ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನಲ್ಲಿ ಶ್ರದ್ಧಾ ಭಕ್ತಿಯಿಂದ ಗಂಗಮ್ಮ ಜಾತ್ರೆಯ ದೀಪೋತ್ಸವ ನಡೆಸಲಾಯಿತು,ಗ್ರಾಮದ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಿ ನಂತರ ಗಂಗಮ್ಮ ದೇವಾಲಯದ ಪೂಜಾರಿ ದೀಪ ಹೋತ್ತು ದೇವಾಲಯ ಸುತ್ತುತ್ತಾರೆ. ಯಲ್ದೂರು ನಡುಬಿದಿಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಆನಾದಿಕಾಲದಿಂದಲೂ ಗ್ರಾಮದ ಆಚಾರದಂತೆ ಹೊಸ ಸಂವತ್ಸರ ಯುಗಾದಿ ನಂತರ ಬರುವ ಮೊದಲ ಸೋಮವಾರ ಗಂಗಮ್ಮನ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಗಂಗಜಾತ್ರೆ ಎಂದು ಆಚರಿಸುವ ಗಂಗಮ್ಮ ದೇವರ ಮೂಲಮೂರ್ತಿಗೆ ಅಭಿಷೇಕ ವಿವಿಧ ರೀತಿಯ ಬಣ್ಣದ ಹೂಗಳಿಂದ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.
ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಉತ್ತಮ ಮಳೆ ಬೆಳೆಯಾಗುತ್ತದೆ,ಗ್ರಾಮದ ಜನರನ್ನು ಸುರಕ್ಷತೆಯಿಂದ ಕಾಪಾಡುತ್ತಾಳೆ ಎಂದು ನಂಬಿ ಹರಿಕೆ ಹೊತ್ತ ಗ್ರಾಮಸ್ಥರು ಭಕ್ತಿ ಭಾವದಿಂದ ಶಕ್ತಾನುಸಾರ ಗಂಗಮ್ಮ ದೇವರಿಗೆ ತಂಬಿಟ್ಟು ಹಾರತಿ ಸಮರ್ಪಿಸಿ ಧನ್ಯರಾಗುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



