ಮುಳಬಾಗಿಲು:ಮೂರು ದ್ವಿಚಕ್ರ ವಾಹನಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಗಳಲ್ಲಿದ್ದ ಐವರು ಸಾವನಪ್ಪಿರುವ ದಾರುಣ ಘಟನೆಗೆ ಕಾರಣ ಇದೆನಾ ಎಂಬ ಪ್ರಶ್ನೆ ಉದ್ಭಸಿದೆ.
ಬೊಲೆರೊ ವಾಹನ ಚಾಲಕ ಮಣಿಕಂಠ ಮೊಬೈಲ್ ನಲ್ಲಿ ಮಾತನಾಡಿಕೊಂಡು ಅಜಾಗುರುಕತೆಯಿಂದ ಚಾಲನೆ ಮಾಡಿದ ಪರಿಣಾಮ ಎದುರುಗಡೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂರು ದ್ವಿಚಕ್ರ ವಾಹನಗಳು ಕೆಳಗೆ ಬಿದ್ದಿವೆ ಅದರಲ್ಲಿ ಕುಳಿತವರೊಗೆ ತಲೆ ಎದೆಗೆ ತೀವ್ರವಾಗಿ ಗಾಯಗಳಾಗಿ ನಾಲ್ವರು ಸ್ಥಳದಲ್ಲಿ ಮೃತ ಪಟ್ಟರೆ ಒರ್ವ ಮಹಿಳೆ ಅಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ.
ಮುಳಬಾಗಿಲು ತಾಲ್ಲೂಕು ಎನ್.ವಡ್ಡಹಳ್ಳಿ-ಗುಡಿಪಲ್ಲಿ ಮಾರ್ಗದಲ್ಲಿ ಬುಧವಾರ ಸಂಜೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರೆಲ್ಲ ಕೃಷಿ ಕಾರ್ಮಿಕರು ಎಂಬುದು ಧಾರುಣ,
ಮೃತ ಪಟ್ಟವರು ಎಂದಿನಂತೆ ಕೃಷಿ ಕಾರ್ಯ ಮುಗಿಸಿಕೊಂಡು ಊರಿಗೆ ಹೋರಟಿದ್ದರು ಇದರಿಗೆ ಮೃತ್ಯ ಎದುರಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಇಲ್ಲದೆ ಗ್ರಾಮ ಸೇರಿಕೊಳ್ಳುವ ಅವಸರದಲ್ಲಿ ಹೋರಟವರಿಗೆ ಎದುರಿಗೆ ಮೃತ್ಯು ಬೊಲೊರೊ ವಾಹನದ ರೂಪದಲ್ಲಿ ಬಂದು ಆವರಿಸಿದೆ.
ಬೊಲೊರೊ ವಾಹನ ನಡೆಸುತ್ತಿದ್ದ ಚಿಗುರು ಮೀಸೆ ಯುವಕ ಮಣಿಕಂಠ ಸ್ಟೈಲ್ ಆಗಿ ಮೊಬೈಲ್ ನಲ್ಲಿ ಮಾತನಾಡಿಕೊಂಡು ಅತಿಯಾದ ವೇಗದಿಂದ ವಾಹನ ನಡೆಸಿದ್ದಾನೆ ಎಂಬ ಆರೋಪ ಇದೆ ಇದರಿಂದಾಗಿಯೆ ಅಪಘಾತವಾಯಿತು ಎನ್ನುತ್ತಾರೆ ಸ್ಥಳಿಯರು
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



