ಮದನಪಲ್ಲಿ:ಮದನಪಲ್ಲಿ ತಂಬಳ್ಳಪಲ್ಲೆ, ಪುಂಗನೂರು ಮತ್ತು ಪೀಲೇರು ವಿಧಾನಸಭಾ ಕ್ಷೇತ್ರಗಳಗೊಂಡ ಮದನಪಲ್ಲಿ ಜಿಲ್ಲೆಯಾಗಿ ಆಂಧ್ರ ಸರ್ಕಾರ ಘೋಷಿಸಿದೆ.ಆಂಧ್ರಪ್ರದೇಶದ ಜಿಲ್ಲಾ ಪುನರ್ ವಿಭಜನೆ ವಿಧಾನಸಭಾ ಉಪಸಮಿತಿ ನೀಡಿದ ವರದಿ ಆಧಾರದಂತೆ ಅಲ್ಲಿನ ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಸರ್ಕಾರ ನೂತನ ಜಿಲ್ಲೆಯಾಗಿ ಮದನಪಲ್ಲಿಯನ್ನು 27 ಜಿಲ್ಲೆಯಾಗಿ ಪ್ರಕಟಿಸಿದೆ.

ಮದನಪಲ್ಲಿ ಜಿಲ್ಲೆಯಲ್ಲಿ.ಮದನಪಲ್ಲಿ, ನಿಮ್ಮನಪಲ್ಲಿ, ರಾಮಸಮುದ್ರ, ತಂಬಳ್ಳಪಲ್ಲೆ, ಮುಲಕಲ ಚೆರುವು, ಪೆದ್ಯಮಂಡ್ಯಂ, ಕುರಬಲಕೋಟ, ಪೆದ್ದತಿಪ್ಪಸಮುದ್ರಂ, ಬಿ.ಕೊತಕೋಟ, ಚೌಡೆಪಲ್ಲಿ, ಪುಂಗನೂರು, ಸೋಮಲ, ಪೀಲೇರು, ಗುರ್ರಮಕೊಂಡ, ಕಲಕಡ,ಸದುಂ,ಕೆವಿಪಲ್ಲಿ, ವಾಲ್ಮೀಕಿ ಪುರಂ,ಕಿರಿಕಿರಿ,ಪುಲಿಚರ್ಲ;ರೊಂಪಿಚರ್ಲ, ಕಂಭಂವಾರಿಪಲ್ಲಿ, ಸೇರಿದಂತೆ ಒಟ್ಟು 21 ಮಂಡಲ ಕೇಂದ್ರಗಳನ್ನು ಹೊಂದಿದೆ.ಒಟ್ಟು 11.05 ಲಕ್ಷ ಜನಸಂಖ್ಯೆ ಇರುತ್ತದೆ. ನೂತನ ಮದನಪಲ್ಲಿ ಜಿಲ್ಲೆಗೆ ಡಿ.ಕೊತ್ತಕೋಟ ಭಾಗದಲ್ಲಿ ಶ್ರೀನಿವಾಸಪುರ ಹಾಗೂ ಚಿಂತಾಮಣಿ ಎರಡು ತಾಲೂಕಗಳು ಗಡಿ ಹಂಚಿಕೊಂಡಿದ್ದರೆ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಶ್ರೀನಿವಾಸಪುರ ತಾಲ್ಲೂಕು ಗಡಿ ಬರುತ್ತದೆ.ರಾಮಸಮುದ್ರಂ ಮಂಡಲ ಕೇಂದ್ರಕ್ಕೆ ಒಂದೆಡೆ ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕು ಗಡಿ ಇದೆ,ಪುಂಗನೂರು ಮಂಡಲ ಭಾಗದಲ್ಲಿ ಮುಳಬಾಗಲು ತಾಲೂಕು ಗಡಿ ಹಂಚಿಕೊಂಡಿದೆ.



