ಶ್ರೀನಿವಾಸಪುರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸಮೀಪದ ಪ್ರತಿಸ್ಪರ್ದಿ ಕಾಂಗ್ರೆಸ್ ಗೌತಮ್ ಅವರಿಗಿಂತ ಸುಮಾರು ಒಂಬತ್ತು ಸಾವಿರ ಮತಗಳ ಅಂತರ ದೊರತಿದೆ.ಉಳಿದಂತೆ ಜೆಡಿಎಸ್ ಅಭ್ಯರ್ಥಿ ಲೋಕಸಭಾ ಕ್ಷೇತ್ರದಾದ್ಯಂತ ಉತ್ತಮ ಮತ ಗಳಿಸಿದ್ದು ತಮ್ಮ ಸ್ವಕ್ಷೇತ್ರ ಬಂಗಾರುಪೇಟೆಯಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದಾರೆ ಉಳಿದಂತೆ ಶಿಡ್ಲಘಟ್ಟಕ್ಷೇತ್ರದಲ್ಲಿ 411 ಕಾಂಗ್ರೇಸ್ ಹೆಚ್ಚುಮತಗಳ ಅಂತರ,ಚಿಂತಾಮಣಿಕ್ಷೇತ್ರದಲ್ಲಿ 7250 ಜೆಡಿಎಸ್ ಹೆಚ್ಚು ಮತ ಗಳಿಕೆ, ಶ್ರೀನಿವಾಸಪುರಕ್ಷೇತ್ರದಲ್ಲಿ 9492 ಜೆಡಿಎಸ್ ಹೆಚ್ಚು ಮತ ಗಳಿಕೆ, ಮುಳಬಾಗಿಲಿನ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 32529 ಜೆಡಿಎಸ್ ಹೆಚ್ಚು ಮತ ಗಳಿಕೆ, ಕೆ.ಜಿ.ಎಫ್.ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 34431 ಕಾಂಗ್ರೇಸ್ ಹೆಚ್ಚುಮತಗಳ ಅಂತರ, ಬಂಗಾರುಪೇಟೆಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 28134 ಜೆಡಿಎಸ್ ಹೆಚ್ಚು ಮತಗಳ ಅಂತರ,ಕೋಲಾರ ಕ್ಷೇತ್ರದಲ್ಲಿ 8940 ಜೆಡಿಎಸ್ ಮತಗಳ ಅಂತರ,ಮಾಲೂರು ಕ್ಷೇತ್ರದಲ್ಲಿ 13300 ಜೆಡಿಎಸ್ ಹೆಚ್ಚು ಮತಗಳ ಅಂತರ.ಪಡೆದಿರುವ ಎನ್ಡಿಯೆ ಮೈತ್ರಿ…
Author: Srinivas_Murthy
ಶ್ರೀನಿವಾಸಪುರ:ನಡೆದಿದ್ದು ಶಿಕ್ಷಕರ ಚುನಾವಣೆ ಅದರೆ ನಡೆದ ರೀತಿ ಯಾವ ಸಾರ್ವತ್ರಿಕ ಚುನಾವಣೆಗೂ ಕಡಿಮೆ ಇಲ್ಲದಂತೆ ಎಲ್ಲವೂ ಖುಲ್ಲಂ ಖುಲ್ಲಾ ಎನ್ನುವಂತಿತ್ತು. ಇಂದು ನಡೆದಂತ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಶೈಲಿ ಸಾರ್ವಜನಿಕರನ್ನು ಗಾಭರಿ ಪಡಿಸಿದೆ ಚುನಾವಣೆಗೂ ಒಂದು ವಾರದ ಮುಂಚಿನಿಂದಲೂ ಮತದಾರರನ್ನು ಓಲೈಸಿಕೊಳ್ಳಲು ಪಾನಕ ಪನ್ಯಾರ ಪ್ಯಾಕೆಜ್ ಗಿಫ್ಟ್ ಸೀರೆ ಇನ್ನಿತರೆ ವ್ಯವಹಾರವಾಗಿ ವ್ಯವಸ್ಥಿತವಾಗಿ ಸರಬರಾಜು ಮಾಡುವ ಮೂಲಕ ಪಟ್ಟಭದ್ರರಾದ ಮತದಾರ ಶಿಕ್ಷಕರನ್ನು ಒಲಸಿಕೊಳ್ಳುವ ಕಾರ್ಯ ಭರದಿಂದ ನಡೆದಿದೆ ಎನ್ನಲಾಗುತ್ತಿದ್ದು ಇಂದು ಚುನಾವಣೆ ದಿನ ಕೊಸರು ಎನ್ನುವಂತೆ ಪೆಟ್ರೊಲ್ ಗಾದರು ಇರಲಿ ಎಂಬ ಗೊಜಾಟದ ವ್ಯವಹಾರ ನಾಚಿಕೆ ಗಿಚಿಗೆ ಊರಿಂದಾಚಗೆ ಎನ್ನುವಂತೆ ನಡಿತಿತ್ತು. ಮತದಾನ ಕೇಂದ್ರ ಇದ್ದ ತಹಶೀಲ್ದಾರ್ ಕಚೇರಿ ಬಳಿಯ ಸುತ್ತಮುತ್ತಲ ಪ್ರದೇಶದಲ್ಲಿ ಹಾಕಲಾಗಿದ್ದ ರಾಜಕೀಯ ಪೆಂಡಾಲ ಕೆಳಗೆ ಹೋಗಿಬರುತ್ತಿದ್ದವರು ಕೈ ಬೆಚ್ಚಗೆ ಮಾಡಿಕೊಂಡು ಪುನಿತರಾಗುತ್ತಿದ್ದರು.ಕೈ ಕೆಲಸ ಅಗದಿದ್ದರೆ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯೇನ ನಮಃ ಎಂದು ಎದುರುಗಿದ್ದ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಮುಖ ಊದಿಸಿಕೊಂಡು ಕುಳತಿದ್ದವರನ್ನು ಮರಿ ನಾಯಕರು ಯಾರದ್ರೂ…
ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನರರೂಪ ರಾಕ್ಷಸನಂತೆ ವರ್ತಿಸಿರುವ ಪತಿ ತನ್ನ ಪತ್ನಿಯನ್ನು ರಣ ಭೀಕರವಾಗಿ ಹತ್ಯೆಮಾಡಿದ್ದಾನೆ.ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡವನ್ನು ಬೇರ್ಪಡಿಸಿದ್ದೆ ಅಲ್ಲದೆ ಚರ್ಮ ಸುಲಿದು ರಾಕ್ಷಸನಂತೆ ವರ್ತಿಸಿದ್ದಾನೆ.ದಾರುಣವಾಗಿ ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದ್ದು ಮೃತ ಮಹಿಳೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿ ಶಿವರಾಮ್ (45) ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಿದ್ದಳು,ಇಬ್ಬರು ಅಂತರ್ಜಾತಿ ಮದುವೆಯಾಗಿ ಜೀವನ ನಡೆಸುತ್ತಿದ್ದರು ಇವರಿಗೆ ಎಂಟು ವರ್ಷದ ಮಗನಿದ್ದಾನೆ.ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದು, ಗಂಡ ಶಿವರಾಮ್ ಸ್ಥಳೀಯ ಸಾಮಿಲ್‌ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ.ಪತಿ-ಪತ್ನಿ ನಡುವೆ ಹೊಂದಾವಣಿಕೆ ಇಲ್ಲದೆ ಜಗಳ ನಡೆಯುತ್ತಿತ್ತು, ಕೃತ್ಯ ನಡೆದ ದಿನ ರಾತ್ರಿ ಪತಿ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದು…
