್ ಡೆಸ್ಕ್:ಹೌದು ನಿಜ ಕಣ್ರಿ ಯುವಕನೊಬ್ಬನನ್ನು ಅವನ ಗೆಳತಿಯೆ ಕಿಡ್ನಾಪ್ ಮಾಡಿದ ಘಟನೆ ನಡೆದಿದೆ ತಾನು ಪ್ರೀತಿಸುತ್ತಿರುವ ಗೆಳೆಯ ತನ್ನಿಂದ ಎಲ್ಲಿ ಕೈಜಾರುತ್ತಾನೋ ಎಂದು ಪ್ರೇಮಿಯೊಬ್ಬಳು ಸಿನಿಮಾ ಶೈಲಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಕಾರಿನಲ್ಲಿ ಪ್ರಿಯಕರನನ್ನು ಅಪಹರಿಸಿದ್ದಾಳೆ ಈ ಘಟನೆಯಲ್ಲಿ ಅನಿರೀಕ್ಷಿತವಾಗಿ ಪೊಲೀಸರು ಪ್ರವೇಶಿಸಿದಾಗ ಕಥೆ ಅಡ್ದ ತಿರುವು ಪಡೆದುಕೊಂಡು ಪ್ರೇಮಿಯ ಪ್ಲಾನ್ ವಿಫಲವಾಗಿದೆ.ತಿರುಪತಿ ನಗರದಲ್ಲಿ ಲಾಡ್ಜ್ ನಡೆಸುತ್ತಿರುವ ಶ್ರೀನಿವಾಸುಲು ಅಲಿಯಾಸ್ ನಾನಿ (31) ಎಂಬ ಅವಿವಾಹಿತ ಯುವಕನಿಗೆ ಮದನಪಲ್ಲಿಯ ಭಾನು ಎಂಬ ವಿವಾಹಿತೆಯೊಂದಿಗೆ ಪ್ರೇಮಾಂಕುರವಾಗಿದೆ ಈಕೆಯ ಪತಿ ಇತ್ತೀಚೆಗೆ ನಿಧನರಾಗಿದ್ದು ಇಬ್ಬರೂ ಪರಸ್ಪರ ಪರಿಚಯವಾಗಿ ಪ್ರೀತಿ-ಪ್ರೇಮಕ್ಕೆ ತಿರುಗಿತು. ಇದರಿಂದ ಇಬ್ಬರು ಸುಮಾರು 8 ತಿಂಗಳಿಂದ ಆತ್ಮೀಯರಾಗಿದ್ದರು.ಅದರೆ ಏನಾಯಿತೋ ಏನೋ ಕಳೆದ ಮೂರು ತಿಂಗಳಿನಿಂದ ಇಬ್ಬರ ನಡುವೆ ಅಂತರ ಏರ್ಪಟ್ಟಿದೆ ಇಬ್ಬರಿಗೂ ಮಾತಿಲ್ಲ ಕಥೆಯಿಲ್ಲ ಇದು ಭಾನುಗೆ ಕೋಪ ತರಿಸಿದೆ ನಾನಿ ನನ್ನತ್ತ ಗಮನ ಹರಿಸುತ್ತಿಲ್ಲ ಎಂದು ಕೊನೆಗೆ ನಾನಿಯನ್ನು ಅಪಹರಿಸಲು ನಿರ್ಧರಿಸಿ ಇದಕ್ಕಾಗಿ ಮದನಪಲ್ಲಿಯ ಐವರು ಯುವಕರನ್ನು ಜೋತೆ ಮಾಡಿಕೊಂಡು…
ನ್ಯೂಜ್ ಡೆಸ್ಕ್:ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ಚಲಿಸುವ ಆಂಬ್ಯುಲೆನ್ಸ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಪೊಲೀಸರ ಮಾಹಿತಿಯಂತೆ ಘಟನೆ ನವೆಂಬರ್ 25 ರಂದು ಜಿಲ್ಲಾ ಕೇಂದ್ರ ಮೌಗಂಜ್‌ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಹನುಮಾನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೌಗಂಜ್ ಜಿಲ್ಲೆ ಹನುಮಾನ ತಹಸಿಲ್ ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇಬ್ಬರು ವ್ಯಕ್ತಿಗಳು ತನ್ನನ್ನು ಅಪಹರಿಸಿ ಜನನಿ ಎಕ್ಸ್‌ಪ್ರೆಸ್ ಆಂಬ್ಯುಲೆನ್ಸ್‌ಗೆ ಬಲವಂತವಾಗಿ ಹತ್ತಿಸಿ ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ ಇದನ್ನು ‘108- ಆಂಬ್ಯುಲೆನ್ಸ್’ ಎಂದೂ ಕರೆಯುತ್ತಾರೆ. ಜನನಿ ಎಕ್ಸ್‌ಪ್ರೆಸ್ ಆಂಬ್ಯುಲೆನ್ಸ್ ಅನ್ನು ರಾಜ್ಯ ಸರ್ಕಾರವು ಪಿಪಿಪಿ ಮಾದರಿಯಲ್ಲಿ ಮಧ್ಯಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರು, ಅನಾರೋಗ್ಯದ ಶಿಶುಗಳು ಮತ್ತು ಬಿಪಿಎಲ್ ಕುಟುಂಬಗಳಿಗೆ ಅನಾರೋಗ್ಯ ತುರ್ತು ಬಳಸಲು ಒದಗಿಸಿದೆ.ಆರೋಪಿಗಳಾದ ವೀರೇಂದ್ರ ಚತುರ್ವೇದಿ (ಆಂಬ್ಯುಲೆನ್ಸ್ ಚಾಲಕ) ಮತ್ತು ಆತನ ಸ್ನೇಹಿತ ರಾಜೇಶ್ ಕೇವತ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ…
ನ್ಯೂಜ್ ಡೆಸ್ಕ್:ಸಾಮಾನ್ಯವಾಗಿ ಮಕ್ಕಳಿಗೆ ಮದುವೆ ವಯಸ್ಸು ಬಂದಾಗ ಹೆತ್ತವರು ಅಥಾವ ಪೋಷಕರು ಜವಾಬ್ದಾರಿ ತಗೆದುಕೊಂಡು ಒಳ್ಳೆ ಸಂಬಂಧ ನೋಡಿ ಮದುವೆ ಮಾಡಬೇಕು ಎಂದುಕೊಳ್ಳುತ್ತಾರೆ.ತಮ್ಮ ಮಗ ಅಥಾವ ಮಗಳಿಗೆ ಮದುವೆ ಮಾಡಿ ತಮ್ಮ ಜವಾಬ್ದಾರಿಗಳನ್ನು ತಿರಿಸಿಕೊಳ್ಳಲು ಆಲೋಚಿಸುತ್ತಾರೆ. ಮಕ್ಕಳು ಕೇಳುವ ಮೊದಲು ಸರಿಯಾದ ಜೋಡಿ ಹುಡಕಲು ಮಕ್ಕಳ ಅಭಿಪ್ರಾಯಗಳನ್ನು ತೆಗೆದುಕೊಂಡು ಮದುವೆಯ ಸಂಬಂಧಗಳನ್ನು ನೋಡಲು ಪ್ರಾರಂಭಿಸುತ್ತಾರೆ.ಹುಡುಗ ಹುಡುಗಿಯನ್ನು ಇಷ್ಟಪಡದಿದ್ದರೆ ಅಥವಾ ಹುಡುಗಿ ಹುಡುಗನನ್ನು ಇಷ್ಟಪಡದಿದ್ದರೆ ಸಂಬಂಧಗಳು ಸಂಬಂದಗಳು ಮುಂದುವರಿಯದೆ ಅಥಾವ ಕೊಟ್ಟು-ತಗೆದುಕೊಳ್ಳುವ ಒಮ್ಮೊಮ್ಮೆ ಬಗ್ಗೆ ಮದುವೆ ಸಂಬಂದ ಮುರಿದು ಬಿಳುತ್ತವೆ ಇದಕ್ಕೆ ಹುಡುಗನ ಕೆಲಸದ ಬಗ್ಗೆ ಆಸ್ತಿಯ ಬಗ್ಗೆ ಊಹಾಪೊಹಗಳು ಏನೆಲ್ಲಾ ಅಡ್ಡಿ ಆತಂಕದಿಂದ ಮದುವೆಗಳು