ಕರ್ನಾಟಕದ ಗಡಿಗೆ ಹೊಂದಿಕೊಂಡ ರಾಜ್ಯಗಳ ಜೊತೆ ಗಡಿ, ನೀರು, ಭಾಷೆ, ರಸ್ತೆ ಪ್ರದೇಶ ಇತ್ಯಾದಿ ಕಾರಣಗಳಿಗಾಗಿ ಗಡಿಗಳಲ್ಲಿ ನಾನಾ ರೀತಿಯಲ್ಲಿ ಸಮಸ್ಯೆ ಇದೆ ಆದರೆ ವಿಭಜಿತ ಕೋಲಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಮದನಪಲ್ಲಿ ನಗರ ಬಗ್ಗೆ ಗಡಿಯೊಳಗಿನ ಜನರ ನಡುವೆ ವ್ಯವಹಾರಿಕವಾಗಿ ಸಾಮಾಜಿಕವಾಗಿ ಬಂದುತ್ವ ಹಾಗು ಭಾಷ ಸೌಹಾರ್ದತೆಯಿಂದ ಕೂಡಿದೆ ಎನ್ನಬಹುದು ವಿಭಜಿತ ಕೋಲಾರ ಜಿಲ್ಲೆಯ ಜನರಿಗೆ ಗಡಿಯಾಚಗಿನ ಜನರೊಂದಿಗೆ ವಿಶೇಷ ಆಪ್ಯಾಯತೆ ಅಲ್ಲಿಂದ ಇಲ್ಲಿ ಬಂದು ಬದುಕುಕೊಂಡಿರುವರುವಂತವರು ಅಲ್ಲಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕೂತುಹಲ!
ಹೀಗಾಗಿ ಮದನಪಲ್ಲಿ ಕುರಿತಾಗಿ ಅಲ್ಲಿನ ರಾಜಕೀಯ ಬೆಳವಣಿಗೆ ಕುರಿತು ವಿಶೇಷ ಗಮನಿಸುತ್ತಾರೆ ಅದಕ್ಕೆಂದೆ ಮೊನ್ನೆಯೊಬ್ಬರು www.vcsnewz.com ಬಳಿ ಮದನಪಲ್ಲಿ ಜಿಲ್ಲೆಯಾಗುವ ಕುರಿತು ವಿದ್ಯಮಾನ್ಯಗಳ ಕುರಿತಾಗಿ ಪ್ರಸ್ತಾಪಿಸಿ ಏನಾಯಿತು ಎಂದಿದ್ದರು,ಅದಕ್ಕಾಗಿ ಲೇಖನ
ನ್ಯೂಜ್ ಡೆಸ್ಕ್:ಆಂಧ್ರದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚಂದ್ರಬಾಬುನಾಯ್ಡು ಮದನಪಲ್ಲಿಯನ್ನು ಜಿಲ್ಲೆ ಮಾಡುವ ಭರವಸೆ ನೀಡಿದ್ದರೂ,ಈಗ ಆಂಧ್ರದಲ್ಲಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿದೆ ಅಲ್ಲಿನ ಹಿಂದಿನ ವೈಸಿಪಿ ಸರ್ಕಾರ ಅವೈಜ್ಞಾನಿಕವಾಗಿ ಜಿಲ್ಲಾ ಕೇಂದ್ರಗಳನ್ನು ರಚಿಸಿದ್ದು ಪುನರ್ವಿಂಗಡಣೆಯನ್ನು ಸರಿಪಡಿಸಲು ಸಮ್ಮಿಶ್ರ ಸರ್ಕಾರ ಆದೇಶಿಸಿದಿಯಂತೆ ಈಗಿನ ಸರ್ಕಾರ ಜಿಲ್ಲಾ ಕೇಂದ್ರಗಳನ್ನು ನಿರ್ಮಾಣ ಮಾಡುವ ಸಂಬಂದ ಜನಾಭಿಪ್ರಾಯ ಸಂಗ್ರಹಿಸಲು ಸಚಿವ ಸಂಪುಟ ಉಪಸಮಿತಿ ರಚಿಸಿತ್ತು ಅದರಂತೆ ಉಪಸಮಿತಿ ನೀಡಿರುವ ವರದಿಯಲ್ಲಿ ಮದನಪಲ್ಲಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಪ್ರಸ್ತಾಪನೆ ಸಲ್ಲಿದೆ.
ಆದರೆ ಮದನಪಲ್ಲಿ ಜಿಲ್ಲೆ ಮಾಡುವ ವಿಚಾರದಲ್ಲಿ ಅಲ್ಲಿನ ಮೈತ್ರಿ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ ಎನ್ನುವ ಮಾತು ಕೇಳಿಬರುತ್ತಿದೆ.ಮದನಪಲ್ಲಿ ಜಿಲ್ಲೆ ರಚನೆಯಾದರೆ ರಾಜಕೀಯ ಲಾಭ ಮತ್ತು ನಷ್ಟಗಳೇನು ಎಂಬುದನ್ನು ಟಿಡಿಪಿ ಮೈತ್ರಿ ಕೂಟದ ಮುಖಂಡರ ನಡುವೆ ಲೆಕ್ಕಚಾರಗಳು ನಡೆಯುತ್ತಿವೆ ಎನ್ನಲಾಗುತ್ತಿದ್ದು ಈ ವಿಚಾರದಲ್ಲಿ ಆಂಧ್ರ ಸಿಎಂ ಚಂದ್ರಬಾಬುನಾಯ್ಡುದು ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತ ಎನ್ನುತ್ತಾರೆ.