ನ್ಯೂಜ್ ಡೆಸ್ಕ್: ಮೇ 25 ರಿಂದ ಸೂರ್ಯನು ತನ್ನ ನಕ್ಷತ್ರವನ್ನು ಬದಲಾಯಿಸಿದ್ದು ಕೃತಿಕಾ ನಕ್ಷತ್ರದಿಂದ ರೋಹಿಣಿ ನಕ್ಷತ್ರದತ್ತ ಪ್ರಯಾಣ ಆರಂಭಿಸಿದ್ದು ಅಂದಿನಿಂದ ರೋಹಿಣಿ ಕಾರ್ತೆ ಆರಂಭವಾಗುತ್ತದೆ. ಸೂರ್ಯನು ರೋಹಿಣಿ ನಕ್ಷತ್ರದಲ್ಲಿರುವ ಸಮಯವನ್ನು ರೋಹಿಣಿ ಕಾರ್ತೆ ಎಂದು ಪರಿಗಣಿಸಲಾಗುತ್ತದೆ.ಇದರಿಂದ ಸೂರ್ಯನ ಶಾಖದ ಪ್ರಭಾವ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇಸಿಗೆಯ ಬಿಸಿ ಇನ್ನಷ್ಟು ಏರಿಕೆಯಾಗುತ್ತದೆ ಎನ್ನಲಾಗುತ್ತಿದ್ದು ತೀವ್ರವಾದ ಶಾಖವನ್ನು ಅನುಭವಿಸುವ ಅನಿವಾರ್ಯತೆ ಇದಿಯಂತೆ ತಾಪಮಾನವು ಏರುತ್ತಲೇ ಇರುತ್ತದೆ. ಉತ್ತರ ಭಾರತದಲ್ಲಿ ಬಹುತೇಕ ರಾಜ್ಯಗಳಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಏರಿಕೆಯಾಗಿದೆ ಏರುತ್ತಿರುವ ಬಿಸಿಲಿನ ತಾಪಕ್ಕೆ ಜನ ತತ್ತರಗೊಂಡಿದ್ದಾರೆ ಸಾವು ನೋವುಗಳಿಗೆ ಕಾರಣವಾಗುತ್ತಿದೆ ಬಿಸಿಲ ಧಗೆ.ಭಾರತೀಯ ಹವಾಮಾನ ಇಲಾಖೆ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.ಜೋತ್ಯಿಷ್ಯ ವಿಜ್ಞಾನದಲ್ಲೂ ಹಲವು ಬದಲಾವಣೆಸೂರ್ಯ ನಕ್ಷತ್ರವನ್ನು ಬದಲಾವಣೆಯಿಂದ ಜೋತ್ಯಿಷ್ಯ ವಿಜ್ಞಾನದ ಪ್ರಕಾರ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ ಎಂದು ಶಾಸ್ತ್ರತಜ್ಞರು ಹೇಳುತ್ತಾರೆ.ಮೇಷ,ಮಿಥುನ,ಸಿಂಹ,ಕನ್ಯಾ ಹಾಗು ಧನುಷ್ಯ ರಾಶಿಗಳವರಿಗೆ ಉತ್ತಮ ಫಲಿತಾಂಶ ಸಿಗಲಿದಿಯಂತೆ.ಸುಟ್ಟುಕರಕಲಾದ ಬೈಕುಗಳುಈ ನಡುವೆ ತೆಲಂಗಾಣ ರಾಜ್ಯದ ಜಗಿತ್ಯಾಲ…
ಶ್ರೀನಿವಾಸಪುರ:ನಾಲ್ಕೈದು ಮಂದಿ ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಬಂದು ಶ್ರೀನಿವಾಸಪುರ ಬಸ್ ನಿಲ್ದಾಣ ಬಳಿಯ ಹಾಫ್ ಕಾಮ್ಸ್ ಮುಂಬಾಗ ಪೋಲಿಸ್ ಠಾಣೆಗೆ ಕೂಗಳತೆ ದೂರದಲ್ಲಿ ನಡುರಸ್ತೆಯಲ್ಲಿ ಸಾರ್ವಜನಿಕವಾಗಿ ಮದ್ಯದ ಬಾಟಿಲ್ ಹಾಗು ರಸ್ತೆಯಲ್ಲಿ ಸ್ಥಾಪಿಸಿದ್ದ ಪ್ಲಾಸ್ಟಿಕ್ ರಸ್ತೆ ವಿಭಜಕಗಳನ್ನು ಹಿಡಿದು ಬಡಿದಾಡಿಕೊಂಡಿದ್ದಾರೆ.