- ಐದು ದಿನಗಳ ಕಾಲ ತೀವ್ರ ಒಣ ಹವೆ
- ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲು
- ಸಾರ್ವಜನಿಕರಿಗೆ ಅಧಿಕಾರಿ ಕರೆ
ಕೋಲಾರ:ಮೇ ನಾಲ್ಕನೆ ತಾರಿಕಿನವರಿಗೆ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದ್ದು ಮುಂದಿನ ವಾರದಲ್ಲಿ ರಾಜ್ಯಾದ್ಯಂತ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಲಿದೆ ಹೀಗಾಗಿ ಮುಂದಿನ ವಾರವಿಡೀ ರಣ ಬಿಸಿಲು ಕರ್ನಾಟಕವನ್ನು ಕಾಡಲಿದೆ ಇದರ ಪರಿಣಾಮ ಕೋಲಾರ ಜಿಲ್ಲೆಯ ಮೇಲೂ ಆಗಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರು ಸಾರ್ವಜನಿಕರಿಗೆ ಸೂಚನೆ ನೀಡಿ ಬೆಂಗಳೂರು ಹವಾಮಾನ ಹಾಗೂ ವಿಜ್ಞಾನ ಕೇಂದ್ರ ಇಲಾಖೆಯು ನೀಡಿರುವ ಪ್ರಕಟಣೆಯಂತೆ ರಾಜ್ಯಾದ್ಯಂತ ಹವಾಮಾನ ಪರಿಸ್ಥಿತಿ ಕುರಿತು ಸಾರ್ವಜನಿಕರಿಗೆ ಶಾಖದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದು ಆಗ್ನೇಯ ಮಧ್ಯಪ್ರದೇಶದಿಂದ ದಕ್ಷಿಣ ಒಳನಾಡಿನಲ್ಲಿ ಕರ್ನಾಟಕದವರೆಗೆ ವಿದರ್ಭ,ಮರಾಠವಾಡ ಮತ್ತು ಉತ್ತರ ಆಂತರಿಕ ಕರ್ನಾಟಕದಾದ್ಯಂತ ಸುಮಾರು 1.5 ಕಿ.ಮೀ. ಸಮುದ್ರ ಮಟ್ಟದಿಂದ 105 ಕಿ.ಮೀ. ವರೆಗೆ ವ್ಯಾಪಿಸಿರುತ್ತದೆ ಹವಾಮಾನ ವ್ಯವಸ್ಥೆಗಳ ಪ್ರಭಾವದಡಿಯಲ್ಲಿ ಮುಂದಿನ 3-4 ದಿನಗಳ ಕಾಲ ಬಿಸಿಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ ಒಣಹವೆ ಹಾಗೂ ಶಾಖದ ಅಲೆಗಳು ವಿಪರೀತವಾಗಿರುತ್ತದೆ ಸಾರ್ವಜನಿಕರು ಹವಾಮಾನಕ್ಕೆ ತಕ್ಕಂತೆ ಉಡುಪು, ಊಟ, ನೀರು ಮತ್ತು ಇನ್ನಿತರೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.