ನ್ಯೂಜ್ ಡೆಸ್ಕ್:ರಿಲ್ಸ್ ಮಾಡಿ ಅದನ್ನು Instagram ನಲ್ಲಿ ಪೋಸ್ಟ್ ಮಾಡಲು ಹುಚ್ಚಿಗೆ ಬಿದ್ದ ಯುವಕನೊಬ್ಬ ಜಲಪಾತದಲ್ಲಿ ನೈಜತೆ ತೋರಿಸುವ ಆತುರುದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಬಿದ್ದು ಸಾವನಪ್ಪಿರುವ ಘಟನೆ ಆಂಧ್ರದ ಪಲಮನೇರು ಸಮೀಪ ಇರುವಂತ ಕಲ್ಯಾಣರೆವು ಜಲಪಾತದಲ್ಲಿ ನಡೆದಿದೆ.
ಮೃತ ಯುವಕನನ್ನು ಪಲಮನೇರು ಚಿಕನ್ ಅಂಗಡಿಯ ನೌಕರ ಯೂನಸ್ (24) ಎಂದು ಗುರುತಿಸಲಾಗಿದೆ.ಕಳೆದ ಐದಾರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಕಲ್ಯಾಣರೆವು ಜಲಪಾತಕ್ಕೆ ಹೋಗಿದ್ದ ಅಲ್ಲಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ನೀರು ದುಮ್ಮಿಕ್ಕುವುದನ್ನು ನೈಜವಾಗಿ ತೋರಿಸಲು ರೀಲ್ಸ್ ಮಾಡಲು ಮಾಡಲು ಹೋಗಿ ಆಯಾ ತಪ್ಪಿ ಜಲಪಾತದಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ,ಅವನ ಕಿರುಚಾಟ ಕೇಳಿ ಅವನ ಸ್ನೇಹಿತರು ಅವನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ ಸ್ನೇಹಿತರ ಮುಂದೆಯೆ ಯುವಕ ನೀರಿನ ರಭಸದಲ್ಲಿ ಕೊಚ್ಚಿಹೋಗಿದ್ದಾನೆ ಇದನ್ನು ನೊಡುತ್ತಿದ್ದ ಸ್ನೇಹಿತರು ಹಿಂದೆ ಸರಿದಿದ್ದಾರೆ.
ಇತ್ತಿಚಿಗೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಮುಳಬಾಗಿಲಿನ ನಂಗಲಿ ಸುತ್ತಮುತ್ತಲಿನಿಂದ ಹರಿಯುವ ಕೌಂಡಿನ್ಯ ನದಿ ನೀರಿನ ಹರಿವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಕಲ್ಯಾಣರೆವು ಜಲಪಾತದಲ್ಲಿ ಪ್ರಸ್ತುತ ನೀರಿನ ಹರಿವು ಜೋರಾಗಿದೆ.
ಮೃತ ಯೂನಸ್ ತುಂಬಾ ಉತ್ಸುಕನಾಗಿ ನೀರಿಗೆ ಹಾರುವ ಮೊದಲು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಆದರೆ ಹಾರಿದ ಕೆಲವೇ ಕ್ಷಣಗಳಲ್ಲಿ, ಹರಿಯುವ ನೀರು ಆಪೋಷನ ತಗೆದುಕೊಂಡಿದೆ ಮೇಲಕ್ಕೆ ಏರಲು ಪ್ರಯತ್ನಿಸಿದನಾದರು ನೀರಿನ ಹರಿವು ಜೋರಾಗಿದ್ದ ಕಾರಣ ಕೊಚ್ಚಿ ಹೋಗಿದ್ದಾನೆ.ಘಟನೆ ನಡೆದು ಸುಮಾರು ಐದಾರು ದಿನ ಕಳೆದರು ಮೃತ ಯುವಕನ ಶವ ಸಿಕ್ಕಿಲ್ಲ ಎನ್ನಲಾಗುತ್ತಿದೆ
ಎಲ್ಲಿದೆ ಕಲ್ಯಾಣರೆವು ಜಲಪಾತ?
ಕಲ್ಯಾಣರೆವು ಜಲಪಾತ ಆಂಧ್ರದ ಗಡಿಯಾಚಗಿನ ಪಲಮನೇರು ಪಟ್ಟಣಕ್ಕೆ 15 km ದೂರದಲ್ಲಿ ಇದ್ದರೆ ಮುಳಬಾಗಿಲಿಗೆ ಸುಮಾರು 50 km ದೂರದಲ್ಲಿದೆ ಇದಕ್ಕೆ ಕರ್ನಾಟಕದ ಕುರುಡುಮಲೆ ಬಳಿ ಹುಟ್ಟುವ ಕೌಂಡಿನ್ಯ ನದಿ (ಪಾಲಾರ್ ನದಿಯ ಉಪನದಿ) ಮಳೆಯಾದರೆ ಹರಿಯುವ ಕೌಂಡಿನ್ಯ ನದಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹರಿಯುತ್ತದೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