ಏನಿದು ಗೊಂದಲ?
ಮದನಪಲ್ಲಿ ತಂಬಾಳಪಲ್ಲಿ ಪೀಲೇರು ಪುಂಗನೂರು ವಿಧಾನಸಭಾ ಕ್ಷೇತ್ರಗಳು ಮೊದಲಿನಿಂದಲೂ ಚಿತ್ತೂರು ಜಿಲ್ಲೆಯಲ್ಲೆ ಇತ್ತು ಹಿಂದಿನ ವೈಸಿಪಿ ಸರ್ಕಾರ ಜಿಲ್ಲಾ ಕೇಂದ್ರಗಳನ್ನು ಪುನರ್ವಿಂಗಡಣೆ ಮಾಡಿದಾಗ ಮದನಪಲ್ಲಿ ತಂಬಾಳಪಲ್ಲಿ ಪೀಲೇರು ವಿಧಾನಸಭಾ ಕ್ಷೇತ್ರಗಳನ್ನು ನೂತನ ಜಿಲ್ಲೆ ಅನ್ನಮಯ್ಯ ಜಿಲ್ಲೆಗೆ ಸೇರ್ಪಡೆ ಮಾಡಿ ಉಳಿದಂತೆ ಪುಂಗನೂರು ಕ್ಷೇತ್ರವನ್ನು ಚಿತ್ತೂರು ಜಿಲ್ಲೆಯಲ್ಲಿ ಉಳಿಸಿದ್ದರು.
ಈಗ ಜಿಲ್ಲಾ ಪುನಃ ಪುನರ್ವಿಂಗಡಣೆ ಮುನ್ನೆಲೆಗೆ ಬಂದಿರುವ ಹಿನ್ನಲೆಯಲ್ಲಿ ಮದನಪಲ್ಲಿ ತಂಬಾಳಪಲ್ಲಿ ಪೀಲೇರು ಪುಂಗನೂರು ವಿಧಾನಸಭಾ ಕ್ಷೇತ್ರಗಳ 26 ಮಂಡಲಗಳ ಅತ್ಯಂತ ಚಿಕ್ಕ ಜಿಲ್ಲೆಯಾಗಿ ಮದನಪಲ್ಲಿ ಜಿಲ್ಲೆಯನ್ನು ರೂಪಿಸಲಾಗುತ್ತದೆ ಸಂಪೂರ್ಣ ಪ್ರಕ್ರಿಯೆ ಎರಡು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಆದರೆ ರಾಜಕೀಯ ವಲಯದಲ್ಲಿ ಪುಂಗನೂರು ವಿಧಾನಸಭಾ ಕ್ಷೇತ್ರವನ್ನು ಸೇರಿಸಿಕೊಂಡು ನೂತನವಾಗಿ ಮದನಪಲ್ಲಿ ಜಿಲ್ಲೆ ರಚಿಸಬೇಕ ಎಂಬ ಹಗ್ಗಾ ಜಗ್ಗಾಟದಲ್ಲಿ ಆಂಧ್ರದ ಮೈತ್ರಿ ಸರ್ಕಾರ ಮೀನ ಮೇಷ ಎಣಿಸುತ್ತಿದೆ


ರಾಜಕೀಯ ವಲಯದ ಮಾತೇನು?
ಸಂಸದೀಯ ಕ್ಷೇತ್ರಗಳ ಪ್ರಕಾರ ಜಿಲ್ಲೆಗಳನ್ನು ವಿಂಗಡಿಸಿದ ವೈಸಿಪಿ, ರಾಜಂಪೇಟೆ ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಪುಂಗನೂರು ಕ್ಷೇತ್ರವನ್ನು ಚಿತ್ತೂರು ಜಿಲ್ಲೆಯ ಪ್ರಭಾವಿ ರಾಜಕಾರಣಿ ಪೆದ್ದಿರೆಡ್ಡಿರಾಮಚಂದ್ರಾರೆಡ್ಡಿ ಅವರಿಗಾಗಿ ಚಿತ್ತೂರು ಜಿಲ್ಲೆಯಲ್ಲಿಯೇ ಇರಿಸಿತ್ತು ಎನ್ನುವ ಮಾತು ಕೇಳಿಬಂದಿತ್ತು. ಪೆದ್ದಿರೆಡ್ಡಿಯನ್ನು ರಾಜಕೀಯವಾಗಿ ವಿರೋಧಿಸಿ ಎದರು ಹಾಕಿಕೊಳ್ಳಲು ಹಾಲಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿ ಕೂಟದ ಅಧಿಕಾರಸ್ಥ ರಾಜಕಾರಣಿಗಳಾಗಲಿ ಮುಖಂಡರಾಗಲಿ ಯಾರು ತಯಾರಿಲ್ಲ ಹಾಗಾಗಿ ಪುಂಗನೂರು ಕ್ಷೇತ್ರವನ್ನು ಮದನಪಲ್ಲಿಗೆ ಸೇರಿಸುವ ಕುರಿತಾಗಿ ಎಲ್ಲಾ ನಿರ್ಧಾರಗಳು ಸಿಎಂ ಚಂದ್ರಬಾಬುನಾಯ್ಡು ಅವರೆ ಅಖೈರು ಮಾಡಬೇಕಂತೆ.



