ಶ್ರೀನಿವಾಸಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ದೇಶಕ್ಕೆ ಅವರು ನೀಡಿರುವಂತ ಕಾರ್ಯಕ್ರಮಗಳು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ. ನಾರಾಯಣಸ್ವಾಮಿ ಹೇಳಿದರು ಅವರು ಇಂದು ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಹ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿದ ಸಂದರ್ಬದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಗುಂಜೂರುಶ್ರೀನಿವಾಸರೆಡ್ಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅವರು ಪಕ್ಷದ ಮಾರ್ಗದರ್ಶನದಂತೆ ಪಕ್ಷದ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ ಈ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂಬುದಾಗಿ ತಿಳಿಸಿದರು.
ಗುಂಜೂರು ಶ್ರೀನಿವಾಸರೆಡ್ಡಿ ರಾಜಕೀಯ ಮತ್ತು ಬಿಜೆಪಿಗೆ ಹಳಬರು ಪಕ್ಷದ ಹಿರಿಯರು ಪ್ರಮುಖರ ಅಭಿಪ್ರಾಯದಂತೆ ಅವರನ್ನು ಗುರುತಿಸಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಪರ್ದಿಸಲು ಅವಕಾಶ ಕಲ್ಪಿಸಿದೆ ಎಂದರು ಕಳೆದ 45 ವರ್ಷಗಳಿಂದ ಕ್ಷೇತ್ರ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಇಲ್ಲಿನ ಮತದಾರರು ಬೇಸತ್ತಿದ್ದು ಬದಲಾವಣೆ ಬಯಸುತ್ತಿದ್ದಾರೆ ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವುದು ಸತ್ಯ ಕ್ಷೇತ್ರದಲ್ಲಿ ಕಮಲ ಅರಳುವುದು ಸತ್ಯ ಎಂದರು.
ರಾಜಕೀಯ ಎಂದ ಮೇಲೆ ಎಲ್ಲಾ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ,ಹಾಗೆ ನಮ್ಮಲ್ಲೂ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇತ್ತು ಎಲ್ಲವನ್ನು ಶಮನ ಮಾಡಿದ್ದೇವೆ ಮುಂದೆ ಯಾವುದೆ ಭೇದಾಭಿಪ್ರಾಗಳಿಗೂ ಅವಕಾಶವಿಲ್ಲ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷವೊಂದು ಮೂರು ಬಾಗಿಲು
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತಾರಕ್ಕೇರಿದೆ 3 ಭಾಗಗಳಾಗಿದೆ. ಮಲ್ಲಿಕಾರ್ಜುನ್ಖರ್ಗೆ, ಶಿವಕುಮಾರ್, ಸಿದ್ದರಾಮಯ್ಯ ಎಂಬಂತೆ ಮೂರು ಹೋಳಾಗಿದೆ, ಆದರೆ ನಮ್ಮ ಪಕ್ಷದಲ್ಲಿ ವರಿಷ್ಟರೆಲ್ಲಾ ಸೇರಿದಂತೆ ಎಲ್ಲಾ ಒಂದೇ ಬಾಗಿಲು ಎಂದರು.
ಈ ಸಂದರ್ಭದಲ್ಲಿ ಚುನಾವಣಾ ಜಿಲ್ಲಾ ಉಸ್ತುವಾರಿ ಜಯಚಂದ್ರಾರೆಡ್ಡಿ,ತಾಲ್ಲೂಕು ಅಧ್ಯಕ್ಷ ಅಶೋಕ್ರೆಡ್ಡಿ, ಈ ಶಿವಣ್ಣ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾಜೇಂದ್ರ ಪ್ರಸಾದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರರೆಡ್ಡಿ,ಯಲ್ದೂರು ಪದ್ಮನಾಬ್ ಮತ್ತಿತರರು ಹಾಜರಿದ್ದರು.
ಭರ್ಜರಿ ಮೆರವಣಿಗೆ ಜನವೋ ಜನ!
ತಾಲೂಕಿನಲ್ಲಿ ಬಿ.ಜೆ.ಪಿ ಪಕ್ಷದ ಯಾವುದೇ ಸಮಾವೇಶಕ್ಕಾಗಲಿ ಕಾರ್ಯಕ್ರಮಕ್ಕಾಗಳಿಗಾಗಲಿ ಇದುವರಿಗೂ ಇಷ್ಟೊಂದು ಜನ ಸೇರಿದ ದಾಖಲೆಗಳು ಇರಲಿಲ್ಲ, ಬಿಜೆಪಿ ಬಾವುಟ ಹಿಡಿದು ಮೋದಿ ಘೋಷಣೆಗಳೊಂದಿಗೆ ಜನರ ಮೆರವಣಿಗೆ ವೇಣು ಶಾಲೆ ವೃತ್ತದಿಂದ ಪ್ರಾರಂಭವಾಗಿ ಎಂ.ಜಿ.ರಸ್ತೆ ಮೂಲಕ ಬಸ್ ನಿಲ್ದಾಣದ ವರೆಗೂ ಸಾವಿರಾರು ಸಂಖ್ಯೆಯಲ್ಲಿ ಜನತೆ ಭಾಗವಹಿಸಿದ್ದರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಏಕಾ ಏಕಿ ಇಷ್ಟೊಂದು ಜನರನ್ನು ಸೇರಿಸುವಷ್ಟು ಶ್ರೀನಿವಾಸಪುರದಲ್ಲಿ ಬಿಜೆಪಿ ಪಕ್ಷ ಸಂಘಟನೆಯಾಗಿದಿಯಾ ಎಂದು ಕಾರ್ಯಕರ್ತರೆ ಪ್ರಶ್ನೆ ಕೇಳುವಂತಾಗಿತ್ತು ಸನ್ನಿವೇಶ.
ಬಿಜೆಪಿ ನಿತಿ ಸಂಹಿತೆ ಉಲ್ಲಂಘನೆ ವಿರುದ್ದ ದೂರುದಾಖಲು
ಚುನಾವಣೆ ನೀತಿ ಸಿಂಹಿತೆ ಉಲ್ಲಂಘನೆ ಆರೋಪದ ಮೆಲೆ ಬಿ.ಜೆ.ಪಿ. ಪಕ್ಷದ ವಿರುದ್ದ ದೂರು ದಾಖಲಿಸಿಕೊಂಡು ಪೋಲಿಸರು ನೋಟಿಸು ನೀಡಿರುತ್ತಾರೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ರೋಡ್ ಶೊ ಎಂದು ಗೂಡ್ಸ್ ವಾಹನಗಳಲ್ಲಿ ಜನತೆಯನ್ನು ತುಂಬಿಸಿಕೊಂಡು ಬಂದು ಪಟ್ಟಣದಲ್ಲಿ ತಿರುಗಾಡಿ ಸಂಚಾರ ವ್ಯವಸ್ಥೆಗೆ ತೊಂದರೆ ಮಾಡಿದ್ದಾರೆ ಶ್ರೀನಿವಾಸಪುರ ಪೊಲೀಸರು, ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿಗುಂಜೂರು ಶ್ರೀನಿವಾಸರೆಡ್ಡಿಗೆ ಪೋಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17