ಶ್ರೀನಿವಾಸಪುರ:ಕೋಲಾರ ಜಿಲ್ಲೆ ಹಾಲು ಒಕ್ಕೂಟದ ನಿರ್ದೇಶಕರಾಗಿ ಶ್ರೀನಿವಾಸಪುರ ಕ್ಷೇತ್ರದಿಂದ ಅಯ್ಕೆಯಾದ ಇಬ್ಬರು ನಿರ್ದೇಶಕರಾದ ಕೆ.ಕೆ.ಮಂಜು ಹಾಗು ಹನುಮೇಶ ಅವರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ ಗೌರವಿಸಿದರು. ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರು ಆವರಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಇಬ್ಬರನ್ನು ಗೌರವಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಕೋಮುಲ್ ಜಿಲ್ಲೆಯ ಜೀವನಾಡಿ
ಈ ಸಂದರ್ಭದಲ್ಲಿ ನೂತನ ನಿರ್ದೇಶಕ ಕಲ್ಲೂರುಮಂಜು ಮಾತನಾಡಿ ಒಕ್ಕೂಟದ ನಿರ್ದೇಶಕರಾಗಿ ಉತ್ತಮವಾಗಿ ಕೆಲಸ ಮಾಡುವುದಾಗಿ ಹೇಳಿದ ಅವರು ಕೋಮುಲ್ ನಮ್ಮ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಿರುವ ರೈತರಿಗೆ ಹೆಚ್ಚಿನ ಅನುಕೂಲಗಳು ಸಿಗುವಂತೆಯೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ನಮ್ಮ ನಾಯಕ ರಮೇಶ್ ಕುಮಾರ್ ಅವರು ನಮ್ಮ ಮೇಲೆ ಇಟ್ಟ ಭರವಸೆ ಉಳಿಸಿಕೊಳ್ಳಲಾಗುವುದು ಎಂದರು.ಸಮಾರಂಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲಆಶೋಕ್,ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಪ್ರಕಾಶ್ ನಿವೃತ್ತ ಶಿಕ್ಷಕ ಗೋವಿಂದರೆಡ್ಡಿ,ವೇಣು,ಹರಿಷ್ ಯಾದವ್ ಅವಲಕುಪ್ಪಗೀರಿಷ್,ನಂದಿನಿಹೋಟೆಲ್ ರಂಜೀತ್, ಮುಂತಾದವರು ಇದ್ದರು.
ಕೋಲಾರ ಜಿಲ್ಲಾ ಹಾಲು ಒಕ್ಕೂಟಕ್ಕೆ ಆಯ್ಕೆಯಾದ ನೂತನ ನಿದೇಶಕರು ಪ್ರತಿ ತಾಲೂಕಿನಿಂದ ಇಬ್ಬರು ನಿದೇಶಕರು ಆಯ್ಕೆಯಾಗಿದ್ದಾರೆ. ವಡಗೂರು ಹರೀಶ್ -jds(ಕೋಲಾರ),ಜಯಸಿಂಹ ಕೃಷ್ಣಪ್ಪ – ಕಾಂಗ್ರೆಸ್(ಕೆಜಿಎಫ್),ಕೆ.ಕೆ.ಮಂಜು – ಕಾಂಗ್ರೆಸ್(ಶ್ರೀನಿವಾಸಪುರ), ಹನುಮೇಶ್ – ಕಾಂಗ್ರೆಸ್(ಶ್ರೀನಿವಾಸಪುರ),ಎಸ್.ಎನ್.ನಾರಾಯಣಸ್ವಾಮಿ (Mla) – ಕಾಂಗ್ರೆಸ್(ಬಂಗಾರಪೇಟೆ),ಕೆವೈ ನಂಜೇಗೌಡ (Mla) – ಕಾಂಗ್ರೆಸ್ (ಅವಿರೋಧ ಆಯ್ಕೆ) ಮಾಲೂರು, ಚಂಚಿಮಲೆ ರಮೇಶ್ – ಕಾಂಗ್ರೆಸ್, ಶ್ರೀನಿವಾಸ್ – ಕಾಂಗ್ರೆಸ್, ಮಹಾಲಕ್ಷ್ಮಿ – ಕಾಂಗ್ರೆಸ್(ಕೋಲಾರ), ಕಾಂತಮ್ಮ – ಕಾಂಗ್ರೆಸ್(ಕೋಲಾರ), ಕಾಡೇನಹಳ್ಳಿ ನಾಗರಾಜ್ -jds(ಮುಳಬಾಗಿಲು), ಸಾಮೇಗೌಡ -jds(ಮುಳಬಾಗಿಲು), ನಾಗರಾಜ್ -jds.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



