ನ್ಯೂಜ್ ಡೆಸ್ಕ್:ಮಳೆ ಕೊರತೆ, ಕಡಿಮೆ ಬಿತ್ತನೆ ಕುಂಠಿತಗೊಂಡ ಪರಿಣಾಮ ರಾಜ್ಯದಲ್ಲಿ ಅಗತ್ಯ ಆಹಾರ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದೀಗ ಈರುಳ್ಳಿ ಬೆಲೆ ಗ್ರಾಹಕರಿಗೆ ಮತ್ತಷ್ಟು ಬಿಸಿ ಮುಟ್ಟಿಸಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ದರ ತೀವ್ರವಾಗಿ ಕೆಲವು ವಾರಗಳ ಹಿಂದೆ ಕೆ.ಜಿ.ಗೆ ₹20–30ರಷ್ಟಿದ್ದ ಈರುಳ್ಳಿ ದರ ಇದೀಗ ₹40ರಿಂದ ₹52ರ ವರೆಗೆ ಏರಿಕೆಯಾಗಿದೆ. ಮಳೆ ಕೊರತೆಯಿಂದ ಕರ್ನಾಟಕದಲ್ಲಿ ಈರುಳ್ಳಿ ಬಿತ್ತನೆ ಕುಂಠಿತಗೊಂಡಿದ್ದು, ನೆರೆಯ ಮಹಾರಾಷ್ಟ್ರದಲ್ಲೂ ಬೆಳೆ ಹಾನಿಯಾಗಿರುವುದು ಸಕ್ಕರೆ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು ಹೊಸ ಬೆಳೆ ಮಾರುಕಟ್ಟೆಗೆ ಬರುವುದರಲ್ಲಿ ವಿಳಂಬವಾಗುವ ಸಾಧ್ಯತೆಯೂ ಇದೆ.
ಕಳೆದ ಕೆಲವು ವಾರಗಳಿಂದ ಈರುಳ್ಳಿ ಸಗಟು ದರದಲ್ಲಿ ಸರಾಸರಿ ಪ್ರತಿ ಕೆಜಿಗೆ 15 ರೂಪಾಯಿ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಈ ಹಿಂದೆ 20 ರಿಂದ 30 ರೂಪಾಯಿ ಇದ್ದ ಒಂದು ಕೆಜಿ ಈರುಳ್ಳಿ ಬೆಲೆ, ಇದೀಗ 40 ರಿಂದ 50 ರೂಪಾಯಿ ತಲುಪಿದೆ. ಈರುಳ್ಳಿ ಬೆಲೆ ಏರಿಕೆಯ ಬೆನ್ನಲ್ಲೇ ಸಕ್ಕರೆ ದರದಲ್ಲೂ ಹೆಚ್ಚಳ ಕಂಡು ಬಂದಿದ್ದು ದೇಶದ ಸರಾಸರಿ ಚಿಲ್ಲರೆ ಸಕ್ಕರೆ ಬೆಲೆ ₹48 ಇದ್ದದ್ದು ಈಗ ₹70 ಕ್ಕೆ ಏರಿಕೆಯಾಗಿದೆ. ಕರ್ನಾಟಕದ ಸಗಟು ಮಾರುಕಟ್ಟೆಯಲ್ಲೂ ಸಕ್ಕರೆ ಕಡಿಮೆ ಉತ್ಪಾದನೆ ಹಾಗು ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ ಹಾಗೂ ಹವಾಮಾನದಿಂದ ಬೆಳೆ ಹಾನಿಯಾಗಿರುವುದು ಸಕ್ಕರೆ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಮತ್ತೊಂದೆಡೆ, ಎಥೆನಾಲ್ ಉತ್ಪಾದನೆ ಹಾಗೂ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಕಳಪೆ ಇಳುವರಿಯಿಂದ ಪೂರೈಕೆ ಕುಸಿದಿದೆ ಎಂದು ತಿಳಿಸಿದ್ದಾರೆ.
ಈರುಳ್ಳಿ ಮತ್ತು ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದ್ದು, ಬೆಲೆ ನಿಯಂತ್ರಣಕ್ಕೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಬಾರಿ ಬಿತ್ತನೆ ಪ್ರಮಾಣವೂ ಕಡಿಮೆಯಾಗಿರುವುದರಿಂದ ಮುಂದಿನ ವರ್ಷದ ಬೆಳೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಮಳೆ ಕೊರತೆ ಮತ್ತು ಪೂರೈಕೆ ಸಮಸ್ಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಈರುಳ್ಳಿ, ಸಕ್ಕರೆ ಅಲ್ಲದೆ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡುಬರುತ್ತದೆ ಇದು ಗ್ರಾಹಕರಿಗೆ ಮತ್ತಷ್ಟು ಹೊರೆ ಯಾಗುವ ಆತಂಕ ಕಾಡತ್ತಿದೆ.ಈರುಳ್ಳಿ ಮತ್ತು ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದ್ದು, ಬೆಲೆ ನಿಯಂತ್ರಣಕ್ಕೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
Trending
- ಜನಸಾಮನ್ಯರ ಕಣ್ಣೀರಿಗೆ ಕಾರಣವಾಗುತ್ತಿದೆ ಈರುಳ್ಳಿ ಸಕ್ಕರೆ ಬೆಲೆ!
- ಯಲ್ದೂರು ಆಸ್ಪತ್ರೆಗೆ ಆಂಬುಲೆನ್ಸ್: ಆರೋಗ್ಯ ಸಚಿವ ಖಾದರ್ ಭರವಸೆ
- ಗಂಗರೇಕಾಲುವೆ ಬಸವೇಶ್ವರ, ವೀರಾಂಜನೇಯ ದೇವಾಲಯ ಜೀರ್ಣೋದ್ಧಾರ
- ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳ ಸಂಪರ್ಕ ಹೊಂದಿದ್ದ AC ಮೆಕ್ಯಾನಿಕ್ ಬಂಧನ!
- ಶ್ರಾವಣ ಶನಿವಾರ ವೆಂಕಟೇಶಾಯ ಮಂಗಳಂ ಎಂದು ಪಡಿ ಬೇಡುವುದು ಯಾಕೆ ಏನು?
- ಬುದ್ದಿ ಹೇಳಿದ ಪ್ರಿನ್ಸಿಪಾಲ್ ರನ್ನ ಹತ್ಯೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು!
- ಲಕ್ಷ್ಮೀಸಾಗರ:ಅಧಿಕಾರಿ ನಿರ್ಲಕ್ಷ್ಯ ಮೂಲಸೌಕರ್ಯ ಇಲ್ಲ ಗ್ರಾಮಸ್ಥರ ಆಕ್ರೋಶ!
- ಶ್ರೀನಿವಾಸಪುರ:ದೇವರಾಜ ಅರಸು ಜಯಂತಿ ಆಚರಣೆಗೆ ನಿರ್ಲಕ್ಷ್ಯ ಆರೋಪ!
Thursday, August 27