ಬಡಿದಾಟದ ದೃಶ್ಯಗಳನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ.ಘಟನೆ ನಡೆದು ಎರಡು ದಿನವಾದರು ಪೋಲಿಸರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಯುವಕರು ರೌಡಿ ಗ್ಯಾಂಗುಗಳಂತೆ ಸಾರ್ವಜನಿಕವಾಗಿ ಮದ್ಯದ ಬಾಟಲಗಳಲ್ಲಿ ಬಡೆದಾಡಿಕೊಂಡು ಸಾರ್ವಜನಿಕವಾಗಿ ಭಿಕರತೆಯಿಂದ ನಡೆದುಕೊಂಡಿದ್ದನ್ನು ಜನ ನೋಡಿದ್ದಾರೆ ದಾರಿ ಹೊಕರು ಘಟನೆಯನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಂಡಿದ್ದು ಎನ್ನಲಾದ ಬಿದಿಕಾಳಗದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.ಅದರ ಅಧಾರದಲ್ಲಿ,ವಿಡಿಯೋದಲ್ಲಿ ಇರುವ ದ್ವಿಚಕ್ರ ವಾಹನದ ನಂಬರ್ ಅಧಾರದಲ್ಲಿ ಘಟನೆಯಲ್ಲಿ ಪಾಲ್ಗೋಂಡವರನ್ನು ಹುಡುಕಿ ಹೆಡೆ ಮುರಿ ಕಟ್ಟಲು ಪೋಲಿಸರಿಗೆ ಸಾಧ್ಯ ಇಲ್ಲವ ಎಂದು ಜನತೆ ಪ್ರಶ್ನಿಸಿದ್ದಾರೆ.ಸಿನಿಮಾ ವಿಲಗಳ ರಿತಿ ಫೊಸುಜನ ನೋಡು ನೋಡುತ್ತಿದ್ದಂತೆ ಬಡಿದಾಡಿಕೊಂಡು ಯುವಕರು ಪ್ಲಾಸ್ಟಿಕ್ ವಿಭಜಕಗಳನ್ನು ಗದೆಯಂತೆ ಎತ್ತಿಕೊಂಡು ಸಿನಿಮಾಗಳಲ್ಲಿನ…
ಚಿಂತಾಮಣಿ: ಪ್ರಪಂಚದಾದ್ಯಂತ ರೋಟರಿ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ರೋಟರಿ ಸಂಸ್ಥೆ ಬೆಂಗಳೂರು ಉತ್ತರ ಭಾಗದ ಸದಸ್ಯತ್ವ ಯೋಜನಾ ಮುಖ್ಯಸ್ಥರಾದ ತಿರುಮುರುಗಮನ್ ಹೇಳಿದರು.ಅವರು ಚಿಂತಾಮಣಿ ನಗರದಲ್ಲಿ ರೋಟರಿ ಸಂಸ್ಥೆ ಸ್ಥಾಪನೆ ಮಾಡುವ ಸಲುವಾಗಿ ರಿವಾರ್ಡ್ ಸಂಸ್ಥೆ ಕಚೇರಿಯಲ್ಲಿ ಆಸಕ್ತರಿಂದ ಸಂವಾದ ನಡೆಸಿ ಮಾತನಾಡಿದರು.ಸಮಾಜದ ವಿವಿಧ ಹುದ್ದೆಗಳಲ್ಲಿರುವ ಮುಖ್ಯಸ್ಥರು ಕೂಡಿ ರೋಟರಿ ಸಂಸ್ಥೆಯನ್ನು ಸೇವಾಭಾವನೆಯಿಂದ ಸ್ಥಾಪಿಸಿದ್ದು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.