ಶ್ರೀನಿವಾಸಪುರ:ಸಾಮಜಿಕ ಜಾಲತಾಣಗಳಲ್ಲಿ ಲವ್ ಪ್ರಕರಣಗಳು ಇತ್ತಿಚಿಗೆ ಹೆಚ್ಚಾಗುತ್ತಿದ್ದು ವಂಚನೆಗೆ ಒಳಗಾಗುತ್ತಿರುವ ಸಂಖ್ಯೆ ಏರುತ್ತಿದೆ ಅಂತಹ instagram ಲವ್ ವಂಚನೆಯಲ್ಲಿ ಶ್ರೀನಿವಾಸಪುರದ ಯುವಕನೊರ್ವ ಮೋಸದ ಬಲೆಗೆ ಸಿಲುಕಿ ಹಣ ಪ್ರೀತಿ ಕಳೆದುಕೊಂಡಿದ್ದಾನೆ.
ಮಾವಿನೂರು ಶ್ರೀನಿವಾಸಪುರದ ದ್ವಾರಸಂದ್ರ ಗ್ರಾಮದ ಯುವಕನಿಗೆ instagram ಮೂಲಕ ಕಾಫಿನಾಡಿನ ಹುಡುಗಿಯ ಮೋಹದ ಬಲೆಗೆ ಬಿದಿದ್ದಾನೆ ಪ್ರೀತಿ ಪ್ರೇಮದ ಮಾತು ಸಲ್ಲಾಪ ಆಗಿದೆ ದಿನಗಟ್ಟಲೆ ಚಾಟಿಂಗ್ ಮಾತು ಮಂಥನ ನಡೆದಿದೆ ಹುಡುಗಿ ಕೇಳಿದ ಮೇಲೆ ಯಾವ ಹುಡುಗ ತಾನೆ ಹಣ ಕೊಡದೆ ಇರ್ತಾನೆ ಹಣವನ್ನು ಕೊಟ್ಟಿದ್ದಾನೆ ನಂಬಿಕೆ ಪ್ರೀತಿ ಜಾಸ್ತಿಯಾಗಿ ಮದುವೆಯಾಗಲೂ ನಿರ್ಧರಿಸಿದ್ದಾರೆ,ಮುಂದೆ ಮುಖಾಮುಖಿ ಭೇಟಿ ಅಗಲು ಯುವಕನಿಕೆ ಕಾತುರ ಹೆಚ್ಚಾಗಿದೆ ಅದಕ್ಕೆ ಹುಡಗಿ ಅವಕಾಶ ನೀಡದೆ ಸಬೂಬು ಹೇಳುತ್ತ ಮುಂದೂಡತ್ತ ಬಂದಿದ್ದಾಳೆ ಇದನ್ನು ವಿರೋಧಿಸಿದ ಯುವಕನ ಮೊಬೈಲ್ ನಂ ಬ್ಲಾಕ್ ಮಾಡಿದ್ದಾಳೆ,ಕಂಗಲಾದ ಯುವಕ ಹುಡಗಿಯನ್ನು ಹುಡುಕುತ್ತ ಕಾಫಿನಾಡು ಚಿಕ್ಕಮಂಗಳೂರು ಜಿಲ್ಲೆಯ ಮೂಡುಗೆರೆಯ ಅಕೆಯ ಗ್ರಾಮಕ್ಕೆ ಹೋಗಿದ್ದಾನೆ ಅಲ್ಲಿ ಆಕೆಯ ಪರಿಸ್ಥಿತಿ ನೋಡಿ ಕಂಗಾಲಾಗಿ ಬೆಚ್ಚಿಬಿದ್ದಿದ್ದಾನೆ ಹುಡಗಿ ಎಂದು ನಂಬಿ ಹೋದ ಪ್ರಿಯಕರನಿಗೆ ಅಲ್ಲಿ ಸಿಕ್ಕಿದ್ದು ಮೂರುಮಕ್ಕಳ ತಾಯಿ instagram ನಲ್ಲಿ ತಾನು ಪ್ರಿತಿಸಿದ್ದು ಮಕ್ಕಳ ತಾಯಿನಾ ಎಂದು ಅಲವತ್ತು ಕೊಂಡಿದ್ದಾನೆ ಕೊನೆಗೆ ಆಕೆಯೆ ನನ್ನ ಲೈಲಾ ಎಂದಿದ್ದಾನೆ ಇದಕ್ಕಾಗಿ ಚಿಕ್ಕಮಂಗಳೂರು ಎಸ್.ಪಿ ಕಛೇರಿಗೂ ಹೋಗಿದ್ದಾನೆ ಆಗಿದ್ದು ಆಗಿಹೋಗಿದೆ ಆಕೆಯನ್ನು ಮದುವೆಯಾಗಿ ಮೂರು ಮಕ್ಕಳನ್ನು ಸಾಕುತ್ತೇನೆ ಎಂದೆಲ್ಲ ಅಲವತ್ತುಕೊಂಡಿದ್ದಾನೆ ಆಗಲಿ ನೋಡೋಣ ಎಂದು ಪೋಲಿಸರು ಸಮಧಾನ ಪಡಿಸಿ ಪಾಗಲ್ ಪ್ರೇಮಿಯನ್ನು ಊರಿಗೆ ವಾಪಸ್ಸು ಕಳಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