ನಡೆಯುವುದಿಲ್ಲ ಇದಕ್ಕೆ ಹಲವಾರು ಕಾರಣಗಳು ಇರುತ್ತದೆ, ಆದರೆ ಇಲ್ಲಿನ ಸ್ಟೋರಿಯೇ ಬೆರೆ ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡದೆ ಬರುವಂತ ಮದುವೆ ಸಂಬಂಧವನ್ನು ತಂದೆಯೇ ಹಾಳು ಮಾಡುತ್ತಿದ್ದಾನೆ ಎಂದು ಮಕ್ಕಳೆಲ್ಲ ಕೂಡಿ ತಂದೆ ಕಾಲು ಮುರಿದಿರುವ ಘಟನೆ ಆಂಧ್ರದ ಕರ್ನೂರು ಜಿಲ್ಲೆ ಗೋಣೆಗಂಡ್ಲದಲ್ಲಿ ನಡೆದಿದೆ. ಮಂತರಾಜು(60)…
ಶ್ರೀನಿವಾಸಪುರ:ಕೌಟುಂಬಿಕ ಕಲಹದಿಂದ ಬೆಸೆತ್ತ ಗೃಹಣಿಯುಬ್ಬಳು ಕೃಷಿಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟಣೆ ತಾಲೂಕಿನ ಕಸಬಾ ಹೋಬಳಿ ಕೊಡಿಚೆರುವು ಗ್ರಾಮದಲ್ಲಿ ಇಂದು ನಡೆದಿದೆ.ಮೃತ ಮಹಿಳೆ ಕೊಡಿಚೆರುವು ಗ್ರಾಮದ ವರಲಕ್ಷ್ಮಿ (35) ಎಂದು ಗುರತಿಸಲಾಗಿದೆ.ಮೃತ ಮಹಿಳೆ ತನ್ನ ಸಹೋದರ ಸಂಬಂದಿಯ ಗೃಹ ಉದ್ಯಮದಮಕ್ಕೆ ಬೆನ್ನುಲುಬಾಗಿ ಇದ್ದಳು.ವರಲಕ್ಷ್ಮಿ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ ತನ್ನ ಪತಿ ರವಿ ಹಾಗು ಮಕ್ಕಳೊಂದಿಗೆ ವಾಸವಾಗಿದ್ದಳು ಪತಿ-ಪತ್ನಿ ನಡಿವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತಿತ್ತು ಮಂಗಳವಾರ ತಡ ರಾತ್ರಿ ಪತಿ-ಪತ್ನಿ ನಡುವೆ ಸಣ್ಣ ಮಟ್ಟದಲ್ಲಿ ಜಗಳ ಆಗಿದೆ ತಡರಾತ್ರಿ ಕುಟುಂಬದ ಸದಸ್ಯರು ಕೂಡಿ ಇಬ್ಬರನ್ನು ಸಮಾಧಾನ ಪಡಿಸಿ ಬುದ್ದಿ ಹೇಳಿ ಹೋಗಿದ್ದಾರೆ ಇದಾದ ನಂತರ ಅಂದಾಜು ಮದ್ಯರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಸಹೋದರ ಸಂಬಂದಿ ಹಾಗು ಕುಟುಂಬದ ಸದಸ್ಯರಿಗೆ ವರಲಕ್ಷ್ಮಿ ಫೋನ್ ಮಾಡಿ ಅಪ್ಪಯ್ಯ ಮಕ್ಕಳನ್ನು ಚನ್ನಾಗಿ ನೋಡಿಕೊಳ್ರೋ ಎಂದು ಹೇಳಿ ಮೊಬೈಲ್ ಸ್ವೀಚ್ ಆಫ್ ಮಾಡಿದ್ದಾಳೆ ಕೊರೆವ ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಕುಟುಂಬದ ಸದಸ್ಯರು ಏಕಾಏಕಿ ಬೆವತು ಹೋಗಿದ್ದಾರೆ…
