ನ್ಯೂಜ್ ಡೆಸ್ಕ್: ನಾಲ್ಕು ದಶಕಗಳಿಗಿಂತಲೂ ಹೆಚ್ಚುಕಾಲದಿಂದ ಭಾರತದ ಸಿನಿಮಾ ಪ್ರೇಮಿಗಳನ್ನು ತಮ್ಮ ನೃತ್ಯ,ಫೈಟ್ಸ್, ಡೈಲಾಗ್ಸ್ ಮೂಲಕ ರಂಜಿಸುತ್ತ ಕೋಟಿಗಟ್ಟಲೆ ಅಭಿಮಾನಿಗಳನ್ನು ಗಳಿಸಿರುವ ಮೆಗಾಸ್ಟಾರ್ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಚಿರಂಜೀವಿ ಅವರ ಸಿನಿಮಾ ಪ್ರಯಾಣಕ್ಕೆ ಮತ್ತೊಂದು ಅಪರೂಪದ ಗೌರವ ಲಭಿಸಿದೆ.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾರೆ,ಮೆಗಾಸ್ಟಾರ್ ಚಿರಂಜೀವಿ ತಮ್ಮ 45 ವರ್ಷಗಳ ವೃತ್ತಿ ಜೀವನದಲ್ಲಿ ಇದುವರೆಗೆ 156 ಚಿತ್ರಗಳನ್ನು ಮಾಡಿದ್ದಾರೆ. 537 ಹಾಡುಗಳಿಗೆ 24 ಸಾವಿರ ಹೆಜ್ಜೆ ಹಾಕಿ ಭಾರತದಲ್ಲಿಯೇ ಯಶಸ್ವಿ ಸ್ಟಾರ್ ನಟನಾಗಿರುವ ಚಿರಂಜಿವಿ ಅವರಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನನ ಪ್ರತಿನಿಧಿಗಳು ಮತ್ತು ಬಾಲಿವುಡ್ ನಟ ಅಮಿರ್ ಖಾನ್ ಜೊತೆಗೂಡಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಈ ಸಮಾರಂಭದಲ್ಲಿ ನಿರ್ಮಾಪಕರಾದ ಅಲ್ಲು ಅರವಿಂದ್, ಸುರೇಶ್ ಬಾಬು, ಜೆಮಿನಿ ಕಿರಣ್, ಮೈತ್ರಿ ರವಿಶಂಕರ್, ತಮ್ಮಾರೆಡ್ಡಿ ಭಾರದ್ವಾಜ, ಕೆಎಸ್ ರಾಮರಾವ್, ನಿರ್ದೇಶಕ ರಾಘವೇಂದ್ರರಾವ್, ಬಾಬಿ, ಗುಣಶೇಖರ್, ಬಿ ಗೋಪಾಲ್, ಕೋದಂಡರಾಮಿ ರೆಡ್ಡಿ ಮುಂತಾದವರು ಭಾಗವಹಿಸಿದ್ದರು. 1978 ರಲ್ಲಿ ಮೆಗಾಸ್ಟಾರ್ ಚಿರಂಜಿವಿ ಪುನಾದಿರಾಳ್ಲು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಿನ ಸೆಪ್ಟೆಂಬರ್ 22 ಅಗಿದ್ದು ಮತ್ತೊಂದು
ಸ್ಟಾರ್ ಸ್ಟಾರ್ ಮೇಘಾಸ್ಟಾರ್
ಮೆಗಾಸ್ಟಾರ್ ಚಿರಂಜಿವಿಯ ಸಿನಿಮಾ ಪ್ರಯಾಣ ಆರಂಭದಲ್ಲಿ ಸುಲಭವಾಗಿರಲಿಲ್ಲ ಹಲವಾರು ಸವಾಲುಗಳು ಅಪಮಾನಗಳನ್ನು ಎದುರಿಸಿ,Angry Young Men ಪಾತ್ರಗಳನ್ನು ಕೋಟಿ ಕೋಟಿ ಜನರಿಗೆ ಸ್ಪೂರ್ತಿಯ ಸೇಲೆಯಾಗಿ ತಮ್ಮದೇ ಶೈಲಿಯಲ್ಲಿ ಕುಣಿದು ಕುಪ್ಪಳಿಸಿ ಸಿನಿಮಾ ಪ್ರಿಯರನ್ನು ರಂಜಿಸುತ್ತ ಯುವಜನತೆಯನ್ನು ಮೋಡಿ ಮಾಡಿದ ಕೀರ್ತಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸಲ್ಲುತ್ತದೆ. ಅವರ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದು ಇಲ್ಲಿಯವರೆಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಚಿರಂಜೀವಿ ಅವರ ಗಿನ್ನಿಸ್ ದಾಖಲೆಯಲ್ಲಿ ನೃತ್ಯಕ್ಕೆ ಆದ್ಯತೆ
ಸಿನಿಮಾ ಪ್ರೇಕ್ಷಕರ ಹೃದಯದಲ್ಲಿ ಪ್ರತ್ಯಕವಾದ ಸ್ಥಾನ ಸಂಪಾದಿಸಿರುವ ಚಿರಂಜೀವಿ ಅವರ ವಿಶಿಷ್ಟತೆ ಎಂದರೆ ನೃತ್ಯಗಳು ಪ್ರತ್ಯಕವಾದ ಪಾತ್ರವನ್ನು ವಹಿಸಿವೆ.156 ಚಲನಚಿತ್ರಗಳು
ಲ್ಲಿ ನಟಸಿರುವ ಮೇಘಾಸ್ಟಾರ್ 537 ಹಾಡುಗಳಿಗೆ 24000 ನೃತ್ಯಗಳನ್ನು ಮಾಡಿದ್ದಾರೆ ಅವರು ಇದುವರೆಗೆ 9 ಫಿಲ್ಮ್ಫೇರ್ ಪ್ರಶಸ್ತಿಗಳು, 3 ನಂದಿ ಪ್ರಶಸ್ತಿಗಳು ಮತ್ತು ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2006 ರಲ್ಲಿ, ಚಲನಚಿತ್ರೋದ್ಯಮಕ್ಕೆ ಅವರ ಸೇವೆಯನ್ನು ಗುರುತಿಸಿ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮತ್ತು 2024 ರಲ್ಲಿ, ಕೇಂದ್ರ ಸರ್ಕಾರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.ಸದ್ಯ ಚಿರಂಜೀವಿ ವಿಶ್ವಂಭರ ಸಿನಿಮಾದಲ್ಲಿ ಶ್ಯೂಟಿಂಗ್ ನಲ್ಲಿ ಬೀಝಿಯಾಗಿದ್ದಾರೆ.
ಮುಖ್ಯಮಂತ್ರಿಗಳ ಅಭಿನಂದನೆ
ಮೆಗಾಸ್ಟಾರ್ ಚಿರಂಜೀವಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಬಗ್ಗೆ ಸರ್ವತಾ ಹರ್ಷ ವ್ಯಕ್ತವಾಗಿದ್ದು,ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಹಾಗು ತೆಲಂಗಾಣ ಮುಖ್ಯಮಂತ್ರಿ ರೇವಂತರೆಡ್ಡಿ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ.