Author: Srinivas_Murthy

ಶ್ರೀನಿವಾಸಪುರ:ಆಂಧ್ರದ ಕೋಳಿ ಫಾರಂ ಮಾಲೀಕನೊರ್ವ ತನ್ನ ಫಾರಂನಲ್ಲಿ ಹವಾಮಾನ ವೈಪರಿತ್ಯದಿಂದ ಸತ್ತ ಕೋಳಿಗಳನ್ನುತಂದು ಆಂಧ್ರ ಗಡಿಯಲ್ಲಿರುವ ಕರ್ನಾಟಕದ ಕೆರೆಯಲ್ಲಿ ಬಿಸಾಡಿರುವ ಘಟನೆ ತಾಲೂಕಿನ ನೆಲವಂಕಿ ಹೊಬಳಿಯ ಪುಲಗೂರಕೋಟೆ ಪಂಚಾಯಿತಿ ವ್ಯಾಪ್ತಿಯ ಬಾಣಲಪಲ್ಲಿಯಲ್ಲಿ ನಡೆದಿರುತ್ತದೆ.ಆಂಧ್ರದ ಚಂಬಕೂರು-ಮದನಪಲ್ಲಿ ರಸ್ತೆಯಲ್ಲಿರುವ ಆಂಧ್ರದ ವ್ಯಕ್ತಿಗೆ ಸೇರುವ ಕೋಳಿ ಫಾರಂನಲ್ಲಿ ಬಿಸಿಲಿನ ಬೇಗೆ ತಾಳಲಾರದೆ ಸುಮಾರು 500 ಕ್ಕೂ ಹೆಚ್ಚು ಕೋಳಿಗಳು ಸಾವನಪ್ಪಿವೆ ಸತ್ತ ಕೋಳಿಗಳನ್ನು ತಂದು ಗಡಿಯಂಚಿನ ಕರ್ನಾಟಕದ ಕೆರೆಯಲ್ಲಿ ಬಿಸಾಡಲಾಗಿದ್ದು ಕೆರೆಯ ಗುಣಿಗಳಲ್ಲಿ ಇದ್ದಂತ ನೀರಿನಲ್ಲಿ ಸತ್ತ ಕೋಳಿಗಳನ್ನು ಎಸೆದಿದ್ದು ಅದನ್ನು ತಿನ್ನಲು ನಾಯಿಗಳ ಹಿಂಡು ಕೆರೆಯನ್ನು ಆವರಿಸಿಕೊಂಡು ಕೋಳಿಗಳ ಕಳೆಬರಗಳನ್ನು ಎಳೆದಾಡಿ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರನೆಲ್ಲ ಮಲೀನ ಗೊಳಿಸಿವೆ ಎಂದು ಗ್ರಾಮಸ್ಥರು ದೂರುತ್ತಾರೆ.ಕೆರೆಯಲ್ಲಿದ್ದ ನೀರನ್ನು ಗ್ರಾಮದ ಜಾನುವಾರುಗಳು,ಕುರಿ ಮೆಕೆ ಸಾಕಾಣಿಕೆ ಮಾಡುವ ರೈತರು ತಮ್ಮ ಜಾನುವಾರಗಳಿಗೆ ಇದೆ ನೀರನ್ನೆ ಕುಡಿಸುತ್ತಿದ್ದರು.ಸತ್ತ ಕೋಳಿಗಳನ್ನು ಬಿಸಾಡಿರುವ ಪರಿಣಾಮ ಕೆರೆ ನೀರು ಕೆಂಪು ಬಣ್ಣದಿಂದ ರಕ್ತಮಯವಾಗಿದ್ದು ಇದಕ್ಕೆ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳ ಕಾರಣ ಎಂದು ಗ್ರಾಮದ ರೈತರು ಆಕ್ರೋಶ…

