ಶ್ರೀನಿವಾಸಪುರ: ಪಟ್ಟಣದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಘಟಕ(KSRTC Depo)ದಲ್ಲಿ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು ಆರು ದಿನಗಳಕಾಲ ಭಕ್ತಿಯಿಂದ ಪೂಜಿಸಿ ಭವ್ಯ ಮೆರವಣಿಗೆ ಮೂಲಕ ಕೊಂಡ್ಯೊಯ್ದು ವಿಧಿ ವಿಧಾನಗಳ ಮೂಲಕ ಶುಕ್ರವಾರ ವಿಸರ್ಜಿಸಲಾಯಿತು.
ಅರ್ಚಕರು ಗಣೇಶ ಮೂರ್ತಿಗಳಿಗೆ ವಿಧಿ ವಿಧಾನಗಳ ಮೂಲಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ನಂತರ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ಪಲ್ಲಕಿ ರಥದಲ್ಲಿ ಗಣೇಶ ಮೂರ್ತಿಯನ್ನು ಭಕ್ತಿಭಾವದಿಂದ ಇಟ್ಟು ನಗರದ ಪ್ರಮುಖ ಸ್ಥಳಗಳಾದ ಮುಳಬಾಗಿಲು ವೃತ್ತ, ಎಂ.ಜಿ.ರಸ್ತೆ ಬಸ್ ಸ್ಟಾಂಡ್ ನಲ್ಲಿ ಇಂದಿರಾಭವನ್ ವೃತ್ತ, ಹೀಗೆ ಎಲ್ಲಾ ಕಡೆಗಳಲ್ಲೂ ಗಣೇಶನ ಉತ್ಸವಮೂರ್ತಿ ಭವ್ಯ ಮೆರವಣಿಗೆ ಸಾಗಿ ವಿಸರ್ಜನೆಗೆ ಕೊಂಡ್ಯೊಯಲಾಯಿತು.
ಡಿಜೆಗಳ ಅಬ್ಬರ ಇಲ್ಲದೆ KSRTC ನೌಕರರು ಕೇಸರಿ ಟೋಪಿ ಶಾಲು ಧರಸಿ ಡ್ರಮ್ಸ್ ಮತ್ತು ತಮಟೆ ಸದ್ದಿಗೆ ಹೆಜ್ಜೆಹಾಕಿ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಸಾಗುತ್ತ ಸಂಭ್ರಮಿಸಿದರು. ಮುಳಬಾಗಿಲು ತಾಲೂಕಿನ ವಾದ್ಯಗಾರರು ಡ್ರಮ್ಸ್ ಮತ್ತು ತಮಟೆಗಳನ್ನು ಅಚ್ಚುಕಟ್ಟಾಗಿ ಭಾರಿಸಿದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



