ಬೆಂಗಳೂರು:ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಸಮಗ್ರ ದತ್ತಾಂಶ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ 3 ಹಂತದಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬಗ್ಗೆ ಸದಾಶಿವ ಆಯೋಗ ವರದಿ ಕೊಟ್ಟಿತ್ತು. 2011ರ ಜನಸಂಖ್ಯೆ ಆಧರಿಸಿ ವರದಿಯನ್ನು ಕೊಟ್ಟಿದ್ದರು. ಇದೀಗ ಇಂದಿನಿಂದ ಮೇ.17 ರವರೆಗೆ ಒಳಮೀಸಲಾತಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲು ಕಲ್ಪಿಸುವ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನ್ಯಾ| ನಾಗಮೋಹನ್ ದಾಸ್ ಆಯೋಗ ಇಂದಿನಿಂದ ಸಮೀಕ್ಷೆ ನಡೆಯಲಿದ್ದು, ಗಣತಿದಾರರು ಪ್ರತಿ ಮನೆ ಮನೆಗೂ ಆಗಮಿಸಿ ಸಮೀಕ್ಷೆ ನಡೆಸಲಿದ್ದಾರೆ. ಇನ್ನು 3 ನೇ ಹಂತ ಆನ್ ಲೈನ್ ಮೂಲಕ ನಡೆಯಲಿದೆ. ಅಲ್ಲೂ ಜನರಿಗೆ ಮಾಹಿತಿಯನ್ನು ನೀಡಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಎಸ್ಸಿ ಸಮುದಾಯ ಗಣತಿದಾರರು ಮನೆ ಮನೆಗೆ ಬಂದಾಗ ಮಾಹಿತಿಯನ್ನು ನೀಡಬೇಕು. ಗಣತಿದಾರರು ಮನೆಗೆ ಭೇಟಿ ಕೊಟ್ಟಾಗ ಜನರು ಇಲ್ಲದೇ ಹೋದರೆ ಶಿಬಿರದಲ್ಲಾದರೂ ಅಥವಾ ಆನ್ ಲೈನ್ ಮೂಲಕವೂ ಮಾಹಿತಿಯನ್ನು ನೀಡಬಹುದು ಎಂದು ಮನವಿ ಮಾಡಿದರು.
100 ಕೋಟಿ ಖರ್ಚು
ಎಸ್ಸಿ ಒಳಮೀಸಲಾತಿ ಸಮೀಕ್ಷೆಗೆ ಸುಮಾರು 100 ಕೋಟಿ ಖರ್ಚು ಆಗಬಹುದು. ನಾಗಮೋಹನ್ ದಾಸ್ ಅವರು ಏನು ಶಿಫಾರಸು ಮಾಡುತ್ತಾರೆ ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
60 ದಿನಗಳ ಕಾಲವಕಾಶ
ಒಳಮೀಸಲಾತಿ ಸಮೀಕ್ಷೆ ನಡೆಸಲು 60 ದಿನಗಳ ಕಾಲವಕಾಶ ನೀಡಲಾಗಿದೆ. ಜಾತಿಗಣತಿಯೂ ಒಳಮೀಸಲಾತಿ ಗಣತಿಗೂ ಯಾವುದೇ ಸಂಬಂಧ ಇರುವುದಿಲ್ಲ. ಇದು ಕೇವಲ ಎಸ್ಸಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಹೆಲ್ಪ್ ಲೈನ್ ಸಹಾಯ ಇರುತ್ತದೆ
ಹೆಲ್ಪ್ ಲೈನ್ ಆರಂಭ ಮಾಡಲಾಗಿದೆ. ಯಾವುದೇ ಗೊಂದಲ ಇದ್ದರೂ 9481359000 ಈ ಫೋನ್ ನಂಬರ್ ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