Read More

ಕೋಲಾರ:ಮೇ ನಾಲ್ಕನೆ ತಾರಿಕಿನವರಿಗೆ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದ್ದು ಮುಂದಿನ ವಾರದಲ್ಲಿ ರಾಜ್ಯಾದ್ಯಂತ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲಿದೆ ಹೀಗಾಗಿ ಮುಂದಿನ ವಾರವಿಡೀ ರಣ ಬಿಸಿಲು ಕರ್ನಾಟಕವನ್ನು ಕಾಡಲಿದೆ ಇದರ ಪರಿಣಾಮ ಕೋಲಾರ ಜಿಲ್ಲೆಯ ಮೇಲೂ ಆಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರು ಸಾರ್ವಜನಿಕರಿಗೆ ಸೂಚನೆ ನೀಡಿ ಬೆಂಗಳೂರು ಹವಾಮಾನ ಹಾಗೂ ವಿಜ್ಞಾನ ಕೇಂದ್ರ ಇಲಾಖೆಯು ನೀಡಿರುವ ಪ್ರಕಟಣೆಯಂತೆ ರಾಜ್ಯಾದ್ಯಂತ ಹವಾಮಾನ ಪರಿಸ್ಥಿತಿ ಕುರಿತು ಸಾರ್ವಜನಿಕರಿಗೆ ಶಾಖದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು ಆಗ್ನೇಯ ಮಧ್ಯಪ್ರದೇಶದಿಂದ ದಕ್ಷಿಣ ಒಳನಾಡಿನಲ್ಲಿ ಕರ್ನಾಟಕದವರೆಗೆ ವಿದರ್ಭ,ಮರಾಠವಾಡ ಮತ್ತು ಉತ್ತರ ಆಂತರಿಕ ಕರ್ನಾಟಕದಾದ್ಯಂತ ಸುಮಾರು 1.5 ಕಿ.ಮೀ. ಸಮುದ್ರ ಮಟ್ಟದಿಂದ 105 ಕಿ.ಮೀ. ವರೆಗೆ ವ್ಯಾಪಿಸಿರುತ್ತದೆ ಹವಾಮಾನ ವ್ಯವಸ್ಥೆಗಳ ಪ್ರಭಾವದಡಿಯಲ್ಲಿ ಮುಂದಿನ 3-4 ದಿನಗಳ ಕಾಲ ಬಿಸಿಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ ಒಣಹವೆ ಹಾಗೂ ಶಾಖದ ಅಲೆಗಳು ವಿಪರೀತವಾಗಿರುತ್ತದೆ ಸಾರ್ವಜನಿಕರು ಹವಾಮಾನಕ್ಕೆ…

