ಶ್ರೀನಿವಾಸಪುರ: ಶ್ರೀನಿವಾಸಪುರದ ಬಾಲಕೀಯರ ಪ್ರೌಡಶಾಲೆ Girls High School ಶಿಕ್ಷಕರಾಗಿ ನಿವೃತ್ತರಾಗಿದ್ದ ವಿದ್ಯಾರ್ಥಿಗಳ ಮೆಚ್ಚಿನ VVR ಮೇಷ್ಟ್ರು ವೈಕುಂಠವಾಸರೆಡ್ಡಿ(91), ನಿಧನರಾಗಿದ್ದಾರೆ. ಬೆಂಗಳೂರಿನ ಮತ್ತಿಕೇರೆ ಸಮೀಪದ ಮುತ್ಯಾಲನಗರದ ತಮ್ಮ ಸ್ವಗೃಹದಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೂಲತಃ ಮುಳಬಾಗಿಲು ತಾಲೂಕಿನವರು ಆದ VVR ಮೇಷ್ಟ್ರು ಬಹುತೇಕ ತಮ್ಮ ಶಿಕ್ಷಕ ವೃತ್ತಿಯನ್ನು ಶ್ರೀನಿವಾಸಪುರದ ಬಾಲಕೀಯರ ಪ್ರೌಡಶಾಲೆಯಲ್ಲಿ ಸಲ್ಲಿಸಿದ್ದಾರೆ.
VVR ಮೇಷ್ಟ್ರು ಎಂದೆ ಖ್ಯಾತರಾಗಿ ಶಿಕ್ಷಣ ಕ್ಷೇತ್ರದಲ್ಲಿ ಪಠ್ಯ ಪುಸ್ತಕಗಳ ಬೋಧನೆಯೊಂದಿಗೆ ಸಾಮಾಜಿಕ ಹಾಗು ಧಾರ್ಮಿಕ ಮೌಲ್ಯಗಳು ಬೋಧಿಸುವುದರೊಂದಿಗೆ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು,ವೃತ್ತಿ ಜೀವನದಲ್ಲಿ ಆದಂತ ಘಟನೆಯಿಂದ ಅಂಧರಾಗಿದ್ದ ಅವರು ಧಾರ್ಮಿಕ ಶ್ರದ್ಧೆ ಭಾರತೀಯ ಸಂಸ್ಕೃತಿಯ ನಿಷ್ಠಾವಂತ ಪ್ರತಿಪಾದಕರಾಗಿ ಭಕ್ತಿ, ಸರಳತೆ ಮತ್ತು ಸಮರ್ಪಣಾ ಭಾವವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅನೇಕರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದರು. ಡಿಸೆಂಬರ್ ಮಾಸದಲ್ಲಿ ಬರುವಂತ ಧನುರ್ಮಾಸದ ಸಮಯದಲ್ಲಿ ಕೊರೆಯುವ ಚಳಿಯಲ್ಲೂ ಶ್ರೀನಿವಾಸಪುರದ ರಥ ಬೀದಿಗಳಲ್ಲಿ ಭಜನೆ ಹಾಗು ಪ್ರಾರ್ಥನೆ ಮಾಡುತ್ತ ಗೋವಿಂದ ನಾಮಸ್ಮರಣೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ಹೋಗುತ್ತಿದ್ದ ದೃಶ್ಯಗಳನ್ನು ಇಲ್ಲಿನ ಜನ ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರು ನಿವಾಸಿಯಾದ ನಂತರವೂ ಧನುರ್ಮಾಸದ ಭಜನೆ ಹಾಗು ಪ್ರಾರ್ಥನೆ ಗೋವಿಂದ ನಾಮಸ್ಮರ ಅಲ್ಲಿ ಸ್ಥಳೀಯರೊಂದಿಗೆ ಮುಂದುವರೆಸಿದ್ದರು.
ಅವರು ಮಾಡಿದ ಬೋಧನೆಗಳು ಮತ್ತು ಅವರು ಹಾಕಿಕೊಟ್ಟ ಆಧ್ಯಾತ್ಮಿಕ ಮಾರ್ಗ ಮುಂದಿನ ಪೀಳಿಗೆಗೂ ಸ್ಫೂರ್ತಿಯನ್ನು ನೀಡುತ್ತಲೇ ಇರುತ್ತದೆ. ಅವರ ಪ್ರೇರಣೆ ಇಂದಿಗೂ ಗಣೇಶ ದೇವಾಲಯದಲ್ಲಿ ನಡೆಯುವ ಸತ್ಸಂಗ ಕಾರ್ಯಕ್ರಮಗಳೆ ಸಾಕ್ಷಿ ಎನ್ನುತ್ತಾರೆ. ಒಬ್ಬ ಮಹಾನ್ ಚೇತನ ಅಗಲಿದ್ದಾರೆ, ಆದರೆ ಅವರ ನೆನಪುಗಳು, ಮೌಲ್ಯಗಳು ಎಂದೆಂದಿಗೂ ಜೀವಂತವಾಗಿರುತ್ತವೆ.
Trending
- ಮದನಪಲ್ಲಿಯಲ್ಲಿ “ಅನಂತ ಅಂಬಾನಿ” ತೆಲುಗಲ್ಲಿ ಹೇಳಿದ್ದು ಆಂಧ್ರದ ಮಗ ಅಂತ ಭಾವಿಸಿ!
- ಧಾರ್ಮಿಕ ಪ್ರವಚನಕಾರರು ಶಿಕ್ಷಕ ವೈಕುಂಠವಾಸ ರೆಡ್ಡಿ VVR ಮೇಷ್ಟ್ರು ಇನ್ನಿಲ್ಲ
- ಶ್ರೀನಿವಾಸಪುರ ಹಳೇ ಊರಿನ ನೆನಪು ಟೆಂಟ್ ಸಿನಿಮಾ,ಇಂದಿರಾ ಚಿತ್ರಮಂದಿರ!
- Philips ನಿಂದ ಮೊದಲ 5G ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ!
- ಸಹಪಾಠಿಯಿಂದ ಚಾಕು ಇರಿತಕ್ಕೊಳಗಾಗಿ Bcom ವಿದ್ಯಾರ್ಥಿ ಸಾವು!
- ವಸತಿ ಶಾಲೆ ಪ್ರಾಂಶುಪಾಲನ ಅಸಭ್ಯ ವರ್ತನೆ ವಿದ್ಯಾರ್ಥಿನಿ ಆರೋಪ,ಅಮಾನತು!
- ಪ್ರತಿಷ್ಠಿತ FKCCI ಸಂಸ್ಥೆ ಅಧ್ಯಕ್ಷರಾಗಿ ಸಾಯಿ ರಾಮ್ ಪ್ರಸಾದ್ ಆಯ್ಕೆ
- ಬೆಂಗಳೂರಿಗೂ ಬಂದ ಆನೆ, ವ್ಯಕ್ತಿ ಮೇಲೆ ದಾಳಿ ಸಾವು!
Saturday, October 3



