ಬೆಂಗಳೂರು:ಆಂಧ್ರದ ಉಪಮುಖ್ಯಮಂತ್ರಿ ಹಾಗು ಖ್ಯಾತ ನಟ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಔನೊಪಚಾರಿಕವಾಗಿ ಮಾತನಾಡಿದ್ದಾರೆ. ಆಂಧ್ರ ಪ್ರದೇಶ ಚುನಾವಣೆ ಗೆಲುವಿನ ಹಾಗೂ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಪವನ್ ಅವರಿಗೆ ಸಿಎಂ ಶುಭಾಶಯ ತಿಳಿಸಿದ್ದಾರೆ.
ಆನೆ ಮಾನವ ಸಂಘರ್ಷದ ಸಭೆ
ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾನವ ಆನೆ ಸಂಘರ್ಷ ನಿರ್ವಹಣೆ ಸಮ್ಮೇಳನದ ಕುರಿತಾಗಿ ಆಂಧ್ರ ಅರಣ್ಯ ಇಲಾಖೆ ಸಚಿವರು ಆಗಿರುವ ಡಿಸಿಎಂ ಪವನ್ ಕಲ್ಯಾಣ್ ಆಗಮಿಸಿದ್ದರು.
ಆಗಸ್ಟ್ 12 ಕ್ಕೆ ಸಮ್ಮೇಳನ
ಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ಆನೆ ಹಾವಳಿ ತಪ್ಪಿಸಲು ಆಗಸ್ಟ್ 12 ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪವನ್ ಕಲ್ಯಾಣ್ ಕರ್ನಾಟಕ ಅರಣ್ಯ ಸಚಿವ ಈಶ್ವರಖಂಡ್ರೆಯೊಂದಿಗೆ ಸೇರಿ ಬಿಡುಗಡೆ ಮಾಡಿದ್ದಾರೆ.ಸಮ್ಮೇಳನದಲ್ಲಿ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಣಕ್ಕೆ ಯಾವ ಯಾವ ದೇಶದಲ್ಲಿ ಯಾವ ಅನುಸರಿಸಿರುವ ಪರಿಹಾರ ಮಾರ್ಗಗಳ ಕುರಿತಾಗಿ ಚಿಂತನ ಮಂಥನ ನಡೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ಕುಮ್ಕಿ ಆನೆ ಕಳುಹಿಸುವಂತೆ ಪವನ್ ಕಲ್ಯಾಣ್ ಮನವಿ
ಆಂಧ್ರ ಡಿಸಿಎಂ, ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಖಾತೆ ನಾನು ನಿಭಾಯಿಸುತ್ತಿದ್ದೇನೆ. ಡಾ. ರಾಜ್ ಕುಮಾರ್ ಅವರ ಗಂಧದಗುಡಿ ಸಿನಿಮಾವನ್ನು ನಾನು ನೋಡಿದ್ದೇನೆ. ಕಳ್ಳಸಾಗಾಣೆಗೆದಾರರಿಂದ ಯಾವ ರೀತಿ ಅರಣ್ಯ ರಕ್ಷಣೆ ಮಾಡುತ್ತಾರೆ ಎಂಬುದು ಆ ಚಿತ್ರದಲ್ಲಿದೆ. ರಿಯಲ್ ಲೈಫ್ ನಲ್ಲೂ ಇದನ್ನ ರಕ್ಷಣೆ ಮಾಡಬೇಕಿದೆ. ಕರ್ನಾಟಕದ ಜೊತೆ ನಮ್ಮರಾಜ್ಯ ಉತ್ತಮ ಸಂಬಂಧ ಹೊಂದಿದೆ. ಇಂದಿನ ಸಭೆಯಲ್ಲಿ ಏಳು ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ರಕ್ತಚಂದನ ರಕ್ಷಣೆ, ಪುಂಡಾನೆ ಸೆರೆಹಿಡಿಯೋದು, ಅರಣ್ಯ ರಕ್ಷಣೆ ಸೇರಿದಂತೆ ಏಳು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.
ಕುಮ್ಕಿ ಆನೆಗಳು(ಪಳಗಿಸಿದ)ಕಾಡು ಆನೆಗಳನ್ನು ಓಡಿಸಲು ಸಹಾಯ ಮಾಡುವುದರಿಂದ, ರಾಜ್ಯದ ಕೆಲವು ಭಾಗಗಳಲ್ಲಿ ಅನಾಹುತವನ್ನು ಉಂಟುಮಾಡುವ ಕಾಡು ಆನೆಗಳನ್ನು ಓಡಿಸಲು ಆಂಧ್ರ ಪ್ರದೇಶಕ್ಕೆ ಕುಮ್ಕಿ ಆನೆಗಳನ್ನು ನೀಡುವಂತೆ ಕರ್ನಾಟಕಕ್ಕೆ ಮನವಿ ಮಾಡಿದ್ದೇವೆ ಎಂದರು.