Read More

ನ್ಯೂಜ್ ಡೆಸ್ಕ್: ಪುಷ್ಪ ದಿ ರೈಸ್ ಚಿತ್ರ ಬಿಡುಗಡೆಯಾದ ನಂತರ ಜಾಗತಿಕವಾಗಿ ಸಿನಿಮಾ ಮನೋರಂಜನೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು ಸಿನಿಮಾ ಪ್ರಿಯರು ಇನ್ನು ಮರೆತಿಲ್ಲ, ನಟ ಅಲ್ಲು ಅರ್ಜುನ್ ನಟನೆ ಅದು ಯಾವ ಮಟ್ಟಕ್ಕೆ ತಲುಪಿದೆ ಅಂದರೆ ಲಿಂಗ ಭೇದ ಇಲ್ಲದೆ ವಯಸ್ಸಿನ ಅಂತರ ಇಲ್ಲದೆ ಜನತೆ ಅಲ್ಲು ಅರ್ಜುನ್ ನಟನಾ ಶೈಲಿಯನ್ನು ಅನುಕರಿಸಿ ಅನಂದಿಸದ್ದರು ಜನತೆ ದೇಶ ವಿದೇಶಗಳಲ್ಲೂ ಇಂದಿಗೂ ಪುಷ್ಪ ಸಿನಿಮಾ ಹಂಗಾಮ ಇದೆ ಎನ್ನಬಹುದು ತಗ್ಗದೆ ಲೇ ಅನ್ನುವ ಅಲ್ಲುಅರ್ಜುನ್ ವಿಶೇಷ ಮ್ಯಾನರಿಸಂ ಡೈಲಾಗ್ ಹಾಗು ನಾಯಕಿ ರಶ್ಮಿಕಾ ಮಂದಣ್ಣ ಅವರ ಸಾಮಿ ಸಾಮಿ ಹಾಡು ಈಗಲೂ ಜನರ ಕಿವಿಯಲ್ಲೂ ಗುಯ್ಯುಗುಟ್ಟುತ್ತಿದೆ. ಪುಷ್ಪ ದಿ ರೈಸ್ ಚಿತ್ರದ ಯಶಸ್ಸು ಅಲ್ಲು ಅರ್ಜುನ್ ನಟನೆ ಯಿಂದ ಉತ್ತೇಜಿತರಾದ ಚಿತ್ರದ ನಿರ್ಮಾಪಕರು ಚಿತ್ರದ ಎರಡನೇ ಭಾಗವನ್ನು ಪುಷ್ಪ 2 ದಿ ರೂಲ್ ಎಂದು ಹೆಸರಿಟ್ಟು ಎಲ್ಲೂ ಚಿತ್ರದ ಬಗ್ಗೆ ಮಾಹಿತಿ ಲೀಕ್ ಆಗದೆ ಚಿತ್ರಿಕರಣ ಮುಗಿಸಿದ್ದಾರೆ ಸಿನಿಮಾ ಬೇರೆ ಲೆವೆಲ್ಲಿಗೆ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಹಶೀಲ್ದಾರ್ ಅವರ ನೂತನ ಮಹೇಂದ್ರ ಜೀಪಿಗೆ ಖಾಸಗಿ ಬಸ್ ಡಿಕ್ಕಿ ಹೋಡೆದಿದ್ದು ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ,ಘಟನೆ ಕೋಲಾರ-ಶ್ರೀನಿವಾಸಪುರ ರಸ್ತೆಯ ಚೆಲ್ದಿಗಾನಹಳ್ಳಿ ಹತ್ತಿರದ ಬೈಪಾಸ್ ಬಳಿ ನಡೆದಿದ್ದು ಮಂಗಳವಾರ ಸಂಜೆ ಕೋಲಾರ ದಿಂದ ಬರುತ್ತಿದ್ದ ಷರಿಫ್ ಬಸ್ ಒವರ್ ಟೇಕ್ ಮಾಡಿಕೊಂಡು ಮುಂದೆ ಸಾಗಿರುತ್ತದೆ ಅದರ ಹಿಂದೆ ಗಾರ್ಮೇಂಟ್ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದ ಖಾಸಗಿ ಬಸ್ ಮುಂದೆ ನುಗ್ಗಿರುತ್ತದೆ ಅದೆ ಸಮಯಕ್ಕೆ ಶ್ರೀನಿವಾಸಪುರ ತಹಶೀಲ್ದಾರ್ ಸುಧೀಂದ್ರ ರವರು ಇದ್ದ ಮಹಿಂದ್ರಾ ಜೀಪು ಬಂದಿದ್ದು ಬಸ್ಸು ಜಿಪೀಗೆ ಡಿಕ್ಕಿ ಹೊಡೆದು