ಬೆಂಗಳೂರು: ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಗೂ ಅನ್ವಯಿಸುವಂತೆ ಪ್ರಯಾಣದರವನ್ನು ಇಂದು (ಶನಿವಾರ) ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಲಾಗುತ್ತದೆ ಎಂಬುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು,ಅದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2015ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರಲ್ಲಿ ಪಯಾಣದ ದರ ಪರಿಷ್ಕರಣೆ ಮಾಡಲಾಗಿರುವುದಾಗಿ ಹೇಳಲಾಗಿರುತ್ತದೆ.
ಪ್ರತಿದಿನ ಸರಾಸರಿ 116.18ಲಕ್ಷ ಪುಯಾಣಿಕರು ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ ಹಾಗು ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಸುಮಾರು ಅರವತ್ನಾಲ್ಕು ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿರುವುದಾಗಿ ಎಂದು ಅಂದಾಜಿಸಲಾಗಿದೆ.
ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರಸ್ತುತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ಮತ್ತು ಸಿಬ್ಬಂದಿಗಳಿಗೆ ವೇತನ ಪಾವತಿಸುವುದು ಪ್ರಮುಖ ವೆಚ್ಚಗಳಾಗಿದ್ದು, ಸದರಿ ಎರಡು ವೆಚ್ಚಗಳು ಸೇರಿದಂತೆ ಒಟ್ಟು ಶೇಕಡ 90ರಷ್ಟು ವೆಚ್ಚ ಹೆಚ್ಚಳವಾಗಿರುತ್ತದೆ. ಸದರಿ ಎರಡು ಅಂಶಗಳಲ್ಲಿ ಯಾವುದೇ ಬದಲಾವಣೆಯಾದಲ್ಲಿ ನಗದು ಕೊರತೆಗೆ ಕಾರಣವಾಗುತ್ತದೆ ಎನ್ನಲಾಗಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



