ತಿರುಪತಿ:ದಕ್ಷಿಣ ಭಾರತದ ಪ್ರಖ್ಯಾತ ರಾಹು-ಕೇತು ಪೂಜೆ ನಡೆಯುವ ಆಂಧ್ರದ ಶ್ರೀಕಾಳಹಸ್ತೀಶ್ವರ ದೇವಾಲಯದಲ್ಲಿ ಭಾನುವಾರ ನಡೆದಂತ ರಾಹು-ಕೇತು ಪೂಜೆಗಳು ಸಾರ್ವಕಾಲಿಕ ದಾಖಲೆಯಾಗಿದೆ.
ದೇವಸ್ಥಾನದಲ್ಲಿ ಐದು ವಿವಿಧ ಧರದ ಟಿಕೆಟ್ ಗಳಲ್ಲಿ ರಾಹು-ಕೇತು ಸರ್ಪದೋಷ ನಿವಾರಣಾ ಪೂಜೆಗಳು ನಡೆಯುತ್ತವೆ ರಾಹು-ಕೇತು ಪೂಜೆಗಳ ದಾಖಲೆ
ರಾಹು-ಕೇತು ಪೂಜಾ ಟಿಕೆಟ್ ಗಳು ಭಾನುವಾರ ಒಂದೇ ದಿನ 9,168 ಟಿಕೆಟ್ಗಳು ಮಾರಾಟವಾಗಿವೆ. 14 ತಿಂಗಳ ಹಿಂದೆ ಐದು ವಿಭಾಗಗಳಲ್ಲಿ ದಾಖಲೆಯ 7,200 ಟಿಕೆಟ್ಗಳು ಮಾರಾಟವಾಗಿದ್ದು, ಆಷಾಢ ಮಾಸದ ಭಾನುವಾರ ಅಮಾವಾಸ್ಯೆ ಬಂದಿದ್ದರಿಂದ ಜನತೆ ದೇವಾಲಯದಲ್ಲಿ ಪೂಜೆ ಮಾಡಲು ಮುಗಿಬಿದಿದ್ದು ಒಂದೇ ದಿನ 9,168 ರಾಹುಕೇತು ಪೂಜೆಯ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಶ್ರೀಕಾಳಹಸ್ತೀಶ್ವರ ದೇವಸ್ಥಾನದ ರಾಹುಕೇತು ಮಂಟಪಗಳು ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಂದ ತುಂಬಿ ತುಳುಕಾಡುತಿತ್ತು 5,000 ರೂ ಮೊತ್ತದ 154 ಟಿಕೆಟ್ ಗಳು,2,500 ರೂ ಮೊತ್ತದ 610ಟಿಕೆಟ್ ಗಳು,1,500 ರೂ ಮೊತ್ತದ 933ಟಿಕೆಟ್ ಗಳು,750 ರೂ ಮೊತ್ತದ 2,288 ಟಿಕೆಟ್ ಗಳು,500 ರೂ ಮೊತ್ತದ 5,183ಟಿಕೆಟ್ ಗಳು,,. ಸೇರಿ ಒಟ್ಟು 9,168 ರಾಹುಕೇತು ಪೂಜಾ ಟಿಕೆಟಗಳು ಮಾರಾಟವಾಗಿದೆ ಎನ್ನುತ್ತಾರೆ ದೇವಾಲಯದ ಇವಿಒಎಸ್ ಎನ್ ಮೂರ್ತಿ.
ಇದಲ್ಲದೆ, ಐದು ಬಗೆಯ ಪ್ರಸಾದಗಳ 29,505 ಪ್ಯಾಕೆಟ್ಗಳು ಮಾರಾಟವಾಗಿದ್ದು, ಇದು ಸಹ ದಾಖಲೆಯ ಮಾರಾಟ ಎನ್ನುತ್ತಾರೆ ಭಾನುವಾರವಷ್ಟೇ ದೇವಸ್ಥಾನಕ್ಕೆ ವಿವಿಧ ಪೂಜೆ, ಸೇವಾ ಟಿಕೆಟ್ ಗಳ ಮೂಲಕ ಸುಮಾರು ಎರಡು ಕೋಟಿ ಅದಾಯ ಬಂದಿದೆ ಎನ್ನುತ್ತಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16