ಪ್ರಪಂಚದಾದ್ಯಂತ 36911 ರೋಟರಿ ಕ್ಲಬ್ ಗಳು ಸ್ಥಾಪನೆಯಾಗಿವೆ, ಪ್ರಮುಖವಾಗಿ ಆರೋಗ್ಯಸೇವಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆ ಹೊಸ ಮುನ್ನಡಿ ಬರೆದ ಹೆಮ್ಮೆ ಇದೆ ಪೊಲಿಯೋಗೆ ಮೊಟ್ಟಮೊದಲಬಾರಿಗೆ ಔಷದ ಕಂಡು ಹಿಡಿದು ಪ್ರಪಂಚ ಆರೋಗ್ಯ ಸಂಸ್ಥೆಗೆ ಹಕ್ಕುಸ್ವಾಮ್ಯ ಪಡೆಯದೆ ಫಾರ್ಮುಲಾವನ್ನು ಉಚಿತವಾಗಿ ನೀಡಿದಷ್ಟೆ ಅಲ್ಲದೆ ಅದರ ಡ್ರಾಪ್ಸ್ ತಯಾರಿಕೆಗೆ ಅರ್ಥಿಕ ಸಂಪನ್ಮೂಲ ಒದಗಿಸಿದೆ ಕೀರ್ತಿ ರೋಟರಿ ಸಂಸ್ಥೆಗೆ ಸಲ್ಲುತ್ತದೆ, ಪ್ರಪಂಚದಾದ್ಯಂತ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೋಡುವ ದೃಷ್ಟಿಯಿಂದ ರೋಟರಿ ಸಂಸ್ಥೆ ತಾಲೂಕು ಮಟ್ಟದಲ್ಲೆ ಅಲ್ಲ ಹೋಬಳಿ ಮಟ್ಟದಲ್ಲೂ ಸ್ಥಾಪನೆಯಾಗಬೇಕಿದೆ…
ನ್ಯೂಜ್ ಡೆಸ್ಕ್:ಕಲಿಯುಗ ವೈಕುಂಠ ತಿರುಮಲ ಶ್ರೀನಿವಾಸನ ದರ್ಶನಕ್ಕೆ ತೆರಳುತ್ತಿರುವ ಭಕ್ತರಿಗೆ ದೇವರ ದರ್ಶನ ಮೂವತ್ತು ಗಂಟೆಗಳ ಸಮಯ ಹಿಡಿಯುತ್ತಿದೆ, ದಿನೆ ದಿನೆ ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿದೆ ಕಳೆದ 20 ದಿನಗಳಿಂದ ತಿರುಮಲ ಜನಸಾಗರವಾಗಿ ಮಾರ್ಪಟ್ಟಿದೆ,ಸರ್ವದರ್ಶನ(ಉಚಿತದರ್ಶನ)ಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದೆ ಜನದಟ್ಟಣೆ ಹೆಚ್ಚಾಗಲು ಕಾರಣ ಎನ್ನುವ ಮಾತು ಕೇಳಿಬರುತ್ತಿದೆ,ಬೆಳಗ್ಗೆ ವಾಹನ ದಟ್ಟಣೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಸಂಜೆ ವೇಳೆಗೆ ಮತ್ತೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ದಟ್ಟನೆ ಸಹ ಹೆಚ್ಚಾಗುತ್ತಿವೆ.ದೇವರ ದರ್ಶನ ಪಡೆಯಲು ತೆರಳುವ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು ನಾರಾಯಣಗಿರಿ ಶೆಡ್‌ಗಳ ಎಲ್ಲಾ ಕೊಠಡಿಗಳು ಟೈಮ್ ಸ್ಲಾಟ್ ಟೋಕನ್ ಇಲ್ಲದೆ ತಿರುಮಲಕ್ಕೆ ಬಂದ ಭಕ್ತರಿಂದ ತುಂಬಿ ತುಳುಕುತ್ತಿದೆ ಕೊಠಡಿಗಳ ಹೊರಗೆ ಶಿಲಾ ತೋರಣಂ ತನಕ ಭಕ್ತರು ಕ್ಯೂ ಲೈನ್ ನಲ್ಲಿ ಕಾಯುತ್ತಿದ್ದಾರಂತೆ.ಟೊಕನ್ ಇಲ್ಲದ ಉಚಿತ ದರ್ಶನಕ್ಕೆ ಸುಮಾರು 30 ಗಂಟೆಗಳ ಕಾಲ ಕಾಯಬೇಕಿದೆ, ರೂ.300 ಟಿಕೆಟ್ ಪಡೆದ ವಿಶೇಷ ಪ್ರವೇಶ ಟಿಕೆಟ್ ಹೊಂದಿರುವ ಭಕ್ತರು ಮೂರು-ನಾಲ್ಕು ಗಂಟೆಗಳಲ್ಲಿ ದರ್ಶನ…