ಅಪಘಾತ ಆಗಿದೆ. ಬಸ್ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ ಅಪಘಾತದಿಂದ ಜೀಪು ಟಯರ್ ಬ್ಲಾಸ್ಟ್ ಆಗಿದ್ದು ವಾಹನದ ಮುಂಬಾಗ ಸ್ವಲ್ಪಮಟ್ಟಿಗೆ ಜಕಂ ಆಗಿದೆ. ಜೀಪಿನಲ್ಲಿದ್ದ ತಹಶೀಲ್ದಾರ್ ಸುಧೀಂದ್ರ ಸೇಫ್ ಆಗಿದ್ದಾರೆ.ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪಟ್ಟಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಶ್ರೀನಿವಾಸಪುರದ ಜನತೆಗೆಎಲ್ಲಾ ರೀತಿಯ ಬ್ಯಾಗುಗಳು ಒಂದೇಜಾಗದಲ್ಲಿ ಸಿಗಲು ಅಂಗಡಿ ಪ್ರಾರಂಭBhagyalakshmi Stores concern shop. ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಫೇಮಸ್ ಸ್ಟೇಷನರಿ ಅಂಗಡಿ ಭಾಗ್ಯಲಕ್ಷ್ಮೀ ಸ್ಟೋರ್ಸ್ ವತಿಯಿಂದ ಪ್ರತ್ಯಕವಾಗಿ ಬ್ಯಾಗ್ ಅಂಗಡಿ ಪ್ರಾರಂಭಿಸಿದ್ದಾರೆ.ಸ್ಟೇಷನರಿ ಸೇರಿದಂತೆ ಇತರೆ ವ್ಯಾಪರದಲ್ಲಿ ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಭಾಗ್ಯಲಕ್ಷ್ಮೀ ಸ್ಟೋರ್ಸ್ ಆನ್ ಲೈನ್ ಯುಗದಲ್ಲೂ ಸ್ಥಳೀಯವಾಗಿ ಗ್ರಾಹಕರನ್ನು ಹೊಂದುವ ಮೂಲಕ ಪಟ್ಟಣದಲ್ಲಿ ರಿಟೇಲ್ ಹಾಗು ಹೊಲ್ ಸೇಲ್ ವ್ಯಾಪಾರ ನಡೆಸುತ್ತಿದ್ದಾರೆ. ಈಗ ಅವರು ತಾಲೂಕಿನ ಜನತೆಗೆ ಮತ್ತೊಂದು ಕೊಡುಗೆಯಾಗಿ ಎಲ್ಲಾ ರೀತಿಯ ಬ್ಯಾಗ್ ಗಳನ್ನು ಆಕರ್ಷಕ ಬೆಲೆಯಲ್ಲಿ ನೀಡಬೇಕು ಎಂದು “ಶ್ರೀ ಭಾಗ್ಯಲಕ್ಷ್ಮಿ ಬ್ಯಾಗ್ ವರ್ಲ್ಡ್” ಆರಂಭಿಸಿದ್ದಾರೆ.ಭಾಗ್ಯಲಕ್ಷ್ಮೀ ಸ್ಟೋರ್ಸ್ ಇರುವಂತಹ ಕಟ್ಟಡದ ಮೆಲ್ಭಾಗದಲ್ಲಿ ಫಸ್ಟ್ ಫ್ಲೊರ್ ನಲ್ಲಿ ಎಲ್ಲಾ ರೀತಿಯ ಬ್ಯಾಗ್ ವರ್ಲ್ಡ್ ಬ್ಯಾಗುಗಳ ಅಂಗಡಿಯನ್ನು ಆರಂಭಿಸಿದ್ದಾರೆ ಮಹಿಳೆಯರಿಗಾಗಿ ಬಣ್ಣಬಣ್ಣದ ವೆರೈಟಿ ಬ್ಯಾಗುಗಳು ಲಭ್ಯವಿದೆ, ಮಹಿಳೆಯರು ಬಳಸುವಂತ ಉದ್ದನೇಯ,ರೌಂಡ್ ಶೇಪ್,ಅಗಲವಾದ ಆಕರ್ಷಕವಾದ ಹಿಂಬದಿ ನೇತುಹಾಕಿಕೊಳ್ಳುವಂತಹದು,ಯುವತಿಯರು ಬಳೆಸುವಂತ ಸೈಡ್ ಟ್ರೆಂಡಿ ಬ್ಯಾಗುಗಳು,ಚಿತ್ತಾಕರ್ಷಕ ಬಟ್ಟೆಯ ನವೀನ ರೂಪದ ಜರ್ನಿ…

