ಯಲ್ದೂರು: ಶ್ರೀನಿವಾಸಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಯಲ್ದೂರು ಸರ್ಕಾರಿ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಆರೋಗ್ಯ ಸಚಿವ ಯು.ಟಿ.ಖಾದರ್ ,ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಾಮಲಿಂಗಾರೆಡ್ಡಿ ಸೇರಿದಂತೆ ಬೆಂಗಳೂರಿನಲ್ಲಿ ವಿವಿಧ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಗಂಗಾಧರ್ ನೇತೃತ್ವದಲ್ಲಿ ಯುವಕರು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿದ್ದ ಯುವಕರು ಸುಮಾರು 40,000ಕ್ಕೂ ಅಧಿಕ ಜನಸಂಖ್ಯೆ ಇರುವ ಯಲ್ದೂರು ಹೋಬಳಿ ಕೇಂದ್ರದಲ್ಲಿ ಇರುವ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ ಸೌಲಭ್ಯ ಅತ್ಯಗತ್ಯವಾಗಿದೆ. ತುರ್ತು ಆರೋಗ್ಯ ಸೇವೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ತ್ವರಿತ ಚಿಕಿತ್ಸೆ ದೊರೆಯಲು ಆಂಬುಲೆನ್ಸ್ ಸೇವೆ ಪ್ರಮುಖವಾಗಿದೆ ಎಂಬುದಾಗಿ ಮನವರಿಕೆ ಮಾಡಿದರು ಇದಕ್ಕೆ ಸ್ಪಂದಿಸಿದ ಸಚಿವ ಆದಷ್ಟು ಬೇಗ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿ, ಮುಖ್ಯಮಂತ್ರಿಗಳ ಕಚೇರಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿ ಪ್ರಮುಖರಿಗೆ ಆಂಬುಲೆನ್ಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಮನವಿ ಪತ್ರ ನೀಡಿರುವುದಾಗಿ ಗಂಗಾಧರ್ ತಿಳಿಸಿದ್ದಾರೆ. ಯಲ್ದೂರು ಹೋಬಳಿಯ ಜನರ ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದಿರುತ್ತಾರೆ
Trending
- ಯಲ್ದೂರು ಆಸ್ಪತ್ರೆಗೆ ಆಂಬುಲೆನ್ಸ್: ಆರೋಗ್ಯ ಸಚಿವ ಖಾದರ್ ಭರವಸೆ
- ಗಂಗರೇಕಾಲುವೆ ಬಸವೇಶ್ವರ, ವೀರಾಂಜನೇಯ ದೇವಾಲಯ ಜೀರ್ಣೋದ್ಧಾರ
- ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳ ಸಂಪರ್ಕ ಹೊಂದಿದ್ದ AC ಮೆಕ್ಯಾನಿಕ್ ಬಂಧನ!
- ಶ್ರಾವಣ ಶನಿವಾರ ವೆಂಕಟೇಶಾಯ ಮಂಗಳಂ ಎಂದು ಪಡಿ ಬೇಡುವುದು ಯಾಕೆ ಏನು?
- ಬುದ್ದಿ ಹೇಳಿದ ಪ್ರಿನ್ಸಿಪಾಲ್ ರನ್ನ ಹತ್ಯೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು!
- ಲಕ್ಷ್ಮೀಸಾಗರ:ಅಧಿಕಾರಿ ನಿರ್ಲಕ್ಷ್ಯ ಮೂಲಸೌಕರ್ಯ ಇಲ್ಲ ಗ್ರಾಮಸ್ಥರ ಆಕ್ರೋಶ!
- ಶ್ರೀನಿವಾಸಪುರ:ದೇವರಾಜ ಅರಸು ಜಯಂತಿ ಆಚರಣೆಗೆ ನಿರ್ಲಕ್ಷ್ಯ ಆರೋಪ!
- ಬಿಜೆಪಿ ಯುವಮೊರ್ಚಾ ಅಧ್ಯಕ್ಷ,ಸೂರ್ಯಗೆ ಗೇಟ್ ಪಾಸ್ ಯಾಕೆ?
Wednesday, August 26