ಶ್ರೀನಿವಾಸಪುರ:ದನ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಜೇನು ನೋಣ ದಾಳಿ ಮಾಡಿದ್ದು ವ್ಯಕ್ತಿ ತೀವ್ರವಾಗಿ ಅಸ್ವಸ್ಥಗೊಂಡು ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಇಂದು ನಡೆದಿದೆ.ಜೇನು ನೋಣ ದಾಳಿಯಿಂದ ಗಾಯಗೊಂಡು ಅಸ್ವಸ್ಥನಾಗಿರುವ ವ್ಯಕ್ತಿಯನ್ನು ತಾಲೂಕಿನ ಸೋಮಯಾಜಹಳ್ಳಿ ಪಂಚಾಯಿತಿಯ ಕೂಳಗುರ್ಕಿ ಗ್ರಾಮದ ವೆಂಕಟರಮಣಪ್ಪ ಎಂದು ಗುರುತಿಸಲಾಗಿದೆ.ಎಂದಿನಂತೆ ಧನ ಕಾಯಲು ಜಾನುವಾರುಗಳನ್ನು ಹೊಡೆದುಕೊಂಡು ಊರಿನಿಂದ ಆಚೆ ಹೋಗಿರುವ ವೆಂಕಟರಮಣಪ್ಪ ಜಾನುವಾರುಗಳನ್ನು ಮೇಯಲು ಬಿಟ್ಟು ಮರದಡಿ ನಿದ್ರೆಗೆ ಜಾರಿದ್ದಾನೆ ನಂತರದಲ್ಲಿ ಏಕಾಏಕಿ ಅವರ ಮೇಲೆ ಜೇನುನೊಣಗಳ ಗುಂಪು ದಾಳಿ ನಡೆಸಿ ಕಚ್ಚಿದ್ದು ತೀವ್ರ ಅಸ್ವಸ್ಥಗೊಂಡಿದ್ದಾರೆ ಅವರನ್ನು ಚಿಕಿತ್ಸೆಗಾಗಿ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.ಶ್ರೀನಿವಾಸಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀನಿವಾಸಪುರ:ಮನೆಗೆ ತೆರಳುತ್ತಿದ್ದ ಗೃಹಣಿಯನ್ನು ತಡೆದ ಅಪರಿಚಿತರು ಪೋಲಿಸರೆಂದು ಪರಿಚಯಿಸಿಕೊಂಡು ಅಕೆಯ ಕತ್ತಿನಲ್ಲಿರುವ ಸರವನ್ನು ತಗೆಸಿ ಕದ್ದುಕೊಂಡು ಹೋಗಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆದಿರುತ್ತದೆ.ರತ್ನಮ್ಮ ಎಂಬ ನಡುವಯಸ್ಸಿನ ಮಹಿಳೆ ಸಂಜೆ ಸಮಯದಲ್ಲಿ ಊರಿಂದ ಬಂದು ಕಾಲೇಜು ಬಳಿ ಬಸ್ಸಿಳಿದು ಮನೆ ಕಡೆಗೆ ನಡೆದುಕೊಂಡು ಹೋರಟಿದ್ದಾರೆ, ಪ್ರವಾಸಿ ಮಂದಿರದ ಬಳಿ ಸುಮಾರು ಮೂರು ಮಂದಿ ಇದ್ದರು ಎನ್ನಲಾದ ಅಪರಿಚಿತರು ಆಕೆಯನ್ನು ತಡೆದಿದ್ದಾರೆ ಆತ್ಮೀಯತೆಯಿಂದ ಅಕ್ಕ ಎಂದು ಮಾತನಾಡಿಸಿ ಮುಂದೆ ಕಳ್ಳರ ಗ್ಯಾಂಗ್ ಇದೆ ನಿಮ್ಮ ಕತ್ತಿನಲ್ಲಿರುವ ಬಂಗಾರದ ಸರವನ್ನು ತಗೆದು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ಹಿಂದೆ ನಮ್ಮ ಸಾಹೇಬರು