ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ಪತ್ರಕರ್ತರಿಗೆ ಈ ಹಿಂದೆ ನೀಡಲಾಗುತ್ತಿದ್ದ ರೈಲ್ವೆ ಪಾಸ್ ಸೌಲಭ್ಯವನ್ನು ಮರುಪ್ರಾರಂಭಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ತಮ್ಮ ವೃತ್ತಿ ನಿರ್ವಹಿಸುವ ಸಂದರ್ಭದಲ್ಲಿ ರೈಲ್ವೆ ಪಾಸ್ ಸೌಲಭ್ಯ ಬಹಳ ಅನುಕೂಲವಾಗಿತ್ತು. ಆದ್ದರಿಂದ ಈ ಸೌಲಭ್ಯವನ್ನು ಪುನಃ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಶಿವಾನಂದ ತಗಡೂರು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ ಅವರು, ಪತ್ರಕರ್ತರ ರೈಲ್ವೆ ಪಾಸ್ ಬೇಡಿಕೆ ವಿಚಾರ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸೋಮಶೇಖರ ಗಾಂಧಿ ಉಪಸ್ಥಿತರಿದ್ದರು.
Trending
- ಪ್ರತಿಷ್ಠಿತ FKCCI ಸಂಸ್ಥೆ ಅಧ್ಯಕ್ಷರಾಗಿ ಸಾಯಿ ರಾಮ್ ಪ್ರಸಾದ್ ಆಯ್ಕೆ
- ಬೆಂಗಳೂರಿಗೂ ಬಂದ ಆನೆ, ವ್ಯಕ್ತಿ ಮೇಲೆ ದಾಳಿ ಸಾವು!
- ಪತ್ರಕರ್ತರಿಗೆ ರೈಲ್ವೆ ಪಾಸ್ ಜಾರಿಗೊಳಿಸಲು ಸಚಿವ ಸೋಮಣ್ಣಗೆ ಪತ್ರಕರ್ತರ ಸಂಘ ಮನವಿ!
- ಶ್ರೀನಿವಾಸಪುರ:ಭಗತ್ ಸಿಂಗ್ ಜಯಂತಿ ಯಲ್ದೂರು ಯುವಕರಿಂದ ದೇಶಭಕ್ತಿ ಓಟ
- ವಿಧ್ವಂಸಕ ಕೃತ್ಯಗಳಿಗೆ ಸಂಚು, ಇಬ್ಬರು ಶಂಕಿತ ಉಗ್ರರ ಬಂಧನ!
- ಪದವೀಧರ ಚುನಾವಣೆ ನೀತಿ ಸಂಹಿತೆ ಪಾಲಿಸಲು DC ಸೂಚನೆ.
- ಚಿರಂಜೀವಿ”ಕಾಕಾ”ಸಿನಿಮಾ ಪಾತ್ರದ ಹೆಸರು”ಕದರಿ ಕಾಳಿದಾಸು”!
- ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ ಡ್ರೋನ್ ಟೆಸ್ಟಿಂಗ್ ಹಬ್!
Monday, September 28



