ನ್ಯೂಜ್ ಡೆಸ್ಕ್:ಪ್ರಪಂಚ ಪ್ರಖ್ಯಾತ IT ಹಬ್ ಸಿಲಿಕಾನ್ ವ್ಯಾಲಿ ಎಂದು ಖ್ಯಾತಿ ಪಡೆದ ಬೆಂಗಳೂರು ನಗರದಲ್ಲಿ ಸಾವಿರಾರು ದೇವಾಲಯಗಳು ಇದೆ ಸಾವಿರಾರು ವರ್ಷಗಳ ಐತಿಹಾಸಿಕ ದೇವಾಲಯಗಳ ಜೊತೆಗೆ ಇತ್ತೀಚೆಗೆ ನಿರ್ಮಾಣವಾದ ಹಲವಾರು ದೇವಸ್ಥಾನಗಳನ್ನು ಗರ್ಭದಲ್ಲಿ ಅಡಗಿಸಿಕೊಂಡು ಇರುವ ಬೆಂಗಳೂರು ನಗರದಲ್ಲಿ ಮತ್ತೊಂದು ಶ್ರೀ ವೆಂಕಟೇಶ್ವರನ ದೇವಾಲಯ ನಿರ್ಮಾಣಕ್ಕೆ ತಿರುಮಲ ತಿರುಪತಿ ದೇವಾಲಯಂ ಟ್ರಸ್ಟ್(ಟಿಟಿಡಿ)ನಿರ್ಧಾರ ಮಾಡಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅಧ್ಯಕ್ಷತೆಯಲ್ಲಿ ತಿರುಮಲದಲ್ಲಿ ನಡೆದ ಟಿಟಿಡಿ ಟ್ರಸ್ಟಿಗಳಾದ ಮಂಡಳಿಯ ಸದಸ್ಯರು, ಇಒ ಶ್ಯಾಮಲಾ ರಾವ್, ಎಇಒ ವೆಂಕಯ್ಯ ಚೌಧರಿ ಮತ್ತು ಇತರರು ಈ ಸಭೆಯಲ್ಲಿ ಭಾಗವಹಿಸಿ ನಡೆಸಿದ ಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು ಇದರಲ್ಲಿ ಟಿಟಿಡಿ ಟ್ರಸ್ಟಿಗಳ ಮಂಡಳಿ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಕರ್ನಾಟಕ ಸರ್ಕಾರದ ಕೋರಿದಂತೆ ಬೆಂಗಳೂರು ನಗರದಲ್ಲಿ ದೇವಾಲಯ ನಿರ್ಮಾಣಕ್ಕೆ ಅಹ್ವಾನ ಬಂದಿದ್ದು ಬೆಂಗಳೂರಿನ ಮಲ್ಲೇಶ್ವರಂ ವಯ್ಯಾಲಿಕಾವಲ್ ನಲ್ಲಿರುವ ಶ್ರೀವಾರಿ ದೇವಾಲಯ ಚಿಕ್ಕದಾಗಿದ್ದು, ಬೃಹತ್ ದೇವಾಲಯ ನಿರ್ಮಿಸಬೇಕೆಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿನಂತಿಸಿದ್ದು ಟಿಟಿಡಿ ಆಡಳಿತ ಮಂಡಳಿ ದೇವಾಲಯ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದು ಭೂಮಿ ಮಂಜೂರು ಮಾಡಿದ ತಕ್ಷಣ ದೇವಾಲಯದ ನಿರ್ಮಾಣ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ರೇಣುಗುಂಟ ಏರ್ ಪೋರ್ಟ್ ಇನ್ಮುಂದೆ ಶ್ರೀವಾರಿ ಹೆಸರು
ಶ್ರೀ ವೆಂಕಟೇಶ್ವರನ ಪಾದದಡಿಯಲ್ಲಿರುವ ರೇಣಿಗುಂಟ ಅಂತರಾಷ್ಟ್ರೀಯವಿಮಾನ ನಿಲ್ದಾಣಕ್ಕೆ ಶ್ರೀವಾರಿ ಹೆಸರಿಡಲು ಪ್ರಸ್ತಾಪನೆ ಬಂದಿದ್ದು ಇದಕ್ಕೆ ಶ್ರೀವಾರಿ ಹೆಸರಿಡಲು ವಿಮಾನಯಾನ ಕಂಪನಿಗೆ ಪತ್ರ ಬರೆಯಲು ಟಿಟಿಡಿ ನಿರ್ಧರಿಸಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