ಇದ್ದಾರೆ ಅವರೆ ಹೇಳಿದ್ದು ಎಂದು ನಂಬಿಸಿದ್ದಾರೆ,ಗಾಭರಿಯಾದ ಮಹಿಳೆ ತಕ್ಷಣ ಕತ್ತಿನಲ್ಲಿದ್ದ ಸರ ತಗೆದು ಕೈಯಲ್ಲಿದ್ದ ಪರ್ಸಿನಲ್ಲಿ ಇಡಲು ಅಪರಿಚಿನ ಸಹಾಯ ಪಡೆದಿದ್ದಾರೆ ಇದನ್ನೆ ಅವಕಾಶ ಮಾಡಿಕೊಂಡ ಅಪರಿಚಿತರು ಪರ್ಸಿನ ಜಿಪ್ ತಗೆದಿದ್ದಾರೆ ಆಕೆ ಪರ್ಸಿನಲ್ಲಿ ಬಂಗಾರದ ಸರ ಇಡುವಾಗ ಕೈಚಳಕ ತೊರಿಸಿ ಸರವನ್ನು ಯಾಮಾರಿಸಿದ್ದಾರೆ,ನಂತರದಲ್ಲಿ ಸಾಹೇಬರು ಕರಿತಿದ್ದಾರೆ ನಾವು ಬರುತ್ತೇವೆ ಎಂದು…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಇತ್ತಿಚಿಗೆ ಕಳ್ಳತನ ಹೆಚ್ಚುತ್ತಿದ್ದು ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ,ನಿಲ್ಲಿಸಿದ್ದ ಜಾಗದಲ್ಲೆ ದ್ವಿಚಕ್ರವಾಹನ ಕ್ಷ್ಣಣಾರ್ಧದಲ್ಲಿ ಮಾಯವಾಗುತ್ತಿವೆ.ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಮೊಟ್ಟೆ ಅಂಗಡಿ ಮಾಲಿಕ ಮೂತ್ರ ವಿಸರ್ಜನೆಗೆ ಹೋಗಿದ್ದ ಸಮಯದಲ್ಲಿ ಯುವಕನೊರ್ವ ಅಂಗಡಿಗೆ ನುಗ್ಗಿ ಕ್ಯಾಷ್ ಬಾಕ್ಸ್ ನಲ್ಲಿದ್ದ ನಗದು ಮೂರು ಮೊಬೈಲ್ ಗಳನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಅದೆ ಸಮಯಕ್ಕೆ ಅಂಗಡಿ ಮಾಲಿಕ ನಾಗರಾಜ್ ಬಂದಿದ್ದು ಕದ್ದು ಓಡಿ ಹೋಗುತ್ತಿದ್ದ ಯುವಕನನ್ನು ಸಾರ್ವಜನಿಕರ ಸಹಕಾರದೊಂದಿಗೆ ಅಟ್ಟಾಡಿಸಿಕೊಂಡು ಹೋಗಿ ಅಜಾದ ರಸ್ತೆಯ ಗಲ್ಲಿಯಲ್ಲಿ ಹಿಡಿದು ಮೊಬೈಲ್ ಮತ್ತು ನಗದು ವಾಪಸ್ಸು ಪಡೆದಿರುತ್ತಾನೆ.ತೀರಾ ಇತ್ತಿಚಿಗೆ ಇಂದಿರಾಭವನ್ ವೃತ್ತದಲ್ಲಿರುವ ಇಂತಹುದೆ ಘಟನೆ ನಡೆದಿದ್ದು ಕೃಷ್ಣಮೂರ್ತಿ ಎಂಬವರ ದಿನಸಿ ಅಂಗಡಿಯ ಕ್ಯಾಷ್ ಬಾಕ್ಸ್ ನಲ್ಲಿದ್ದ ಹತ್ತು ಸಾವಿರ ನಗದು ಹಾಡು ಹಗಲೆ ಕಳ್ಳತನ ಆಗಿರುವ ಬಗ್ಗೆ ಸಾರ್ವಜನಿಕರು ಹೇಳುತ್ತಾರೆ.ಗುರುವಾರ ಮಧ್ಯಾಹ್ನ ಎಂ.ಜಿ.ರಸ್ತೆಯ ಸಂಗೀತಾ ಚಿತ್ರಮಂದಿರ ಬಳಿ ಇರುವಂತ ತೆಂಗಿನಕಾಯಿ ಹೊಲ್ ಸೇಲ್ ಅಂಗಡಿ ಮುಂಬಾಗ ನಿಲ್ಲಿಸಿದ್ದ ಅಕ್ಟಿವ್ ಹೊಂಡಾ ಸ್ಕೂಟರ್ ಕ್ಷಣಾರ್ದದಲ್ಲಿ ಕಳ್ಳತನವಾಗಿದ್ದಾಗಿದೆ ಎಂದು ವಾಹನ…


