ನ್ಯೂಜ್ ಡೆಸ್ಕ್: ಬಾಲಿವುಡ್ನ ಭಾಯಿಜಾನ್ ಖ್ಯಾತಿಯ ಸಲ್ಮಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ ಅದು ಕೇವಲ ಬಿಜೆಪಿಯೊಂದಿಗೆ ಅಲ್ಲದೆ, ಕಾಂಗ್ರೆಸ್, ಎನ್ಸಿಪಿ ಹಾಗೂ ಶಿವಸೇನೆಯ ಪ್ರಭಾವಿ ನಾಯಕರೊಂದಿಗೂ ನಿಕಟ ಒಡನಾಟ ಹೊಂದಿದ್ದಾರೆ. ಅದರಂತೆ, ಈ ಹಿಂದೆ ತಮ್ಮ ಆಪ್ತ ಸ್ನೇಹಿತರು ಚುನಾವಣೆಗೆ ಸ್ಪರ್ಧಿಸಿದಾಗ ಅವರ ಪರವಾಗಿ ಪ್ರಚಾರ ಮಾಡಿದ್ದಾರೆಯೇ ಹೊರತು, ಎಂದಿಗೂ ಯಾವುದೇ ಪಕ್ಷದ ಬಾವುಟ ಹಿಡಿದು ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಿಲ್ಲ. ಆದರೆ, ಈಗ ಸಲ್ಮಾನ್ ಖಾನ್ ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಜೋರಾಗಿದೆ. ವ್ಯಾಪಕ ಪ್ರಚಾರದಲ್ಲಿ ಇದೆ.
ಕಮಲದ ಕೈ ಹಿಡಿಯುತ್ತಾರಾ ಭಾಯಿಜಾನ್?
ಸಲ್ಮಾನ್ ಖಾನ್ ಅವರು ಮುಂಬೈನ ತಮ್ಮ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಿವಾಸದಲ್ಲಿ, ಬಿಜೆಪಿಯ ಯುವ ಮೋರ್ಚಾ ರಾಷ್ಟ್ರೀಯ ಖಜಾಂಚಿ ಪಿ.ಎಂ. ಸಾಯಿ ಪ್ರಸಾದ್ ಮತ್ತು ಅವರ ಪತ್ನಿ ರುಕ್ಮಿಣಿ ಚೌಧರಿ ಅವರಿಗೆ ಭೋಜನ ಕೂಟ ಏರ್ಪಡಿಸಿದ್ದು ಸಾಯಿ ಪ್ರಸಾದ್ ಅವರು ಸಲ್ಮಾನ್ ಖಾನ್ ಜೊತೆಗಿನ ಭೇಟಿಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ ಅವರ ಸರಳತೆ, ಆತ್ಮೀಯತೆ ಮತ್ತು ಅದ್ಭುತ ಆತಿಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದರ ಬೆನಲ್ಲೇ, ಸಲ್ಮಾನ್ ಖಾನ್ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದವು. ಆದರೆ, ಅಸಲಿ ಸತ್ಯ ಬೇರೆಯೇ ಇದೇ!
ಹೌದು, ಸಲ್ಮಾನ್ ಖಾನ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿರುವ ಬಗ್ಗೆ ಅಥವಾ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಅದರಂತೆ, ಇದು ಕೇವಲ ಒಂದು ಸೌಜನ್ಯದ ಹಾಗೂ ಖಾಸಗಿ ಭೇಟಿಯಾಗಿದ್ದು ಇತ್ತೀಚೆಗೆ ಬಿಜೆಪಿ ಶಾಸಕ ಆಶಿಶ್ ಶೆಲಾರ್ ಸೇರಿದಂತೆ ಹಲವು ಮುಖಂಡರು ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಬೀಯಿಂಗ್ ಹ್ಯೂಮನ್ ಸಂಸ್ಥೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದ್ದರು. ಆದರೆ ಇದುವರಿಗೂ ಸಲ್ಮಾನ್ ಖಾನ್ ಬಿಜೆಪಿ ಸೇರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇತ್ತಿಚಿಗೆ ಸಲ್ಮಾನ್ ಖಾನ್ ಅವರು RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮದಲ್ಲಿ ಸಹ ಕಾಣಿಸಿಕೊಂಡಿದ್ದರು,
Trending
- ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಬಿಜೆಪಿಗೆ ಸೇರುತ್ತಾರೆ?
- ಪುಲಗೂರುಕೋಟೆಯಲ್ಲಿ ಖತರ್ನಾಕ್ ಕಳ್ಳರ ಹಾವಳಿ!
- ಮದನಪಲ್ಲಿಯಲ್ಲಿ “ಅನಂತ ಅಂಬಾನಿ” ತೆಲುಗಲ್ಲಿ ಹೇಳಿದ್ದು ಆಂಧ್ರದ ಮಗ ಅಂತ ಭಾವಿಸಿ!
- ಧಾರ್ಮಿಕ ಪ್ರವಚನಕಾರರು ಶಿಕ್ಷಕ ವೈಕುಂಠವಾಸ ರೆಡ್ಡಿ VVR ಮೇಷ್ಟ್ರು ಇನ್ನಿಲ್ಲ
- ಶ್ರೀನಿವಾಸಪುರ ಹಳೇ ಊರಿನ ನೆನಪು ಟೆಂಟ್ ಸಿನಿಮಾ,ಇಂದಿರಾ ಚಿತ್ರಮಂದಿರ!
- Philips ನಿಂದ ಮೊದಲ 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ!
- ಸಹಪಾಠಿಯಿಂದ ಚಾಕು ಇರಿತಕ್ಕೊಳಗಾಗಿ Bcom ವಿದ್ಯಾರ್ಥಿ ಸಾವು!
- ವಸತಿ ಶಾಲೆ ಪ್ರಾಂಶುಪಾಲನ ಅಸಭ್ಯ ವರ್ತನೆ ವಿದ್ಯಾರ್ಥಿನಿ ಆರೋಪ,ಅಮಾನತು!
Tuesday, October 6



