ಶ್ರೀನಿವಾಸಪುರ:ಹೆದ್ದಾರಿಗಳಲ್ಲಿ ಸಂಚರಿಸುವುದೆ ಅಪಾಯವೇನೋ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಘಾತಗಳ ವಿಷಯ ಕೇಳಿದ್ರೆ ನೋಡಿದ್ರೆ ಹೆದ್ದಾರಿಗಳು ಅದೆಷ್ಟು ಕಂಟಕ ಅನ್ನೋದು ಅರಿವಿಗೆ ಬರುತ್ತದೆ.
ಹೆದ್ದಾರಿಗಳು ಅಪಘಾತಗಳ ಕೂಪಗಳಾಗಿವೆ. ಒಂದಲ್ಲ ಒಂದು ಕಾರಣಕ್ಕೆ ಆಕ್ಸಿಡೆಂಟ್ಗಳು ಆಗುತ್ತಲೆ ಇದೆ ಹೆದ್ದಾರಿಗಳಲ್ಲಿ ಆಗುತ್ತಿರುವಂಥ ಅಪಘಾತಗಳಿಗೆ ಬ್ರೇಕ್ ಹಾಕಲು ಹೈವೆಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುವುದನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಮನುಷ್ಯನ ಜೀವಕ್ಕಿಂತ ಆರ್ಥಿಕ ಅಥವಾ ಆಡಳಿತಾತ್ಮಕ ಲಾಭಗಳು ದೊಡ್ಡದಲ್ಲ ಎಂದು ನ್ಯಾಯಾಲಯ, ದೇಶಾದ್ಯಂತ ಅನ್ವಯವಾಗುವಂತೆ ಹೆದ್ದಾರಿ ಸುರಕ್ಷತೆಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇನ್ಮುಂದೆ ಹೈವೇ ಪಕ್ಕದಲ್ಲಿ ಬೇಕಾಬಿಟ್ಟಿ ಹೋಟೆಲ್,ಢಾಬಾಗಳು ನಡೆಸಲು ಅನುಮತಿ ನೀಡಬಾರದು ಭಾರಿ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಬಾರದು ಎಂದು ಸೂಚಿಸಿದೆ.
ಶ್ರೀನಿವಾಸಪುರ-ಚಿಂತಾಮಣಿ ಹೆದ್ದಾರಿಯಲ್ಲಿ ಸುಗಮ ಸಂಚಾರ ಇಲ್ಲ
ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ಹೆದ್ದಾರಿ National Highway 69 (NH 69) ತಮಿಳುನಾಡು ಆಂಧ್ರ ಹಾಗು ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳ ನಡುವೆ ಕೊಂಡಿಯಂತಿದೆ. ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ NH 69 ಚಿಂತಾಮಣಿ ವೃತ್ತದಿಂದ ಖಾಸಗಿ ಮಾವಿನ ಮಂಡಿಗಳು ಇರುವಂತ ಜ್ಯೂಸ್ ಫ್ಯಾಕ್ಟರಿ ವರಿಗೂ ಹೆದ್ದಾರಿಯಲ್ಲಿ ಸಮಸ್ಯಗಳದೆ ಕಾರುಬಾರು,ರೈಲ್ವೆ ಸೇತುವೆವರಿಗೂ ಹೆದ್ದಾರಿಯ ಎರಡು ಬದಿಯಲ್ಲಿ ಪುಟ್ಫಾತ್ ಅತಿಕ್ರಮಿಸಿಕೊಂಡು ದಾರಿ ಉದ್ದಕ್ಕೂ ವಾಹನ ರೀಪೇರಿಗಳ ಗ್ಯಾರೆಜುಗಳು ಕಾಣ ಸಿಗುತ್ತದೆ, ಇದರಿಂದಾಚೆಗೆ ಮಾವಿನ ಸುಗ್ಗಿಯ ಸಂದರ್ಭದಲ್ಲಿ ಹೆದ್ದಾರಿ ಉದ್ದಕ್ಕೂ ಹೆದ್ದಾರಿ ಎರಡು ಬದಿಯಲ್ಲೂ ಉತ್ತರ ಭಾರತದ ಕಡೆಯಿಂದ ಬಂದಿರುವ ಬಾರಿ ಗಾತ್ರದ ಲಾರಿಗಳು ಸಾಲು ಸಾಲುಸಾಲಾಗಿ ನಿಲ್ಲಿಸಿರುತ್ತಾರೆ.ಇದೊಂದು ಅಪಾಯಕಾರಿ ಪಾರ್ಕಿಂಗ್ ಎನ್ನುತ್ತಾರೆ ಈ ಇಕ್ಕಾಟದ ರಸ್ತೆಯಲ್ಲೆ ಹೆದ್ದಾರಿ ವಾಹನ ಸಂಚಾರ ದ್ವಿಚಕ್ರ ವಾಹನ ಸವವಾರರು ಸಾಗಬೇಕಿದೆ.ಹೆದ್ದಾರಿಗೆ ಸರ್ವಿಸ್ ರಸ್ತೆ ಇಲ್ಲದ ಕಾರಣ ಸುಗಮ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.ಇವುಗಳ ಮದ್ಯೆ ಪುಟ್ಫಾತ್ ಅತಿಕ್ರಮಿಸಿಕೊಂಡು ತಾತ್ಕಾಲಿಕ ಶೇಡ್ ಹಾಕಿಕೊಂಡು ಟ್ರಾನ್ಸಪೋರ್ಟ್ ಆಫಿಸ್ ಗಳು ಟೀ ಹೋಟೆಲ್ ಗಳು ನಡುವೆ ಬಾರ್ ಸಹ ನಡೆತ್ತಿದೆ.ಇದರಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ ಇಲ್ಲಿ ಹೆದ್ದಾರಿ ಸುರಕ್ಷತೆಯ ಯಾವುದೆ ನಿಯಮ ಇಲ್ಲಿ ಪಾಲನೆ ಆಗುತ್ತಿಲ್ಲ,ಜನರು ಭಾರೀ ತೊಂದರೆ ಅನುಭವಿಸುವಂತ ಪರಿಸ್ಥಿತಿ ಇದ್ದು ಅಪಘಾತದ ಭೀತಿ ಜನರನ್ನು ಕಂಗೆಡಿಸಿದಿಯಂತೆ.
ಹೈವೆ 69 ರಸ್ತೆಯಲ್ಲಿ ಅಪಯಕಾರಿ ಪಾರ್ಕಿಂಗ್ ಕಣ್ಣಿಗೆ ಕಾಣಿಸುತ್ತ ಇದ್ದರು ಸ್ಥಳೀಯ ಪೋಲಿಸ್ ಇಲಾಖೆಯಾಗಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ಸ್ಥಳೀಯ ಆಡಳಿತವೂ ಸಹ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪ ವ್ಯಕ್ತವಾಗಿದೆ.
Trending
- ಶ್ರಾವಣ ಶನಿವಾರ ವೆಂಕಟೇಶಾಯ ಮಂಗಳಂ ಎಂದು ಪಡಿ ಬೇಡುವುದು ಯಾಕೆ ಏನು?
- ಬುದ್ದಿ ಹೇಳಿದ ಪ್ರಿನ್ಸಿಪಾಲ್ ರನ್ನ ಹತ್ಯೆ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು!
- ಲಕ್ಷ್ಮೀಸಾಗರ:ಅಧಿಕಾರಿ ನಿರ್ಲಕ್ಷ್ಯ ಮೂಲಸೌಕರ್ಯ ಇಲ್ಲ ಗ್ರಾಮಸ್ಥರ ಆಕ್ರೋಶ!
- ಶ್ರೀನಿವಾಸಪುರ:ದೇವರಾಜ ಅರಸು ಜಯಂತಿ ಆಚರಣೆಗೆ ನಿರ್ಲಕ್ಷ್ಯ ಆರೋಪ!
- ಬಿಜೆಪಿ ಯುವಮೊರ್ಚಾ ಅಧ್ಯಕ್ಷ,ಸೂರ್ಯಗೆ ಗೇಟ್ ಪಾಸ್ ಯಾಕೆ?
- ಚಿಂತಾಮಣಿ:ಅಜಾದ್ ಚೌಕ ಯುರೋಪಿಯನ್ ಶೈಲಿ ಶಿಲ್ಪ ಕಲಾ ವೈಭವ!
- ಶ್ರೀನಿವಾಸಪುರ:ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು ವೆಂಕಟಶಿವಾರೆಡ್ಡಿ!
- ಪೋಲಿಸ್ ಮೇಲೆ ಹಲ್ಲೆ ಆರೋಪ:ಕೈಕೋಳ ಹಾಕಿ ಮೆರವಣಿಗೆ!
Sunday, August 23



