ನ್ಯೂಜ್ ಡೆಸ್ಕ್: ತಿರುಮಲಕ್ಕೆ ಹೋಗುವ ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ಆನೆಗಳ ಹಿಂಡು ಸಂಚರಿಸಿದ ಬಗ್ಗೆ ಡ್ರೊನ್ ಕ್ಯಾಮರದಲ್ಲಿ ಚಿತ್ರಣವಾಗಿದ್ದು ಭಕ್ತರಲ್ಲಿ ಆತಂಕ ಮೂಡಿಸಿದೆ.
ಸುಮಾರು 11 ಆನೆಗಳಿದ್ದ ಹಿಂಡು ಸ್ಥಳಿಯವಾಗಿ ಬೆಳೆ ಹೊಲಗಳನ್ನು ನಾಶಪಡಿಸಿವೆಯಂತೆ.ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ತಿರುಮಲಕ್ಕೆ ಹೋಗುವಂತ ಭಕ್ತರಿಗೆ ಎಚ್ಚರಿಕೆ ನೀಡಿದ್ದು ಇದರ ನಡುವೆ ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಹ ಜನರು ಜಾಗರೂಕರಾಗಿರಲು ಸೂಚಿಸಿದ್ದಾರೆ. ಆನೆಗಳ ಚಲನವಲನಗಳನ್ನು ಡ್ರೋನ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದ್ದು ಭಕ್ತರು ಜಾಗರೂಕರಾಗಿರಲು ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ.
ಸುಮಾರು 11 ಆನೆಗಳ ಹಿಂಡು ಸಂಚರಿಸುವ ಬಗ್ಗೆ ಡ್ರೋನ್ ಮೂಲಕ ಚಿತ್ರಣ ಮಾಡುತ್ತಿದ್ದು ಡ್ರೋನ್ ಮರದ ಕೊಂಬೆಗಳಿಗೆ ಡಿಕ್ಕಿ ಹೊಡೆದ ನಂತರ ಡ್ರೋನ್ ಕ್ಯಾಮೆರಾ ಕೆಳಗೆ ಬಿದ್ದಿತು. ಆದಾಗ್ಯೂ, ಆನೆಗಳು ಪಂಪ್ ಹೌಸ್ ಬಳಿಯ ಬೆಳೆ ಹೊಲಗಳನ್ನು ನಾಶಪಡಿಸಿವೆ ಎಂದು ಹೇಳಲಾಗಿದೆ. ಆನೆಗಳ ಗುಂಪನ್ನು ಗಮನಿಸಿದ ಅರಣ್ಯ ಇಲಾಖೆ, ಟಿಟಿಡಿ ಮತ್ತು ಜಾಗೃತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವಾಗಿ,ಶ್ರೀವಾರಿ ಮೆಟ್ಟಿಲು ಮಾರ್ಗದಲ್ಲಿ ತಿರುಮಲಕ್ಕೆ ಕಾಲ್ನಡಿಗೆಯಲ್ಲಿ ಹೋಗುವಂತ ಭಕ್ತರನ್ನು ಶ್ರೀವಿನಾಯಕ ಸ್ವಾಮಿ ಚೆಕ್ ಪಾಯಿಂಟ್ ಬಳಿ ಒಂದು ಗಂಟೆ ತಡೆಹಿಡಿದು ಗುಂಪುಗಳಾಗಿ ಕಳೆಸುತ್ತಿದ್ದಾರೆ ಅರಣ್ಯ ಇಲಾಖೆ,ಟಿಟಿಡಿ ಮತ್ತು ಜಾಗೃತ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುತ್ತಿದ್ದಾರೆ. ಪಂಪ್ ಹೌಸ್ ಪ್ರದೇಶದಿಂದ ಆನೆಗಳ ಗುಂಪನ್ನು ಕಾಡಿಗೆ ಹಿಂತಿರುಗಿಸಲು ಅವರು ಪ್ರಯತ್ನ ಮಾಡಲಾಗುತ್ತಿದಿಯಂತೆ.
ಅನೆ ಸಂಚಾರ ಮಾಹಿತಿ ಪಡೆದ ಆಂಧ್ರDCM
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಆನೆಗಳ ಚಲನವಲನದ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವಂತೆ ಸೂಚಿಸಿದ್ದಾರೆ.ಆನೆ ಹಿಂಡಿನ ಚಲನವಲನ, ಬೆಳೆ ಹೊಲಗಳ ನಾಶ ಮತ್ತು ಇತ್ತೀಚೆಗೆ ಆನೆ ದಾಳಿಯಲ್ಲಿ ರೈತನೊಬ್ಬ ಸಾವನ್ನಪ್ಪಿರುವುದನ್ನು ಅವರು ಪರಿಶೀಲಿಸಿದರು. ಸೋಮವಾರ ಬೆಳಿಗ್ಗೆ ಚಂದ್ರಗಿರಿ ಕ್ಷೇತ್ರದಲ್ಲಿ ಆನೆಗಳ ಹಿಂಡು ಓಡಾಡಿ ಹೊಲಗಳನ್ನು ನಾಶಪಡಿಸಿದ ಘಟನೆಯ ಬಗ್ಗೆ ಅಧಿಕಾರಿಗಳು ವಿವರಗಳನ್ನು ನೀಡಿದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



