ನ್ಯೂಜ್ ಡೆಸ್ಕ್: ನೇಪಾಳದ ಭೀಕರ ಪ್ರವಾಹದ ಸಂದರ್ಭದಲ್ಲಿ ಮುಖ್ಯ ಶಿಕ್ಷಕನ ಸಮಯಪ್ರಜ್ಞೆಯಿಂದ ಸಾವಿರಾರು ವಿದ್ಯಾರ್ಥಿಗಳ ಪ್ರಾಣ ಉಳಿದಿದೆ.
ನೇಪಾಳದ ಟ್ರಿಶೂಲಿ ಕಣಿವೆಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಸಂದರ್ಭದಲ್ಲಿ ಮುಖ್ಯ ಶಿಕ್ಷಕರೊಬ್ಬರ ಸಮಯೋಚಿತ ನಿರ್ಧಾರದಿಂದ 1,643 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೇಪಾಳದ ನುವಾಕೋಟ್ ಜಿಲ್ಲೆಯ ಬಿದುರ್ನಲ್ಲಿರುವ ತ್ರಿಭುವನ್ ತ್ರಿಶೂಲಿ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ದವಾಡಿ ಅವರು ಎಂದಿನಂತೆ ತರಗತಿ ನಡೆಯುತ್ತಿದ್ದ ವೇಳೆ ಪ್ರವಾಹದ ಅಪಾಯದ ಮಾಹಿತಿ ಪ್ರವಾಹದ ನೀರು ಶಾಲೆಯತ್ತ ಧಾವಿಸುತ್ತಿರುವ ಮಾಹಿತಿ ಸಿಕ್ಕ ಕೂಡಲೆ ಮುಖ್ಯ ಶಿಕ್ಷಕ ರಾಜೇಂದ್ರ ದವಾಡಿ ಕಾರ್ಯಪ್ರವೃತ್ತರಾಗಿದ್ದಾರೆ ತಕ್ಷಣ Non-teaching staff ಅನ್ನು ಕರೆದು ಶಾಲೆ ಬೆಲ್ ಹೋಡೆದು ಶಾಲೆಯನ್ನು ಖಾಲಿ ಮಾಡಿಸಿ ವಿದ್ಯಾರ್ಥಿಗಳನ್ನು ಎತ್ತರದ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಶಾಲೆಯ ಅಕೌಂಟೆಂಟ್ಗೆ ರಾಸುವಾದಲ್ಲಿದ್ದ ಸಂಬಂಧಿಕರಿಂದ ಕರೆ ಬಂದಿದ್ದು, ಪ್ರವಾಹದ ನೀರು ಭಾರೀ ಪ್ರಮಾಣದಲ್ಲಿ ಕೆಳಭಾಗದತ್ತ ಹರಿಯುತ್ತಿರುವುದಾಗಿ ತಿಳಿದುಬಂದಿತ್ತು.
ಮಾಹಿತಿ ಬಂದಾಗ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎನ್ನುವುದಾದರೆ ಅಂತಹ ಸಾವು-ಬದುಕಿನ ನಡುವಿನ ನೂಕುನುಗ್ಗಲಿನಲ್ಲಿ ಒಬ್ಬ ಶಿಕ್ಷಕ ತೋರಿದ ಅದಮ್ಯ ಧೈರ್ಯ ಮತ್ತು ಕರ್ತವ್ಯ ಪ್ರಜ್ಞೆ ಬರೋಬ್ಬರಿ ಕ್ಷಣಗಳನ್ನು ತಡೆಯಲು ಸಾಧ್ಯವಾಗದ ಪರಿಸ್ಥಿಯಲ್ಲಿ ಮುಖ್ಯ ಶಿಕ್ಷಕರು ತಕ್ಷಣ ಶಾಲೆಯ ಗಂಟೆ ಬಾರಿಸಿ ತರಗತಿಗಳನ್ನು ನಿಲ್ಲಿಸಿದರು. ಶಿಕ್ಷಕರು ಮತ್ತು ಸಿಬ್ಬಂದಿಯ ಸಹಕಾರದೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕರೆದೊಯ್ದು ಸಮೀಪದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿದರು.
ವರದಿಗಳ ಪ್ರಕಾರ, ಎಚ್ಚರಿಕೆ ದೊರೆತ ಬಳಿಕ ಸುರಕ್ಷಿತ ಸ್ಥಳಕ್ಕೆ ತೆರಳಲು ಸುಮಾರು 14 ನಿಮಿಷಗಳಷ್ಟೇ ಸಮಯ ದೊರಕಿತ್ತು. ಶಾಲೆಯಲ್ಲಿದ್ದ ಸುಮಾರು 900 ವಿದ್ಯಾರ್ಥಿಗಳು ಹಾಗೂ 16 ಸಿಬ್ಬಂದಿ ಸದಸ್ಯರು ಈ ತ್ವರಿತ ಸ್ಥಳಾಂತರದಿಂದ ಸುರಕ್ಷಿತವಾಗಿ ಪಾರಾದರು. ಶಾಲೆಗೆ ಬರುತ್ತಿದ್ದ ಬಸ್ಗಳ ಚಾಲಕರಿಗೂ ತಕ್ಷಣ ಕರೆ ಮಾಡಿ ಶಾಲೆಯತ್ತ ಬರದಂತೆ ಸೂಚಿಸಲಾಗಿತ್ತು.
ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸುರಕ್ಷಿತ ಪ್ರದೇಶ ತಲುಪಿದ ಕೆಲವೇ ಕ್ಷಣಗಳಲ್ಲಿ ಭಾರೀ ಪ್ರಮಾಣದ ನೀರು, ಕೆಸರು, ಬಂಡೆಗಳು ಹಾಗೂ ಅವಶೇಷಗಳು ಧಾವಿಸಿ ಶಾಲಾ ಕಟ್ಟಡವನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋದವು. ಮುಖ್ಯ ಶಿಕ್ಷಕ ದವಾಡಿ ಹಿಂದೆ ತಾವು ವಿದ್ಯಾರ್ಥಿಯಾಗಿ ಓದಿದ್ದ ಮತ್ತು ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅದೇ ಶಾಲೆಯ ಕಟ್ಟಡವನ್ನು ಪ್ರವಾಹದಲ್ಲಿ ಕಳೆದುಕೊಂಡರು. ಇಬ್ಬರು ಸಿಬ್ಬಂದಿ ಸದಸ್ಯರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ನೇಪಾಳದ ಈ ದುರಂತದಲ್ಲಿ ಹಲವಾರು ಗ್ರಾಮಗಳು, ಸೇತುವೆಗಳು ಹಾಗೂ ಶಾಲೆಗಳು ಹಾನಿಗೊಳಗಾಗಿವೆ. ಕನಿಷ್ಠ 69 ಶಾಲೆಗಳು ಹಾನಿಗೊಳಗಾಗಿದ್ದು, ಸುಮಾರು 19,000 ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.
ತ್ರಿಶೂಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ದವಾಡಿ (47) ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯಿಂದ ಇಡೀ ಜಗತ್ತೇ ಹೆಮ್ಮೆಪಡುವಂತಹ ನಾಯಕನಾಗಿ ಹೊರಹೊಮ್ಮಿದ್ದಾರೆ. ರಾಜೇಂದ್ರ ದವಾಡಿ ಅವರ ನಿರ್ಧಾರವನ್ನು ಸ್ಥಳೀಯರು ಧೈರ್ಯ ಮತ್ತು ನಿಜವಾದ ನಾಯಕತ್ವದ ಮಾದರಿ ಎಂದು ಕೊಂಡಾಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಸ್ವಾರ್ಥ ಅಥವಾ ವೈಯಕ್ತಿಕ ಪ್ರತಿಷ್ಠೆಗಿಂತ ಜನರ ಸುರಕ್ಷತೆಗೆ ಆದ್ಯತೆ ನೀಡಿ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದೇ ನಿಜವಾದ ನಾಯಕತ್ವ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎನ್ನುತ್ತಾರೆ.
Trending
- ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ರಣರಂಗವಾದ ಪುಂಗನೂರು!
- ಬೆಂಗಳೂರು ಪಬ್ ನಲ್ಲಿ ಪೋಲಿಸರೊಂದಿಗೆ ಗಲಾಟೆ ಆಂಧ್ರ IAS ಅಧಿಕಾರಿ ವಿರುದ್ಧ ಪ್ರಕರಣ!
- ಚಿಂತಾಮಣಿ ಪಾಲಿಟೆಕ್ನಿಕ್ ಮೈದಾನದಲ್ಲಿ ದಸರಾ ಉತ್ಸವದ ವೈಭವ!
- ಶ್ರೀನಿವಾಸಪುರ:ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಸಿ.ಟಿ. ರವಿ ಚಾಲನೆ
- ಚಿಂತಾಮಣಿ:ಲಾಂಗ್ ನಿಂದ ಕೊಚ್ಚಿ ವಿವಾಹಿತ ಮಹಿಳೆ ಬರ್ಬರ ಹತ್ಯೆ !
- ಹಣ್ಣಿನ ಹೆಸರಿನಿಂದ ಆರಂಭವಾಗುವ ಅಪರೂಪದ ಗ್ರಾಮ ‘ಪಣಸಮಾಕಲಹಳ್ಳಿ’!
- ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಬಿಜೆಪಿಗೆ ಸೇರುತ್ತಾರ?
- ಪುಲಗೂರುಕೋಟೆಯಲ್ಲಿ ಖತರ್ನಾಕ್ ಕಳ್ಳರ ಹಾವಳಿ!
Saturday, October 17