Read More

ಶ್ರೀನಿವಾಸಪುರ:ಕೋಲಾರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕು ಎಂಬ ಉದ್ದೇಶದಿಂದ ಚುನಾವಣಾ ಶಾಖೆ ವತಿಯಿಂದ ಶ್ರೀನಿವಾಸಪುರ ಪಟ್ಟಣದಲ್ಲಿ ಮತದಾರರನ್ನು ವಿಶೇಷವಾಗಿ ಆಕರ್ಷಿಸಲು ಮೂರು ಮತಗಟ್ಟೆಗಳನ್ನು ವಿವಿಧ ಹೆಸರಿನಲ್ಲ್ ಸ್ಥಾಪಿಸಲಾಗಿದೆ.ಪಟ್ಟಣದ ಸರೋಜಿನಿ ರಸ್ತೆಯಲ್ಲಿನ ಸರ್ಕಾರಿ ಶಾಲೆಯ ಬೂತ್ ಸಂಖ್ಯೆ 141 ರಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮಗಟ್ಟೆಗೆ ಗುಲಾಬಿ ಬಣ್ಣ ಬಳೆದು ಸಖಿ ಮತಗಟ್ಟೆಯಂದು ಘೋಷಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದ್ದಾರೆ,ರಂಗಾರಸ್ತೆಯಲ್ಲಿ ಬೂತ್ ಸಂಖ್ಯೆ 144 ಮತಗಟ್ಟೆಯನ್ನು ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮತದಾನದ ಮಹತ್ವ ಸಾರುವ ಸ್ಲೋಗನ್ ಗಳೊಂದಿಗೆ ಯುವ ಮತಮಗಟ್ಟೆಯಂದು ಸ್ಥಾಪಿಸಿದ್ದಾರೆ,ತ್ಯಾಗರಾಜ ಕಾಲೋನಿಯಲ್ಲಿನ ಶಾಲೆಯ ಮತಗಟ್ಟೆಯನ್ನು ವಿವಧತೆಯಲ್ಲಿ ಏಕತೆ ಮಾವಿನ ಉರು ಎಂದು ಬಿಂಬಿಸುವ ರೀತಿಯಲ್ಲಿ ಮಾವಿನ ಎಲೆಗಳ ತೋರಣ ಕಟ್ಟಿ,ಮಾವಿನ ಮಹತ್ವ ಹೇಳುವ ಬರಹಗಳೊಂದಿಗೆ ಸಾಂಸ್ಕೃತಿಕ ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾರರನ್ನು ಆಕರ್ಷಿಸಲು ವಿಶೇಷವಾದ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎನ್ನುತ್ತಾರೆ ಚುನಾವಣೆ ಅಧಿಕಾರಿಗಳು. ರಂಗಾರಸ್ತೆಯ ಮತಗಟ್ಟೆ ಸಂಖ್ಯೆ 140 ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು…

