ಸಿನಿ ಡೆಸ್ಕ್:ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಹೊಸ ಸಿನಿಮಾ ‘ಕಾಕಾ’ ಚಿತ್ರದ ನಾಯಕ ಪಾತ್ರಧಾರಿ ಹೆಸರು “ಕದಿರಿ ಕಾಳಿದಾಸು”ಅಭಿಮಾನಿಗಳು ಸಾಕಷ್ಟು ನೀರಿಕ್ಷೆಗಳನ್ನು ಇಟ್ಟುಕೊಂಡಿರುವ ಸಿನಿಮಾ ಆಗಿದ್ದು
ಬಾಬಿ ನಿರ್ದೇಶನದ ಮತ್ತು ಕೆವಿಎನ್ ನಿರ್ಮಾಣದ ಚಿರಂಜೀವಿ ಅವರ ಚಿತ್ರದ ಹೆಸರು ಕಾಕಾ. ಈ ಚಿತ್ರಕ್ಕೆ ಎಸ್. ಎಸ್. ಥಮನ್ ಸಂಗೀತ ಸಂಯೋಜಿಸಿದ್ದು ಮುಂದಿನ ವರ್ಷ ಜನವರಿಯ ಪೊಂಗಲ್ಗೆ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕಾಗಿ ಚಿರಂಜೀವಿ ಪಾತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಟೀಸರ್ನಲ್ಲಿ, ಚಿರಂಜೀವಿ ಮಧ್ಯವಯಸ್ಕನಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಸೀಗಡಿ ಸಾಗಣೆ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದಾರೆ.
ಚಿರಂಜೀವಿ ಪಾತ್ರದ ಹೆಸರು”ಕದಿರಿ ಕಾಳಿದಾಸು” ಕಾಕಾ ಚಿತ್ರದ ಕಥೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.ಚಿರಂಜೀವಿ ಈ ಹಿಂದೆ ಬಾಬಿ ನಿರ್ದೇಶನದ ವಾಲ್ತೇರು ವೀರಯ್ಯ ಎಂಬ ಚಿತ್ರದಲ್ಲಿ ನಟಿಸಿದ್ದು ಸಂಕ್ರಾಂತಿಯಂದು ಬಿಡುಗಡೆಯಾದ ಈ ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು ಈ ಸಂದರ್ಭದಲ್ಲಿ, ಬಾಬಿ ಮತ್ತು ಚಿರಂಜೀವಿ ಕಾಂಬೊ ಮೇಲೆ ಭಾರಿ ನಿರೀಕ್ಷೆಗಳಿವೆ. ಹಿಂದೆ ಚಿರಂಜೀವಿ ನಟಿಸಿದ ಹಲವು ಚಿತ್ರಗಳು ಸಂಕ್ರಾಂತಿಯ ಸಂದರ್ಭದಲ್ಲಿ ಇಂಡಸ್ಟ್ರಿ ಹಿಟ್ ಆಗಿವೆ. ವಾಲ್ತೇರು ವೀರಯ್ಯ ನಿರ್ಮಾಪಕರಿಗೆ,ವಿತರಕರಿಗೆ ಹಾಗು ಪ್ರದರ್ಶಕರಿಗೆ ಭಾರಿ ಲಾಭ ತಂದುಕೊಟ್ಟಿತು.
