- ಅಗ್ರಿಗೋಲ್ಡ್ ಪ್ರಕರಣ
- ಮೂವರು ಸದಸ್ಯರ ಸಮಿತಿ
- ರಚಿಸುವಂತೆ ಸಿಎಂ ಆದೇಶ
ನ್ಯೂಜ್ ಡೆಸ್ಕ್:ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸಬೇಕೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು ಗುರುವಾರ ಸಿಎಂ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ
ಅಗ್ರಿಗೋಲ್ಡ್ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮೂವರು ಸದಸ್ಯರ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ. ಎಂಟು ರಾಜ್ಯಗಳಲ್ಲಿ 19 ಲಕ್ಷ ಸಂತ್ರಸ್ತರಿದ್ದು,ಆಂಧ್ರಪ್ರದೇಶದಲ್ಲಿ 11 ಲಕ್ಷ ಸಂತ್ರಸ್ತರಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಸಂತ್ರಸ್ತರ ಹಣ ದುರುಪಯೋಗ ಪಡಿಸಿಕೊಂಡವರಲ್ಲಿ ಹಿಂದಿನ ವೈಎಸ್ಆರ್ಸಿಪಿ ಸರ್ಕಾರದಲ್ಲಿದ್ದ ಕೆಲವು ಪ್ರಮುಖ ಅಧಿಕಾರಿಗಳೂ ಪಾಲುದಾರರಾಗಿದ್ದಾರೆ ಅದಕ್ಕಾಗಿಯೇ ಅವರು ಈ ಪ್ರಕರಣದ ಕುರಿತು ಮೂವರು ಸದಸ್ಯರ ಸಮಿತಿಯನ್ನು ರಚಿಸಲು ಆದೇಶಿಸಿದ್ದಾರೆ.ಅಗ್ರಿಗೋಲ್ಡ್ನಲ್ಲಿ ಹೂಡಿಕೆ ಮಾಡುವ ಮೂಲಕ ವಂಚನೆಗೊಳಗಾದ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಸಿಎಂ ಚಂದ್ರಬಾಬು ಸ್ಪಷ್ಟಪಡಿಸಿದ್ದಾರೆ.