Read More

ಶ್ರೀನಿವಾಸಪುರ:ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬದ ಪರವಾಗಿ ನಿಂತಿದ್ದ ಕೆ.ಹೆಚ್ ಮುನಿಯಪ್ಪ ಭಣದ ಪ್ರಮುಖ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗು ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರುಗೋಪಾಲಕೃಷ್ಣ ತಮ್ಮ ನಿಲವು ವ್ಯಕ್ತಪಡಿಸಿದ್ದಾರೆ ಅವರು ಬುಧವಾರ ದಳಸನೂರಿನ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡಸಿ ಮಾತನಾಡಿ ಗೌತಮ್ ಇದುವರಿಗೂ ನನ್ನನ್ನು ಭೇಟಿಯಾಗಿಲ್ಲ ಅವರ ತಂದೆ ಬೆಂಗಳೂರಿನ ಮಾಜಿ ಮೇಯರ್ ವಿಜಯಕುಮಾರ್ ನನ್ನ ಆತ್ಮೀಯರು ಉತ್ತಮ ಒಡನಾಟ ಹೊಂದಿದ್ದರು ಅಂತಹವರ ಮಗನಾದ ಗೌತಮ್ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಅವರನ್ನು ತಾಲೂಕಿನ ಜನತೆ ಹೆಚ್ಚಿನ ಮತ ನೀಡುವ ಮೂಲಕ ಅವರಿಗೆ ಗೆಲವು ತಂದುಕೊಡಬೇಕು ಎಂದರು.ಪಕ್ಷದ ಸಿದ್ದಾಂತ ಬೇರೆ ವೈಯುಕ್ತಿಕ ಭಿನ್ನಾಭಿಪ್ರಾಯ ಬೇರೆ ನನ್ನ ಹಾಗು ತಾಲೂಕಿನ ಕಾಂಗ್ರೆಸ್ ಮುಖಂಡರ ನಡುವಿನ ಬಿನ್ನಾಭಿಪ್ರಾಯಗಳು ಏನೆ ಇರಬಹುದು ರಾಜಕೀಯವಾಗಿ ನಾನು ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಿಗೆ ಗೌರವ ನೀಡುವಂತಹವನು ನಾನು ಮೂಲ ಕಾಂಗ್ರೆಸ್ಸಿಗ,ನನಗೆ ಕಾಂಗ್ರೆಸ್ ಪಕ್ಷ ಮುಖ್ಯ ಕಳೆದ ನಲವತ್ತು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಯಲ್ದೂರಿನ ಇತಿಹಾಸ ಪ್ರಸಿದ್ಧ ಕೋದಂಡರಾಮ ಸ್ವಾಮಿಯ ಕಲ್ಯಾಣೋತ್ಸವ ಹಾಗು ಬ್ರಹ್ಮರಥೋತ್ಸವ ಭಾರೀ ವಿಜೃಂಭಣೆಯಿಂದ ಜರುಗಿತು. ದೇವಾಲಯದ ಆವರಣದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನಿತರಾದರು.ತಾಲೂಕು ಯಲ್ದೂರಿನ ಶ್ರೀ ಕೋದಂಡರಾಮ ಸ್ವಾಮಿಯ ಬೃಹತ್ ದೇವಾಲಯ ಐತಿಹಾಸಿಕ ವೈಷ್ಣವ ಪುಣ್ಯಕ್ಷೇತ್ರ,ಇಲ್ಲಿ ಪರಿವಾರ ಸಮೇತ ಶ್ರೀಕೋದಂಡರಾಮಸ್ವಾಮಿಯನ್ನು ಬೃಗು ಮಹಿರ್ಷಿ ಪ್ರತಿಷ್ಠಾಪಿತ ಎನ್ನಲಾಗಿ ಚೋಳರ ಆಳ್ವಿಕೆ ಹಾಗು ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಪೂರ್ಣಗೊಂಡಿರುವ ದೇವಾಲಯದಲ್ಲಿ ವಿಶಾಲವಾದ ಪ್ರಾಂಗಣ ಅತ್ಯಾಕರ್ಷಕ ಮುಖ ಮಂಟಪ ಎತ್ತರದ ಗಾಳಿ ಗೋಪುರ ನೋಡಲು ವೈಶಿಷ್ಟಪೂರ್ಣವಾಗಿದೆ. ಕೋಲಾರ ಜಿಲ್ಲೆಯಲ್ಲಿಯೆ ಅತಿ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಭವ್ಯವಾದ ದೇವಾಲಯದಲ್ಲಿ ಪ್ರತಿ ವರ್ಷ ಚೈತ್ರಮಾಸದ ಶ್ರೀ ರಾಮನವಮಿಯಂದು ಆರಂಭಗೊಂಡು ಸುಮಾರು ಒಂಬತ್ತು ದಿನಗಳ ಕಾಲ ವೈಭವೋಪೆತವಾಗಿ ನಡೆಯುವ ವಾರ್ಷಿಕ ಭ್ರಹ್ಮೋತ್ಸವಗಳು ವೈಖಾಸ ಆಗಮನ ಶಾಸ್ತ್ರದಂತೆ ನಡೆಯುತ್ತದೆ. ಚೈತ್ರ ಶುದ್ದ ಚತುರ್ದಶಿಯಂದು ಸಂಜೆ ನಡೆಯುವ ಶ್ರೀ ಸೀತಾರಾಮರ ಕಲ್ಯಾಣ ನೋಡಲೆರಡು ಕಣ್ಣುಗಳು ಸಾಲದು ನಾಗಪೆಡೆಯ ವಿಶೇಷ ಆಸನದ ಮೇಲೆ ಹೂವಿನ ಮಂಟಪದಲ್ಲಿ…

