Inspirational story:ಬಡತನವನ್ನು ಎದುರಿಸಲು ಶಿಕ್ಷಣ ಪ್ರಬಲ ಅಸ್ತ್ರ ಎಂಬ ಚಿಂತಕರ ಮಾತನ್ನು ಸಾಬಿತುಪಡಿಸಿದ ಕಾರ್ಮಿಕ ಮಹಿಳೆಯೊಬ್ಬಳು ಪಿಎಚ್ಡಿ ಸಾಧಿಸಿದ್ದಾಳೆ ಸಾಧನೆಗೆ ಬಡತನ ವಯಸ್ಸು ಮತ್ತು ಕೌಟುಂಬಿಕ ಸಮಸ್ಯಗಳು ಅಡ್ಡಿಯಲ್ಲ, ದೃಢ ಸಂಕಲ್ಪವೇ ದೊಡ್ಡ ಶಕ್ತಿ ಪರಿಶ್ರಮ ಓದಬೇಕೆಂಬ ಆಸೆ ಛಲ ಇದ್ದರೆ, ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಕೂಲಿ ಕಾರ್ಮಿಕ ಮಹಿಳೆ ಸಾಬೀತುಪಡಿಸಿದ್ದಾಳೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರೈತ ಕಾರ್ಮಿಕ ಕುಟುಂಬದ ಮಹಿಳೆ. ದಿನಗೂಲಿ ಕೆಲಸ ಮಾಡುತ್ತಲೇ ಶಿಕ್ಷಣವನ್ನು ಪೊರೈಸಿ, ಅನಂತಪುರದಲ್ಲಿರುವ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಸಾಧಿಸಿದ್ದಾಳೆ.ಆಕೆ ಸಾಧನೆಯ ಜೀವನಗಾಥೆ ಪ್ರೇರಣಾದಾಯಕ ಕಥೆಯಾಗಿ ದೇಶದ ಗಮನ ಸೆಳೆದಿದೆ.


ನ್ಯೂಜ್ ಡೆಸ್ಕ್: ಅನಂತಪುರ ಜಿಲ್ಲೆಯ ನಾಗುಲ ಗುಡ್ಡಂ ಎಂಬ ಸಣ್ಣ ಗ್ರಾಮದ ಸಣ್ಣ ಹುಲ್ಲಿನ ಗುಡಿಸಲಿನಲ್ಲಿ ನಿವಾಸಿ ಸಕ್ಯೇ ಭಾರತಿ ಬಾಲ್ಯದಿಂದಲೂ ಓದಬೇಕು ಎಂಬ ಹಂಬಲ ಉನ್ನತ ಹುದ್ದೆ ಪಡೆಯಬೇಕು ಎಂಬ ಆಶಾ ಭಾವನೆ ಹೊಂದಿದ್ದಳು. ಆದರೆ ಆಕೆಯ ಪೋಷಕರಿಗೆ ಮೂರು ಮಂದಿ ಹೆಣ್ಮಕ್ಕಳು ಮೂವರನ್ನು ಸಾಕುವುದು ವಿದ್ಯಾಭ್ಯಾಸ ಕೊಡಿಸುವುದು ಕಷ್ಟಕರವಾಗುತ್ತದೆ ಇದು ಸಾಧ್ಯವಿಲ್ಲ ಎಂದು ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮುಗಿಸಿದ್ದ ಹಿರಿಯ ಮಗಳು ಭಾರತಿಯನ್ನು ಅವಳ ಸೋದರ ಮಾವಶಿವ ಪ್ರಸಾದ್ಗೆ ಕೊಟ್ಟು ಮದುವೆ ಮಾಡುತ್ತಾರೆ ಆದರೂ ಏನನ್ನಾದರೂ ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ತನ್ನಲ್ಲಿದ್ದ ಓದುವ ಹಠವನ್ನು ತನ್ನ ಗಂಡನೊಂದಿಗೆ ಹಂಚಿಕೊಳ್ಳುತ್ತಾಳೆ ಗಂಡನ ಸಹಕಾರ ಪಡೆಯುತ್ತಾಳೆ ಆದರೂ ಗ್ರಾಮೀಣ ಕುಟುಂಬ ಸಂಸಾರ ಜಂಜಾಟ ಇದರ ನಡುವೆ ಮಗು ಮನೆ ಕೆಲಸ ಎಲ್ಲವನ್ನು ಮೆಟ್ಟಿ ನಿಂತು ಕೂಲಿ ಕೆಲಸ ಮಾಡಿಕೊಂಡೆ, ಅನಂತಪುರದ SSBN ಕಾಲೇಜಿನಲ್ಲಿ ಪದವಿ ಮತ್ತು ಪಿಜಿ ಮುಗಿಸುತ್ತಾಳೆ.
