- ಶಾಂತಿ,ವಾಸ್ತು ಹೋಮ ಮಾಡಿದ ಅರ್ಚಕರು
- ಪಂಚಗವ್ಯದಿಂದ ಅನ್ನ ಪ್ರಸಾದ,ಲಡ್ಡು ತಯಾರಿಕಾ
- ಗೋದಾಮಿನಲ್ಲಿ ಸಂಪ್ರೋಕ್ಷಣೆ ಬಳಿಕ
- ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ
ನ್ಯೂಜ್ ಡೆಸ್ಕ್:ಕಲಬೆರಕೆ ತುಪ್ಪ ಬಳಸಿ ತಿರುಮಲ ಶ್ರೀನಿವಾಸನ ದೇವಸ್ಥಾನದಲ್ಲಿ ಲಡ್ಡು ತಯಾರಿಗೆ ಮಾಡಿದ್ದು ದೇವಾಲಯದ ಪಾವಿತ್ರತೆಗೆ ಧಕ್ಕೆಯಾಗಿದೆ ಎಂಬ ಹಿನ್ನಲೆಯಲ್ಲಿ ಶ್ರೀನಿವಾಸನ ದೇವಸ್ಥಾನದ್ದಲ್ಲಿ ಸೋಮವಾರ ಶುದ್ಧೀಕರಣ ಕಾರ್ಯದ ಅಂಗವಾಗಿ ಮಹಾಶಾಂತಿ ಯಾಗ ಮುಕ್ತಾಯಗೊಂಡಿದೆ. ಪೂರ್ಣಾಹುತಿಯೊಂದಿಗೆ ಹೋಮವು ಶಾಸ್ತ್ರೋಕ್ತವಾಗಿ ಪೂರ್ಣಗೊಂಡಿದ್ದು ಸೋಮವಾರ ಶ್ರೀನಿವಾಸ ದೇವರಿಗೆ ರೋಹಿಣಿ ನಕ್ಷತ್ರದ ಮುಹೂರ್ತ ಪ್ರಬಲವಾಗಿದ್ದ ಕಾರಣ ಬೆಳಗ್ಗೆ 6ರಿಂದ ಆಗಮ ಪಂಡಿತರು ಹಾಗೂ ಅರ್ಚಕರು ದೇವಾಲಯದ ಯಾಗಶಾಲೆಯಲ್ಲಿ (ವಾಸ್ತು, ಸಭ್ಯಂ,ಪೌಂಡರೀಕ) ಮೂರು ಹೋಮಕುಂಡಗಳನ್ನು ಸ್ಥಾಪಿಸಿ ಹೋಮ ನೆರವೇರಿಸಿದರು. ಮೊದಲಿಗೆ ಮಹಾಶಾಂತಿ ಯಾಗ ಮತ್ತು ವಾಸ್ತು ಹೋಮ ನಡೆಸಲಾಯಿತು.
ಆಗಮ ಪಂಡಿತರು ಭಗವಂತನಿಗಾಗಿ ನಡೆಯುತ್ತಿರುವ ಕಾರ್ಯಗಳಿಂದ ದೇವರ ದರ್ಶನಕ್ಕೆ ಬರುವಂತ ಸಾಮನ್ಯ ಭಕುತರಿಗೆ ತೊಂದರೆಯಾಗದಂತೆ ಒಂದು ದಿನದಲ್ಲಿ ಯಾಗ ಮಾಡಲು ನಿರ್ಧರಿಸಿ ಮಹಾ ಶಾಂತಿ ಯಾಗ ಮುಗಿಸಿದ್ದಾರೆ.
ಹೋಮದ ನಂತರದಲ್ಲಿ ಹಾಲು, ತುಪ್ಪ, ಮೊಸರು, ಗಂಜಲ, ಸಗಣಿ ಬಳಸಿ ತಯಾರಿಸಿದ ಪಂಚಗವ್ಯವನ್ನು ಶ್ರೀವಾರಿ ದೇವಸ್ಥಾನ ಹಾಗೂ ವಕುಳ ಮಾತೆ ವಿಗ್ರಹ ಲಡ್ಡು ಪ್ರಸಾದಾ ಕೇಂದ್ರ ಪ್ರಸಾದ ವಿಕ್ರಯ ಮಳಿಗೆಗಳಲ್ಲಿ ಸಂಪ್ರೋಕ್ಷಣೆ ಮಾಡಲಿದ್ದಾರೆ.
ಪ್ರತಿ ವರ್ಷ ಪವಿತ್ರೋತ್ಸವ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ತಿರುಮಲ ದೇವಸ್ಥಾನದಲ್ಲಿ ಆಯೋಜಿಸುವ ಹಲವು ಕಾರ್ಯಕ್ರಮಗಳಲ್ಲಿ ತಿಳಿದೋ ತಿಳಿಯದ ತಪ್ಪುಗಳನ್ನು ನಿವಾರಣೆಗೆ ಪವಿತ್ರೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಇದರ ಅಂಗವಾಗಿ ಆಗಸ್ಟ್ ನಲ್ಲಿ ದೇವಸ್ಥಾನದಲ್ಲಿಯೇ ಅನ್ನ ಪ್ರಸಾದ ಕೇಂದ್ರ ಲಡ್ಡು ಪ್ರಸಾದ ಕೇಂದ್ರ ಅದರಲ್ಲಿನ ಕೃಷ್ಣಸ್ವಾಮಿ ಮೂರ್ತಿಗಳಿಗೆ ಪವಿತ್ರಗಳನ್ನು ಸಮರ್ಪಿಸಲಾಗುತ್ತದೆ ಕಲಬೆರಕೆ ತುಪ್ಪದಿಂದ ಉಂಟಾಗಿರುವ ಯಾವುದೇ ದೋಷಗಳು ಇದ್ದರೂ ನಿವಾರಣೆಯಾಗಿರುತ್ತದೆ ಆದರೂ ಭಕ್ತರಲ್ಲಿನ ಆತಂಕದ ಹಿನ್ನೆಲೆಯಲ್ಲಿ ಆಗಮಶಾಸ್ತ್ರ ವಿದ್ವಾಂಸರು ಹಾಗೂ ಪೆದ್ದಾಜಿಯ್ಯಂಗಾರ್ಯರ ಸಲಹೆ ಪಡೆದು ಶ್ರೀವಾರಿ ದೇವಸ್ಥಾನದಲ್ಲಿ ಶಾಂತಿ ಹೋಮ ನಡೆಸಿದರೆ ಒಳಿತು ಎಂದು ಸಿಎಂ ಚಂದ್ರಬಾಬು ನೀಡಿದ ಸಲಹೆಯಂತೆ ಸೋಮವಾರ ಬೆಳಗ್ಗೆ 6ರಿಂದ 10ರವರೆಗೆ ಶಾಂತಿ ಹೋಮ ಮಾಡಲಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮರಾವ್ ಹೇಳಿದ್ದಾರೆ.