ಕುವೆಂಪು ಅವರ ಪೂರ್ಣ ಹೆಸರನ್ನು ಉಚ್ಚರಿಸಿ ಅವರ ಬರಗಳನ್ನು ಒದಿಸಿ ತಿಳಿದುಕೊಂಡಿದ್ದು ಅವರ ಆಶಯಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಅವರು ರಚಿಸಿದ ಕವನವನ್ನು ಹೇಳಿದರು.
ಆಂಧ್ರ-ಕರ್ನಾಟಕ ನಡುವಿನ ಸಂಬಂಧ ಹೊಗಳಿದ ಪವನ್
ಕರ್ನಾಟಕಕ್ಕೂ ಆಂಧ್ರಪ್ರದೇಶಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳು ಪ್ರಮುಖವಾದುದು ನನ್ನ ಭಾಷೆ ಬೇರೆ ಆದರೂ ಭಾವನೆಗಳು ಒಂದೇ ಆಗಿದೆ.ಎರಡೂ ಭಾಷೆಯ ಲಿಪಿಗಳ ನಡುವೆ ಸಾಮ್ಯತೆ ಇದೆ. ಎರಡೂ ರಾಜ್ಯಗಳ ಜನರ ನಡುವೆ ಸಮನ್ವಯತೆ, ಸೌಹಾರ್ದತೆ ಸೋದರತ್ವ ಇದೆ ಎಂದರು.
ನಮ್ಮ ಭಾಗದ ಹಲವರು ಉದ್ಯೋಗ – ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎರಡೂ ರಾಜ್ಯಗಳ ಜೊತೆ ವೈವಾಹಿಕ ಸಂಬಂಧಗಳೂ ಇವೆ. ಇದು ಶತ ಶತಮಾನಗಳಿಂದ ನಡೆಯುತ್ತಿದ್ದು. ಆಂಧ್ರ ಮತ್ತು ಕರ್ನಾಟಕದ ನಡುವೆ ಅವಿನಾಭಾವ ಸಂಬಂಧ ಇದೆ ಎಂದರು.ಅರಣ್ಯ ಸಚಿವರ ಜತೆಗಿನ ಚರ್ಚೆ ಬಳಿಕ ಆಗಸ್ಟ್ 12 ರ ಸಮ್ಮೇಳನದಲ್ಲಿಯೂ ಅವರು ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ನೀರು ಸರಬರಾಜು, ಪರಿಸರ ಮತ್ತು ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ.
ನಟ ರಾಜಕಾರಣಿ ಪವನ್ ಕಲ್ಯಾಣ್ ವಿಧಾನಸೌಧಕ್ಕೆ ಬರುವ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ನೊಡಲು ವಿಧಾನಸೌಧ ಸಿಬ್ಬಂದಿ ತಾಮುಂದು ನಾಮುಂದು ತಾಎಂದು ನೂಕುನುಗ್ಗಲು ಏರ್ಪಟ್ಟು ಮುಖ್ಯಮಂತ್ರಿ ಕಚೇರಿಯ ಗಾಜಿನ ದ್ವಾರ ಫೀಸ್ ಪೀಸ್ ಆಗಿದೆ.
ಕೋಲಾರ ಜಿಲ್ಲೆಗೂ ಅನಕೂಲ
ಕೋಲಾರ ಜಿಲ್ಲೆಯ ಬಂಗಾರಪೇಟೆ,ಕೆ.ಜಿಎಫ್, ಮುಳಬಾಗಿಲು ಮಾಲೂರು ತಾಲೂಕುಗಳ ಕರ್ನಾಟಕ-ಆಂಧ್ರ-ತಮಿಳುನಾಡು ಗಡಿ ಭಾಗದಲ್ಲಿ ಆನೆ ಹಾವಳಿ ತಪ್ಪಿಸಲು ಮಾನವ ಸಂಘರ್ಷ ತಡೆಯಲು ಈ ಭೇಟಿ ಅನಕೂಲವಾಗಲಿದೆ ಎನ್ನಲಾಗುತ್ತಿದೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16