ನ್ಯೂಜ್ ಡೆಸ್ಕ್:ಮಹಾತ್ಮ ಗಾಂಧಿ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಕಾಮಗಾರಿಗಳನ್ನು ಸೇರಿಸುವಂತೆ ಒತ್ತಾಯಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮನವಿ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಕೆಲಸದ ದಿನಗಳನ್ನು 90 ದಿನಗಳಿಂದ 100 ದಿನಗಳಿಗೆ ಹೆಚ್ಚಿಸಬೇಕು, ನರೇಗಾ ಯೋಜನೆಯಲ್ಲಿ ಸ್ಮಶಾನ ನಿರ್ಮಾಣ, ಪಂಚಾಯಿತಿ ಕಟ್ಟಡ ನಿರ್ಮಾಣ,ಧೋಬಿಘಾಟ್, ಆರೋಗ್ಯ ಕೇಂದ್ರಗಳ ನಿರ್ಮಾಣ, ಕುಡಿಯುವ ನೀರಿನ ಕಾಮಗಾರಿಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರೆ ಗ್ರಾಮೀನ ಜನರಿಗೆ ಉಪಯೋಗವಾಗುತ್ತದೆ ಎಂದು ಪವನ್ ವಿವರಿಸಿದ್ದಾರೆ.
ನ್ಯೂಜ್ ಡೆಸ್ಕ್: ಹೆತ್ತ ತಾಯಿಯನ್ನು ಮಗನೇ ಕೊಂದಿದ್ದಾನೆ, ಆಂಧ್ರದ ಅನ್ನಮಯ್ಯ ಜಿಲ್ಲೆ ರಾಯಚೂಟಿ ಮಂಡಲ ಪೆದ್ದಮಂಡೆಂ ಎಸ್‌ಐ ಪಿ.ವಿ.ರಮಣ ಮಂಗಳವಾರ ತಿಳಿಸಿರುವ ಮಾಹಿತಿಯಂತೆ, ಸಿ.ಗೊಲ್ಲಪಲ್ಲಿಯಲ್ಲಿ ವಾಸವಿರುವ ಓಬುಳಮ್ಮ (72) ಅವರು ಮಗ ಓಬುಲೇಸುಗೆ ಪೆನ್ಷನ್ ಹಣ ನೀಡದ ವಿಚಾರವಾಗಿ ಈ ತಿಂಗಳ 24 ರಂದು ತಾಯಿ ಮಗನ ನಡುವೆ ಜಗಳ ಆಗಿದೆ ಈ ಸಂದರ್ಭದಲ್ಲಿ ಮಗ ಓಬುಲೇಸು ತನ್ನ ತಾಯಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಇದರಿಂದ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿ ಬಿದ್ದ ಅಕೆಯನ್ನು ರಾಯಚೋಟಿಯಲ್ಲಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಾದರೂ ಆಕೆಯ ಸ್ಥಿತಿ ಹದಗೆಟ್ಟು ಸೋಮವಾರ ಮಧ್ಯರಾತ್ರಿ ಓಬುಳಮ್ಮ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮಗ ಓಬುಲೀಸನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.