Read More

ಶ್ರೀನಿವಾಸಪುರ: ಆತ ವೃತ್ತಿಯಲ್ಲಿ ವೈದ್ಯ ಅದನ್ನೆ ಮುಂದುವರೆಸಿದ್ದರೆ ಇವತ್ತು ವೈದ್ಯಕೀಯ ವೃತ್ತಿಯಲ್ಲಿ ಸಾಗುತ್ತಿದ್ದರು ಇದಕ್ಕಿಂತ ಭಿನ್ನವಾಗಿ ಸಮಾಜಮುಖಿಯಾಗಿ ವ್ಯವಸ್ಥೆಯಲ್ಲಿ ವಿಶೇಷವಾದದನ್ನು ಸಾಧಿಸಬೇಕು ಎಂಬ ಪೋಷಕರ ಆಶಯದಂತೆ ಸಂಕಲ್ಪತೊಟ್ಟು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ, ಕೇಂದ್ರ ಲೋಕಸೇವಾ ಆಯೋಗದ ಪರಿಕ್ಷೆ ಬರೆದು (UPSC) ಪಾಸ್ ಮಾಡಿ ಐ.ಎ.ಎಸ್ ಆಗಬೇಕು ಎಂಬ ಪೋಷಕರ ನನಸು ಈಡೇರಿಸುವ ನಿಟ್ಟಿನಲ್ಲಿ ಕಠಿಣ ನಿರ್ಧಾರ ಮಾಡಿದ ಶ್ರೀನಿವಾಸಪುರ ಪಟ್ಟಣದ ನಿವಾಸಿ ಯುವಕ ಡಾ||ಗೌತಮ್ 939 ರ‍್ಯಾಂಕ್ ಪಡೆದು ಐಎಎಸ್ ಸಾಧನೆ ಮಾಡಿದ್ದಾರೆ.ಇವರು ಯಾವುದೇ ಕೋಚಿಂಗ್‌ ತರಬೇತಿ ಇಲ್ಲದೆಯೇ ಸಾಧನೆ ಮಾಡಿದ್ದಾರೆ ಎಂಬುದು ವಿಶೇಷ. ಪಟ್ಟಣದ ಮಾರುತಿ ನಗರದಲ್ಲಿ ವಾಸವಾಗಿರುವ ಡಯಟ್ ಉಪನ್ಯಾಸಕ ಜಿ.ಎಮ್.ಗಂಗಪ್ಪನವರ ಪುತ್ರ ಡಾ|| ಗೌತಮ್ ನಾಗರೀಕ ಸೇವಾ ಪರಿಕ್ಷೆಯಲ್ಲಿ 939ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ. ತಾಲೂಕಿನ ರೋಣೂರು ಹೋಬಳಿ ಗೋಪಾಲಪುರದ ಜಿ.ಎಮ್.ಗಂಗಪ್ಪ ಕೃಷಿಕನ ಮಗನಾಗಿ ತಾನು ಓದಿ ಶಿಕ್ಷಕ ವೃತ್ತಿ ಸಾಧಿಸಿದ ಅವರು ಮಕ್ಕಳ ಭವಿಷ್ಯತ್ ರೂಪಿಸಲು ಶ್ರೀನಿವಾಸಪುರ ಪಟ್ಟಣದಲ್ಲಿ ನೆಲೆನಿಂತು ಮಕ್ಕಳಿಗೆ…

Read More

ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನಲ್ಲಿ ಶ್ರದ್ಧಾ ಭಕ್ತಿಯಿಂದ ಗಂಗಮ್ಮ ಜಾತ್ರೆಯ ದೀಪೋತ್ಸವ ನಡೆಸಲಾಯಿತು,ಗ್ರಾಮದ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಿ ನಂತರ ಗಂಗಮ್ಮ ದೇವಾಲಯದ ಪೂಜಾರಿ ದೀಪ ಹೋತ್ತು ದೇವಾಲಯ ಸುತ್ತುತ್ತಾರೆ. ಯಲ್ದೂರು ನಡುಬಿದಿಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಆನಾದಿಕಾಲದಿಂದಲೂ ಗ್ರಾಮದ ಆಚಾರದಂತೆ ಹೊಸ ಸಂವತ್ಸರ ಯುಗಾದಿ ನಂತರ ಬರುವ ಮೊದಲ ಸೋಮವಾರ ಗಂಗಮ್ಮನ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಗಂಗಜಾತ್ರೆ ಎಂದು ಆಚರಿಸುವ ಗಂಗಮ್ಮ ದೇವರ ಮೂಲಮೂರ್ತಿಗೆ ಅಭಿಷೇಕ ವಿವಿಧ ರೀತಿಯ ಬಣ್ಣದ ಹೂಗಳಿಂದ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಉತ್ತಮ ಮಳೆ ಬೆಳೆಯಾಗುತ್ತದೆ,ಗ್ರಾಮದ ಜನರನ್ನು ಸುರಕ್ಷತೆಯಿಂದ ಕಾಪಾಡುತ್ತಾಳೆ ಎಂದು ನಂಬಿ ಹರಿಕೆ ಹೊತ್ತ…

Read More