ಪಾತ್ರದ ಹೆಸರು ಬಹಿರಂಗಪಡಿಸಿದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ #ಕದಿರಿ ಕಾಳಿದಾಸು ಎಂಬ ಹ್ಯಾಶ್ಟ್ಯಾಗ್ ವ್ಯಾಪಕವಾಗಿ ಟ್ರೆಂಡಿಂಗ್ ಆಗುತ್ತಿದೆ. ಕದಿರಿ ಪ್ರದೇಶದಲ್ಲಿ ಉಗ್ರ ನರಸಿಂಹ ಪ್ರಚಲಿತ ಕಾಕಾ ಚಿತ್ರದಲ್ಲೂ ಚಿರಂಜೀವಿ ಅವರ ಪಾತ್ರವೂ ಉಗ್ರ ನರಸಿಂಹ ರೀತಿಯಲ್ಲಿ ಇರಬಹುದಾಗಿರುತ್ತದೆ ಎಂದು ಮೆಗಾಸ್ಟಾರ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಮಾಡುತ್ತಿದ್ದಾರೆ. ವಾಲ್ತೇರು ವೀರಯ್ಯ ಚಿತ್ರದಲ್ಲಿ ಚಿರಂಜೀವಿ ಸಂಪೂರ್ಣವಾಗಿ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು.ಉತ್ತಮ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಪ್ರೇಕ್ಷಕರನ್ನು ರಂಜಿಸುವುದು ನನ್ನ ಜವಾಬ್ದಾರಿ ಎಂದಿರುವ ಚಿರಂಜಿವಿ ಕಾಕಾ ಚಿತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಇದಕ್ಕಾಗಿ ಒಂದು ಗಂಟೆ ಕಾಲ ಕಟ್ಟುನಿಟ್ಟಾಗಿ ವ್ಯಾಯಾಮ ಮಾಡುವುದರೊಂದಿಗೆ ಮೇಕಪ್ ಮುಗಿಸಿ ಬೆಳಿಗ್ಗೆ 8 ಗಂಟೆಗೆ ಹೋತ್ತಿಗೆ ಕೋಕಾಪೇಟ್ನಲ್ಲಿರುವ ಶೂಟಿಂಗ್ ಸೆಟ್ಗಳನ್ನು ತಲುಪುತ್ತಿರುವುದಾಗಿ ಚಿರಂಜೀವಿ ಸ್ವತಃ ತಮ್ಮ ಪಾತ್ರದ ಬಗ್ಗೆ ಹೈದರಾಬಾದ್ನ ಹೋಟೆಲ್ನಲ್ಲಿ ಮೆಗಾ ಯೂತ್ ಫೋರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ
Trending
- ಚಿರಂಜೀವಿ”ಕಾಕಾ”ಸಿನಿಮಾ ಪಾತ್ರದ ಹೆಸರು”ಕದರಿ ಕಾಳಿದಾಸು”!
- ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ ಡ್ರೋನ್ ಟೆಸ್ಟಿಂಗ್ ಹಬ್!
- ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ಅದ್ದೂರಿ ಅಮೃತ ಮಹೋತ್ಸವ ಆಚರಣೆ!
- ಸೆ26 ರಿಂದ ದೇಶಾದ್ಯಂತ 5 ದಿನಗಳ ಕಾಲ ಬ್ಯಾಂಕ್ ಶಾಖ ಸೇವೆ ಇರಲ್ಲ!
- ತಾಡಿಗೋಳು ಕ್ರಾಸ್ ರಸ್ತೆ ಮಾರ್ಗಸೂಚಿ ಇಲ್ಲ ಬೆಳಕು ಇಲ್ಲದ ಕತ್ತಲೇಯ ಜಂಕ್ಷನ್!
- ಶ್ರೀನಿವಾಸಪುರ:ಯಲ್ದೂರು ಇತಿಹಾಸದ ಕುಂಟೆಗೆ ಚರಂಡಿ ನೀರು: ಗಬ್ಬು ನಾರುತ್ತಿದೆ ಊರು!
- ಶ್ರೀನಿವಾಸಪುರ: ಸರ್ಕಾರಿ ಕಚೇರಿಗಳ ಆವರಣವೇ ಕಾರ್ಗತ್ತಲು: ಸರ್ಕಾರಿ ವ್ಯವಸ್ಥೆ ಇದೇನಾ?
- ನಾಯಿ ಕಾಟ ತಡೆಯಿರಿ:ಕಮಿಷನರ್ ಟೇಬಲ್ ಮೇಲೆ ನಾಯಿ ಬಿಟ್ಟು ಆಕ್ರೋಶ!
Thursday, September 24