ಆಕೆ ಕೆಮಿಸ್ಟ್ರಿ ವಿಷಯದಲ್ಲಿ Dr. Sake Bharathi ಆಗಿರುವ ಆಕೆ ಡಾಕ್ಟರೇಟ್ ಪೂರೈಸಿದ್ದು ಯಾವುದೇ ಕೋಚಿಂಗ್ ಇಲ್ಲದೆ, ಯಾವುದೇ ಹೆಚ್ಚುವರಿ ಕ್ಲಾಸ್ಗಳಿಗೆ ಹೋಗದೇ ಭಾರತಿ ಪಿಎಚ್ಡಿ ಪೂರೈಸಿರುವುದು ದೊಡ್ಡ ಸಾಧನೆ ಎನ್ನಬಹುದು. ಬಹುತೇಕರ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಕೆಮಿಸ್ಟ್ರಿ ವಿಷಯದಲ್ಲಿ ಈಕೆ ಪಿಎಚ್ಡಿ ಪದವಿ ಪಡೆದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ತನ್ನ ಸಾಧನೆ ಬಗ್ಗೆ ಸಂಭ್ರಮವಿದ್ದರೂ, ಅದಕ್ಕಿಂತ ಹೆಚ್ಚಾಗಿ ಭಾರತಿ ಮುಖದಲ್ಲಿ ಕಂಡಿದ್ದು ಇಲ್ಲಿಯವರೆಗೆ ಆಕೆ ಪಟ್ಟಿದ್ದ ಕಷ್ಟ.
ಕಾಲೇಜಿಗೆ ಹೋಗಲು,ಅಕೆ ಪ್ರತಿ ದಿನ ತನ್ನ ಹಳ್ಳಿಯಿಂದ ಕನಿಷ್ಠ 28 ಕಿಲೋಮೀಟರ್ ಪ್ರಯಾಣಿಸುತ್ತ ಸಾರಿಗೆ ವೆಚ್ಚ ಉಳಿಸಲು ತನ್ನ ಹಳ್ಳಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಗಾರ್ಲದಿನ್ನೆಗೆ ನಡೆದುಕೊಂಡು ಹೋಗಿ, ನಂತರ ಅಲ್ಲಿಂದ ಬಸ್ ಹತ್ತುತ್ತಿದಳಂತೆ, ಭಾರತಿ ಮತ್ತು ಶಿವಪ್ರಸಾದ್ ಗೆ ಗಾಯತ್ರಿ ಎಂಬ 11 ವರ್ಷದ ಮಗಳಿದ್ದಾಳೆ.ಇದಕ್ಕಾಗಿ ಆಕೆ ಕುಟುಂಬ ಪೋಷಣೆಗೆ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಓದಿಕೊಂಡು ತನ್ನ ಪಿಜಿಯನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದಾರೆ. ಅವಳ ಶಿಕ್ಷಕರು ಪಿಎಚ್ಡಿ ಮಾಡಲು ಪ್ರೋತ್ಸಾಹಿಸಿದಾಗ, ಅವಳು ಪಿಎಚ್ಡಿ ಮಾಡುವ ಬಯಕೆಯಿಂದ ತುಂಬಿದ್ದಳು. ಅವಳು ಪ್ರಯತ್ನಿಸಿದರೆ, ಪ್ರಾಧ್ಯಾಪಕಿ ಡಾ. ಎಂಸಿಎಸ್ ಶುಭ ಅವರೊಂದಿಗೆ ‘ಬೈನರಿ ಮಿಶ್ರಣಗಳು’ ವಿಷಯದ ಕುರಿತು ಸಂಶೋಧನೆ ಮಾಡಲು ಅವಕಾಶ ಸಿಕ್ಕಿತು. ಇದಕ್ಕಾಗಿ ಆಕೆ ವಿದ್ಯಾರ್ಥಿ ವೇತನವು ಪಡೆದದ್ದು ಶೈಕ್ಷಣಿಕ ಕರ್ಚಿಗೆ ಸಹಕಾರಿ ಆಗಿದಿಯಂತೆ.



